ಸಾಲುಮರದ ತಿಮ್ಮಕ್ಕ ಮರಗಳನ್ನು ಬೆಳೆಸಲು ನಿಜವಾದ ಕಾರಣ ಏನು ಗೊತ್ತಾ … ಗೊತ್ತಾದ್ರೆ ಅವರ ಪಾದ ಪೂಜೆ ಮಾಡಬೇಕು ಅನ್ಸತ್ತೆ …

ಸಾಲು ಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ ಅಲ್ವಾ ಪರಿಸರ ಪ್ರೇಮಿ ಪರಿಸರವಾದಿ ಆಗಿರುವ ಸಾಲುಮರದ ತಿಮ್ಮಕ್ಕನಿಗೆ ಇದೀಗ ನೂರು ಆರು ವರ್ಷ ತುಂಬಿದ್ದು ಇವರು ಪರಿಸರ ಮಾತೆಗೆ ನೀಡಿರುವ ಕೊಡುಗೆ ಅಪಾರವಾದದ್ದು ಸಾಲುಮರದ ತಿಮ್ಮಕ್ಕನವರಿಗೆ ಅನೇಕ ಪ್ರಶಸ್ತಿಗಳು ಒದಗಿ ಬಂದಿದ್ದು ,ಇವರು ಪ್ರಶಸ್ತಿ ಪಡೆಯುವುದಕ್ಕೆ ಕಾರಣವೆಂದರೆ ಇವರು ಪರಿಸರ ಪ್ರೇಮಿಯಾದ ಕಾರಣದಿಂದಾಗಿ ಆದರೆ ಸಾಲುಮರದ ತಿಮ್ಮಕ್ಕನವರು ಈ ರೀತಿ ಹೆಚ್ಚೆಚ್ಚು ಮರ ಬೆಳೆಸುವ ನಿರ್ಧಾರವನ್ನು ಮಾಡಿರುವ ಹಿಂದೆ ಒಂದಿದೆ ಪ್ರಮುಖವಾದ ಕಾರಣ, ಅದೇನು ಅಂತ ತಿಳಿಯೋಣ ಇಂದಿನ ಈ ಮಾಹಿತಿಯಲ್ಲಿ. ಇಂದಿನ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಹಾಗೂ ನೀವು ಕೂಡ ಪರಿಸರ ಪ್ರೇಮಿಗಳಾಗಿದ್ದರೆ ತಪ್ಪದೇ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಸಾಲುಮರದ ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ಪ್ರಾಂತ್ಯದ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದರು, ಇವರ ತಂದೆ ಚಿಕ್ಕರಸಯ್ಯ ತಾಯಿ ವಿಜಯಮ್ಮ. ತಿಮ್ಮಕ್ಕ ಅವರು ವಿದ್ಯಾಭ್ಯಾಸವನ್ನು ಮಾಡಲಿಲ್ಲ ಆದರೆ ಇವರು ತಮ್ಮ ಊರಿನ ಬಳಿಯಿದ್ದ ಕಲ್ಲುಗಣಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು,

ತಿಮ್ಮಕ್ಕನವರಿಗೆ ಹನ್ನೆರಡನೇ ವಯಸ್ಸಿನಲ್ಲಿಯೇ ಮದುವೆಯಾಯಿತು ಬೆಂಗಳೂರು ಗ್ರಾಮಾಂತರದ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಬಿಕ್ಕಲಚಿಕ್ಕಯ್ಯ ಎಂಬುವವರನ್ನು ವರಿಸಿದ್ದರು. ತಿಮ್ಮಕ್ಕರವರ ದಾಂಪತ್ಯ ಜೀವನ ಖುಷಿಯಿಂದಲೇ ಸಾಗುತ್ತಿತ್ತು ಆದರೆ ಹತ್ತು ವರ್ಷವಾದರೂ ಮಕ್ಕಳಾಗದ ಕಾರಣ ಈ ದಂಪತಿಗಳ ನಡುವೆ ಕಿಂಚಿತ್ತು ಪ್ರೀತಿ ಕಡಿಮೆಯಾಗಲಿಲ್ಲ.ಇವರಿಗೆ ಮಕ್ಕಳಾಗದೇ ಇರುವ ಕೊರಗು ಎಂದಿಗೂ ಕೂಡ ಕಾಡಬಾರದೆಂದು ಇವರು ಯಾವುದಾದರೂ ಒಂದು ಪರಿಸರಕ್ಕೆ ಒಳಿತು ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಮೊದಲೆಲ್ಲ ಊರಿಂದ ಊರಿಗೆ ಹಸಿರು ಮೇ ಯುವುದಕ್ಕಾಗಿ ದಾರಿ ತಪ್ಪಿಸಿಕೊಂಡ ಹಸುಗಳನ್ನು ಕಟ್ಟಿ ಹಾಕಿ ಅದಕ್ಕೆ ನೀರು ಮೇವನ್ನು ಕೊಟ್ಟು ತನ್ನ ಮಾಲೀಕರು,

ಬರುವವರೆಗೂ ತಾವೇ ಜೋಪಾನ ಮಾಡುತ್ತಿದ್ದರು ಹಾಗೆ ಬಂದ ಮಳೆಯ ನೀರನ್ನು ಸಂಗ್ರಹಿಸಿ ಅದನ್ನು ಪ್ರಾಣಿ ಪಕ್ಷಿಗಳಿಗಾಗಿ ಮೀಸಲಿಡುತ್ತಿದ್ದರು ನಂತರ ತಿಮ್ಮಕ್ಕನವರ ದಂಪತಿ ಬೇಸಿಗೆಯಲ್ಲಿ ಬಿಸಿಲಲ್ಲಿ ಒಣಗುವ ಜನರಿಗೆ ಸಹಾಯ ಮಾಡಲೆಂದು ಸಾಲು ಗಿಡಗಳನ್ನು ನೆಡಲು ಮುಂದಾದರು.

ಕುದೂರಿನಿಂದ ಹುಲಿಕಲ್ ವರೆಗೂ ಇರುವ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಮುನ್ನೂರ ಎಂಬತ್ತು ನಾಲ್ಕು ಆಲದಗಿಡಗಳನ್ನು ನೆಟ್ಟರು ತಿಮ್ಮಕ್ಕ ದಂಪತಿಗಳು, ಅವುಗಳ ಪೋಷಣೆಗಾಗಿ ಪಕ್ಕದೂರಿಗೆ ಹೋಗಿ ನೀರನ್ನು ತಂದು ಗಿಡಗಳನ್ನು ಸಾಕಿ ಮರಗಳನ್ನಾಗಿಸಿ ಅವುಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿದರೂ ತಿಮ್ಮಕ್ಕ ದಂಪತಿಗಳು. ಇದೀಗ ಈ ಮುನ್ನೂರ ಎಂಬತ್ತನಾಲ್ಕು ಆಲದ ಮರದ ಬೆಲೆ ಎಷ್ಟಿರಬಹುದು ಅಂದರೆ ಸುಮಾರು ಹತ್ತೊಂಬತ್ತು ಲಕ್ಷ ರೂಪಾಯಿಗಳು.

ತಿಮ್ಮಕ್ಕನವರ ಈ ಸಾಹಸವನ್ನು ಮೆಚ್ಚಿ ಇವರಿಗೆ ಅನೇಕ ಪ್ರಶಸ್ತಿಗಳು ಕೂಡ ಬಂದಿವೆ ರಾಷ್ಟ್ರ ಪೌರ ಪ್ರಶಸ್ತಿ ಇಂದಿರಾ ವೃಕ್ಷ ಮಿತ್ರ ಪ್ರಶಸ್ತಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ ವೀರ ಚಕ್ರ ಪ್ರಶಸ್ತಿ ವನ ಮಾತೆ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳು ತಿಮ್ಮಕ್ಕನವರಿಗೆ ಹರಿದು ಬಂದಿವೆ ಹಾಗೂ ಸ್ವಲ್ಪ ದಿನಗಳ ಹಿಂದೆ ತಿಮ್ಮಕ್ಕನವರ ವಿಚಾರದಲ್ಲಿ ಒಂದು ಸುಳ್ಳು ವದಂತಿ ಹರಿದಾಡಿತ್ತು ಅದೇನೆಂದರೆ ತಿಮ್ಮಕ್ಕನವರು ಇಹಲೋಕ ತ್ಯಜಿಸಿದರು ಎಂದು, ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು ಇಂತಹ ಸುಳ್ಳು ಸುಳ್ಳು ವದಂತಿಯನ್ನು ಹಬ್ಬಿಸಬೇಡಿ ಸಾಲುಮರದ. ತಿಮ್ಮಕ್ಕನವರು ನಮ್ಮ ರಾಜ್ಯದ ಒಂದು ಅಮೂಲ್ಯ ಆಸ್ತಿಯಾಗಿದ್ದು ಅವರ ವಿಚಾರದಲ್ಲಿ ಇಂತಹ ಸುಳ್ಳು ವದಂತಿಗಳನ್ನು ಹಬ್ಬಿಸುವುದು ತಪ್ಪು.

Leave a Comment

Your email address will not be published.