ದಿನಕ್ಕೆ ಒಂದೊಂದು ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತ ..!

ಬಾಳೆ ಹಣ್ಣನ್ನು ತಿನ್ನುವುದರಿಂದ ಆಗುವ ಲಾಭಗಳೇನು ಹೌದು ನಾವು ಕಾಲಕಾಲಕ್ಕೂ ಒಂದೊಂದು ವಿಧದ ಹಣ್ಣುಗಳನ್ನು ಪ್ರಕೃತಿಯಲ್ಲಿ ಬಿಡುವುದನ್ನು ನೋಡಿರುತ್ತೇವೆ ಮತ್ತು ಆ ಹಣ್ಣುಗಳನ್ನು ಕಾಲಕಾಲದಲ್ಲಿ ಸೇವಿಸಿರುತ್ತೇವೆ, ಅದರ ರುಚಿಯನ್ನು ಸವಿದಿರುತ್ತೇವೆ. ಆದರೆ ವರ್ಷ ಪೂರ್ತಿ ದೊರೆಯುವ ಬಾಳೆಹಣ್ಣು ಕಡಿಮೆ ಬೆಲೆಯಲ್ಲಿ ಕೂಡ ದೊರೆಯುತ್ತದೆ ಮತ್ತು ಪ್ರತಿಯೊಬ್ಬರು ಕೂಡ ಸೇವಿಸಬಹುದಾದಂತಹ ಹಣ್ಣು ಇದಾಗಿರುತ್ತದೆ.ಬಾಳೆಹಣ್ಣು ಮಾತ್ರ ಅಲ್ಲಾ, ಇದರ ಒಂದು ದಿಂಡು ಬಾಳೆ ಹೂವು ಬಾಳೆ ಕಾಯಿ ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ ಆರೋಗ್ಯ ವೃದ್ಧಿಸುವಂತಹದ್ದೆ ಆಗಿರುತ್ತದೆ. ಹಾಗಾದರೆ ಬಾಳೆ ಹಣ್ಣು ತಿನ್ನೋದ್ರಿಂದ ಇನ್ನೂ ಯಾವೆಲ್ಲಾ ಆರೋಗ್ಯ ಲಾಭವನ್ನು ಹೊಂದಬಹುದು ಅನ್ನೋದನ್ನು ತಿಳಿಯೋಣ.

ಮೊದಲನೆಯದಾಗಿ ಉದ್ದವಾಗಿರುವ ಈ ಪಚ್ಚ ಬಾಳೆ ಹಣ್ಣನ್ನು ತಿನ್ನುವುದರಿಂದ ದೇಹದ ಉಷ್ಣಾಂಶವನ್ನು ಸಮತೋಲನಕ್ಕೆ ತರಬಹುದು ಇದರ ಜೊತೆಗೆ ಬೇಸಿಗೆ ಸಮಯದಲ್ಲಿ ಪ್ರತಿದಿನ ಒಂದರಂತೆ ಈ ಬಾಳೆಹಣ್ಣು ಸೇವನೆ ಮಾಡಿಕೊಂಡು ಬಂದದ್ದೇ ಆದಲ್ಲಿ ಬೇಸಿಗೆ ಸಮಯದಲ್ಲಿ ಅಧಿಕ ಉಷ್ಣಾಂಶ ಅಥವಾ ಉರಿಮೂತ್ರ ಸಮಸ್ಯೆ ಇವೆಲ್ಲವೂ ಕೂಡ ಪರಿಹಾರ ಆಗುತ್ತದೆ. ಬಾಳೆಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಗಳು ಇವೆ ಜೊತೆಗೆ ಇದರಲ್ಲಿ ಪೊಟಾಶಿಯಂ ಅಂಶ ಹೇರಳವಾಗಿ ಇದೆ ಆದಕಾರಣ ಬಾಳೆ ಹಣ್ಣನ್ನು ತಿನ್ನುವುದರಿಂದ ರಕ್ತದ ಒತ್ತಡ ಜೀವನದಲ್ಲಿಯೇ ಕಾಡುವುದಿಲ್ಲಾ.

ಯಾರೂ ರಕ್ತದ ಒತ್ತಡ ತೆಯಿಂದ ಬಳಲುತ್ತಿ ಇರುತ್ತಾರೆ ಅಂತಹವರು ತಪ್ಪದೆ ಬಾಳೆಹಣ್ಣನ್ನು ಪ್ರತಿದಿನ ಒಂದರಂತೆ ಸೇವನೆ ಮಾಡುತ್ತಾ ಬನ್ನಿ ಅದರಲ್ಲಿಯೂ ಊಟದ ನಂತರ ಒಂದು ಬಾಳೆಹಣ್ಣಿನ ಸೇವನೆ ಮಾಡುವುದು ಒಂದು ಉತ್ತಮ ಆಹಾರ ಪದ್ದತಿ ಆಗಿರುತ್ತದೆ, ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳ ಬೇಕು ಅನ್ನುವವರು ಒಂದು ಬಾಳೆಹಣ್ಣನ್ನು ತಿಂದು ಬೇರೆ ಆಹಾರವನ್ನು ಸೇವನೆ ಮಾಡುವುದೆ ಬೇಡ. ಯಾಕೆಂದರೆ ಒಂದು ಪಚ್ಚ ಬಾಳೆ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ, ಆಗ ಬೇರೆ ಆಹಾರದ ಸೇವನೆಯ ಅವಶ್ಯಕತೆ ಇರುವುದಿಲ್ಲಾ.

ಮಲಬದ್ಧತೆ ಉಂಟಾದಾಗ ಅದಕ್ಕೆ ಮಾತ್ರೆಗಳನ್ನ ನೀಡುವುದಕ್ಕಿಂತ ಒಂದು ಪಚ್ಚ ಬಾಳೆ ಹಣ್ಣನ್ನು ತಿನ್ನಬೇಕು. ಇದರಿಂದ ಮಲಬದ್ಧತೆ ಉಂಟಾಗುವುದಿಲ್ಲ ಹಾಗೆ ಮಕ್ಕಳಿಗೂ ಕೂಡಾ ಈ ಮಲಬದ್ಧತೆ ಅಥವಾ ಮಕ್ಕಳು ಮಲ ವಿಸರ್ಜನೆ ಮಾಡುವುದಕ್ಕೆ ಹಠ ಮಾಡ್ತಾರೆ ಅಂತ ಅವರಿಗೆ ದಿನಕ್ಕೆ ಒಂದು ಪಚ್ಚ ಬಾಳೆ ಹಣ್ಣನ್ನು ಅಥವಾ ಅರ್ಧ ಬಾಳೆಹಣ್ಣನ್ನು ನೀಡುವುದರಿಂದ ಮಕ್ಕಳಿಗೂ ಕೂಡ ಈ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲಾ ಮತ್ತು ಹೊಟ್ಟೆಯಲ್ಲಿ ಜಂತು ಹುಳುವಿನ ಸಮಸ್ಯೆ ಕೂಡ ಉಂಟಾಗುವುದಿಲ್ಲಾ. ಸೊಳ್ಳೆ ಕಚ್ಚಿದ ಸಮಯದಲ್ಲಿ ಆ ಭಾಗ ನೋಯುತ್ತಾ ಇರುತ್ತದೆ ಆಗ ಬಾಳೆಹಣ್ಣಿನ ಸಿಪ್ಪೆಯಿಂದ ಆ ಭಾಗವನ್ನು ಉಜ್ಜುವುದರಿಂದ ಸೊಳ್ಳೆ ಕಚ್ಚಿದ ಕಲೆಯಾಗಲಿ ನೋವಾಗಲಿ ಬೇಗ ಶಮನವಾಗುತ್ತದೆ.

ಹಲ್ಲುಗಳು ಕರೆ ಕೊಟ್ಟಿದ್ದರೂ ಕೂಡ ಅದರ ತೆಗೆದುಹಾಕುವುದಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಹಲ್ಲಿನ ಮೇಲಿನ ಕೊಳೆ ಬೇಗ ತೆಗೆದು ಹಾಕಬಹುದು ಈ ರೀತಿಯಾಗಿ ಬಾಳೆಹಣ್ಣು ಮತ್ತು ಬಾಳೆ ಹಣ್ಣಿನ ಸಿಪ್ಪೆ ಕೂಡ ಪ್ರಯೋಜನಕಾರಿಯಾಗಿದ್ದು, ಬಾಳೆ ಕಾಯಿಯಿಂದ ಮಾಡುವ ಚಿಪ್ಸ್ ತುಂಬಾ ರುಚಿಕರವಾಗಿರುತ್ತದೆ. ಆದರೆ ಇದನ್ನು ಆಚೆ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ತಿನ್ನುವುದು ಆರೋಗ್ಯಕ್ಕೆ ತುಂಬ ಉತ್ತಮ.

Leave a Comment

Your email address will not be published.