ಗರುಡ ಶಾಸ್ತ್ರಗಳ ಪ್ರಕಾರ ಶ-ವ ಸಂಸ್ಕಾರ ಆದ ನಂತರ ತಿರುಗಿ ನೋಡಬಾರದು ಅಂತ ಯಾಕೆ ಹೇಳುತ್ತಾರೆ ಗೊತ್ತ ..

ನಮ್ಮ ಹಿರಿಯರು ಹೇಳುವ ಅದೆಷ್ಟೋ ಪದ್ಧತಿಗಳಿಗೆ ವೈಜ್ಞಾನಿಕವಾದ ಕಾರಣಗಳಿವೆ. ಹಾಗಂತ ಎಲ್ಲಾ ಪದ್ಧತಿಗಳಿಗೂ ಎಲ್ಲಾ ನಂಬಿಕೆಗಳಿಗೂ ವೈಜ್ಞಾನಿಕವಾದ ಕಾರಣಗಳು ಇವೆ ಅಂತ ಹೇಳಲು ಆಗುವುದಿಲ್ಲ. ಅದೇ ರೀತಿ ಈ ದಿನದ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವಂತಹ ವಿಚಾರವೂ ಕೂಡ ನಮ್ಮ ಹಿರಿಯರು ವಿಚಾರವೇ ಆಗಿದೆ.

ಅಷ್ಟೇ ಅಲ್ಲ ಹಿಂದೂಗಳ ಶ್ರೇಷ್ಠ ಪುರಾಣ ಗ್ರಂಥವಾಗಿರುವ ಗರುಡಪುರಾಣ ಕೂಡ ತಿಳಿಸುವ ಪ್ರಕಾರ ಯಾಕೆ ಶವ ಸಂಸ್ಕಾರದ ಬಳಿಕ ಹೆಚ್ಚು ಸಮಯ ಅಲ್ಲಿ ನಿಲ್ಲಬಾರದು ಮತ್ತು ಶವ ಸಂಸ್ಕಾರದ ಬಳಿಕ ಹಿಂದಿರುಗಿ ನೋಡಬಾರದು ಎಂಬುದಕ್ಕೆ ಗರುಡ ಪುರಾಣದಲ್ಲಿ ಉಲ್ಲೇಖವಿದೆ ಹಾಗೂ ಹಿರಿಯರು ಕೂಡ ಇದನ್ನು ನಂಬುತ್ತಿದ್ದರು ಆದರೆ ಇದಕ್ಕೆ ವೈಜ್ಞಾನಿಕವಾದ ಕುರುಹುಗಳು ಮಾತ್ರ ಇಲ್ಲ.

ಈ ದಿನದ ಮಾಹಿತಿಯಲ್ಲಿ ಗರುಡ ಪುರಾಣ ಶವ ಸಂಸ್ಕಾರದ ಕುರಿತು ಏನನ್ನು ಹೇಳುತ್ತದೆ ಎಂಬುದನ್ನು ತಿಳಿಯೋಣ ಈ ಮಾಹಿತಿ ಮೂಲಕ. ಹೌದು ಶ ..ವ ಅಂದರೆ ಯಾವ ವ್ಯಕ್ತಿಯ ದೇಹವನ್ನು ಆತ್ಮ ವಿಸರ್ಜಿಸುತ್ತದೆ ಅಂತಹ ದೇಹವನ್ನು, ಶ ..ವ ಎಂದು ಕರೆಯಲಾಗುತ್ತದೆ. ಇನ್ನೂ ಶವವನ್ನು ಅಂತ್ಯಸಂಸ್ಕಾರ ಮಾಡುವುದು ಯಾಕೆ ಅಂದರೆ ದೇಹದಿಂದ ಹೊರಬಂದ ಆತ್ಮವು ಮತ್ತೆ ಮರುಹುಟ್ಟು ಪಡೆದುಕೊಳ್ಳಲಿ ಎಂಬ ಕಾರಣದಿಂದಾಗಿ ಶವಸಂಸ್ಕಾರವನ್ನು ವಿಧಿವಿಧಾನಗಳಿಂದ ನೆರವೇರಿಸಲಾಗುತ್ತದೆ.

ಗರುಡ ಪುರಾಣ ತಿಳಿಸುವ ಹಾಗೆ ದೇಹದಿಂದ ಹೊರಬಂದ ಆತ್ಮವು ಮತ್ತೆ ಪಾಪ ಕರ್ಮಾದಿಗಳನ್ನು ಮುಗಿಸಿ ಮತ್ತೆ ಮರು ಜನ್ಮ ಪಡೆದುಕೊಳ್ಳುವುದಕ್ಕೂ ಮುನ್ನ, ತನ್ನ ದೇಹ ಪೂರ್ಣವಾಗಿ ರಕ್ಷಿಸುವುದಕ್ಕಾಗಿ ಕಾಯುತ್ತಾ ಇರುತ್ತದೆ ಯಾವಾಗ ದೇಹ ಸಂಪೂರ್ಣವಾಗಿ ನಶಿಸುತ್ತದೆ ಆಗಲೇ ಆ ಆತ್ಮ ಮತ್ತೆ ಪುನರ್ಜನ್ಮ ಪಡೆಯಲು ಸಾಧ್ಯ ಆಗಿರುತ್ತದೆ.

ಇನ್ನು ಹಿರಿಯರು ಹೇಳುವ ಪ್ರಕಾರ ಶವ ಸಂಸ್ಕಾರದ ಬಳಿಕ ಮತ್ತೆ ಆ ಸ್ಥಳವನ್ನು ಹಿಂತಿರುಗಿ ನೋಡಬಾರದು ಯಾಕೆಂದರೆ ದೇಹಕ್ಕೆ ಸಂಸ್ಕಾರ ನಡೆದ ಬಳಿಕವೂ ಕೂಡ ಆತ್ಮ ಮತ್ತೊಂದು ದೇಹವನ್ನು ಹುಡುಕುತ್ತಾ ಇರುತ್ತದೆ ಅಥವಾ ಆತನ ಬಂಧನಗಳಿಂದ ಮುಕ್ತಿ ಹೊಂದಿರುವುದಿಲ್ಲ ತನಗೆ ಬೇಕಾಗಿರುವವರು ತನ್ನ ಬಂಧುಗಳು ಮತ್ತೆ ಹಿಂದಿರುಗಿ ನೋಡಿದಾಗ ಅವರು ನನ್ನನ್ನು ಆಹ್ವಾನಿಸುತ್ತಿದ್ದಾರೆ.

ಎಂದು ತಿಳಿದು ಆತ್ಮ ಅವರೆಡೆಗೆ ಬರುತ್ತದೆ ಎಂಬ ಕಾರಣದಿಂದಾಗಿಯೇ ಶವ ಸಂಸ್ಕಾರ ನಡೆದ ಬಳಿಕ ಆ ಜಾಗವನ್ನು ಮತ್ತೆ ಹಿಂದಿರುಗಿ ನೋಡಬಾರದು ಎಂದು ಹಿರಿಯರು ತಿಳಿಸುತ್ತಿದ್ದರು. ಹೇಗೆ ನಿನ್ನ ದೇಹದಿಂದ ನಿನಗೆ ಬಂಧನ ಮುಕ್ತವಾಗಿದೆ ಅದೇ ರೀತಿ ನಮ್ಮ ಬಂಧನಗಳಿಂದಲೂ ಕೂಡ ನಿನಗೆ ಮುಕ್ತಿ ಕೊಡಲಾಗಿದೆ ಎಂದು ಆತ್ಮಕ್ಕೆ ತಿಳಿಸುವ ಸಲುವಾಗಿ, ಸಂಸ್ಕಾರದ ಬಳಿಕ ಹಿಂದಿರುಗಿ ನೋಡಬಾರದು ಎಂದು ಹಿರಿಯರು ನಂಬುತ್ತಿದ್ದರು.

ನಮ್ಮ ಹಿರಿಯರು ಇದೇ ವಿಚಾರಕ್ಕಾಗಿ ಮತ್ತೊಂದು ಕಾರಣವನ್ನು ಕೂಡ ನೀಡುತ್ತಿದ್ದರು ಅದೇನೆಂದರೆ ದೇಹದಿಂದ ಹೊರಬಂದ ಆಸ್ಮಾ ಮತ್ತೊಂದು ದೇಹವನ್ನು ಹುಡುಕುತ್ತಾ ಇರುತ್ತದೆ ಯಾವಾಗ ನಾವು ಹಿಂದಿರುಗಿ ನೋಡುತ್ತೇವೆ, ಆಗ ಆತ್ಮ ನಮ್ಮತ್ತ ಸೆಳೆಯುತ್ತದೆ ಈ ಕಾರಣದಿಂದಾಗಿ ಕೂಡ ಶವ ಸಂಸ್ಕಾರದ ಬಳಿಕ ಹಿಂದಿರುಗಿ ನೋಡಬಾರದು ಎಂದು ಹಿರಿಯರು ಹೇಳುತ್ತಿದ್ದರು ಹಾಗೂ ಗರುಡ ಪುರಾಣ ಕೂಡ ಇದನ್ನೇ ತಿಳಿಸುತ್ತದೆ.

Leave a Comment

Your email address will not be published.