ಹೆಣ್ಣುಮಕ್ಕಳು ಕುಂಕುಮವನ್ನ ಇಟ್ಟುಕೊಳ್ಳುವಾಗ ಯಾವ ಬೆರಳನ್ನ ಬಳಸಿ ಇಟ್ಟುಕೊಂಡರೆ ಉತ್ತಮವಾದ ಪ್ರತಿಫಲಗಳು ಸಿಗುತ್ತವೆ ಗೊತ್ತ …

ಹಿಂದೂ ಸಂಪ್ರದಾಯದಲ್ಲಿ ಮುಖ್ಯ ಪದ್ಧತಿ ಆಗಿರುವಂತಹದ್ದು ಅಂದರೆ ಅದು ಹಣೆಗೆ ಕುಂಕುಮ ಇರಿಸುವುದು. ಹೌದು ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ನಮ್ಮ ಹಿಂದೂ ಸಂಪ್ರದಾಯದ ಮುಖ್ಯ ಪದ್ಧತಿಯಾಗಿರುತ್ತದೆ. ಇವತ್ತಿನ ದಿವಸ ಗಳಲ್ಲಿ ನಮ್ಮ ಯುವಜನರು ಪಾಶ್ಚಾತ್ಯರ ಸಂಸ್ಕೃತಿಗೆ ಮೊರೆ ಹೋಗಿ, ಕುಂಕುಮ ಇಡುವುದು ಮೂಗುತ್ತಿ ಹಾಕುವುದು ಇಂಥದ್ದನ್ನೆಲ್ಲ ಶೋಕಿಗಾಗಿ ಅಥವಾ ಯಾವುದೋ ಹಬ್ಬದ ದಿವಸಗಳಂದು ಮಾತ್ರ ಪಾಲಿಸುತ್ತಾರೆ.

ಆದರೆ ನಮ್ಮ ಪದ್ಧತಿಗಳು ಹಬ್ಬದ ದಿವಸ ದಂದು ಶುಭ ದಿವಸದಂದು ಮಾತ್ರ ಪಾಲಿಸುವಂಥ ಹಾಕಿರುವುದಿಲ್ಲ ಇದು ಪ್ರತಿದಿನ ಪಾಲಿಸುವಂತಹ ನಮ್ಮ ಜೀವನದಲ್ಲಿ ಪ್ರತಿ ಕ್ಷಣವೂ ರೂಢಿಸಿಕೊಳ್ಳುವಂತಹ ಬದ್ಧತೆಯಾಗಿರುತ್ತದೆ ಹಾಗಾದರೆ ಕುಂಕುಮವನ್ನು ವಿಶೇಷದ ಬಗ್ಗೆ ತಿಳಿದುಕೊಳ್ಳೋಣ ಜೊತೆಗೆ ಕುಂಕುಮವನ್ನು ಯಾವ ಬೆರಳಿನಿಂದ ಹಣೆಗೆ ಲೇಪ ಮಾಡಿಕೊಂಡರೆ ಯಾವ ಫಲ ಲಭಿಸುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಹೌದು ಈ ಮೊದಲೇ ಹೇಳಿದಂತೆ ಕುಂಕುಮ ಇಟ್ಟುಕೊಳ್ಳುವುದು ನಮ್ಮ ಹಿಂದೂ ಸಂಪ್ರದಾಯದ ಮುಖ್ಯ ಪದ್ಧತಿಯಾಗಿದೆ ಹಾಗೆ ಕುಂಕುಮವನ್ನು ನಮ್ಮ ದೇಹದಲ್ಲಿ ಹದಿನೂರು ಭಾಗಗಳಲ್ಲಿ ಇಟ್ಟುಕೊಳ್ಳಬಹುದು. ಇನ್ನು ಕುಂಕುಮವನ್ನು ಹಣೆಗೆ ಇರುವುದರಿಂದ ಕೂಡ ಹಲವು ಲಾಭಗಳಿವೆ ಕುಂಕುಮವನ್ನು ಹಣೆಗೆ ಇರುವುದರಿಂದ ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ ಆದರೆ ನಮ್ಮ ಹಿರಿಯರು ನಂಬುವ ಹಾಗೆ ಇದು ದೃಷ್ಟಿದೋಷವನ್ನು ದೂರ ಮಾಡುತ್ತದೆ.

ಹಾಗೆ ಮತ್ತೊಂದು ವಿಚಾರವೇನೆಂದರೆ ವೈಜ್ಞಾನಿಕವಾಗಿ ಹೇಳುವುದಾದರೆ ಕುಂಕುಮವನ್ನು ಇಡುವಾಗ ಹಣೆಯ ಮೇಲೆ ನಮ್ಮ ಬೆರಳಿನಿಂದ ಕುಂಕುಮ ಇಡುವ ಸ್ಥಾನದಲ್ಲಿ ಮುಟ್ಟಿದಾಗ ಅದು ಆಕ್ಯುಪ್ರೆಶರ್ ಪಾಯಿಂಟ್ ಆಗಿರುತ್ತದೆ ಇದರಿಂದ ನರನಾಡಿಯು ಆ್ಯಕ್ಟಿವ್ ಆಗುತ್ತದೆ ಪ್ರಚೋದನೆ ಹೊಂದುತ್ತದೆ ಎಂಬ ಕಾರಣವನ್ನು ಹೇಳಲಾಗುತ್ತದೆ ಈ ಎಲ್ಲ ಕಾರಣಗಳಿಂದ ಕುಂಕುಮ ಇಡುವುದು ವಿಶೇಷತೆ ಆಗಿದೆ.

ಹಾಗಾದರೆ ಯಾವ ಬೆರಳಿನಿಂದ ಕುಂಕುಮವನ್ನು ಇಟ್ಟುಕೊಂಡರೆ ಏನು ಲಾಭ ಸಿಗುತ್ತದೆ ಅದರಿಂದ ಏನು ಫಲ ಇದೆ ಎಂಬುದನ್ನು ತಿಳಿಯೋಣ ಬನ್ನಿ. ಮೊದಲನೆಯದಾಗಿ ಹೆಚ್ಚಿನ ಜನರು ಕುಂಕುಮ ಇಡುವುದಕ್ಕೆ ಬಳಸುವುದು ಉಂಗುರದ ಬೆರಳು, ಹೌದು ಈ ಉಂಗುರದ ಬೆರಳು ವಿಶೇಷವಾದದ್ದು ಹಾಗಾ ಶ್ರೇಷ್ಠವಾದದ್ದು ಮತ್ತು ಇದರಿಂದ ಕುಂಭವನ್ನು ಲೇಪ ಮಾಡುವುದರಿಂದ ಈ ಉಂಗುರದ ಬೆರಳು ಸೂರ್ಯನ ಸ್ಥಾನವನ್ನು ಹೊಂದಿರುವ ಕಾರಣ ದೇಹ ಬಲಗೊಳ್ಳುವುದು ಎಂದು ಹೇಳಲಾಗುತ್ತದೆ ಸೂರ್ಯ ದೇವನ ಶಕ್ತಿ ಲಭಿಸುತ್ತದೆ ಅಂತ ಕೂಡ ಹೇಳಲಾಗುತ್ತದೆ.

ಮಧ್ಯಬೆರಳು ಈ ಮಧ್ಯ ಬೆರಳು ಸ್ಥಾನವನ್ನು ತುಂಬುತ್ತದೆ ಹಾಗೂ ಈ ಬೆರಳಿನಿಂದ ಕುಂಕುಮ ಲೇಪ ಮಾಡಿದರೆ ಇದರ ಫಲ ಏನಾಗಿರುತ್ತದೆ ಅಂದರೆ ಶನಿ ದೇವನ ಅನುಗ್ರಹ ಲಭಿಸುತ್ತದೆ ಹಾಗೆ ತೋರುಬೆರಳು ಈ ತೋರುಬೆರಳಿನಿಂದ ಕುಂಕುಮ ಲೇಪಿಸಿದರೆ, ಇನ್ನು ಹೆಬ್ಬೆರಳೇ ಶುಕ್ರನ ಸಂಕೇತವಾಗಿದ್ದು ಹೆಬ್ಬೆರಳಿನಿಂದ ಹಣೆಗೆ ಕುಂಕುಮ ಲೇಪಿಸಿದರೆ ಶುಕ್ರನ ಅನುಗ್ರಹವಾಗುತ್ತದೆ ಅಂತ ಕೂಡ ಹೇಳಲಾಗುತ್ತದೆ. ಈ ರೀತಿ ಯಾವ ಬೆರಳಿನಿಂದ ಕುಂಕುಮ ಲೇಪಿಸಿಕೊಂಡರೆ ಫಲ ಲಭಿಸುತ್ತದೆ ಎಂದು ಹೇಳಲಾಗಿದ್ದು ಉಂಗುರ ಬೆರಳಿನಿಂದ ಕುಂಕುಮ ಹಚ್ಚಿ ಕೊಂಡರೆ ಬಹಳ ಶ್ರೇಷ್ಠ ಎಂದು ನಂಬಲಾಗಿದೆ.

Leave a Comment

Your email address will not be published.