ಈ ರೀತಿಯಾದ ಗಿಡಗಳು ನಿಮ್ಮ ಮನೆಯಲ್ಲಿ ಇದ್ದಿದ್ದೇ ಆದಲ್ಲಿ ಕೆಟ್ಟ ಶಕ್ತಿಗಳು ಮನೆ ಒಳಗೆ ನುಗ್ಗೋದಿಲ್ಲ.. ಹಾಗೆ ಒಳ್ಳೆ ಪರಿಶುದ್ಧ ಗಾಳಿ ನಿಮಗೆ ಸಿಗುತ್ತೆ ..

ಹೌದು ಪ್ರಕೃತಿ ಸಾಮಾನ್ಯ ಅಲ್ಲ ಇಲ್ಲೇ ಅಗಾಧವಾದ ಶಕ್ತಿ ಅಡಗಿದೆ ಅಷ್ಟೇ ಅಲ್ಲ ಈ ಅಗಾಧವಾದ ಶಕ್ತಿ ಅನ್ನೋ ಪ್ರಕೃತಿಯಿಂದ ನಾವು ಕೂಡ ಪಡೆದುಕೊಳ್ಳಬಹುದು ಹೌದು ಆ ಶಕ್ತಿ ಅಂದರೆ ಅದು ನಮಗೆ ಜೀವಿಸಲು ಅವಶ್ಯಕವಾದುದು ಹೌದು ನಾವು ಮಾತನಾಡುತ್ತಿರುವುದು ಆಮ್ಲಜನಕದ ಬಗ್ಗೆ ಈ ದಿನದ ಮಾಹಿತಿಯಲ್ಲಿ ಪ್ರಕೃತಿಯ ಸುಂದರವಾದ ವಿಸ್ಮಯ ದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಹೌದು ಪ್ರಕೃತಿಯ ಸುಂದರವಾದ ವಿಸ್ಮಯ ಅಂದರೆ ಅದು ಆಮ್ಲಜನಕವೇ ಆಗಿರುತ್ತದೆ, ಇಲ್ಲಿ ಆಮ್ಲಜನಕ ಎಂಬುದೇ ದೊಡ್ಡ ಶಕ್ತಿ ಅಗಾಧವಾದ ಶಕ್ತಿ.

ಇವತ್ತಿನ ದಿವಸಗಳಲ್ಲಿ ಆಮ್ಲಜನಕ ಅದೆಷ್ಟು ಅವಶ್ಯಕ ಅಂದರೆ ಮರ ಗಿಡಗಳನ್ನು ನಶಿಸುವುದರಿಂದ ನಂಬಿದ್ದ ನಾವು ಈ ಅಗಾಧವಾದ ಶಕ್ತಿ ಅನ್ನೋ ದೂರ ಮಾಡಿಕೊಳ್ಳುತ್ತಾರೆ ಆದರೆ ಇದೀಗ ನಾವು ಸುಲಭವಾಗಿ ಶುದ್ಧಗಾಳಿ ಅನ್ನು ನಿಮ್ಮ ಮನೆಯಲ್ಲಿಯೇ ಪಡೆದುಕೊಳ್ಳಬಹುದು ವಿಜ್ಞಾನ ತಿಳಿಸುವ ಹಾಗೆ ಕೆಲವು ಗಿಡಗಳನ್ನೂ ಮನೆಯಲ್ಲಿಯೇ ಬೆಳೆಸಿಕೊಳ್ಳುವುದರಿಂದ, ನಮಗೆ ಅಗಾಧವಾದ ಶಕ್ತಿ ಲಭಿಸುತ್ತದೆ. ಹೌದು ಆ ಗಿಡಗಳು ಯಾವುವು ಎಂಬುದನ್ನು ನಾವು ನಿಮಗೆ ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ಸ್ಪೈಡರ್ ಪ್ಲಾಂಟ್ ಹೌದು ಇದಕ್ಕೆ ಸ್ಪೈಡರ್ ಪ್ಲಾಂಟ್ ಎಂಬ ಹೆಸರು ಯಾಕೆ ಅಂದರೆ ಇದು ನೋಡುವುದಕ್ಕೆ ಸ್ಪೈಡರ್ ಬಲೆ ಅಂದರೆ ಜೇಡರ ಬಲೆಯ ಹಾಗೆ ಕಾಣಸಿಗುವುದರಿಂದ, ಇದರ ಹೆಸರು ಸ್ಪೈಡರ್ ಪ್ಲಾಂಟ್ ಎಂದು ಕರೆಯಲಾಗುತ್ತದೆ. ಈ ಗಿಡವನ್ನೂ ಮನೆಯಲ್ಲಿ ಬೆಳೆದಿರುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿರುತ್ತದೆ. ಅಷ್ಟೆ ಅಲ್ಲಾ ಶುದ್ಧವಾದ ಗಾಳಿಯನ್ನು ಕೂಡ ನಾವು ಪಡೆದುಕೊಳ್ಳಬಹುದು, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧವಾಗಿ ಇಡಲು ಈ ಗಿಡ ಸಹಕರಿಸುತ್ತದೆ.

ಎರಡು ದಿವಸಗಳಿಗೊಮ್ಮೆ ಈ ಗಿಡಕ್ಕೆ ನೀರು ಹಾಕಬೇಕಾಗುತ್ತದೆ ಸಾಮಾನ್ಯ ಗಿಡಗಳಿಗೆ ಪ್ರತಿ ದಿವಸ ನೀರು ಹಾಕಬೇಕಾಗುತ್ತದೆ. ಆದರೆ ಸ್ಪೈಡರ್ ಪ್ಲಾಂಟ್ ಗೆ ಎರಡು ದಿವಸಗಳಿಗೊಮ್ಮೆ ನೀರನ್ನು ಹಾಕಬೇಕಾಗುತ್ತದೆ ಹಾಗೂ ಹದಿನೈದು ದಿವಸಗಳಿಗೊಮ್ಮೆ ಇದನ್ನು ಬಿಸಿಲಿಗೆ ಇಡಬೇಕು. ಈ ರೀತಿ ಸ್ಪೈಡರ್ ಪ್ಲಾಂಟ್ ಅನ್ನು ಬೆಳಸುವುದರಿಂದ ಇದು ಸುತ್ತಮುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ. ಇನ್ನೂ ಒಣಗಿದ ಎಲೆಗಳನ್ನು ಆಗಾಗ ತೆಗೆದು ಹಾಕಬೇಕು ಆಗ ಹೊಸ ಎಲೆಗಳು ಹುಟ್ಟುತ್ತದೆ.

ಇನ್ನು ಎರಡನೆಯದಾಗಿ ನಮಗೆಲ್ಲರಿಗೂ ತಿಳಿದಿರುವ ಗಿಡವೇ ಆಗಿದೆ. ಹೌದು ಅಲೋವೆರಾ ಗಿಡದ ಇದನ್ನು ಕನ್ನಡದಲ್ಲಿ ಲೋಳೆಸರ ಎಂದು ಕರೆಯುತ್ತಾರೆ. ಇದನ್ನು ಮನೆಯಲ್ಲಿ ಇರಿಸುವುದರಿಂದ ವಾತಾವರಣವನ್ನು ಬೇಗ ಶುದ್ಧ ಮಾಡುತ್ತದೆ, ಹಾಗೂ ಲೋಳೆಸರಕ್ಕೆ ಪ್ರತಿ ದಿವಸ ನೀರು ಹಾಕಬೇಕು ಅಂತ ಏನೂ ಇಲ್ಲ.

ಇದಕ್ಕೆ ವಾರಕ್ಕೊಮ್ಮೆ ಆದರೂ ಸ್ವಲ್ಪ ನೀರು ಹಾಕಿದರೂ ಇದು ಚೆನ್ನಾಗಿ ಬೆಳೆಯುತ್ತದೆ, ಹಾಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರಿಸುವ ಹಾಗೆ ಇದು ನೋಡಿಕೊಳ್ಳುತ್ತದೆ. ಹೇಗೆ ಈ ಎರಡು ಗಿಡಗಳನ್ನು ಮನೆಯಲ್ಲಿಯೇ ಬೆಳೆಸಿಕೊಳ್ಳಬಹುದು. ಇದರಿಂದ ಖಂಡಿತವಾಗಿಯೂ ವಾತಾವರಣವನ್ನು ಶುದ್ಧವಾಗಿಡಲು ಸಾಧ್ಯ ,ಒಳ್ಳೆಯ ಗಾಳಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

Leave a Comment

Your email address will not be published.