ತನ್ನ ಲವರ್ ಗೆ ಆಕ್ಸಿಡೆಂಟ್ ಆದಾಗ ಆ ಹುಡುಗಿ ಮಾಡಿದ್ದು ಏನ್ ಗೊತ್ತಾ…. ಮನ ಕಲಕುವ ಕಥೆ …

ಪ್ರೀತಿ ಎಂಬ ಎರಡು ಅಕ್ಷರಕ್ಕೆ ಎಂತಹ ಬೆಲೆ ಇದೆ ಅಲ್ವಾ ಸ್ನೇಹಿತರ ಈ ಪ್ರೀತಿ ಅನ್ನೋ ಪದ ಕೇಳಿದರೆ ಸಾಕು ನಮಗೆ ನೆನಪಿಗೆ ಬರುವುದು ಸಲೀಂ ಅನಾರ್ಕಲಿ ಲೈಲಾ ಮಜನೂ ರೂಮಿಯೊ ಜೂಲಿಯಟ್ ಅಲ್ವಾ .ಇವರೆಲ್ಲರೂ ಪ್ರೀತಿ ಪ್ರೇಮ ಅನ್ನೋ ಪದಕ್ಕೆ ಉದಾಹರಣೆಯಾಗಿದ್ದಾರೆ ಮತ್ತು ಇವರ ಕತೆಗಳನ್ನು ನಾವು ಪುಸ್ತಕದಲ್ಲಿ ಓದಿ ತಿಳಿದುಕೊಳ್ಳಬಹುದು ಇವರೆಲ್ಲರೂ ಪ್ರೀತಿ ಪ್ರೇಮ ಅನ್ನೋ ಪದಕ್ಕೆ ಹೇಳಲಾಗದಂತಹ ಅರ್ಥವನ್ನು ನೀಡಿದ್ದಾರೆ .ಪ್ರೀತಿ ಅಂದರೆ ಏನು ಅಂತ ಇತ್ತೀಚಿನ ಮಕ್ಕಳಲ್ಲಿ ಕೇಳಿದರೆ ಕೆಲವರು ಹೇಳುತ್ತಾರೆ ಟೈಮ್ ಪಾಸ್ ಎಂದು ಆದರೆ ಇನ್ನು ಕೆಲವರು ಹೇಳುತ್ತಾರೆ ಬ್ಯೂಟಿ ಅಂತ ಎಲ್ಲ ಆದರೆ ನಿಜವಾದ ಪ್ರೀತಿಯ ಅರ್ಥವನ್ನು ಯಾರೂ ಕೂಡ ಹೇಳಲು ಸಾಧ್ಯವಿಲ್ಲ.

ಯಾಕೆ ಅಂದರೆ ಪ್ರೀತಿ ಅನ್ನೋ ಪದದ ಅರ್ಥವನ್ನು ಯಾವಾಗಲೂ ಅನುಭವಿಸಿಯೇ ತೀರಬೇಕು ಅಂತಹ ಶಕ್ತಿಯಿದೆ ಪ್ರೀತಿಗೆ . ಪ್ರೀತಿಗೆ ಕಣ್ಣಿಲ್ಲ ಅಂತ ಹೇಳುತ್ತಾರೆ ಹೌದು ಸ್ನೇಹಿತರ ಪ್ರೀತಿಗೆ ಕಣ್ಣಿಲ್ಲ ಈ ಒಂದು ಪ್ರೀತಿ ಯಾವುದೇ ರೀತಿಯ ಹಣವನ್ನು ನೋಡುವುದಿಲ್ಲ ಸೌಂದರ್ಯವನ್ನು ನೋಡುವುದಿಲ್ಲ ಮತ್ತು ಆಸ್ತಿ ಅಂತಸ್ತನ್ನು ನೋಡೋದಿಲ್ಲ ಈ ಪ್ರೀತಿ ಎಂಬುದು ಪವಿತ್ರವಾದ ಭಾವನೆಯಿಂದ ಹುಟ್ಟುವುದು.ಪ್ರೀತಿಗೆ ಕಣ್ಣಿಲ್ಲ ಅನ್ನೋ ಪದಕ್ಕೆ ನಾನು ಇಂದು ನಿಮಗೆ ಒಂದು ಉದಾಹರಣೆಯ ಕಥೆಯನ್ನು ಹೇಳಿ ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತೇನೆ . ಒಮ್ಮೆ ಒಬ್ಬ ಸುಂದರವಾದ ಹುಡುಗ ಇರುತ್ತಾನೆ.

ಅವನು ಎಷ್ಟು ಸುಂದರವಾಗಿ ಇರುತ್ತಾನೆ ಅಂದರೆ ಪ್ರತಿದಿನ ಅವನು ಸುಂದರವಾಗಿ ರೆಡಿಯಾಗಿ ಊರು ಸುತ್ತುವುದೇ ಅವನ ಕೆಲಸ ಅಷ್ಟೇ ಅವನಿದ್ದ ರೂಮಿನ ಪಕ್ಕದಲ್ಲಿಯೇ ಮತ್ತೊಂದು ಹುಡುಗಿ ಇರುತ್ತಾಳೆ ಅವಳು ಪ್ರತಿ ದಿನ ಆ ಒಂದು ಹುಡುಗನನ್ನು ನೋಡುತ್ತಾ ಇರುತ್ತಾಳೆ ಹೀಗೆ ದಿನ ಕಳೆದಂತೆ ಅವನ ಮೇಲೆ ಆಕೆಗೆ ಪ್ರೀತಿಯೂ ಕೂಡ ಮೂಡುತ್ತದೆ .ಒಮ್ಮೆ ಆ ಹುಡುಗಿ ಚೀಟಿಯಲ್ಲಿ ಐ ಲವ್ ಯೂ ಎಂದು ಬರೆದು ಆ ಹುಡುಗನ ರೂಮಿಗೆ ಹೋಗಿ ಆ ಚೀಟಿಯನ್ನು ಇಟ್ಟು ಬಂದಿರುತ್ತಾಳೆ ಆದರೆ ಆ ಹುಡುಗ ಅದನ್ನು ನಿರಾಕರಿಸಿ ಆ ಚೀಟಿಯನ್ನು ಹರಿದು ಬಿಸಾಕಿ ಆ ಹುಡುಗಿಗೆ ಬಾಯಿಗೆ ಬಂದ ಹಾಗೆ ಬೈದು ಬಿಡುತ್ತಾನೆ ಆದರೆ ಆ ಹುಡುಗಿ ಯಾವುದೇ ರೀತಿಯಲ್ಲೂ ಬೇಸರ ಪಟ್ಟುಕೊಳ್ಳುವುದಿಲ್ಲ .

ಆ ಸುಂದರ ಹುಡುಗ ಮತ್ತೊಂದು ಸುಂದರ ಹುಡುಗಿಯನ್ನು ಪ್ರೀತಿಸಲು ಶುರು ಮಾಡುತ್ತಾನೆ ಒಮ್ಮೆ ತಾನು ಪ್ರೀತಿಸುವಂತಹ ಹುಡುಗಿಗೆ ಏನನ್ನಾದರೂ ಗಿಫ್ಟ್ ಕೊಡಬೇಕೆಂದು ಆಕೆಗೆ ಕರೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಆ ಹುಡುಗ ಗಿಫ್ಟ್ ತರಲೆಂದು ಹೋಗುತ್ತಾನೆ ಹಿಂತಿರುಗಿ ಬರುವಾಗ ಆ ಹುಡುಗ ರಸ್ತೆ ಮೇಲೆ ವಾಹನಕ್ಕೆ ಡಿಕ್ಕಿ ಹೊಡೆದು ಆಕ್ಸಿಡೆಂಟ್ ಆಗಿ ಅಲ್ಲಿಯೇ ಬೀಳುತ್ತಾನೆ , ಆದರೆ ಆ ಹುಡುಗ ಪ್ರೀತಿಸುತ್ತಿದ್ದ ಆ ಹುಡುಗಿ ಹುಡುಗನ ಆಕ್ಸಿಡೆಂಟ್ ಅನ್ನು ನೋಡಿ ಓಡಿ ಹೋಗುತ್ತಾಳೆ ಆದರೆ ಅದೇ ಬೀದಿಯಲ್ಲಿ ಆ ಸ್ಫುರದ್ರೂಪಿ ಹುಡುಗಿ ಆ ಹುಡುಗನ ಬಳಿ ಬಂದು ಅವನನ್ನು ಆಸ್ಪತ್ರೆಗೆ ದಾಖಲಿಸಿ ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ .

ಆದರೆ ಆಕ್ಸಿಡೆಂಟ್ ಜೋರಾಗಿ ಆಗಿದ್ದರಿಂದ ಆ ಹುಡುಗನಿಗೆ ಪೆಟ್ಟು ಹೆಚ್ಚಾಗಿ ಮುಖವು ವಿಚಾರವಾಗಿರುತ್ತದೆ , ಹುಡುಗನಿಗೆ ಎಚ್ಚರವಾದ ಬಳಿಕ ಅವನು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಅವನಿಗೆ ಅವನ ಮುಖವನ್ನು ನೋಡಿಕೊಳ್ಳಲಾಗದೆ ಅವನು ಕಿರುಚಾಡುತ್ತಾರೆ .ಇದಾದ ನಂತರ ಆ ಸುರದ್ರೂಪಿ ಹುಡುಗಿ ಹುಡುಗನ ಬಳಿ ಬಂದು ನಿಲ್ಲುತ್ತಾಳೆ ಮತ್ತೆ ಆ ಹುಡುಗನಿಗೆ ಚೀಟಿಯಲ್ಲಿ ಐ ಲವ್ ಯೂ ಎಂದು ಬರೆದು ಕೊಡುತ್ತಾಳೆ ಆಗ ಅದನ್ನು ಕಂಡು ಹುಡುಗ ಆಕೆಯನ್ನು ತಬ್ಬಿಕೊಂಡು ನಾನು ಮೋಸ ಹೋಗಿಬಿಟ್ಟೆ ನನ್ನನ್ನು ಕ್ಷಮಿಸು ಅಂತ ಕೇಳಿಕೊಳ್ಳುತ್ತಾನೆ .ಇದರಿಂದಲೇ ಗೊತ್ತಾಗಲ್ವಾ ಸ್ನೇಹಿತರೇ ಪ್ರೀತಿಗೆ ಯಾವುದೇ ರೀತಿಯ ಸೌಂದರ್ಯ ಹಣ ಅವಶ್ಯಕತೆ ಇರುವುದಿಲ್ಲ ಬೇಕಾಗಿರುವುದು ನಿಸ್ವಾರ್ಥ ಭಾವನೆ .

 

 

 

Leave a Comment

Your email address will not be published.