ವಯಸ್ಸಿಗೆ ಮುನ್ನವೇ ಪ್ರೌಡಾವಸ್ಥೆ?

Useful Tips

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲೇ ಪ್ರೌಢಾವಸ್ಥೆಗೆ ತಲಪುತ್ತಿದ್ದಾರೆ.  ಮಕ್ಕಳು ಎಂಟರಿಂದ ಒಂಬತ್ತು ವರ್ಷಕ್ಕೆ ಕಾಲಿಡುತ್ತಿದಂತೆ ಪೋಷಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ವಯಸ್ಸಿನ ಮಕ್ಕಳಲ್ಲಿ  ಇದು ಈಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ, ಮಕ್ಕಳು ತಿನ್ನುವ ಆಹಾರ, ಉಪಯೋಗಿಸುವ ರಾಸಯನಿಕ ವಸ್ತುಗಳು, ಮತ್ತು ಅವರ ಮಾನಸಿಕ ಹಾಗು ಬೌದ್ಧಿಕ ಒತ್ತಡಗಳು ಕಾರಣವಾಗುತ್ತಿವೆ.   ನೈಸರ್ಗಿಕ ವಿಧಾನಗಳನ್ನು  ಅನುಸರಿಸಿದರೆ ವಯಸ್ಸಿಗೂ ಮುನ್ನ ಬರುವ ಋತುಚಕ್ರವನ್ನು ತಪ್ಪಿಸುವ ಸಾಧ್ಯತೆಗಳಿವೆ.

ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಹೇರಬೇಡಿ, ಹಾಗು ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗದೆ ಇರುವಹಾಗೆ  ನೋಡಿಕೊಳ್ಳಿ.

ಸಾಧ್ಯವಾದಷ್ಟು ಮಕ್ಕಳಿಗೆ ಮನೆಯೆಲ್ಲಿ ತಯಾರಿಸಿದಂತಹ ಪೌಷ್ಠಿಕ ಆಹಾರವನ್ನೇ ಕೊಡಿ, ಬೇಕರಿ ತಿನಿಸುಗಳಿಂದ ಆದಷ್ಟು ದೂರವಾಗಿರಿಸಿ.

ಯೋಗ, ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಬೊಜ್ಜು ಬರುವ ಸಾದ್ಯೆತೆ ಕಮ್ಮಿಇರುತ್ತದೆ, ಇದು ಅವರ ಆರೋಗ್ಯಕಾರಿ   ಬೆಳೆವಣಿಗೆಗೆ ಸಹಾಯಕಾರಿ.

ಸಾಧ್ಯವಾದಷ್ಟು ರಾಸಾಯನಿಕ ವಸ್ತುಗಳ ಬಳಕೆ ಮಾಡುವುದು ಕಡಿಮೆಗೊಳಿಸಿ. ನೈಸರ್ಗಿಕ ಪದಾರ್ಥಗಳನ್ನೇ ಉಪಯೋಗಿಸಿ.

ಸಂಸ್ಕರಿಸಿದ ಆಹಾರ ಪದ್ಧತಿಯಿಂದ ದೂರವಿರಿಸಿ. ಹಣ್ಣು ತರಕಾರಿಗಳ ಸೇವನೆಗೆ ಹೆಚ್ಚು ಮಹತ್ವಕೊಡಿ.

ಋತುಚಕ್ರವನ್ನು ಮುಂದೆ ಹಾಕುವುದು ಆರೋಗ್ಯದ ದೃಷ್ಟಿ ಇಂದ ಒಳ್ಳೆಯದಲ್ಲ. ಋತುಚಕ್ರವು 10 ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬಂದರೆ ಮಾತ್ರ ಆತಂಕಕಾರಿ ಅಂಶ, 10 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಸಂಭವಿಸಿದರೆ ಆತಂಕಪಡುವ ಅವಶ್ಯಕತೆ ಇಯುವುದಿಲ್ಲ.

Leave a Reply

Your email address will not be published. Required fields are marked *