ಜೊತೆಗೇ ಇದ್ದು ಮೋಸ ಮಾಡುವ ಸ್ನೇಹಿತರಿಂದ ಹೇಗೆ ಎಚ್ಚರಿಕೆಯಿಂದ ಇರಬೇಕು ಅನ್ನೋ ಒಂದು ಅದ್ಭುತವಾದ ಚಾಣುಕ್ಯನ ತಂತ್ರ

ಚಾಣುಕ್ಯರು ಅಂದಿನ ಕಾಲದಲ್ಲಿಯೇ ಹೇಳಿದ್ದರೂ ಮುಖವಾಡ ಇಟ್ಟುಕೊಂಡು ಬಾಳುವಂತಹ ಸ್ನೇಹಿತರ ಬಗ್ಗೆ , ನಮಗೆ ಆಪ್ತವಾಗಿ ಇರುವವರೇ ಒಂದು ಬಾರಿ ನಮಗೆ ಕಲ್ಲಾಗಿ ಬಿಡುತ್ತಾರೆ ಎಂದರೆ ಅದು ಅದೆಷ್ಟು ತೊಟ್ಟು ನೋವನ್ನು ನೀಡುತ್ತದೆ.ಅಲ್ವಾ ಸ್ನೇಹಿತರೆ ನಿಮಗೂ ಕೂಡ ನಿಮ್ಮ ಜೀವನದಲ್ಲಿ ಈ ವಿಚಾರದ ಬಗ್ಗೆ ಅನುಭವವಾಗಿರಬಹುದು, ಹಾಗಾದರೆ ಈ ಮುಖವಾಡ ಹಾಕಿಕೊಂಡಿರುವ ಸ್ನೇಹಿತರ ಬಗ್ಗೆ ಗೆಳೆಯರ ಬಗ್ಗೆ ಚಾಲುಕ್ಯರು ಹೇಳಿರುವಂತಹ ಮಾತುಗಳೇನು ಅನ್ನೋದನ್ನ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ.ಜೀವನವೆಂಬುದು ಒಂದು ನಾಟಕ ಮಂದಿರ ಅಂತ ನಮ್ಮ ಹಿರಿಯರು ಹೇಳುತ್ತಿರುತ್ತಾರೆ, ಆದರೆ ಈ ನಾಟಕ ಮಂದಿರದಲ್ಲಿ ಎಲ್ಲರೂ ಕೂಡ ನಾಟಕ ಮಾಡುವ ಪಾತ್ರಧಾರಿಯೇ ಹೌದು ಆದರೂ ಕೂಡ ,

ಈ ನಾಟಕದ ರಂಗಭೂಮಿಯಲ್ಲಿ ಪಾತ್ರಧಾರಿಗಳಿದ್ದರೂ ಆ ಪಾತ್ರಧಾರಿಗಳು ಮತ್ತೊಂದು ಮುಖವಾಡವನ್ನು ಹಾಕಿಕೊಂಡು ಇರುತ್ತಾರೆ ಅಂದರೆ ಅವರ ಎರಡು ಮುಖಗಳ ಪರಿಚಯ ಯಾರಿಗೂ ಕೂಡ ತಿಳಿದಿರುವುದಿಲ್ಲ.ನಮ್ಮ ಸುತ್ತಮುತ್ತಲೇ ಇರುತ್ತಾರೆ ನಮ್ಮ ಜೊತೆಯಲ್ಲೇ ಇರುತ್ತಾರೆ, ನಮಗೆ ಆಪ್ತರೆನಿಸುವ ಹಾಗೇನೇ ಇರುತ್ತಾರೆ ಆದರೆ ಬೆನ್ನ ಹಿಂದೆ ಮಾಡುತ್ತಿರುವ ಅವರ ಕುತಂತ್ರ ಬುದ್ಧಿ ಮಾತ್ರ ತಿಳಿಯುತ್ತಿರುವುದಿಲ್ಲ, ಇನ್ನು ಸ್ನೇಹಿತರೇ ನಿಮ್ಮ ಜೀವನದಲ್ಲಿ ಕೆಲ ಸ್ನೇಹಿತರು ಇರುತ್ತಾರೆ ಅವರು ನಿಮಗೆ ತುಂಬಾ ಆಪ್ತರು ತುಂಬಾನೇ ಇಷ್ಟ ಪಡುವಂತಹ ವ್ಯಕ್ತಿಗಳು ಆಗಿರುತ್ತಾರೆ ಆದರೆ ನಿಮಗೆ ಕಷ್ಟ ಬಂದಾಗ ಮಾತ್ರ ಯಾವುದೋ ಕಾರಣಗಳನ್ನು ನೀಡಿ ನಿಮ್ಮ ಜೊತೆ ನಿಲ್ಲದೆ ದೂರವಾಗಿ ಬಿಡುತ್ತಾರೆ.

ಇಂತಹವರನ್ನು ನೀವು ನಿಮ್ಮ ಜೀವನದಲ್ಲಿ ಹತ್ತಿರವೂ ಕೂಡ ಬಿಟ್ಕೋಬೇಡಿ ಯಾಕೆ ಅಂತ ಹೇಳ್ತೀವಿ ಕೇಳಿ ಹೌದು ಚಾಲುಕ್ಯರು ಇಂತಹ ಮುಖವಾಡವನ್ನು ಇಟ್ಟುಕೊಂಡು ಬದುಕುತ್ತಿರುವ ವ್ಯಕ್ತಿಗಳ ಬಗ್ಗೆ ಮುಂಚೆಯೇ ಹೇಳಿದ್ದರು ಅದೇನೆಂದರೆ ಇಂತಹ ವ್ಯಕ್ತಿಗಳು ಯಾವತ್ತಿದ್ದರೂ ತಮ್ಮ ಜೀವನಕ್ಕೆ ಮುಳ್ಳಾಗಿಯೆ ಇರುತ್ತಾರೆ, ಯಾಕೆ ಅಂತೀರಾ ಇವರಿಂದ ನಿಮಗೆ ಯಾವುದು ಒಳ್ಳೆಯ ಕಾರ್ಯ ಆಗೋದಿಲ್ಲ. ಇವರು ನಿಮ್ಮಲ್ಲಿರುವಂತಹ ಕೆಲವೊಂದು ವಿದ್ಯೆಯನ್ನು ಕಲಿತುಕೊಳ್ಳುತ್ತಾರೆ ನಂತರ ನಿಮ್ಮಿಂದ ದೂರವಾಗಿ ಬಿಡುತ್ತಾರೆ.

ನಂತರ ನಿಮ್ಮಿಂದ ಕಲಿತಂತಹ ವಿದ್ಯೆಯಲ್ಲಿ ಪಾರಂಗತನಾಗಿ ನಿಮಗಿಂತ ಮೇಲೆ ಬೆಳೆಯುವ ಆಸೆಯನ್ನು ಕೂಡ ಹೊಂದಿರುತ್ತಾರೆ ಇಂತಹ ವ್ಯಕ್ತಿಗಳು ಆದ್ದರಿಂದ ನಿಮ್ಮ ಕಷ್ಟಕ್ಕೆ ಯಾರೂ ಆಗುತ್ತಾರೋ ನಿಮ್ಮ ಖುಷಿಯ ದಿನಗಳಿಗಿಂತ ನಿಮ್ಮ ದುಃಖದ ದಿನಗಳಲ್ಲಿ ಯಾರೂ ನಿಮ್ಮ ಸಹಭಾಗಿ ಆಗಿರುತ್ತಾರೆ ಅಂಥವರ ಸಹವಾಸ ಮಾಡಿ, ಇದರಿಂದ ನೀವು ಕೂಡ ಬೆಳೆಯುತ್ತಿರುವ ಜೊತೆಗೆ ನಿಮ್ಮೊಡನೆ ಇರುವ ಅವರುಗಳು ಕೂಡ ಎತ್ತರಕ್ಕೆ ಬೆಳೆಯುತ್ತಾರೆ.

ಆದ್ದರಿಂದ ಸ್ನೇಹಿತರೇ ನೀವು ಇಂತಹ ಸ್ನೇಹಿತರ ಸಹವಾಸ ಮಾಡುತ್ತಿದ್ದರೆ ಈಗಲೇ ಅಂಥವರಿಂದ ದೂರವಿರಿ, ಯಾವುದೇ ಕಾರಣಕ್ಕೂ ಇಂತಹವರನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ ಇಂತಹವರ ಸಹವಾಸ ನೀವು ಮಾಡಿದರೂ ಕೂಡ ಅವರೊಡನೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಹೋಗಬೇಡಿ, ಯಾಕೆ ಅಂತೀರಾ ನಿಮ್ಮ ವೈಯಕ್ತಿಕ ವಿಚಾರಗಳನ್ನು ಅವರಿಗೆ ತಿಳಿಸಿದರೆ ಮುಂದೆ ಒಂದು ದಿನ ಅವರು ಅದನ್ನೇ ವೀಕ್ನೆಸ್ ಆಗಿ ಇಟ್ಟುಕೊಂಡು ನಿಮ್ಮನ್ನು ನಿಮ್ಮ ಜೀವನದಲ್ಲಿ ಕೆಳಗೆ ತಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಆದ್ದರಿಂದ ಮುಖವಾಡ ಹಾಕಿಕೊಂಡು ಇರುವಂತಹ ವ್ಯಕ್ತಿಗಳ ಸಹವಾಸ ಮಾಡಬೇಡಿ ಮತ್ತು ಅವರಿಂದ ಸಿಗುವಂಥ ಯಾವ ಉಪಯೋಗಗಳನ್ನು ಕೂಡ ಪಡೆದುಕೊಳ್ಳಲು ಹೋಗಬೇಡಿ ಮುಂದೆ ಒಂದು ದಿನ ಅವರು ಆ ಒಂದು ವಿಚಾರವನ್ನೇ ಇಟ್ಟುಕೊಂಡು ನಿಮ್ಮನ್ನು ಹೀಯಾಳಿಸುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ.

Leave a Comment

Your email address will not be published.