ಮಲಬದ್ಧತೆ ಹಾಗು ದೇಹದಲ್ಲಿ ನಾರಿನ ಅಂಶ ಹೆಚ್ಚಾಗಬೇಕು ಅಂದ್ರೆ ಈ ಹಣ್ಣನ್ನ ತಿನ್ನಿ ..!

ಕಿತ್ತಳೆ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ ಹುಳಿ ಮತ್ತು ಸಿಹಿ ಮಿಶ್ರಣಗೊಂಡಿರುವ ಈ ರುಚಿಕರವಾದ ಹಣ್ಣು ತುಂಬಾನೆ ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಆರೋಗ್ಯ ಹೆಚ್ಚುತ್ತದೆ ಈಗಾಗಲೇ ಒಂದು ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೇವೆ. ಅದೇ ರೀತಿಯಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಇನ್ನೂ ಯಾವೆಲ್ಲ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ ಈ ಮಾಹಿತಿಯಲ್ಲಿ.ಸಂಪೂರ್ಣವಾಗಿ ಲೇಖನವನ್ನು ತಿಳಿದು ಈ ಕಿತ್ತಳೆ ಹಣ್ಣಿನ ಬಗ್ಗೆ ಹೆಚ್ಚಿನ ವಿವರವನ್ನು ತಿಳಿದು, ತಪ್ಪದೆ ಈ ಕಿತ್ತಳೆ ಹಣ್ಣನ್ನು ಸೇವಿಸಿ ನಿಮ್ಮ ದೇಹದಲ್ಲಿ ಉಂಟಾಗುವ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಈ ಕಿತ್ತಳೆ ಹಣ್ಣು ಆದ್ದರಿಂದ ತಪ್ಪದೆ ಕಿತ್ತಳೆ ಹಣ್ಣನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಆಗುವ ಮೊದಲನೇ ಪ್ರಯೋಜನ ಅಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಹೌದು ಕಿತ್ತಳೆ ಹಣ್ಣು 1ಶಕ್ತಿವರ್ಧಕ ಆಗಿದ್ದು ಕಿತ್ತಳೆ ಹಣ್ಣನ್ನು ಸೇವನೆ ಮಾಡುವುದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ತುಂಬಾ ಪ್ರಯೋಜನಕಾರಿ ಆದ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಇದರಲ್ಲಿರುವಂತಹ ಉತ್ತಮವಾದ ನಾರಿನಾಂಶವು ಮಲಬದ್ಧತೆ ಮೂಲವ್ಯಾಧಿ ದೂರ ಮಾಡುತ್ತದೆ ಈ ಕಿತ್ತಳೆ ಹಣ್ಣಿನಲ್ಲಿ ಸಾಕಷ್ಟು ಸತ್ವಪೂರ್ಣ ಅಂಶಗಳಿದ್ದು ಕಿತ್ತಳೆ ಹಣ್ಣಿಗೆ ಉಪ್ಪು ಖಾರ ಹಾಕಿ ಕೂಡ ಸೇರಿಸುತ್ತಾರೆ ಇದರ ಬೆಲೆ ಕಡಿಮೆಯಾದರೂ ತುಂಬಾ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಈ ಕಿತ್ತಳೆ ಹಣ್ಣು.

ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿ ಕಡಿಮೆ ಇದರಲ್ಲಿರುವಂತಹ ದ್ರವರೂಪದಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶ ಇತ್ತು ಇದೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಅಷ್ಟೇ ಅಲ್ಲ ಈ ಕಿತ್ತಳೆ ಹಣ್ಣಿನಲ್ಲಿ ಇರುವ ಫ್ಲವನಾಯ್ಢ್ಸ್ ರಕ್ತದ ಒತ್ತಡ ತೆಯನ್ನು ನಿಯಂತ್ರಣದಲ್ಲಿಡುತ್ತದೆ ಜೊತೆಗೆ ಇದರಲ್ಲಿ ಮೆಗ್ನೀಷಿಯಂ ಅಂಶ ಕೂಡ ಎದ್ದು ಮೂಳೆಗಳನ್ನು ಬಲಪಡಿಸುತ್ತದೆ ಹಾಗೆ ವಿಟಮಿನ್ ಸಿ ಅಂಶ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಜೊತೆಗೆ ಕರಗುವ ನಾರು ಕೂಡ ಎದ್ದು ಇದೂ ಕೂಡ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಿ ಇರುತ್ತದೆ.

ಮಧುಮೇಹಿಗಳಿಗೂ ಕೂಡ ಉತ್ತಮವಾದ ಈ ಕಿತ್ತಳೆ ಹಣ್ಣು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಕಿತ್ತಳೆ ಹಣ್ಣಿನಲ್ಲಿ ಪೊಟಾಷಿಯಂ ಅಂಶ ಕೂಡ ಇದ್ದು, ಹೃದಯದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ಇದರ ಜೊತೆಗೆ ಮಧುಮೇಹಿಗಳಿಗೆ ಒಂದೊಳ್ಳೆ ಪ್ರಯೋಜನಕಾರಿ ಅದ ಆರೋಗ್ಯಕರ ಲಾಭಗಳನ್ನು ಕಿತ್ತಳೆ ಹಣ್ಣು ನೀಡುತ್ತದೆ. ಯಾಕೆ ಅಂದರೆ ಈ ಕಿತ್ತಳೆ ಹಣ್ಣಿನಲ್ಲಿ ಇರುವ ಲಿಪಿಡ್ ಅಂಶ ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಕಿತ್ತಳೆ ಹಣ್ಣು ಮಾತ್ರ ಅಲ್ಲ ಇದರ ಸಿಪ್ಪೆಗಳು ಕೂಡ ಪ್ರಯೋಜನಕಾರಿ ಹಲ್ಲು ಹಳದಿಗಟ್ಟಿದ್ದರೆ ಸಿಪ್ಪೆಯನ್ನು ಬಳಸಿ ಹಣ್ಣಿನ ಒಳಭಾಗದಿಂದ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ಹಲ್ಲುಗಳ ಮೇಲೆ ಕರೆ ಕಟ್ಟಿರುವ ಕಲೆಗಳು ಕೂಡ ಪರಿಹಾರ ಆಗುತ್ತದೆ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲ ಈ ಕಿತ್ತಳೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಕೂಡ ಇದೆ. ಇದು ಉತ್ತಮ ಆರೋಗ್ಯವನ್ನು ನೀಡುತ್ತದೆ ಅಷ್ಟೇ ಅಲ್ಲ ಅಸ್ತಮಾ ಬ್ರಾಂಕೈಟಿಸ್ ಅಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ ಕಿತ್ತಳೆ ಹಣ್ಣು.

Leave a Comment

Your email address will not be published.