ನಿರಂಜನ್ ದೇಶಪಾಂಡೆ ಅವರ ಅಕ್ಕನ ಪ್ರತಿಯೊಬ್ಬರಿಗೂ ಒಂದು ಸ್ಪೂರ್ತಿ ಆಗ್ತಾರೆ ಯಾಕೆ ಗೊತ್ತ .. ಇವರ ವಿಚಾರ ತಿಳ್ಕೊಂಡ್ರೆ ಹೆಮ್ಮೆ ಅನಿಸೋತ್ತೆ

ಇವರು ಆರ್ ಜೆ ಆಗಿ ಕಾರ್ಯನಿರ್ವಹಿಸಿದ್ದಾರೆ ಅಷ್ಟೇ ಅಲ್ಲ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಇನ್ನೂ ಕಾಮಿಡಿಯನ್ನು ಸಖತ್ತಾಗಿ ಮಾಡ್ತಾರೆ ಅಷ್ಟೇ ಅಲ್ಲ ಕಿರುತೆರೆಯಲ್ಲಿ ಭಾರಿ ಹೆಸರು ಮಾಡಿರುವ ಈ ನಟ ನಿರೂಪಣೆ ಅಲ್ಲಿ ಎತ್ತಿದ ಕೈ. ಹೌದು ಇವರು ಮಾತನಾಡುತ್ತಾ ಇದ್ದರೆ ಮಧ್ಯಾಚಾರ್ಯರು ಮಾತಾಡೋದು ಸಾಧ್ಯವಾಗುವುದಿಲ್ಲ ಅಂಥ ಮಾತಿನ ಮಲ್ಲ ಈ ನಟ ಹೌದು ನಾವು ಮಾತನಡುತ್ತಾ ಇರುವುದು ನಿರಂಜನ್ ದೇಶಪಾಂಡೆ ಅವರ ಬಗ್ಗೆ ಇವರು ಸದ್ಯಕ್ಕೆ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಭಾಗವಹಿಸಿದ್ದು ಪ್ರತಿಯೊಬ್ಬರಿಗೂ ಕೂಡ ಎಂಟರ್ಟೈನ್ಮೆಂಟ್ ನೀಡುತ್ತಾ ಟಪ್ ಸ್ಪರ್ಧಿ ಆಕೆ ಆಟವಾಡುತ್ತಾ ಇದ್ದಾರೆ ನಿರಂಜನ್ ದೇಶಪಾಂಡೆ.

ಹೌದು ಸದ್ಯಕ್ಕೆ ಮಿನಿ ಬಿಗ್ ಬಾಸ್ ಅಲ್ಲೇ ಭಾಗವಹಿಸಿರುವ ನಿರಂಜನ್ ಅವರು ತಮ್ಮ ಜೀವನದ ಬಗ್ಗೆಯೂ ಕೂಡ ಆಗಾಗ ಬಿಗ್ ಬಾಸ್ ಮನೆಯೊಳಗೆ ಹೇಳಿಕೊಳ್ಳುತ್ತಾ ಇದ್ದರು. ಇನ್ನು ಇದೇ ವೇಳೆ ಹೊರ ಬಂದ ವಿಚಾರವೇನು ಅಂದರೆ ನಟ ನಿರಂಜನ್ ದೇಶಪಾಂಡೆ ಅವರು ತಮ್ಮ ಅಕ್ಕನ ಜೀವನದ ಬಗ್ಗೆ ಅಲ್ಲಿರುವ ಸ್ಪರ್ಧಿಗಳ ಬಳಿ,

ಹಂಚಿಕೊಂಡಿದ್ದಾರೆ ಹಾಗೆ ನಿರಂಜನ್ ಅವರು ಭಾವುಕರಾಗಿ ಮತ್ತೊಂದು ವಿಚಾರವನ್ನು ಕೂಡ ಹೇಳಿಕೊಂಡಿದ್ದಾರೆ ಯಾರೂ ಕೂಡ ರಿಲೇಶನ್ ಶಿಪ್ ನಲ್ಲಿ ಹುಡುಗರಿಗೆ ಆಗಲಿ ಹುಡುಗಿಯರಿಗೆ ಆಗಲೇ ಮೋಸ ಮಾಡಬೇಡಿ ಯಾಕೆಂದರೆ ಅದು ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಕೂಡ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾ ತನ್ನ ಅಕ್ಕ ನಳಿನಿ ದೇಶಪಾಂಡೆ.

ಈಕೆ ಏನು ಹೇಳಿದರೂ ಮದುವೆ ಆಗುವುದಕ್ಕೆ ಒಪ್ಪುತ್ತಲೇ ಇರಲಿಲ್ಲ ಯಾಕೆಂದರೆ ಮುಂಚೆ ರಿಲೇಷನ್ ಶಿಪ್ ಒಂದರಿಂದ ಆಕೆ ಮನನೊಂದು ಬೇರೆ ಮದುವೆಯಾಗಲು ಇಷ್ಟ ಪಡುತ್ತಿರಲಿಲ್ಲ ಹಾಗೂ ನಿರಂಜನ್ ದೇಶಪಾಂಡೆ ಅವರ ಮದುವೆ ಕೂಡ ಆಗಿಹೋಯ್ತು ಅಕ್ಕಪಕ್ಕದ ಮನೆಯವರು ಮಗಳನ್ನು ಮನೆಯಲ್ಲಿಟ್ಟುಕೊಂಡು ಮಗನ ಮದುವೆ ಮಾಡಿದ್ದೀರಾ ಎಂದು ಬಹಳ ಚುಚ್ಚುವ ಹಾಗೆ ಮಾತನಾಡುತ್ತಾ ಇದ್ದರು. ಇದೇ ವೇಳೆ ವಿನಾಯಕ್ ಜೋಷಿ ಅವರ ವೆಬ್ ಸೀರಿಸ್ ನಲ್ಲಿ ನಳಿನ್ ಅವರು ಅಭಿನಯ ಮಾಡಲೆಂದು ಹೋದಾಗ ಅಲ್ಲಿ ಜಯಂತ್ ಎಂಬುವವರನ್ನ ಭೇಟಿ ಆಗುತ್ತಾರೆ ಎನ್ನುವ ಜಯಂತ್ ಅವರಿಗೆ 2ಕೈಗಳು ಇರುವುದಿಲ್ಲ ಹಾಗೆ ಇವರು ನ್ಯಾಷನಲ್ ಪ್ಲೇಯರ್ ಸ್ವಿಮ್ಮರ್ ಕೂಡ ಆಗಿದ್ದರು.

ಅವರನ್ನು ಇಷ್ಟ ಪಟ್ಟ ನಳಿನ್ ಅವರು ಅವರನ್ನು ಮದುವೆಯಾಗಲು ಇಚ್ಛಿಸುತ್ತಾರೆ ಹಾಗೂ ಮನೆಯಲ್ಲಿ ಹೇಳಿದಾಗ ಇದಕ್ಕೆ ನಿರಂಜನ್ ದೇಶಪಾಂಡೆ ಒಪ್ಪುವುದಿಲ್ಲ ಆಗ ನಿರಂಜನ್ ಅವರ ಅಕ್ಕ 2ಕೈ 2ಕಾಲುಗಳು ಇರುವ ವ್ಯಕ್ತಿ ತನಗೆ ಮೋಸ ಮಾಡಿದ ಆದರೆ ಇವರನ್ನು ನೋಡಿ ನನಗೆ ಮತ್ತೆ ಜೀವಿಸಬೇಕು ಎಂಬ ಹಂಬಲ ಹುಟ್ಟಿದ ಇವರ ನನ್ನನ್ನು ಮದುವೆ ಆದರೆ ಸುಖವಾಗಿರುತ್ತೇನೆ ಎಂಬ ಮಾತುಗಳನಾಡಿದಾಗ ನಿರಂಜನ್ ದೇಶಪಾಂಡೆ ಅವರ ಮಾತುಗಳನ್ನು ಕೇಳಿ ಖುಷಿಯಿಂದ ಮದುವೆ ಮಾಡಿಕೊಡುತ್ತಾರೆ ಆಗ ಕೂಡ ಜನರು ಸುಲಭವಾಗಿ ಸಿಕ್ಕಿತೆಂದು ಮದುವೆ ಮಾಡಿಬಿಟ್ಟಿರಾ ಎಂಬ ಹೀಯಾಳಿಕೆಯ ಮಾತುಗಳನ್ನು ಆಡಿದ್ದರು.

ಆದರೆ ತನ್ನ ಅಕ್ಕ ಇದೀಗ ಸುಖ ಸಂಸಾರದಲ್ಲಿ ದಾಂಪತ್ಯ ಜೀವನದಲ್ಲಿ ನೆಮ್ಮದಿಯಿಂದ ಇದ್ದಾಳೆ ಈ ದಂಪತಿಗಳು ಖುಷಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಇದೆ ಅಲ್ವಾ ಪ್ರತಿಯೊಬ್ಬರು ಕೂಡ ಬಯಸುವುದು ದಾಂಪತ್ಯ ಜೀವನದಲ್ಲಿ ನೆಮ್ಮದಿಯನ್ನು ಅದೇ ರೀತಿ ಇದೀಗ ಹೇಳಿದ ದೇಶಪಾಂಡೆ ಅವರು ಸುಖದಿಂದ ಸಂಸಾರ ನಡೆಸುತ್ತಿದ್ದಾರೆ.

Leave a Comment

Your email address will not be published.