ಈ ಒಂದು ನಾಗದೇವತೆಯ ಪವಾಡದಿಂದ ಕಣ್ಣು ಕಳೆದುಕೊಂಡ ಯುವಕನಿಗೆ ಕಣ್ಣು ಬಂದಿತು ಅದು ಹೇಗೆ ಗೊತ್ತಾ ..ತಿಳಿಯಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ !!!

ನಮ್ಮ ಭಾರತ ದೇಶದಲ್ಲಿ ಹಲವಾರು ಪವಾಡಗಳು ಅಚ್ಚರಿಗಳು ನಡೆಯುವುದನ್ನು ನೀವು ಕೇಳುತ್ತಲೇ ಇರುತ್ತೀರಿ ಹೀಗೆ ನೀವು ಈ ಹಿಂದೂ ಧರ್ಮದ ನೆಲೆಯಾಗಿರುವಂತಹ ಭಾರತ ಭೂಮಿಯಲ್ಲಿ ಇನ್ನೂ ಮುಂದಿನ ದಿನಗಳಲ್ಲಿಯೂ ಕೂಡ ಸಾಕಷ್ಟು ಅಚ್ಚರಿ ಪವಾಡಗಳನ್ನು ನಡೆಯುವುದನ್ನು ಕೇಳಬಹುದಾಗಿದೆ.ಕಾಣಬಹುದಾಗಿದೆ.ಯಾಕೆ ಅಂದರೆ ಈ ಭಾರತ ಭೂಮಿಯ ಮೇಲೆ ಮುಕ್ಕೋಟಿ ದೇವರುಗಳು ನೆಲೆಯಾಗಿರುವ ಕಾರಣದಿಂದಾಗಿ ಭಕ್ತರ ಮೇಲೆ ಆ ಮುಕ್ಕೋಟಿ ದೇವರುಗಳ ಆಶೀರ್ವಾದವಿದ್ದೆ ಇರುತ್ತದೆ ,ಹಾಗೆಯೇ ಹಲವಾರು ಸಂವತ್ಸರಗಳು ಕಳೆಯುತ್ತಲೇ ಇದ್ದರೂ ಕೂಡ ಆ ದೇವರುಗಳು ಮಾಡುವಂತಹ ಪವಾಡ ಇನ್ನೂ ಅನೇಕ ರೀತಿಯಲ್ಲಿ ಭಕ್ತಾದಿಗಳು ಈ ರೀತಿ ಅಚ್ಚರಿಗಳು ಜರುಗುವುದನ್ನು ನೋಡಬಹುದಾಗಿದೆ .

ಈ ರೀತಿಯಾಗಿ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆಲ್ಲರಿಗೂ ನಮ್ಮ ಈ ಕರ್ನಾಟಕ ರಾಜ್ಯದಲ್ಲಿಯೇ ನಡೆಯುತ್ತಿರುವಂತಹ ಒಂದು ಪವಾಡದ ಬಗ್ಗೆ ನಾವು ತಿಳಿಯೋಣ .ಹೌದು ಸ್ನೇಹಿತರೇ ಅದೇನಂತ ಹೇಳ್ತೀವಿ ಈ ಕೆಳಗೆ ನೀಡಲಾಗಿರುವ ಲೇಖನವನ್ನು ಪೂರ್ತಿಯಾಗಿ ತಿಳಿದು ನಂತರ ನಿಮಗೂ ಕೂಡ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಬಂಧು ಮಿತ್ರರೊಂದಿಗೆ ಇದನ್ನು ಶೇರ್ ಮಾಡಿ .ಹಾವೇರಿ ಜಿಲ್ಲೆಗೆ ಸೇರಿರುವಂತಹ ರಾಣಿಬೆನ್ನೂರು ತಾಲೂಕಿನಲ್ಲಿರುವ ಹೇಮಾವತಿ ಪಟ್ಟಣದ ಹೊನ್ನತ್ತಿ ಎಂಬ ಗ್ರಾಮಕ್ಕೆ ಸೇರಿದ ಒಂದು ದೇವಾಲಯದಲ್ಲಿ ನಾಗದೇವತೆಯ ಒಂದು ಪವಾಡವನ್ನೇ ಮಾಡುತ್ತಿದ್ದಾಳೆ ,

ನಾಗದೇವತೆಯ ಈ ಅಚ್ಚರಿಯನ್ನು ಕಂಡು ಬೆಂಗಳೂರು ಮಂಗಳೂರಿನಿಂದಲೂ ಕೂಡ ಭಕ್ತಾದಿಗಳು ಬಂದು ದೇವಿಯ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಾರಂತೆ .ಅಷ್ಟಕ್ಕೂ ಈ ದೇವಾಲಯದಲ್ಲಿ ಜರುಗುವ ತಹ ಪವಾಡವಾದರೂ ಏನು ಅಂದರೆ ಇಲ್ಲಿ ನಾಗದೇವತೆಯ ನೆಲೆಸಿದ್ದಾರೆ ಇಲ್ಲಿ ಪೂಜಿಸುವಂತಹ ದೇವರು ನಾಗದೇವತೆ ಮತ್ತು ನಾಗರಾಜ .ಒಮ್ಮೆ ಒಬ್ಬ ಚಾಲಕ ಒಂದು ನಾಗರ ಹಾವನ್ನು ಅನಿವಾರ್ಯವಾಗಿ ಕೊಂದಿರುತ್ತಾರೆ ಆದರೆ ಆ ನಾಗದೇವತೆಯನ್ನು ಕೊಂದ ಕಾರಣದಿಂದಾಗಿ ಆ ಚಾಲಕ ಕಣ್ಣನ್ನು ಕೂಡ ಕಳೆದುಕೊಂಡಿರುತ್ತಾರೆ ನಂತರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಕೂಡ ವೈದ್ಯರುಗಳು ಬೇರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯಲು ಹೇಳುತ್ತಾರೆ.

.ಆದರೆ ಚಾಲಕ ಯಾವ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ದೃಷ್ಟಿ ಮಾತ್ರ ವಾಪಸ್ಸು ಬರುವುದಿಲ್ಲ ನಂತರ ಚಾಲಕನಿಗೆ ತಾನು ಕೊಂದ ನಾಗರಹಾವಿನಿಂದ ಈ ಶಿಕ್ಷೆಯನ್ನು ನಾನು ಅನುಭವಿಸುತ್ತಿದ್ದೇನೆ ಎಂದು ತಿಳಿದು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಹಾರವನ್ನು ಕೇಳಿದಾಗ , ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆ ಚಾಲಕನಿಗೆ ಪರಿಹಾರವನ್ನು ತಿಳಿಸಿಕೊಡುತ್ತಾರೆ .ಅದೇನೆಂದರೆ ಹೊನ್ನತ್ತಿ ಗ್ರಾಮದಲ್ಲಿಯೇ ಇರುವಂತಹ ಒಂದು ಜಾಗವನ್ನು ತಿಳಿಸಿ ಅಲ್ಲಿ ದೇವರು ನೆಲೆಸಿದ್ದಾರೆ ನೀನು ಸಾಯಿಸಿದಂತಹ  ಸರ್ಪವನ್ನು ಅಲ್ಲಿ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡು ಎಂದು ಪರಿಹಾರವನ್ನು ತಿಳಿಸಿದಾಗ ಚಾಲಕ ಅದೇ ರೀತಿ ಮಾಡುತ್ತಾನೆ .

ಕ್ಷೇತ್ರದಲ್ಲಿ ತಿಳಿಸಿದಂತೆ ಸರ್ಪವನ್ನು ಅವರು ಸೂಚಿಸಿದ ಸ್ಥಳದಲ್ಲಿ ಸಂಸ್ಕರಿಸಿದ ನಂತರ ಆ ಚಾಲಕ ಏಳು ದಿನಗಳ ಕಾಲ ಹೊನ್ನತ್ತಿ ಗ್ರಾಮದ ದೇವಾಲಯದಲ್ಲಿ ಇರಬೇಕಾಯಿತು ನಂತರ ಅಲ್ಲಿ ನಡೆದದ್ದೇ ಒಂದು ಪವಾಡ .ಹೌದು ಚಾಲಕ ತನ್ನ ತಪ್ಪನ್ನು ಅರಿತು ಆ ಹೊನ್ನತ್ತಿ ಗ್ರಾಮದಲ್ಲಿರುವ ನಾಗದೇವತೆಗೆ ಭಕ್ತಿ ಪೂರ್ವಕವಾಗಿ ನಮಿಸುತ್ತಾರೆ ನಂತರ ನಾಗದೇವತೆ ಚಾಲಕನ ಭಕ್ತಿಯನ್ನು ಕಂಡು ಆತನ ದೃಷ್ಟಿಯನ್ನು ಕರುಣಿಸುತ್ತಾರೆ .

ಅಂದಿನಿಂದಲೂ ಕೂಡ ಆ ಜನರು ತಮಗೆ ಏನೇ ಕಷ್ಟವಿದ್ದರೂ ಕೂಡ ಈ ದೇವಾಲಯಕ್ಕೆ ಬಂದು ಹರಕೆ ಮಾಡಿಕೊಂಡು ನಾಗ ದೇವತೆಯ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಿದ್ದಾರೆ .ಈ ರೀತಿಯಾಗಿ ನಾಗದೇವತೆಯ ಈ ಪವಾಡದಿಂದ ಭಕ್ತಾದಿಗಳ ಜನಸಾಗರವೇ ಹರಿದು ನಾಗದೇವತೆಯ ಆಶೀರ್ವಾದ ಪಡೆಯಲು ಈ ದೇವಸ್ಥಾನಕ್ಕೆ ಹೋಗುತ್ತಾರೆ .

Leave a Comment

Your email address will not be published.