ಸೂರ್ಯ ನಮಸ್ಕಾರ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..!

ಸೂರ್ಯ ನಮಸ್ಕಾರ ಈ ಹೆಸರನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ ಪ್ರತಿಯೊಬ್ಬರು ಕೂಡ ಈ ಸೂರ್ಯ ನಮಸ್ಕಾರದ ಮಹತ್ವವನ್ನು ತಿಳಿಯಲೇಬೇಕು. ಯಾಕೆ ಅಂದರೆ ಧಾರ್ಮಿಕ ಕಾರಣಗಳನ್ನು ನೀಡಿ ಈ ಸೂರ್ಯ ನಮಸ್ಕಾರದ ಮಹತ್ವವನ್ನು ಪ್ರತಿಯೊಬ್ಬರಿಗೂ ಸಾರುವ 1ಪ್ರಯತ್ನವನ್ನ ಮಾಡಿರುವ ನಮ್ಮ ಹಿರಿಯರು ಇದರ ಹಿಂದಿರುವ ಕಾರಣವನ್ನು ನಾವು ತಿಳಿಯಬೇಕು ಹಾಗಾಗಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಏನೆಲ್ಲಾ ಆಗುತ್ತದೆ ಸೂರ್ಯ ನಮಸ್ಕಾರಕ್ಕೆ ಯಾಕೆ ಈ ಧಾರ್ಮಿಕ ಕಾರಣಗಳನ್ನು ನೀಡಿದ್ದಾರೆ ಮತ್ತು ಸೂರ್ಯ ನಮಸ್ಕಾರವನ್ನು ನಾವು ಪಾಲಿಸುವುದರಿಂದ ನಮಗೆ ಯಾವೆಲ್ಲ ಆರೋಗ್ಯಕರ ಲಾಭಗಳು ದೊರೆಯುತ್ತವೆ ಅನ್ನುವ ಮಾಹಿತಿಯನ್ನು ತಿಳಿಯೋಣ ಸಂಪೂರ್ಣವಾಗಿ ಲೇಖನವನ್ನ ತಿಳಿಯಿರಿ ನೀವು ಕೂಡ ಈ ಸೂರ್ಯ ನಮಸ್ಕಾರದ ಮಹತ್ವವನ್ನು ತಿಳಿದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಮೊದಲಿಗೆ ಈ ಸೂರ್ಯ ನಮಸ್ಕಾರ ಎಂಬುದು ಹನ್ನೆರಡು ಆಸನಗಳನ್ನು ಹೊಂದಿರುವಂತಹ 1ಕ್ರಿಯೆಯಾಗಿರುತ್ತದೆ ಎ ಸೂರ್ಯ ನಮಸ್ಕಾರದಲ್ಲಿ ನಾವು ಕೆಲವೊಂದು ವ್ಯಾಯಾಮಗಳನ್ನು ಮಾಡುತ್ತೇವೆ. ಇದರ ಜೊತೆಗೆ ಸೂರ್ಯನನ್ನು ಪಠಿಸುತ್ತಾ ಲಯಬದ್ಧವಾದ ಈ ಕೆಲವೊಂದು ಆಸನಗಳು ಸೂರ್ಯನಿಗೆ ನಮಸ್ಕಾರ ವನ್ನು ಸಲ್ಲಿಸುವ ರೂಪದಲ್ಲಿ ಇರುತ್ತದೆ. ಸೂರ್ಯ ನಮಸ್ಕಾರ ಮಾಡುವಾಗ ನಾವು ಉಸಿರನ್ನು ಎಳೆದು ಬಿಡುವಾಗ ಇದರಿಂದ ನಮಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ. ಈ ರೀತಿ ನಾವು ಸೂರ್ಯದೇವನ ಬೀಜಾಕ್ಷರಿ ಮಂತ್ರವನ್ನು ಉಚ್ಚರಿಸುತ್ತ ಮಾಡುವ ಈ ಆಸನಗಳೆ ಸೂರ್ಯ ನಮಸ್ಕಾರ ಎಂದು ಕರೆಯುತ್ತಾರೆ.

ಆದರೆ ಇತ್ತೀಚಿನ ಪೀಳಿಗೆಗೆ ಈ ಸೂರ್ಯ ನಮಸ್ಕಾರದ ಮಹತ್ವವೇ ತಿಳಿದಿರುವುದಿಲ್ಲ ಮನಸ್ಸಿಗೆ ಬಂದ ಸಮಯದಲ್ಲಿ ಎದ್ದೇಳುತ್ತ ಉತ್ತಮ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ತಪ್ಪಾದ ದಾರಿಯಲ್ಲಿ ತಮ್ಮ ಜೀವನಶೈಲಿಯನ್ನು ಮೂಡಿಸಿಕೊಂಡು ಅನಾರೋಗ್ಯ ಸಮಸ್ಯೆಗಳಿಗೆ ಉಂಟಾಗಿ ಅನಾರೋಗ್ಯ ಸ್ಥರ ಹಾಗೆ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ನಾವು ಈ ಸೂರ್ಯ ನಮಸ್ಕಾರ ಮಾಡುವ ಹಿಂದಿರುವ ಕಾರಣವೇನು ಅಂದರೆ ಬೆಳಿಗ್ಗೆ ನಾವು ಸೂರ್ಯೋದಯಕ್ಕಿಂತ ಮುನ್ನವೇ ಎದ್ದೇಳಬೇಕು ಅಥವಾ ಸೂರ್ಯ ಉದಯಿಸುವಾಗ ಎದ್ದು ನಾವು ಆ ಎಳೆ ಬಿಸಿಲಿಗೆ ಮೈಯೊಡ್ಡಿ ಒಡ್ಡಿದರೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಡಿ ಜೀವಸತ್ವವು ನಮಗೆ ಹೇರಳವಾಗಿ ದೊರೆಯುತ್ತದೆ ಇದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಈ ಸೂರ್ಯ ನಮಸ್ಕಾರಕ್ಕೆ ಧಾರ್ಮಿಕವಾದ ಕಾರಣಗಳನ್ನು ನೀಡಿದ್ದಾರೆ ಅದೇನೆಂದರೆ ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ಗೋದಾನ ಫಲ ದೊರೆಯುತ್ತದೆ ಅಂತಾ ಹೇಳಿದ್ದಾರೆ ಯಾಕೆಂದರೆ ಸೂರ್ಯ ನಮಸ್ಕಾರ ಮಾಡುವುದರಿಂದ ನಮಗೆ ದೊರೆಯುವ ಲಾಭಗಳು ಅಷ್ಟು ಇರುತ್ತದೆ ಆದಕಾರಣವೇ ಸೂರ್ಯ ನಮಸ್ಕಾರಕ್ಕೆ ಈ ರೀತಿ ಧಾರ್ಮಿಕ ಕಾರಣಗಳನ್ನು ನೀಡಿ ಅದನ್ನು ಪಾಲಿಸುವ ಹಾಗೆ ನಮ್ಮ ಪೂರ್ವಜರು ತಮ್ಮ ಪೀಳಿಗೆಯವರಿಗೆ ಪ್ರೇರೇಪಿಸಿದ್ದಾರೆ. ನೀವು ಕೂಡ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಉತ್ತಮ ಜೀವನಶೈಲಿಯನ್ನು ಸಾಗಿಸುವುದಕ್ಕಾಗಿ ಸೂರ್ಯ ನಮಸ್ಕಾರವನ್ನು ಪಾಲಿಸಿ ಆರೋಗ್ಯವನ್ನು ಪಡೆದುಕೊಳ್ಳಿ ಮಾಹಿತಿಯನ್ನು ತಿಳಿದಿದ್ದಕ್ಕೆ ಧನ್ಯವಾದ ಹಾಗೆ ನೀವು ಕೂಡ ತಿಳಿದು ಈ ಸೂರ್ಯ ನಮಸ್ಕಾರದ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಯವರಿಗು ಕೂಡ ತಿಳಿಸಿಕೊಡಿ ಎಲ್ಲರಿಗೂ ಶುಭವಾಗಲಿ ಶುಭದಿನ ಆರೋಗ್ಯದಿಂದಿರಿ ಧನ್ಯವಾದ.

Leave a Comment

Your email address will not be published.