ಮಲಬದ್ಧತೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಬೇಕಾದರೆ ಈ ಮನೆ ಮದ್ದು ಮಾಡಿ ನೋಡಿ ಸಾಕು ..!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಮಲಬದ್ಧತೆ ಸಮಸ್ಯೆಗೆ ಒಂದೊಳ್ಳೆ ಉಪಯುಕ್ತಕರವಾದ ಮನೆಮದ್ದನ್ನು ತಿಳಿಯೋಣ ಹಾಗೆ ಈ ಮಲಬದ್ಧತೆಯಿಂದ ಮೂಲವ್ಯಾಧಿ ಉಂಟಾಗುತ್ತದೆ ಮೂಲವ್ಯಾಧಿ ಸಮಸ್ಯೆ ಉಂಟಾದರೆ ಕೂತಲ್ಲೆ ಕೂತು ಕೆಲಸ ಮಾಡುವುದಕ್ಕೂ ಕೂಡ ಆಗುವುದಿಲ್ಲ ಅಂತಹ ಒಂದು ಸನ್ನಿವೇಶಗಳು ಎದುರಾಗಿಬಿಡುತ್ತದೆ. ಆದ ಕಾರಣ ನಾವು ಈ ಮೂಲವ್ಯಾಧಿ ಸಮಸ್ಯೆಗೆ ಮಾಡಿಕೊಳ್ಳಬಹುದಾದ ಪರಿಹಾರ ವನ ತಿಳಿಸಿಕೊಡುತ್ತದೆ.ಈ ಮನೆಮದ್ದನ್ನು ನೀವು ಕೇವಲ ಹದಿನೈದು ದಿನಗಳ ಕಾಲ ಪಾಲಿಸಿ ಕೊಂಡು ಬಂದದ್ದೇ ಆದಲ್ಲಿ ಮೂಲವ್ಯಾಧಿ ಸಮಸ್ಯೆಯಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು ಮತ್ತು ನೋವು ಕಡಿಮೆಯಾಗುವುದನ್ನು ಕೂಡ ನೀವು ಗಮನಿಸಬಹುದು ಇದಕ್ಕಾಗಿ ಬೇಕಾಗಿರುವುದು ತುಂಬ ಸುಲಭವಾದ ಸರಳವಾಗಿ ದೊರೆಯುವ ಪದಾರ್ಥ ಅದೇ ಕಪ್ಪು ಒಣ ದ್ರಾಕ್ಷಿ.ಮಾರುಕಟ್ಟೆಯಲ್ಲಿ ಅನೇಕ ವಿಧದ ಒಣದ್ರಾಕ್ಷಿ ದೊರೆಯುತ್ತದೆ ಅಂದರೆ ಬಂಗಾರದ ಬಣ್ಣದ ಒಣದ್ರಾಕ್ಷಿ ಹಸಿರು ಬಣ್ಣದ್ದು ಮತ್ತು ಕಪ್ಪು ಬಣ್ಣದ್ದು ಈ ಕಪ್ಪು ಬಣ್ಣದ ಒಣದ್ರಾಕ್ಷಿಯಲ್ಲಿ ನಾರಿನ ಅಂಶ ತುಂಬಾ ಹೇರಳವಾಗಿ ಇರುತ್ತವೆ .

ಈ ನಾರಿನಂಶ ಹೆಚ್ಚಾಗಿರುವ ಒಣದ್ರಾಕ್ಷಿ ಅನ್ನು ನಾವು ಮೂಲವ್ಯಾಧಿ ಸಮಸ್ಯೆ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದಕ್ಕೆ ಹೀಗೆ ಬಳಸಬೇಕು ನಾವು ಹೇಳಿದ ಕ್ರಮದಲ್ಲಿಯೇ ನೀವು ಒಣದ್ರಾಕ್ಷಿಯ ಈ ಪರಿಹಾರವನ್ನು ಮಾಡಿಕೊಂಡು ಬಂದದ್ದೇ ಆದಲ್ಲಿ ಮೂಲವ್ಯಾಧಿ ಸಮಸ್ಯೆಗೆ ಯಾವುದೇ ಚಿಕಿತ್ಸೆಯಿಲ್ಲದೆ ಬೇಗ ಪರಿಹಾರ ಮಾಡಿಕೊಳ್ಳಬಹುದು.ಈ ಮೂಲವ್ಯಾಧಿ ಸಮಸ್ಯೆಗೆ ಮೊದಲು ನಾವು ಪಾಲಿಸಬೇಕಾಗಿರುವುದು ಹೆಚ್ಚು ನೀರನ್ನು ಕುಡಿಯುವುದು ಮತ್ತು ಅಡುಗೆಯಲ್ಲಿ ಹೆಚ್ಚು ನಾರಿನ ಅಂಶ ಇರುವ ಆಹಾರಗಳನ್ನು ಬಳಸುವುದು ಹೆಚ್ಚು ನಾರಿನ ಅಂಶ ಇರುವ ಆಹಾರವನ್ನು ಸೇವನೆ ಮಾಡುತ್ತ ಬಂದಲ್ಲಿ, ಪ್ರತಿ ದಿನ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. ಇದರಿಂದ ನಾವು ಅರ್ಧ ಸಮಸ್ಯೆಯನ್ನು ಪರಿಹಾರ ಮಾಡಿಕೊಂಡಂತೆ ಆಗುತ್ತದೆ. ಇನ್ನು ಈಗಾಗಲೇ ಹೆಚ್ಚು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಮಲಬದ್ಧತೆ ತುಂಬ ಕಾಡುತ್ತಾ ಇದೆ ಅನ್ನೋರು ಈ ಪರಿಹಾರವನ್ನು ಮಾಡಿಕೊಳ್ಳಿ.

ಮೊದಲಿಗೆ ನಾಲ್ಕರಿಂದ ಐದು ಕಪ್ಪು ಒಣ ದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು ನಂತರ ಇದನ್ನು ಎರಡು ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಪಡಿಸಿ. ಇದನ್ನು ರಾತ್ರಿಯೆಲ್ಲ ನೆನಸಬೇಕು ಹೇಗೆ ಅಂದರೆ ಈ ಒಣದ್ರಾಕ್ಷಿ ಪೂರ್ತಿಯಾಗಿ ಮುಳುಗಬೇಕು ಅಷ್ಟು ನೀರನ್ನು ಹಾಕಿದರೆ ಸಾಕು. ನಂತರ ಮಾರನೇ ದಿವಸ ಉಷಾ ಪಾನದ ನಂತರ ಈ ಪರಿಹಾರವನ್ನು ಮಾಡಿಕೊಳ್ಳಬೇಕು. ನೆನೆಸಿಟ್ಟ ಒಣದ್ರಾಕ್ಷಿಯ ನೀರನ್ನು ಚೆಲ್ಲಿ ನಂತರ ಈ ಒಣದ್ರಾಕ್ಷಿಯನ್ನು ಪೇಸ್ಟ್ ಮಾಡಿಕೊಳ್ಳಬೇಕು ಅಂದರೆ ಒಂದು ಚಮಚದ ಸಹಾಯದಿಂದ ಈ ಒಣದ್ರಾಕ್ಷಿಯನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಅರ್ಧ ಚಮಚ ಶುದ್ಧವಾದ ಹರಳೆಣ್ಣೆ ಅನ್ನು ಮಿಶ್ರ ಮಾಡಬೇಕು.

ಇದೀಗ ನೆನೆಸಿಟ್ಟ ಒಣದ್ರಾಕ್ಷಿಯ ಪೇಸ್ಟ್ ಮತ್ತು ಹರಳೆಣ್ಣೆ ಚೆನ್ನಾಗಿ ಮಿಶ್ರಗೊಳಿಸಿ ಸೇವಿಸಿ. ಉಷಾ ಪಾನದ ಅರ್ಧ ಗಂಟೆಯ ಬಳಿಕ ಈ ಪರಿಹಾರವನ್ನು ಪಾಲಿಸಿ. ನಂತರ ನಿಮ್ಮ ಈ ಮೂಲವ್ಯಾಧಿ ಸಮಸ್ಯೆಯಾಗಲಿ ಮಲಬದ್ಧತೆ ಸಮಸ್ಯೆ ಆಗಲಿ ಬೇಗ ಪರಿಹಾರ ಆಗುತ್ತದೆ. ಮಲಬದ್ಧತೆಯಿಂದ ಕಾಡುತ್ತಾ ಇರುವವರಿಗೆ ಅಂತೂ ಈ ಮನೆಮದ್ದು ತುಂಬಾ ಉಪಯುಕ್ತಕಾರಿಯಾಗಿ ಇರುತ್ತದೆ. ತಪ್ಪದೇ ಪಾಲಿಸಿ ಮತ್ತು ನೀವು ಆಫೀಸ್ ಗೆ ಹೋಗುವವರು ಆಚೆ ಕೆಲಸಕ್ಕೆ ಹೋಗುವವರು ಅಂದರೆ ಈ ಪರಿಹಾರವನ್ನು ಬೆಳಿಗ್ಗೆ ಬೇಗನೆ ಮಾಡಿಕೊಂಡರೆ ತುಂಬಾ ಉತ್ತಮ.

Leave a Comment

Your email address will not be published.