ಕುದುರೆಯನ್ನು ಪ್ರೀತಿಯಿಂದ ಸಾಕಿದ ಯಜಮಾನ ಆದರೆ ಕೊನೆಗೆ ತನ್ನ ಯಜಮಾನನಿಗೆ ಏನು ಮಾಡಿದೆ ಗೊತ್ತ …. !!!

ಪ್ರಾಣಿಗಳು ಮನುಷ್ಯರಿಗಿಂತ ಪ್ರಾಣಿಗಳಿಗೆ ಇರುವ ನಿಯತ್ತು ಮನುಷ್ಯರಿಗೆ ಇರುವುದಿಲ್ಲ ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿದೆ ನೋಡಿ ಒಬ್ಬ ವ್ಯಕ್ತಿಯ ಜೀವನದ ಸತ್ಯ ಹೌದು ಈ ವ್ಯಕ್ತಿಯ ಹೆಸರು ವ್ಯಾಗ್ನರ್ ಎಂದು. ಈತ ಒಮ್ಮೆ ಬ್ರೆಜಿಲ್ ಕಾಡಿಗೆ ಹೋದಾಗ ಅಲ್ಲಿ ಮುದ್ದಾದ ಬಿಳಿ ಕುದುರೆಯ ಮರಿಯೊಂದು ಕಣ್ಣಿಗೆ ಕಾಣಿಸುತ್ತದೆ. ಆ ಕುದುರೆಯನ್ನು ಕಂಡು ಮುದ್ದಾಡಿದ ವ್ಯಾಗ್ನರ್ ಕ್ಕೆ ಆ ಕುದುರೆಯನ್ನು ತನ್ನ ಜತೆ ಕರೆದುಕೊಂಡು ಹೋಗಬೇಕೆಂಬ ಆಸೆ ಹುಟ್ಟುತ್ತದೆ ಆದರೆ ತಾನು ಬಡತನದಲ್ಲಿದ್ದು ಆ ಕುದುರೆಗೆ ಆಹಾರ ಕೊಡಲು ಸಾಧ್ಯವಾಗುವುದಿಲ್ಲ ಎಂದು ಯೋಚನೆ ಮಾಡಿ ಅದನ್ನು ಅಲ್ಲಿಯ ಮುದ್ದಾಡಿ ಅದನ್ನು ಕಾಡಿನಲ್ಲಿಯೇ ಬಿಟ್ಟು ತಾನು ಊರಿನ ಕಡೆಗೆ ಪ್ರಯಾಣ ಬೆಳೆಸುತ್ತಾನೆ ಆದರೆ ವ್ಯಾಗ್ನರ್ ಅನ್ನೇ ಹಿಂಬಾಲಿಸುತ್ತಾ ಬಂದ ಆ ಮುದ್ದಾದ ಕುದುರೆ, ವ್ಯಾಗ್ನರ್ ಎಷ್ಟೋ ಗದರಿದರೂ ಆ ಕುದುರೆ ಮತ್ತೆ ವಾಪಸ್ ಹಿಂದಿರುಗುವುದೇ ಇಲ್ಲಾ.

ವ್ಯಾಗ್ನರ್ ಆ ಕುದುರೆ ಅನ್ನು ತನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಾನೆ, ನಂತರ ತಾನೂ ಒಂದು ಹೊತ್ತು ಉಪವಾಸ ಇದ್ದು ಕುದುರೆಗೆ ಊಟವನ್ನು ಹಾಕುತ್ತಾ ಇದ್ದ ಹಾಗೆಯೇ ಕುದುರೆಗೆ ಸೆರೆನಾ ಎಂದು ಹೆಸರನ್ನು ಕೂಡ ಇಡುತ್ತಾನೆ ಕುದುರೆ ಬೆಳೆದು ದೊಡ್ಡದಾದ ನಂತರ ವ್ಯಾಗ್ನರ್ ಎಲ್ಲಿಗೆ ಹೋಗಬೇಕೋ ಆ ಜಾಗಕ್ಕೆ ಬಹಳ ವೇಗವಾಗಿ ಕರೆದುಕೊಂಡು ಹೋಗಿ ಬಿಡುತ್ತಿತ್ತು ಬಹಳ ಹಚ್ಚಿಕೊಂಡಿತ್ತು ಸೆರೆನಾ ಕುದುರೆ ತನ್ನ ಮಾಲೀಕನನ್ನು. ವ್ಯಾಗ್ನರ್ ಅನ್ನು ಇಲ್ಲಿಯೇ ಹೋಗಬೇಕೆಂದರೂ ಕುದುರೆಯೇ ಕರೆದೊಯ್ಯುತ್ತಿತ್ತು ಆದರೆ ಆ 1ದಿವಸ ವ್ಯಾಗ್ನರ್ ತನ್ನ ಗೆಳೆಯನೊಂದಿಗೆ ಬೈಕ್ನಲ್ಲಿ ದೂರ ಪ್ರಯಾಣ ಮಾಡಿದಾಗ ಅಪಘಾತದಲ್ಲಿ ಮೃತ ಪಡುತ್ತಾನೆ ವ್ಯಾಗ್ನರ್.

ಮಾಲೀಕನ ದೇಹವನ್ನು ಮನೆಗೆ ಕರೆತಂದಾಗ ಸೆರೆನಾ ಕುದುರೆಗೆ ತನ್ನ ಮಾಲೀಕ ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತದೆ. ಆ ಪ್ರಾಣಿಗೂ ಎಷ್ಟು ಮನಸ್ಸು ಎಂದರೆ ತನ್ನ ಮಾಲೀಕ ಇನ್ನಿಲ್ಲ ಎಂಬ ವಿಚಾರವನ್ನು ನೆನೆದು ಕಣ್ಣೀರಿಡುತ್ತಾ ಇತ್ತು ಹಾಗೂ ವ್ಯಾಗ್ನರ್ ದೇಹವನ್ನು ದಫಾನ್ ಮಾಡಲು ತನ್ನ ಕುಟುಂಬದವರು ಕರೆದೊಯ್ಯುವಾಗ ಸೆರೆನಾ ಕುದುರೆಯೂ ಕೂಡ ತನ್ನ ಮಾಲೀಕನ ಹಿಂದೆಯೇ ಹೋಗುತ್ತದೆ. ಧಪಾಲ್ ಮಾಡಿದ ನಂತರವೂ ಕೂಡ ಸೆರೆನಾ ಕುದುರೆ ತನ್ನ ಮಾಲೀಕ ಇರುವೆಡೆಯೇ ಕಣ್ಣೀರು ಹಾಕುತ್ತಾ ಅಲ್ಲಿಯೇ ಕೂತಿರುತ್ತದೆ.

ಸ್ವಲ್ಪ ದಿವಸಗಳ ನಂತರ ವ್ಯಾಗ್ನರ್ ನ ಸಹೋದರರನ್ನು ಸೆರೆನಾ ಕುದುರೆಯನ್ನು ತನ್ನ ಮನೆಗೆ ಕರೆದೊಯ್ದು ಅದಕ್ಕೆ ಪ್ರೀತಿಯನ್ನು ಕೊಡುತ್ತಾನೆ. ಆದರೆ ಎಷ್ಟು ದಿವಸಗಳಾದರೂ ತನ್ನ ಮಾಲೀಕನ ಸಾವಿನ ವಿಚಾರದಿಂದ ಆಚೆ ಬರದೆ ಕುದುರೆ ಬಹಳ ಬೇಸರದಲ್ಲಿ ಬರುತ್ತಿತ್ತು. ಸದ್ಯಕ್ಕೆ ಸೆರೆನಾ ಕುದುರೆ ಅನ್ನೂ ವ್ಯಾಗ್ನರ್ ನ ಸಹೋದರ ಸಾಕುತ್ತಾ ಇದ್ದಾನೆ. ಇದರಿಂದ ತಿಳಿಯುತ್ತದೆ ಪ್ರಾಣಿಗಳು ಎಷ್ಟು ಸೂಕ್ಷ್ಮ ಯೆಂದು ತನ್ನವರನ್ನು ಎಷ್ಟು ಪ್ರೀತಿಸುತ್ತದೆ ಎಂದು. ನೀವು ಕೂಡ ಯಾವುದಾದರೂ ಪ್ರಾಣಿಗಳನ್ನು ಬಹಳ ಪ್ರೀತಿಯಿಂದ ಸಾಕಿದ್ದರೆ ಯಾವ ಪ್ರಾಣಿ ಅನ್ನೋ ಸಾಕಿದ್ದೀರಾ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿದ್ದ ಧನ್ಯವಾದಗಳು.

Leave a Comment

Your email address will not be published.