ಒಂದು ಕಾಲದಲ್ಲಿ ಕೌನ್ ಬನೇಗಾ ಕರೋಡ್ಪತಿ ಅಲ್ಲಿ 1 ಕೋಟಿ ಗೆದ್ದಿದ್ದ ಪೋರ , ಇವತ್ತು IPS ಆಫೀಸರ್ …

ನಮಸ್ಕಾರ ಪ್ರಿಯ ಸ್ನೇಹಿತರೆ ಅಂದು ಕೌನ್ ಬನೇಗಾ ಕರೋಡ್ ಪತಿ ಯಲ್ಲಿ ಕೋಟಿ₹ಗೆದ್ದಿದ್ದ ಆ ಬಾಲಕ ಇವತ್ತು ದೊಡ್ಡ ಅಧಿಕಾರಿ ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ. ಹೌದು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಬಾಲಿವುಡ್ ಬಾದ್ ಶಾ ಬಿಗ್ ಬಿ ಎದುರು ಕುಳಿತು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರು ಕೇಳಿದ ಹದಿನೈದು ಪ್ರಶ್ನೆಗಳಿಗೂ ಸರಿಯಾಗಿ ಉತ್ತರವನ್ನು ನೀಡುವ ಮೂಲಕ ಈ ಬಾಲಕ ಅಂದು ಕೋಟಿ ರೂಪಾಯಿ ಅನ್ನೂ ಗಳಿಸಿದ್ದರು. ಆದರೆ ಇನ್ನೂ ಮೈನರ್ ಆಗಿದ್ದ ಕಾರಣ ಈ ಬಾಲಕನಿಗೆ ಆ ಸಮಯದಲ್ಲಿ ಹಣವನ್ನು ನೀಡಲಾಗಿರಲಿಲ್ಲಾ, ಆ ಬಾಲಕ ಇದೀಗ ದೊಡ್ಡ ಅಧಿಕಾರಿ ಆಗಿ ಜನಸೇವೆ ಮಾಡುತ್ತಾ ಇದ್ದಾರೆ.

ಹೌದು ಕೌನ್ ಬನೇಗಾ ಕರೋಡ್ ಪತಿ ಶೋ ಬಗ್ಗೆ ನಿಮಗೂ ಕೂಡ ತಿಳಿದಿದೆ ಈ ಶೋ ಅನ್ನು ನಡೆಸಿಕೊಡುವವರು ಬಾಲಿವುಡ್ ಬಾಡ್ಶಾ ಆಗಿರುವ ನಟ ಅಮಿತಾಭ್ ಬಚ್ಚನ್ ಅವರು. ಈ ಕಾರ್ಯಕ್ರಮ ಅದೆಷ್ಟು ಫೇಮಸ್ ಅಂದರೆ ನಮ್ಮ ದೇಶದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲಿಯೂ ಕೂಡ ಸಖತ್ ಫೇಮಸ್ ಆಗಿದೆ, ಹಾಗೆ ಈ ಕಾರ್ಯಕ್ರಮದಿಂದ ಹಲವು ಮಂದಿ ಕೋಟಿ ರೂಪಾಯಿ ಗೆದ್ದು ಹೋಗಿದ್ದಾರೆ. ಅಂಥವರಲ್ಲಿ ಈ ಪುಟ್ಟ ಬಾಲಕ ಕೂಡ ಒಬ್ಬರಾಗಿದ್ದು ಇವರ ಹೆಸರು ರವಿ ಮೋಹನ್ ಸೈನಿ ಎಂದು.

ರವಿ ಮೋಹನ್ ಸೈನಿ 2001ರಲ್ಲಿ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ನಟ ಅಮಿತಾಭ್ ಬಚ್ಚನ್ ಅವರು ಕೇಳಿದ ಹದಿನೈದು ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಿ ಕೋಟಿ ರೂ ಅನ್ನೂ ಗೆದ್ದಿದ್ದರು. ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರವಿ ಮೋಹನ್ ಸೈನಿ ಅವರು, ಅಂದು ಕೋಟಿರೂ ಗೆದ್ದಿದ್ದರು ಇವರಿಗೆ ಹದಿನೆಂಟು,

ವಯಸ್ಸು ಆದ ಬಳಿಕ ಟ್ಯಾಕ್ಸ್ ಎಲ್ಲವನ್ನು ಕಳೆದು ಎಂಬತ್ತು ಲಕ್ಷ ಹಣ ಇವರ ಕೈ ಸೇರಿತ್ತು ಅನಂತರ ಇವರು ವಿಶಾಖಪಟ್ಟಣಂ ಅಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿ ಅನಂತರ ಜೈಪುರದಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದುಕೊಂಡರು ಆದರೆ ಇವರಿಗೆ ಡಾಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ನಡೆಸುವುದಕ್ಕಿಂತ, ತಮ್ಮ ತಂದೆ ಅವರಂತೆ ಒಬ್ಬ ಅಧಿಕಾರಿ ಆಗಿ ಹೊರ ಹೊಮ್ಮಬೇಕು ಎಂಬ ಆಸೆ ಹುಟ್ಟಿತ್ತು ಆನಂತರ ಇವರು ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಆಫೀಸರ್ ಆಗಿದ್ದಾರೆ.

ರವಿ ಅವರ ತಂದೆ ಕೂಡ ನಿವೃತ್ತ ಸೇನಾ ಪಡೆಯ ಅಧಿಕಾರಿ ಆಗಿದ್ದರು, ತಂದೆಯಂತೆ ಜನ ಸೇವೆ ಮಾಡಬೇಕೆಂದು ರವಿ ಮೋಹನ್ ಸೈನಿ ಅವರು ಇದೀಗ ಪೋರಬಂದರ್ ನಲ್ಲಿ ಸುಪರಿಡೆಂಟ್ ಪೊಲೀಸ್ ಅಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಾ ಇದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಪದವಿ ಅನ್ನು ಹೊಂದಿರುವ ರವಿ ಅವರು ಇನ್ನೂ ಹಲವು ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಲು ಎಂದು ನಾವು ಆಶಿಸೋಣ ಶುಭದಿನ ಧನ್ಯವಾದ.

Leave a Comment

Your email address will not be published.