ತೂಕ ಕಡಿಮೆ ಮಾಡಲು, ರಕ್ತಹೀನತೆಗೆ, ಗಾಯ ಬೇಗ ವಾಸಿಯಾಗಲು ಇದರ ಪಲ್ಯ ಮಾಡಿ ತಿನ್ನಿ ಸಾಕು ..!

ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ರಕ್ತಹೀನತೆ ಸಮಸ್ಯೆಗೆ ಪರಿಹಾರವನ್ನು ನೀಡಬಲ್ಲ ಈ ಒಂದು ತರಕಾರಿಯಿಂದ ಮಾಡುವ ಪಲ್ಯದ ಬಗ್ಗೆ ಹೌದು ಆ ರಕ್ತಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುವ ತರಕಾರಿ ಯಾವುದು ಅಂದರೆ ಸುವರ್ಣಗಡ್ಡೆ. ಇದರ ಹೆಸರನ್ನೆ ಸಾಕಷ್ಟು ಮಂದಿ ಕೇಳಿರುವುದೆ ಇಲ್ಲಾ. ಇನ್ನೂ ಜನ ನೋಡಿದ್ದರು ಅದರ ಹೆಸರು ಸುವರ್ಣ ಗಡ್ಡೆ ಅಂತ ಅಷ್ಟಾಗಿ ತಿಳಿದಿರುವುದಿಲ್ಲ .

ಇದರ ಬಳಕೆ ಹೆಚ್ಚಾಗಿ ನಾವು ಮಾಡುವುದರಿಂದ ತುಂಬ ಉಪಯುಕ್ತ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು. ಆದರೆ ಸುವರ್ಣಗಡ್ಡೆ ಅಂತೂ ಸರಿಯಾದ ಕ್ರಮದಲ್ಲಿ ಬಳಕೆ ಮಾಡದೇ ಇದ್ದಾಗ ಇದು ನಾಲಗೆಯಲ್ಲಿ ಕಡತವನ್ನು ಉಂಟುಮಾಡುತ್ತದೆ ಆದಕಾರಣ ಇದನ್ನು ಬಳಕೆ ಮಾಡುವಾಗ ಇದರ ಸರಿಯಾದ ಬಳಕೆ ಅತ್ಯವಶ್ಯಕವಾಗಿ ಇರುತ್ತದೆ.

ಮೊದಲು ಸುವರ್ಣ ಗೆಡ್ಡೆಯನ್ನು ತೆಗೆದುಕೊಂಡು ಬಂದಾಗ ಅದರ ಮೇಲೆ ಇರುವ ಸಿಪ್ಪೆಯನ್ನು ಹೆರೆಯಬೇಕು ನಂತರ ಇದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ಸಣ್ಣದಾಗಿ ಅಂದರೆ ಅರ್ಧ ಅರ್ಧ ಇಂಚಿನಷ್ಟು ಕತ್ತರಿಸ ಬೇಕು. ಎ ಸುವರ್ಣಗಡ್ಡೆಯಲ್ಲಿ ಅಧಿಕವಾದ ನಾರಿನ ಅಂಶ ಇದೆ ಇದು ಜೀರ್ಣಾಂಗ ಕ್ರಿಯೆಯನ್ನು ಉತ್ತಮವಾಗಿಸುತ್ತದೆ ಮತ್ತು ಉತ್ತಮವಾದ ಜೀವಸತ್ವಗಳು ಉತ್ತಮವಾದ ಇನ್ನೂ ಅನೇಕ ಪೋಷಕಾಂಶಗಳು ಕೂಡ ಇದ್ದು. ಸುವರ್ಣಗಡ್ಡೆಯನ್ನು ನಾವು ಮಿತಿಯಾಗಿ ತಿನ್ನುತ್ತಾ ಬರುವುದರಿಂದ ಒಳ್ಳೆಯ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು.

ಮೊದಲು ಸುವರ್ಣಗೆಡ್ಡೆಯನ್ನು ಹಚ್ಚಿಕೊಂಡ ನಂತರ ಜನ ಬೈಯಿಸಿಕೊಳ್ಳಬೇಕಾಗುತ್ತದೆ ಸುವರ್ಣಗೆಡ್ಡೆ ಮುಳುಗುವಷ್ಟು ನೀರನ್ನು ಹಾಕಿ ನೆನಪಿನಲ್ಲಿ ಹೇಳಿ ಈ ಸಮಯದಲ್ಲಿ ಇದಕ್ಕೆ ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಹಿಂಡಬೇಕು. ಈ ರೀತಿ ಸುವರ್ಣಗೆಡ್ಡೆ ಬೇಯಿಸುವಾಗ ನಿಂಬೆ ಹಣ್ಣಿನ ರಸವನ್ನು ನೀರಿಗೆ ಮಿಶ್ರ ಮಾಡಿದರೆ ನಂತರ ಸುವರ್ಣಗಡ್ಡೆ ಅನ್ನು ತಿಂದಾಗ ನಾಲಿಗೆ ಕಡಿತ ಬರುವುದಿಲ್ಲಾ.

ಸುವರ್ಣಗಡ್ಡೆಯನ್ನು ಬೇಯಿಸಿ ಕೊಂಡ ನಂತರ ಅಂದರೆ ಒಂದು ವಿಷಲ್ ಹಾಕಿಸಿ ನಂತರ ಇದಕ್ಕೆ ಒಗ್ಗರಣೆ ಮಾಡಬೇಕು. ಮೊದಲಿಗೆ ಬಾಣಲೆಗೆ ಸುವರ್ಣಗಡ್ಡೆಗೆ ತಕ್ಕಷ್ಟು ಎಣ್ಣೆಯನ್ನು ಹಾಕಬೇಕು ನೀವು ಸುವರ್ಣಗಡ್ಡೆಯನ್ನು ತೆಗೆದುಕೊಂಡಿರುವ ಪ್ರಮಾಣದ ಆಧಾರದ ಮೇಲೆ ಎಣ್ಣೆಯನ್ನು ಹಾಕಿ ಸಾಸಿವೆ ಮತ್ತು ಉದ್ದಿನ ಬೇಳೆಯನ್ನು ಹಾಕಿ ಫ್ರೈ ಮಾಡಿ ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ ಮತ್ತೊಮ್ಮೆ ಫ್ರೈ ಮಾಡಿ ಈಗ ಬೇಯಿಸಿಕೊಂಡ ಸುವರ್ಣ ಗಡ್ಡೆ ಅನ್ನು ಒಗ್ಗರಣೆಗೆ ಹಾಕಿ ಮತ್ತೊಮ್ಮೆ ಫ್ರೈ ಮಾಡಬೇಕು ಚೆನ್ನಾಗಿ ಫ್ರೈ ಮಾಡಿದ ನಂತರ ಇದಕ್ಕೆ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು.

ನೀವು ಬೇಕಾದರೆ ತೆಂಗಿನ ಕಾಯಿಯ ತುರಿಯನ್ನು ಪಲ್ಯಕ್ಕೆ ಹಾಕಬಹುದು ಇನ್ನೂ ರುಚಿ ಹೆಚ್ಚುತ್ತದೆ. ಈ ರೀತಿಯಾಗಿ ಸುಲಭವಾಗಿ ಕಡಿಮೆ ಸಮಯದಲ್ಲಿಯೆ ಒಂದು ರುಚಿಕರವಾದ ಪಲ್ಯವನ್ನು ಮಾಡ ಬಹುದು ಸುವರ್ಣ ಗಡ್ಡೆ ಇದನ್ನು ತಿನ್ನುವುದರಿಂದ ಕರುಳು ಕೂಡ ಸ್ವಚ್ಛ ಆಗುತ್ತದೆ. ಇದರಲ್ಲಿ ಇರುವ ನಾರಿನ ಅಂಶ ಕೊಬ್ಬನ್ನು ಕೂಡ ಕರಗಿಸಲು ಸಹಕಾರಿಯಾಗಿರುತ್ತದೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಈ ಒಂದು ಸುವರ್ಣಗಡ್ಡೆ ಇಂದ.

Leave a Comment

Your email address will not be published.