ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಹೃದಯದ ಆರೋಗ್ಯ ಹೆಚ್ಚು ಮಾಡಿಕೊಳ್ಳಬಹುದು.

ಭಾರತ ದೇಶದಲ್ಲಿ ಹೃದಯಾಘಾತ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಾಗಿಯೆ ಇದ್ದಾರೆ ಮತ್ತು ಈ ಒಂದು ಸಮಸ್ಯೆ ಬಂದು ಮರಣ ಹೊಂದುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ .ಇದಕ್ಕೆ ಕಾರಣವಾದರೂ ಏನು ಮತ್ತು ಹೃದಯಾಘಾತ ಸಮಸ್ಯೆಯಿಂದ ದೂರವಾಗಬೇಕು ಅನ್ನೋದಾದರೆ ಮಾಡಬೇಕಾಗಿರುವುದು ಏನು ಅನ್ನೋದನ್ನು ನಾವು ಈ ದಿನದ ಲೇಖನದಲ್ಲಿ ತಿಳಿಸಿಕೊಡುತ್ತೆವೆ ತಪ್ಪದೇ ಮಾಹಿತಿಯನ್ನು ತಿಳಿಯಿರಿ .

ಹೃದಯಾಘಾತ ಸಮಸ್ಯೆ ಬರುವುದು ನಾನಾ ಕಾರಣಗಳಿಂದ ಅದರಲ್ಲಿ ದೇಹದಲ್ಲಿ ಕೊಲೆಸ್ಟರಾಲ್ ಹೆಚ್ಚಾದರೂ ಕೂಡ ಹೃದಯಾಘಾತ ಸಮಸ್ಯೆ ಬರುತ್ತದೆ ಮತ್ತು ಇಂದಿನ ಒತ್ತಡದ ಜೀವನದಲ್ಲಿ ಮೂವತ್ತು ವರುಷದ ವ್ಯಕ್ತಿಯಲ್ಲಿಯೂ ಕೂಡ ನಾವು ಹೃದಯಾಘಾತ ಸಮಸ್ಯೆ ಬರುವುದನ್ನು ಕಾಣಬಹುದಾಗಿದೆ .ಆ ಕಾರಣದಿಂದಾಗಿಯೇ ಹೃದಯಾಘಾತ ಸಮಸ್ಯೆ ಬಗ್ಗೆ ಈ ಮಾಹಿತಿಯಲ್ಲಿ ನಿಮಗೆಲ್ಲರಿಗೂ ಹೇಗೆ ಹೃದಯಾಘಾತ ಸಮಸ್ಯೆಯಿಂದ ದೂರ ಉಳಿಯುವುದು ಮತ್ತು ಹೃದಯಾಘಾತ ಸಮಸ್ಯೆ ಬರದೇ ಇರುವುದಕ್ಕೆ ಏನು ಮಾಡಬೇಕು ಹೇಗಿರಬೇಕು ಅನ್ನೋದನ್ನು ಕೂಡ ತಿಳಿಯೋಣ .

ಹೃದಯಾಘಾತ ಸಮಸ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ಅಮೆರಿಕ ದೇಶದಲ್ಲಿ ಸುಮಾರು ನೂರ ನಲವತ್ತು ಒಂಬತ್ತು ವ್ಯಕ್ತಿಗಳ ಗುಂಪನ್ನು ಬಂತು ಸಂಶೋಧನೆಗೆ ಒಳಪಡಿಸಲಾಗಿತ್ತು .ಆ ಒಂದು ಗುಂಪಿನಲ್ಲಿ ಮತ್ತೆ ಮೂರು ಗುಂಪುಗಳಾಗಿ ಮಾಡಿ ಪ್ರತಿಯೊಂದು ಗುಂಪಿನ ಜನರಿಗೆ ಹೃದಯಕ್ಕೆ ಸಂಬಂಧಪಟ್ಟಂತಹ ಟೆಸ್ಟ್ ಗಳನ್ನು ಮಾಡಲಾಯಿತು .ನಂತರ ಮೂರು ಗುಂಪಿನವರಿಗೂ ಒಂದೊಂದು ಟಾಸ್ಕ್ ನೀಡಲಾಯಿತು.

ಮೊದಲನೇ ಗುಂಪಿಗೆ ಮಲಗುವ ಮುನ್ನ ನಿಶ್ಶಬ್ದವಾಗಿ ಮಲಗಬೇಕೆಂದು ಎರಡನೇ ಗುಂಪಿನವರಿಗೆ ಪಾಪ್ ಮ್ಯೂಸಿಕ್ ಕೇಳಿ ನಂತರ ಮಲಗಬೇಕೆಂದು ಆ ನಂತರ ಮೂರನೇ ಗುಂಪಿನ ಜನರಿಗೆ ಯೋಗ ಧ್ಯಾನ ಮತ್ತು ಸುಂದರ ಸಂಗೀತವನ್ನು ಕೇಳಿ ಮಲಗುವಂತಹ ಒಂದು ಟಾಸ್ ಗಳನ್ನು ನೀಡಲಾಗಿತ್ತು .ಈ ರೀತಿ ಟಾಸ್ಕ್ ನೀಡಿದ ನಂತರ ಮಾರನೇ ದಿವಸ ಮತ್ತೆ ಮೂರು ಗುಂಪುಗಳ ಜನರನ್ನು ಹೃದಯಕ್ಕೆ ಸಂಬಂಧಪಟ್ಟಂತಹ ಚಿಕಿತ್ಸೆಯನ್ನು ಮಾಡಲಾಯಿತು ನಂತರ ಬಂದಂತಹ ಫಲಿತಾಂಶವೂ ಬೇರೆ ಬೇರೆಯಾಗಿತ್ತು ಅದೇನೆಂದರೆ , ಮೊದಲನೇ ಗುಂಪಿನ ಜನರು ನಿಶ್ಶಬ್ದವಾಗಿ ಮಲಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದೆ ಆ್ಯಂಕ್ಜೈಟಿ ಕೋಪ ಎಲ್ಲವೂ ಹಾಗೆಯೇ ಇತ್ತು .

ಎರಡನೇ ಗುಂಪಿನ ಜನರಿಗೆ ಚಿಕಿತ್ಸೆಯ ನಂತರ ಬಂದಂತಹ ಫಲಿತಾಂಶವೂ ಅವರ ಹೃದಯ ಬಡಿತದಲ್ಲಿ ತುಂಬಾನೇ ಇಳಿಕೆಯಾಗಿತ್ತು ನಂತರ ಮೂರನೇ ಗುಂಪಿನ ಜನರು ಮಾರನೆ ದಿವಸ ಎದ್ದ ಮೇಲೆ ಅವರಿಗೆ ಚಿಕಿತ್ಸೆ ನೀಡಿದ ನಂತರ ಅವರಲ್ಲಿ ಇದ್ದಂತಹ ಕೋಪ ಆ್ಯಂಗ್ಜೈಟಿ ಎಲ್ಲವೂ ನಿಯಂತ್ರಣಕ್ಕೆ ಬಂದಿತ್ತು . ಈ ಸಂಶೋಧನೆಯಿಂದ ತಿಳಿದಿದ್ದಾದರೂ ಏನು .

ಅಂದರೆ ಮಲಗುವ ಮುನ್ನ ಯೋಗ ಧ್ಯಾನ ಮತ್ತು ಸುಮಧುರ ಸಂಗೀತವನ್ನು ಕೇಳಿ ಮಲಗುವುದರಿಂದ ನಮ್ಮಲ್ಲಿರುವಂತಹ ಒತ್ತಡವಾಗಲಿ ಕೋಪವಾಗಲಿ ಬೇಗನೇ ಕಡಿಮೆಯಾಗಿ ನಮಗೆ ಹೃದಯ ಸಮಸ್ಯೆ ಆಗುವ ಸಾಧ್ಯತೆಗಳು ಕಡಿಮೆಯಾಗುವುದರ ಜೊತೆಗೆ ಹೃದಯದ ಆರೋಗ್ಯವೂ ಕೂಡ ಉತ್ತಮಗೊಳ್ಳುತ್ತದೆ ಅನ್ನೋದು ಈ ಸಂಶೋಧನೆಯಿಂದ ನಾವು ಅರಿತುಕೊಳ್ಳಬಹುದಾಗಿದೆ .

ಆದ್ದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ಯೋಗ ಧ್ಯಾನ ಮಾಡುವುದು ಒಳ್ಳೆಯ ಅಭ್ಯಾಸ ಮತ್ತು ಹೆಚ್ಚು ಕೊಲೆಸ್ಟ್ರಾಲ್ ಉಳ್ಳ ಆಹಾರದ ಸೇವನೆ ಮಾಡದೆ ಇರುವುದು ಕೂಡ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ .
ಯಾರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಅಂಥವರು ಯೋಗ ಧ್ಯಾನವನ್ನು ಬೆಳಗ್ಗೆ ಎದ್ದ ಕೂಡಲೇ ಮತ್ತು ಮಲಗುವ ಮುನ್ನ ಮಾಡುವಂತಹ ಅಭ್ಯಾಸವನ್ನು ರೂಢಿಸಿಕೊಂಡರೆ ಹೃದಯದ ಆರೋಗ್ಯ ವೃದ್ಧಿಸುತ್ತದೆ ಹೃದಯಾಘಾತ ಸಮಸ್ಯೆಯಾಗುವುದು ಕೂಡ ಕಡಿಮೆಯಾಗುತ್ತದೆ .

Leave a Comment

Your email address will not be published.