ನಿಮ್ಮ ಮುಖದ ಮೇಲೆ ಆಗಿರೋ ಮೊಡವೆಗಳಿಂದ ತುಂಬಾ ಬೇಜಾರಾಗಿದ್ದೀರಾ …! ಹೀಗೆ ಮಾಡಿ ಸಾಕು

ಮೊಡವೆ ಸಮಸ್ಯೆಗೆ ಇಲ್ಲಿದೆ ನೋಡಿ 1ಪರಿಹಾರ ಮೊಡವೆಯನ್ನು ಪರಿಹಾರ ಮಾಡಿಕೊಂಡು ಆ ಕಲೆಯನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದಾದ ಈ ಸುಲಭವಾದ ಮನೆಮದ್ದನ್ನು ಮನೆಯಲ್ಲಿಯೇ ಮಾಡಿ ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ ಮತ್ತು ಪದಾರ್ಥಗಳು ಕೂಡ ಸಾಮಾನ್ಯವಾಗಿ ಅಡುಗೆಗೆ ಬಳಸುವ ಅಂತಹದ್ದೇ ಆಗಿರುತ್ತದೆ ಸಂಪೂರ್ಣವಾಗಿ ಲೇಖನವನ್ನ ತಿಳಿಯಿರಿ ಮತ್ತು ಈ ಮನೆಮದ್ದನ್ನು ಹೇಗೆ ಮಾಡಿಕೊಳ್ಳಬೇಕು ವಿಧಾನವನ್ನು ತಿಳಿಸಿಕೊಡುತ್ತೇವೆ ಹಾಗೂ ನೀವು ಈ ಪರಿಹಾರವನ್ನು ಯಾವ ಸಮಯದಲ್ಲಿ ಮಾಡಿದರೆ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಅನ್ನೋದನ್ನು ಕೂಡ ತಿಳಿಸಿಕೊಡುತ್ತೇವೆ. ನೀವು ಕೂಡ ತಿಳಿದು ಈ ಒಂದು ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಮೊದಲನೆಯದಾಗಿ ಈ ಪರಿಹಾರವನ್ನು ಅಂದರೆ ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗಿರುವುದು ಕರಿಬೇವಿನ ಸೊಪ್ಪು ಪುದೀನಾ ಸೊಪ್ಪು ಅಲೋವೆರಾ ಜೆಲ್ ಮತ್ತು ಹಾಗಲ ಕಾಯಿಯ ಸಿಪ್ಪೆ. ಸಾಮಾನ್ಯವಾಗಿ ಈ ಹಾಗಲಕಾಯಿಯನ್ನು ಪಲ್ಯ ಮಾಡುವಾಗ ಅದರ ಸಿಪ್ಪೆಯನ್ನು ತೆಗೆದು ಹಾಕ್ತಾರೆ. ಆ ಸಿಪ್ಪೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಮುಖದ ಮೇಲೆ ಇರುವ ಕಪ್ಪು ಕಲೆಯನ್ನು ತೆಗೆದು ಹಾಕಲು ಸಹಕಾರಿಯಾಗಿರುತ್ತದೆ ಮತ್ತು ಪಿಗ್ಮೆಂಟೇಶನ್ ಅನ್ನು ಕೂಡ ಇದು ದೂರ ಮಾಡುತ್ತದೆ.

ಮೊದಲಿಗೆ ಕರಿಬೇವಿನ ಸೊಪ್ಪು ಮತ್ತು ಪುದೀನ ಸೊಪ್ಪನ್ನು ಒಮ್ಮೆಲೆ ನೀರಿನಲ್ಲಿ ಸ್ವಚ್ಛಪಡಿಸಿ ಇಟ್ಟುಕೊಳ್ಳಿ ನಂತರ ಈ ಸೊಪ್ಪಿಗೆ ಹಾಗಲ ಕಾಯಿಯ ಸಿಪ್ಪೆಯನ್ನು ಕೂಡ ಒಮ್ಮೆ ಸ್ವಚ್ಚ ಮಾಡಿ ಇದಕ್ಕೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ರುಬ್ಬಿ ಪೇಸ್ಟ್ ಮಾಡಿ ಕೊಂಡ ನಂತರ ಇದರ ರಸವನ್ನು ಶೋಧಿಸಿ ಇಟ್ಟುಕೊಳ್ಳಿ. ಇದೀಗ ರಸವನ್ನು ಬೇರ್ಪಡಿಸಿ ಕೊಂಡ ನಂತರ, ಇದಕ್ಕೆ ಲೋಳೆರಸವನ್ನು ಹಾಕಬೇಕು. ನೀವು ನೈಸರ್ಗಿಕವಾದ ಲೋಳೆರಸವನ್ನು ಕೂಡ ಬಳಸಬಹುದು, ಅಥವಾ ಈ ಲೋಳೆಸರ ಆಗುವುದಿಲ್ಲ ಅಂದರೆ ನೀವು ಮಾರುಕಟ್ಟೆಯಲ್ಲಿ ದೊರೆಯುವ ಅಲೋವೆರಾ ಜೆಲ್ ಅನ್ನು ಕೂಡ ಬಳಸಬಹುದು.

ಈ ಸೊಪ್ಪಿನ ರಸದ ಮಿಶ್ರಣಕ್ಕೆ ಅಲೋವೆರಾ ಜೆಲ್ಲನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಅಂದರೆ ನೀವು ರುಬ್ಬಿ ಪೇಸ್ಟ್ ಮಾಡಿ ತೆಗೆದ ಸೊಪ್ಪಿನ ಮಿಶ್ರಣದ ರಸಕ್ಕೆ ಅಲೋವೆರಾ ಜೆಲ್ ಹಾಕಿದಾಗ ಅದು ಜೆಲ್ ರೂಪದಲ್ಲಿ ಅಂದರೆ ಕ್ರೀಮ್ ರೂಪದಲ್ಲಿ ಉಂಟಾಗಬೇಕು, ಹಾಗೆ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಅದು ಕ್ರೀಮ್ ಕನ್ಸಿಸ್ಟೆನ್ಸಿ ಗೆ ಬರುತ್ತದೆ ಅದನ್ನು ನೀವು ಒಂದು ಡಬ್ಬಿಗೆ ಹಾಕಿ ಫ್ರಿಡ್ಜ್ ನಲ್ಲಿ ಶೇಖರಣೆ ಮಾಡಿ ಒಂದು ತಿಂಗಳುಗಳ ಕಾಲ ಇಡಬಹುದು.

ಪ್ರತಿದಿನ ರಾತ್ರಿ ಮಲಗುವ ಮುನ್ನ ಒಮ್ಮೆ ಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಚ ಪಡಿಸಿಕೊಂಡು ಆನಂತರ ಮುಖಕ್ಕೆ ಕ್ರೀಮ್ ಲೇಪನ ಮಾಡಿ ಕಣ್ಣಿನ ಸುತ್ತ ಮತ್ತು ಮೊಡವೆ ಆಗಿರುವ ಭಾಗದಲ್ಲಿ ಮೊಡವೆ ಕಲೆ ಇರುವ ಭಾಗದಲ್ಲಿ ಇದನ್ನು ಲೇಪನ ಮಾಡಿ, ಸ್ವಲ್ಪ ಸಮಯ ಮಸಾಜ್ ಮಾಡಿ ರಾತ್ರಿಯೆಲ್ಲ ಹಾಗೆ ಬಿಟ್ಟು. ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ, ಈ ರೀತಿ ಪ್ರತಿ ದಿನ ಮಾಡುತ್ತ ಬಂದದ್ದೇ ಆದಲ್ಲಿ ಮೊಡವೆ ಕಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

Leave a Comment

Your email address will not be published.