ದೇವಸ್ಥಾನವನ್ನು ಅಪವಿತ್ರ ಮಾಡಿದವರಿಗೆ ತಕ್ಕ ಶಾಸ್ತಿಯನ್ನು ಮಾಡಿದ ತುಳು ನಾಡ ಆರಾಧ್ಯ ದೈವ ಕೊರಗಜ್ಜ ಈ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದೆ ನಂಬಿದವರನ್ನು ಏಂದಿಗೂ ಕೈಬಿಟ್ಟಿಲ್ಲ ಕೊರಗಜ್ಜ …!!!

ನಮ್ಮ ಸಂಪ್ರದಾಯದಲ್ಲಿ ದೇವಾಲಯಗಳಿಗೆ ಬಹಳ ಮುಖ್ಯವಾದ ಸ್ಥಾನವನ್ನು ನೀಡಲಾಗಿದೆ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳು ತಮ್ಮ ಕೋರಿಕೆಗಳನ್ನು ದೇವರಲ್ಲಿ ಹೇಳಿಕೊಂಡು ದೇವರ ಹೆಸರಿನಲ್ಲಿ ಇರುವಂತಹ ಕಾಣಿಕೆ ಹುಂಡಿಗೆ ದೇವರ ಹೆಸರಿನಲ್ಲಿ ಕಾಣಿಕೆ ಸಲ್ಲಿಸಿ ಬರುತ್ತಾರೆ ಈ ರೀತಿ ದೇವರ ಹೆಸರಿನಲ್ಲಿ ಸಲ್ಲಿಸಿದಂತಹ ಕಾಣಿಕೆಯೂ ದೇವರ ಉತ್ಸವಕ್ಕೆ ದೇವರ ಸೇವೆಗಾಗಿ ಬಳಕೆ ಆಗುತ್ತದೆ. ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವಾಲಯಗಳು ಅಂದರೆ ಅದು ಪುಣ್ಯ ಸ್ಥಳ ಪವಿತ್ರ ಸ್ಥಳ ಇಲ್ಲಿ ಯಾರೂ ಕೂಡ ಮೈಲಿಗೆ ಮಾಡುವಂತಿಲ್ಲ ಮನಸ್ಸಿನಲ್ಲಿ ಎಷ್ಟೋ ಮೈಲಿಗೆ ವಿಚಾರಗಳನ್ನು ಇಟ್ಟುಕೊಂಡು ದೇವಾಲಯಗಳಿಗೆ ಬಂದರೂ ಅದು ಪರಿಹಾರವಾಗಿ ಮನಸ್ಸು ತಿಳಿಯಾಗಿ ಮನಸ್ಸು ಪವಿತ್ರ ಆಗುತ್ತದೆ ಅಂತಹ ಸ್ಥಳ ದೇವಾಲಯ ಆಗಿರುತ್ತದೆ.

ಆದರೆ ಈ ಒಂದು ಊರಿನಲ್ಲಿ ನಡೆದಂತಹ ಈ ಘಟನೆ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾರೆ. ಹೌದು ದೇವರ ಹೆಸರಲ್ಲಿ ಸಲ್ಲಿಸುವ ಈ ಕಾಣಿಕೆಯೂ ಕೂಡ ದೇವರಷ್ಟೆ ಪವಿತ್ರವಾದದ್ದು ಹಾಗೆ ಬಂದ ಭಕ್ತಾದಿಗಳು ತಮ್ಮ ಕೈಲಾದಷ್ಟು ಕಾಣಿಕೆ ಸಲ್ಲಿಸಿ ದೇವರ ಸೇವೆಯಲ್ಲಿ ಪಾತ್ರರಾಗುತ್ತಾರೆ. ಎಮ್ಮೆಕೆರೆ ಎಂಬ ಊರಿನಲ್ಲಿ ನಡೆದಂತಹ ಈ ಘಟನೆ ಬಬ್ಬುಸ್ವಾಮಿ ಪರಿವಾರ ದೇವಾಲಯ ಕ್ಷೇತ್ರಗಳು ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳ ಕಾಣಿಕೆ ಹುಂಡಿಗೆ ಕಾಂಡಮ್ ಹಾಕಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ ಈ ಮೂರು ವ್ಯಕ್ತಿಗಳಿಗೆ ದೇವರೇ ಸರಿಯಾದ ಶಿಕ್ಷೆ ಅನ್ನು ನೀಡಿದ್ದಾನೆ.

ಈ ಮೂರು ಕಿಡಿಗೇಡಿಗಳಲ್ಲಿ ಒಬ್ಬಾತ ಗಂಭೀರ ಅನಾರೋಗ್ಯದಿಂದ ಬಳಲಿ ಪ್ರಾಣ ಬಿಟ್ಟಿದ್ದಾನೆ, ಈತನ ಹೆಸರು ನವಾಸ್ ಎಂದು. ಆದರೆ ಇನ್ನೂ ಇಬ್ಬರು, ಇವರ ಹೆಸರು ತೋಫಿಕ್ ಹಾಗೂ ರಹೀಂ ಎಂದು ತೀವ್ರ ಅನಾರೋಗ್ಯದಿಂದ ಬಳಲಿದ್ದಾರೆ. ನಂತರ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಶ್ನೆಯನ್ನು ಹಾಕಿಸಿದಾಗ ಅಲ್ಲಿ ದೇವರು ಕೊಟ್ಟ ಉತ್ತರ, ನಿಮ್ಮ ಈ ತಪ್ಪಿಗೆ ಕ್ಷಮೆಯಿಲ್ಲ ಆದರೆ ಕೊರಗಜ್ಜನ ದೇವಾಲಯಕ್ಕೆ ತೆರಳಿ ಅಲ್ಲಿ ಹರಕೆ ಹಣವನ್ನು ಸಲ್ಲಿಸಿ ಹರಕೆ ಮಾಡಿಕೊಂಡು ಬರುವಂತೆ ದೇವಸ್ಥಾನದಲ್ಲಿ ಸೂಚನೆ ನೀಡಲಾಗಿತ್ತು.

ಕೊರಗಜ್ಜ ದೇವಾಲಯಗಳಿಗೆ ತೆರಳಿ ಆ ಕಿಡಿಗೇಡಿಗಳು ಹರಕೆ ಹಣವನ್ನು ಸಲ್ಲಿಸುವಾಗ ದೇವಸ್ಥಾನದ ಟ್ರಸ್ಟ್ ಮಂದಿ ಕಾರಣವನ್ನು ಕೇಳಿದಾಗ ನಡೆದ ಘಟನೆಯನ್ನು ತಿಳಿಸಿದ ಆ ಕಿಡಿಗೇಡಿಗಳು ನಂತರ ಮಾರ್ಚ್ 31ರಂದು ನಡೆದ ಕೊರಗಜ್ಜ ಕೋಲದಲ್ಲಿ ಭಾಗವಹಿಸುವಂತೆ ಟ್ರಸ್ಟಿಗಳು ಸಲಹೆ ನೀಡಿದ್ದರು. ಆನಂತರ ಕೊರಗಜ್ಜನ ಕೋಲ ಮುಗಿದ ನಂತರ ಈ ಕಿಡಿಗೇಡಿಗಳನ್ನು ದೇವಸ್ಥಾನದವರು ಪೋಲಿಸರಿಗೆ ಸಲ್ಲಿಸಿದ್ದಾರೆ. ಹೌದು ಯಾರೇ ಆಗಲಿ ಧರ್ಮಗಳಿಗೆ ಬೆಲೆಯನ್ನು ಕೊಡಬೇಕು. ಅದೇ ರೀತಿ ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ಭಾರತ ದೇಶದಲ್ಲಿ ಹಲವು ಧರ್ಮಿಗಳು ಒಂದೆ ಎಂಬಂತೆ ಸಮಾಜದಲ್ಲಿ ಒಗ್ಗಟ್ಟಾಗಿ ಬಾಳ್ವೆ ಮಾಡಿಕೊಂಡು ಹೋಗುತ್ತಿದ್ದಾರೆ ನಮ್ಮ ಈ ನೆಲದಲ್ಲಿ ಪ್ರತಿ ಧರ್ಮಗಳಿಗೂ ಬೆಲೆಯನ್ನು ನೀಡಬೇಕು.

ದೇವರಿದ್ದಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ ದೇವರ ವಿಚಾರದಲ್ಲಿ ಅಪವಿತ್ರ ಮಾಡಿದರೆ ಆತ ಖಂಡಿತವಾಗಿಯೂ ಶಿಕ್ಷೆ ನೀಡುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಈ ಕಿಡಿಗೇಡಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Leave a Comment

Your email address will not be published.