ತುಪ್ಪ ಸೇವನೆ ಮಾಡುವ ಅಭ್ಯಾಸ ಇದೆಯಾ ಹಾಗಾದರೆ ಇದನ್ನ ತಪ್ಪದೆ ತಿಳಿದುಕೊಳ್ಳಿ ಅರೋಗ್ಯ ಚೆನ್ನಾಗಿರುತ್ತೆ ..!

ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ವಿಚಾರ ನಮಗೆ ತಿಳಿದೇ ಇದೆ ಇದರಲ್ಲೇನಿದೆ ಅಂತ ನೀವು ಅಂದುಕೊಳ್ಳಬಹುದು ಆದರೆ ಹೆಚ್ಚಿನ ಮಂದಿ ಈ ತುಪ್ಪವನ್ನು ಬಿಸಿ ಅನ್ನದೊಂದಿಗೆ ಸೇವಿಸಲು ಇಷ್ಟಪಡುತ್ತಾರೆ ಆದರೆ ತುಪ್ಪವನ್ನು ಸೇವನೆ ಮಾಡುವ ವಿಧಾನವೂ ಕೂಡ ಇದೆ ಆ ವಿಧದಲ್ಲಿ ನಾವು ತುಪ್ಪವನ್ನು ಸೇವನೆ ಮಾಡಿದ್ದೆ ಆದಲ್ಲಿ ನಮಗೆ ಇನ್ನೂ ಹೆಚ್ಚಿನ ಆರೋಗ್ಯಕರ ಲಾಭಗಳು ದೊರೆಯುತ್ತವೆ ಇದರ ಜೊತೆಗೆ ಇನ್ನೂ ಹೆಚ್ಚಿನ ಆರೋಗ್ಯವನ್ನು ಪಡೆದುಕೊಂಡು ಆರೋಗ್ಯವಂತರಾಗಿ ಇರುವುದಕ್ಕೆ ಸಹಕಾರಿಯಾಗಿರುತ್ತದೆ ಈ ತುಪ್ಪ ಆದಕಾರಣ ಈ ತುಪ್ಪವನ್ನು ಸೇವನೆ ಮಾಡುವ ವಿಧಾನ ಹೇಗೆ ಮತ್ತು ಯಾವ ಸಮಯದಲ್ಲಿ ತುಪ್ಪವನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ತುಪ್ಪವನ್ನು ಸೇವನೆ ಮಾಡುವ ಸರಿಯಾದ ಸಮಯ ಹೌದು ತುಪ್ಪವನ್ನು ಸೇವನೆ ಮಾಡುವುದಕ್ಕೂ ಕೂಡ ಸಮಯವಿದೆ ಅದೇ ಸಮಯದಲ್ಲಿ ಏನಾದರೂ ನಾವು ತುಪ್ಪವನ್ನು ಸೇವನೆ ಮಾಡಿದ್ದೆ ಆದಲ್ಲಿ ತುಂಬಾ ಲಾಭಗಳು ಆರೋಗ್ಯಕ್ಕೆ ದೊರೆಯುತ್ತದೆ ಅಂತ ಹೇಳಬಹುದು. ಈ ರೀತಿ ಆಯುರ್ವೇದವೂ ತಿಳಿಸುತ್ತಾ ಇದೆ. ಬೆಳಗಿನ ಸಮಯದಲ್ಲಿ ತುಪ್ಪವನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳು ಆಗುತ್ತದೆ ಎಂಬುದನ್ನು ಕೂಡ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ಈ ವಿಚಾರವನ್ನು ತಿಳಿದಿರಬೇಕು ಒಬ್ಬ ವ್ಯಕ್ತಿ ದಿನಕ್ಕೆ ಕೇವಲ ಮೂರು ಚಮಚಗಳು ಮಾತ್ರ ತುಪ್ಪವನ್ನು ಸೇವಿಸಬಹುದು. ಇದಕ್ಕೂ ಮೀರಿ ತುಪ್ಪವನು ಸೇವನೆ ಮಾಡಿದ್ದೇ ಆದಲ್ಲಿ ಇದು ಅನಾರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು ಇದು ನೆನಪಿನಲ್ಲಿ ಇರಬೇಕಾಗಿರುವ ಒಂದು ವಿಚಾರ ಆಗಿದೆ.

ಆರೋಗ್ಯಕರ ಲಾಭಗಳು ಮೊದಲಿಗೆ ಖಾಲಿ ಹೊಟ್ಟೆಗೆ ನಾವು ಬೆಳಗಿನ ಸಮಯದಲ್ಲಿ ತುಪ್ಪವನ್ನು ಸೇವಿಸಬೇಕು ಆಗ ಆಗುವ ಲಾಭ ಎನ್ನುವಂತೆ ಮೊದಲನೆಯದಾಗಿ ಜಾರಿಕೆ ಮಲಬದ್ಧತೆ ಕಾಡುತ್ತಾ ಇರುತ್ತದೆ. ಅಂಥವರಿಗೆ ಆಯುರ್ವೇದದಲ್ಲಿ ನೀಡುವ ಮೊದಲ ಪರಿಹಾರ ಅಂದರೆ ಇದೆ ಖಾಲಿ ಹೊಟ್ಟೆಗೆ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ತುಪ್ಪವನ್ನು ಮಿಶ್ರ ಮಾಡಿ. ಆ ನೀರನ್ನು ಸಂಪೂರ್ಣವಾಗಿ ಕುಡಿಯಬೇಕು ಇದರಿಂದ ಹೊಟ್ಟೆ ಸ್ವಚ್ಚವಾಗುತ್ತದೆ ಮಲವಿಸರ್ಜನೆ ಸರಿಯಾಗಿ ಆಗುತ್ತದೆ.

ಯಾರಿಗೆ ಸ್ನಾಯು ಸೆಳೆತದಂತಹ ಸಮಸ್ಯೆ ಕಾಡುತ್ತಾ ಇರುತ್ತದೆ ಅಂಥವರು ಕೂಡ ಬೆಳಿಗ್ಗೆ ಖಾಲಿ ಹೊಟ್ಟೆಗೆ ತುಪ್ಪವನ್ನು ಸೇರಿಸಿ ಇದರಿಂದ ಸ್ನಾಯುಗಳ ಸೆಳೆತ ಮಾತ್ರ ಅಲ್ಲ ದೇಹದಲ್ಲಿರುವ ಕೋಶಗಳ ಆರೋಗ್ಯವನ್ನು ಕಾಪಾಡುವುದರಲ್ಲಿ ಸಹಕಾರಿಯಾಗಿರುತ್ತದೆ ಈ ತುಪ್ಪ. ಸ್ನಾಯು ಸೆಳೆತ ಸಂಧಿವಾತ ಇಂಥ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಜತೆಗೆ ತುಪ್ಪವನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಆಗುವ ಲಾಭ ಅಂದರೆ, ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ವ್ಯಕ್ತಿಗಳ ಆಗಲಿ ಅದನ್ನು ನಿವಾರಿಸುತ್ತದೆ.

ಹೌದು ತುಪ್ಪವನ್ನು ಸೇವನೆ ಮಾಡುವುದರಿಂದ ಮೂಳೆಗಳಿಗೆ ಬಲ ದೊರೆಯುತ್ತದೆ ಇದರ ಜೊತೆಗೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚು ಮಾಡುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಈ ರೀತಿಯಾಗಿ ತುಪ್ಪವನ್ನು ಬೆಳಗಿನ ಸಮಯದಲ್ಲಿ ನಾವು ಸೇವನೆ ಮಾಡುವುದರಿಂದ ನಮಗೆ ಆಗುವ ಲಾಭಗಳು ಇದಾಗಿರುತ್ತದೆ. ಬೆಚ್ಚಗಿನ ನೀರಿಗೆ ತುಪ್ಪವನ್ನು ಮಿಶ್ರಮಾಡಿದಾಗ, ತಕ್ಷಣವೇ ಆ ಬೆಚ್ಚಗಿನ ನೀರನ್ನು ಸೇವಿಸಬೇಕು. ನೀರು ತಣ್ಣಗಾದ ಮೇಲೆ ಆ ನೀರನ್ನು ಸೇವನೆ ಮಾಡಬಾರದು. ಇದರಿಂದ ತುಪ್ಪದಲ್ಲಿ ಇರುವ ಎಣ್ಣೆಯ ಅಂಶ ದೇಹದಲ್ಲಿ ಶೇಖರಣೆಯಾಗಿ ಒಬ್ಬ ನೋವುಂಟು ಮಾಡುತ್ತದೆ. ಆದ ಕಾರಣ ನೀರಿನ ಉಷ್ಣಾಂಶ ಹೆಚ್ಚಾಗಿ ಇದ್ದಾಗಲೆ ತುಪ್ಪವನ್ನು ಮಿಶ್ರ ಮಾಡಿದ ನೀರನ್ನು ಸೇವನೆ ಮಾಡುವುದು ಒಳ್ಳೆಯದು.

Leave a Comment

Your email address will not be published.