ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಎಲ್ಲಾ ನಟರಿಗಿಂತ ವಿಭಿನ್ನ ನಟ ಯಾಕೆ ಗೊತ್ತ ಅವರ ಈ ಗುಣಗಳೇ …!!!

ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಹೌದು ಹ್ಯಾಟ್ರಿಕ್ ಹೀರೋ ಶಿವಣ್ಣ ಯಾಕೆ ವಿಭಿನ್ನ ನಟ ಅಂತ ಹೇಳ್ತಾರೆ. ನಿಮಗಿದು ಗೊತ್ತಾ ಶಿವಣ್ಣ ಅವರನ್ನು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಏಕೈಕ ನಟ ಎಂದು ಕರೆಯಲಾಗುತ್ತದೆ ಯಾಕೆ ಎಂದರೆ ಶಿವಣ್ಣ ಅವರು ಬೇರೆ ನಟರಂತೆ ಕಾಣಿಸಿಕೊಂಡ ಪಾತ್ರಗಳಲ್ಲಿಯೇ ಹೆಚ್ಚಿನದಾಗಿ ಅಭಿನಯ ಮಾಡುವುದಿಲ್ಲ. ಹೌದು ಈ ಕಾರಣಕ್ಕಾಗಿಯೇ ಶಿವಣ್ಣ ಅವರನ್ನು ವಿಭಿನ್ನ ನಟ ಎಂದು ಕರೆಯುತ್ತಾರೆ. ನೀವು ಒಮ್ಮೆ ಶಿವಣ್ಣ ಅವರ ಅಭಿನಯ ಮಾಡಿರುವ ಸಿನಿಮಾಗಳ ಪಟ್ಟಿಯನ್ನು ಮಾಡಿ ಇವರು ಮಾಡಿರುವ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಇದೇ ಕಾರಣಕ್ಕಾಗಿ ಶಿವಣ್ಣ ಅವರನ್ನು ಪ್ರಾಯೋಗಿಕ ನಟ ಅಂತ ಗೌಡ ಕರೆತರ ಇದರ ಅರ್ಥ ಶಿವಣ್ಣ ಅವರು ಕೆಲವೊಂದು ಪಾತ್ರೆಗಳ ಮೇಲೆ ಎಕ್ಸ್ಪೆರಿಮೆಂಟ್ ಮಾಡುತ್ತಾರೆ ಹಾಗೂ ಅಂತಹ ಪಾತ್ರಗಳನ್ನು ಮಾಡಲು ಇಷ್ಟ ಪಡುತ್ತಾರೆ ಎಂದು ಹೇಳಲಾಗಿದೆ.

ಶಿವಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿದ್ದು ಇವರು ಕರ್ನಾಟಕ ರಾಜ್ಯಕ್ಕೆ ಮಾತ್ರ ಅಲ್ಲ ಇಡೀ ಭಾರತ ದೇಶಕ್ಕೆ ಬಹಳ ಫೇಮಸ್ ಆಗಿದ್ದಾರೆ ಹಾಗೂ ಬೇರೆ ನಟರು ಸಹ ಬಹಳ ಖುಷಿ ಇಂದ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡುತ್ತಾರೆ ಇನ್ನು ಇವರ ಅಭಿನಯದ ಓಂ ಏಕೆ ಫಾರ್ಟಿಸೆವೆನ್ ಜೋಗಿ ಮುಂತಾದ ಸಿನಿಮಾಗಳು ರಾಜ್ಯದೆಲ್ಲೆಡೆ ಮಾತ್ರವಲ್ಲ ದೇಶದೆಲ್ಲೆಡೆ ಹಿಟ್ ಕಂಡಿದ್ದ ಸಿನಿಮಾ ಆಗಿದೆ ಹಾಗೂ ಈ ಸಿನಿಮಾಗಳಲ್ಲಿಯೂ ಸಹ ಶಿವರಾಜ್ ಕುಮಾರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಇವರು ನಟನೆ ಮಾಡಿರುವಂತಹ ಜೋಗಿ ಸಿನಿಮಾದಲ್ಲಿ ತಾಯಿಯ ಮಮತೆ ಪ್ರೇಮ್ ಅವರು ಬಹಳ ಸೊಗಸಾಗಿ ತೋರಿಸಿದ್ದಾರೆ ಅಷ್ಟೇ ಅಲ್ಲ ತವರಿಗೆ ಬಾ ತಂಗಿ ತವರಿನ ಸಿರಿ ಇಂತಹ ಸಿನಿಮಾಗಳಲ್ಲಿ ಶಿವಣ್ಣ ಅವರು ಕುಟುಂಬದ ಪ್ರೀತಿಯ ಬಗ್ಗೆ ಜನರಿಗೆ ತಿಳಿಸಿ ಕೊಟ್ಟಿದ್ದಾರೆ.

ಹೀಗೆ ವಿಭಿನ್ನ ವಿಭಿನ್ನವಾದ ಪಾತ್ರಗಳಲ್ಲಿ ಶಿವಣ್ಣ ಅವರಿಗೆ ಕಾಣಿಸಿಕೊಳ್ಳಲು ಬಾಳ ಇಷ್ಟ ಎನ್ನುವ ಚಿಗುರಿನ ಕನಸು ಎಂಬ ಸಿನಿಮಾ ಹಿಟ್ ಆಗದೇ ಇದ್ದರೂ ಸಹ ಒಳ್ಳೆಯ ಹೆಸರನ್ನು ಪಡೆದುಕೊಂಡಿತು ಈ ಸಿನಿಮಾ. ಇನ್ನೂ ಶಿವಣ್ಣ ಅವರು ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಗಳಿಗೂ ಸೈ ಎಂದು ಸಾಕಷ್ಟು ಅಂತಹ ಸಿನಿಮಾಗಳಲ್ಲಿಯೂ ಸಹ ಅಭಿನಯ ಮಾಡಿದ್ದು ಪೊಲೀಸ್ ಪಾತ್ರದಲ್ಲಿ ಅಷ್ಟೇ ಅಲ್ಲ ರೈತನ ಮಗನಾಗಿ ಯೂ ಸಹ ಅಭಿನಯ ಮಾಡಿದ್ದಾರೆ ತಂದೆ ಅಂತ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶಿವಣ್ಣ ಅವರು ಇಂದಿಗೂ ಸಹ ಯಂಗ್ ಹೀರೋ ಗಳಿಗೆ ಸೆಡ್ಡು ಹೊಡೆಯುವಂತೆ ಅಭಿನಯ ಮಾಡುತ್ತಾರೆ

ಹಾಗೂ ಇವರು ಒಪ್ಪಿಕೊಳ್ಳುವ ಸಿನಿಮಾಗಳು ಸಹ ಅಷ್ಟೇ ವಿಭಿನ್ನ ಪಾತ್ರಗಳನ್ನು ಹೊಂದಿದ್ದು ಜನರಿಗೆ ಒಳ್ಳೆಯ ಮನರಂಜನೆ ಅನ್ನು ನೀಡುತ್ತದೆ, ಈ ಎಲ್ಲ ಕಾರಣಗಳಿಂದಲೇ ಶಿವಣ್ಣ ಅವರನ್ನು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟ ಎಂದು ಕರೆಯುತ್ತಾರೆ.ಅಷ್ಟೇ ಅಲ್ಲ ಶಿವಣ್ಣ ಅವರು ಅಮ್ಮನವರ ಗಂಡ ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಪ್ರತಿ ಪಾತ್ರಗಳಿಗೂ ಸೈ ಎಂದು ಹೇಳುವ ಶಿವಣ್ಣ ಅವರು ಸಹೃದಯಿ ಹಾಗೂ ದೊಡ್ಮನೆ ಮಗ ಎಂಬ ಹೆಸರಿಗೆ ಹೇಳಿ ಮಾಡಿಸಿದವರಾಗಿದ್ದಾರೆ. ಹಾಗಾದರೆ ಶಿವಣ್ಣ ಅವರು ನಟಿಸಿರುವ ಯಾವ ಸಿನಿಮಾ ನಿಮಗೆ ಬಹಳ ಫೇವರಿಟ್ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.

Leave a Comment

Your email address will not be published.