ತೋಟದಲ್ಲಿ ತಾವೇ ಮೇಸ್ತ್ರಿಯಾಗಿ ಮಣ್ಣಿನಿಂದ ಪರಿಸರ ಸ್ನೇಹಿ ಮನೆಯನ್ನು ಕಟ್ಟಿದ್ದಾರೆ ಶ್ರುತಿ ಅದು ಹೇಗಿದೆ ಗೊತ್ತ ….!!!

ಸಿನಿಮಾರಂಗದಲ್ಲಿ ನಟನಟಿಯರಾಗಿರುವ ಹಲವು ಮಂದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬಹಳ ಆ್ಯಕ್ಟಿವ್ ಆಗಿರುತ್ತಾರೆ ಅಂತಹ ಸೆಲೆಬ್ರಿಟಿಗಳಲ್ಲಿ ಶ್ರುತಿ ಅವರು ಕೂಡ ಒಬ್ಬರು ಹೌದು ನಟಿ ಶ್ರುತಿ ಅವರು ಆಸೆಗೊಬ್ಬ ಮೀಸೆಗೊಬ್ಬ ಎಂಬ ಸಿನಿಮಾದಲ್ಲಿ ಸರಳ ಪಾತ್ರವನ್ನು ಮಾಡುವ ಮೂಲಕ ಜನರಿಗೆ ಬಹಳ ಅಚ್ಚುಮೆಚ್ಚಾದರು ಆನಂತರ ನಟಿ ಶ್ರುತಿ ಅವರು ಸಿನಿಮಾ ರಂಗದಲ್ಲಿ ಬಹಳ ಪ್ರಖ್ಯಾತಿ ಪಡೆದ ನಟಿ ಎಂದೇ ಹೇಳಬಹುದು ಇನ್ನು ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಇವರಿಗೆ ಎಲ್ಲಾ ಸಿನಿಮಾಗಳು ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು ಕೆಲವು ಒಳ್ಳೆಯ ಪ್ರಸಿದ್ಧತೆಯನ್ನು ತಂದುಕೊಟ್ಟಿತ್ತು.ಹಲವು ವಿಭಿನ್ನ ಪಾತ್ರಗಳಲ್ಲಿ ಅಭಿನಯ ಮಾಡಿರುವ ನಟಿ ಶ್ರುತಿ ಅವರ, ಮತ್ತೊಂದು ಹೆಸರು ಪ್ರಿಯದರ್ಶಿನಿ ಎಂದು. ಇದೀಗ ಲಾಕ್ ಡೌನ್ ಇರುವ ಕಾರಣ ಯಾವ ಚಿತ್ರೀಕರಣವು ನಡೆಯದೆ ಇರುವ ಕಾರಣದಿಂದಾಗಿ ತಮ್ಮ ಮಗಳ ಜೊತೆ ಮೈಸೂರಿನಲ್ಲಿ ಇರುವ ತಮ್ಮ ಜಮೀನಿನಲ್ಲಿ ಸಮಯ ಕಳೆಯುತ್ತಾ ಇದ್ದಾರೆ.

ಇಂತಹ ಸಮಯದಲ್ಲಿ ಶ್ರುತಿ ಅವರು ತಮ್ಮ ಅಭಿಮಾನಿಗಳಿಗೆ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ಸಿಹಿಸುದ್ದಿಯನ್ನು ನೀಡಿದ್ದಾರೆ ಅದೇನೆಂದರೆ ತಮ್ಮ ಜಮೀನಿನಲ್ಲಿ ಸಿಮೆಂಟ್ ಬಳಸದೆ ಮನೆಯೊಂದನ್ನು ಕಟ್ಟುವ ಮೂಲಕ ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿ ಇದೀಗ ಹೆಚ್ಚಿನ ಜನರಿಗೆ ಪರಿಸರ ಸ್ನೇಹಿ ಮನೆ ಅನ್ನೋ ಕಟ್ಟಿಕೊಳ್ಳುವುದಾಗಿ ಪ್ರೋತ್ಸಾಹ ನೀಡಿದ್ದಾರೆ ನಟಿ ಶ್ರುತಿ.ಸಿಮೆಂಟ್ ಇಲ್ಲದೆ ಕಟ್ಟಿಸಿದ ಮನೆಯ ಫೋಟೋ ಅನ್ನೋ ಹಾಕುವ ಮೂಲಕ ಇದಕ್ಕೆ ನಾನೇ ಇಂಜಿನಿಯರ್ ನಾನೇ ಮೇಸ್ತ್ರಿ ಎಂದು ಟ್ಯಾಗ್ ಲೈನ್ ಅನ್ನು ಸಹ ಶ್ರುತಿ ಅವರು ನೀಡಿದ್ದಾರೆ. ಪರಿಸರ ಸ್ನೇಹಿ ಮನೆ ಎಂದರೆ ಯಾವುದೇ ಸಿಮೆಂಟ್ ಬಳಸದೆ ಕಲ್ಲು ಮಣ್ಣು ಬಳಸಿ ಹಾಗೂ ಚಾವಣಿಗೆ ಬಿದಿರು ಹಾಗೂ ತೆಂಗಿನಗರಿಯನ್ನು ಬಳಸಿ ಕಟ್ಟಿರುವ ಮನೆ ಅಲ್ಲಿ ಸುಂದರ ಕ್ಷಣವನ್ನು ಕಳೆಯುತ್ತಾ ಇರುವ ಶ್ರುತಿ ಹಾಗೂ ಅವರ ಮಗಳು, ಇದರಿಂದಾಗಿ ಜನರಿಗೆ ಪರಿಸರವನ್ನು ಪ್ರೀತಿಸಿ ಎಂಬ ಸಣ್ಣ ಸಂದೇಶವನ್ನು ಸಹ ಶ್ರುತಿ ಅವರು ನೀಡಿದ್ದಾರೆ.

ತಮಗೆ ಸೇರಿದ ಇಪ್ಪತ್ತೈದು ಎಕರೆ ಅಲ್ಲೇ ಕೃಷಿಯನ್ನು ಮಾಡುತ್ತಾ ತಾಯಿ ಮಗಳು ಸಮಯವನ್ನು ಕಳೆಯುತ್ತ ಇದ್ದರೆ ಸದ್ಯಕ್ಕೆ ತೋಟದ ಮನೆಯಲ್ಲೇ ಕಾಲ ಕಳೆಯುತ್ತಾ ಇರುವ ನಟಿ ಶ್ರುತಿ ಅವರು ಸಾಕಷ್ಟು ಜನರಿಗೆ ಲಸಿಕೆ ಕೊಡಿಸುವ ಮೂಲಕ ಹಾಗೂ ರೇಷನ್ ಕಿಟ್ ನೀಡುವ ಮೂಲಕ ಹಲವಾರು ಜನರಿಗೆ ಸಹಾಯವನ್ನು ಸಹ ಮಾಡಿದ್ದಾರೆ ಶ್ರುತಿ ಅವರು ಈ ಸಮಯದಲ್ಲಿ. ಇನ್ನೂ ಬಿಜೆಪಿ ಪಾರ್ಟಿ ಅಲ್ಲಿಯೂ ಸಹ ಬ್ಯುಸಿ ಆಗಿರುವ ಶ್ರುತಿ ಅವರು ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಳ್ಳೆಯ ಕೆಲಸಗಳನ್ನು ಸಹ ಮಾಡುತ್ತಾ ಇದ್ದಾರೆ.

ಶ್ರುತಿ ಅವರು ಇನ್ನೂ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಹಾಗೂ ಪರಿಸರಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ತಮ್ಮ ಅಭಿಮಾನಿಗಳಿಗೆ ಒಳ್ಳೆಯ ಸಂದೇಶವನ್ನು ಇದೇ ರೀತಿ ನೀಡುತ್ತಾ ಇರಲಿ ಹಾಗೂ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಅವರು ಪೋಸ್ಟ್ ಮಾಡಿರುವ ಈ ಪರಿಸರ ಸ್ನೇಹಿ ಮನೆಯ ಫೋಟೋ ಹರಿದಾಡುತ್ತಿದ್ದು ನೀವು ಕೂಡ ಫೋಟೋ ನೋಡಿ ಹಾಗೂ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Comment

Your email address will not be published.