ನೀವು ನಿಮ್ಮ ಮನೆಯಲ್ಲಿರುವ ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ !!!!

ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ತುಳಸಿ ಗಿಡ ಇರಲೇಬೇಕು ಯಾಕೆ ಅಂದರೆ ಇದು ವೈಜ್ಞಾನಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಮನುಷ್ಯನ ಜೀವನಕ್ಕೆ ಬಹಳಾನೇ ಪ್ರಯೋಜನಕಾರಿ ಆರೋಗ್ಯಕರವಾದ ಪ್ರಯೋಜನಗಳನ್ನು ನೀಡುವ ಕಾರಣದಿಂದಾಗಿ ಆದ ಕಾರಣವೇ ಈ ತುಳಸಿ ಗಿಡವನ್ನು ಪ್ರತಿಯೊಬ್ಬರು ಮನೆಯ ಮುಂದೆ ಬೆಳೆಸಬೇಕು ಅಂತ ಹೇಳಲಾಗುತ್ತದೆ.ಇನ್ನು ಆಧ್ಯಾತ್ಮಿಕವಾಗಿ ಹೇಳಬೇಕಾದರೆ ತುಳಸಿ ಗಿಡ ಮನೆಯ ಅಂಗಳದಲ್ಲಿ ಇಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುವುದಿಲ್ಲ ಅಂತ ಹೇಳಲಾಗುತ್ತದೆ.

ಹಾಗಾದರೆ ಶಾಸ್ತ್ರವೂ ಹೇಳುವ ಹಾಗೆ ಮನೆಯ ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬೇಕು ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಟ್ಟರೆ ಶ್ರೇಷ್ಠ ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಲೇ ಬಾರದು ಈ ವಿಚಾರಗಳನ್ನು ಕುರಿತು ನಾನು ನಿಮಗೆ ಇಂದಿನ ಲೇಖನದಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನು ತಿಳಿಸಿಕೊಡುತ್ತೇನೆ, ಇದನ್ನು ನೀವು ಕೂಡ ನಿಮ್ಮ ಮನೆಯಲ್ಲಿ ಪಾಲಿಸಿ ನೋಡಿ ಹೇಗೆ ನಿಮ್ಮ ಮನೆಯಲ್ಲಿ ಅದೃಷ್ಟವೂ ಬದಲಾಗುತ್ತದೆ ಎಂದು.ಮೊದಲನೆಯದಾಗಿ ತುಳಸಿ ಗಿಡವನ್ನು ಇಡುವುದಕ್ಕೆ ಶ್ರೇಷ್ಠ ದಿಕ್ಕು ಅಂದರೆ ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕು, ಪೂರ್ವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಅದು ಮನೆಗೆ ಶ್ರೇಯಸ್ಸು ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ನಂಬಲಾಗಿದ್ದು.

ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇರಿಸುವುದರಿಂದ ಮನೆಯಲ್ಲಿ ವಿದ್ಯಾರ್ಥಿಗಳು ಇದ್ದರೆ ಅವರಲ್ಲಿ ನೆನಪಿನ ಶಕ್ತಿ ಹೆಚ್ಚುತ್ತದೆ ಅಂತ ಹೇಳಲಾಗುತ್ತಿದೆ, ಮನೆಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಯಾವ ಸಮಸ್ಯೆಯೂ ಆಗುವುದಿಲ್ಲ ಆದರೆ ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಯಾವತ್ತಿಗೂ ಕೂಡ ತುಳಸಿ ಗಿಡವನ್ನು ಇಡಬಾರದು.ತುಳಸಿ ಗಿಡದಲ್ಲಿ ವಿಷ್ಣುದೇವ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಈ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ಅದು ಮನೆಗೆ ಒಳ್ಳೆಯದಲ್ಲ ಎಂದು ಹೇಳಲಾಗಿದ್ದು ಯಾವತ್ತಿಗೂ ಕೂಡ ತುಳಸಿ ಗಿಡದ ಬಳಿ ಕೈ ಕಾಲುಗಳನ್ನು ತೊಳಿಯಬಾರದು.

ಮತ್ತು ಮುಟ್ಟಾದಂತಹ ಹೆಣ್ಣು ಮಕ್ಕಳು ತುಳಸಿ ಗಿಡದ ಬಳಿ ಓಡಾಡಬಾರದು ಹಾಗೆ ತುಳಸಿ ಗಿಡಕ್ಕೆ ನೀರನ್ನು ಹಾಕುವ ಕ್ರಮ ಹೇಗೆ ಅಂದರೆ, ಯಾರು ಮನೆಯಲ್ಲಿ ಸ್ನಾನ ಮಾಡಿರುತ್ತಾರೊ ಅದು ಮಕ್ಕಳೇ ಆಗಿರಲಿ ಮನೆಯ ಯಜಮಾನರೇ ಆಗಿರಲಿ ಅಂಥವರು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು.ಹಾಗೆ ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಒಂದು ಚೊಂಬಿನ ಪೂರ್ತಿ ನೀರನ್ನು ಇಟ್ಟುಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು ಹಾಗೆ ತುಳಸಿಗೆ ನೀರನ್ನು ಹಾಕುವಾಗ ಅದಕ್ಕೆ ಚಿಟಿಕೆ ಅರಿಶಿಣವನ್ನು ಬೆರೆಸಿ ನೀರನ್ನು ಹಾಕುವುದರಿಂದ ಶ್ರೇಷ್ಠ.

ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವಾಗ ಒಂದಿಷ್ಟು ಅಂತರವನ್ನು ಬಿಟ್ಟು ದೀಪವನ್ನು ಇಡುವುದು ಒಳ್ಳೆಯದು ಇಲ್ಲವಾದಲ್ಲಿ ದೀಪದ ಶಾಖಕ್ಕೆ ಎಲೆಗಳು ಮುದುರುವ ಸಾಧ್ಯತೆ ಇರುತ್ತದೆ.ಹಾಗೆ ಮನೆಯಲ್ಲಿ ಪದೇ ಪದೇ ತುಳಸಿ ಗಿಡವನ್ನು ಒಣಗಲು ಬಿಡಬಾರದು ಒಮ್ಮೆ ತುಳಸಿ ಗಿಡ ಒಣಗಿದರೆ ಅದನ್ನು ಕಿತ್ತು ಹಾಕಿ ಬೇರೆ ತುಳಸಿ ಗಿಡವನ್ನು ಬೇಗ ನೆಡುವುದು ಒಳ್ಳೆಯದು.ತುಳಸಿ ಗಿಡ ಒಂದು ಅತ್ಯಂತ ಔಷಧೀಯ ಗುಣವಿರುವ ಒಂದು ಸಸಿಯಾಗಿದ್ದು ಇದನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬೆಳೆಸಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಿ, ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

Leave a Comment

Your email address will not be published.