ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿಯೂ ಸಹ ಈ ಒಂದು ಆಹಾರವನ್ನು ಸೋಮವಾರದ ದಿನ ತಿನ್ನಬಾರದು ತಿಂದರೆ ಏಳೇಳು ಜನ್ಮದ ಪಾಪ ಅಂಟಿಕೊಳ್ಳುತ್ತದೆ ….!!!

ನಮಸ್ಕಾರ ನಮ್ಮ ಸಂಪ್ರದಾಯ ಪದ್ದತಿಗಳಲ್ಲಿ ನವಗ್ರಹಗಳಲ್ಲಿ ಕೆಲ ಗ್ರಹಗಳ ಆರಾಧನೆ ಅನ್ನೂ ಕೆಲ ದಿವಸಗಳಂದು ಪ್ರತ್ಯೇಕವಾಗಿ ಮಾಡಲಾಗುತ್ತದೆ ಅದೇ ರೀತಿ ಸೋಮವಾರದ ದಿವಸದಂದು ಸೋಮನ ವಾರ ಅಂದರೆ ಚಂದ್ರನ ವಾರ ಆಗಿರುತ್ತದೆ ವಾರದ ಎರಡನೆಯ ದಿವಸ ಆಗಿರುವ ಈ ಸೋಮವಾರದ ದಿವಸದಂದು ಕೇವಲ ಚಂದ್ರನ ಆರಾಧನೆ ಮಾತ್ರವಲ್ಲ ಈ ದಿವಸದಂದು ಶಿವನ ಆರಾಧನೆ ಮಾಡುವುದು ಕೂಡ ವಿಶೇಷ ಆಗಿದೆ. ಯಾರು ಈ ದಿವಸದಂದು ಶಿವನ ಕುರಿತು ವ್ರತವನ್ನು ಕೈಗೊಳ್ಳುತ್ತಾರೆ ಹಾಗೂ ಚಂದ್ರನಿಗೆ ಪೂಜೆಯನ್ನು ಸಲ್ಲಿಸುತ್ತಾರೆ ಅಂಥವರಿಗೆ ಶಿವನ ಅನುಗ್ರಹದ ಜತೆಗೆ ಚಂದ್ರನ ಕೃಪಾಕಟಾಕ್ಷವೂ ಕೂಡಾ ದೊರೆಯುತ್ತದೆ.

ಆದ್ದರಿಂದಲೇ ಈ ವಿಶೇಷ ದಿವಸಗಳಂದು ಹಿರಿಯರು ಯಾವ ಕೆಲವೊಂದು ಕೆಲಸಗಳನ್ನು ಮಾಡಬೇಕು ಯಾವ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂಬುದನ್ನು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಆದ್ದರಿಂದ ಇಂದಿನ ಮಾಹಿತಿಯಲ್ಲಿ ನಾವೂ ತಿಳಿದುಕೊಳ್ಳೋಣ ಸೋಮವಾರದ ದಿವಸದಂದು ಆ ಯಾವ ಕೆಲಸಗಳನ್ನು ಮಾಡಬಾರದು ಜೊತೆಗೆ ಯಾವ ಕೆಲಸಗಳನ್ನು ಮಾಡಿದರೆ ಶ್ರೇಷ್ಠ ಎಂಬುದನ್ನು. ಹೌದು ಶಿವ ಭಕ್ತ ವತ್ಸಲ ಈತನನ್ನು ಮನಸಾರೆ ಪೂಜಿಸಿ ಕೊಂಡರೆ ಸಾಕು ಶಿವನ ಅನುಗ್ರಹವನ್ನು ಪಡೆದುಕೊಂಡು ಬಿಡಬಹುದು. ಹಾಗಾದರೆ ಈ ದಿವಸದಂದು ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಈ ದಿವಸದಂದು ಶಿವನ ಆರಾಧನೆ ಮಾಡುವುದಕ್ಕೆ ವಿಶೇಷ ದಿವಸ ಆಗಿದ್ದು ಈ ದಿವಸದಂದು ಮಾಂಸಾಹಾರ ಪದಾರ್ಥಗಳನ್ನು ಸೇವಿಸಬಾರದು. ಸಾತ್ವಿಕ ಆಹಾರ ಅಂದರೆ ಹಣ್ಣು ತರಕಾರಿ ಸೊಪ್ಪು ಇಂತಹ ಆಹಾರಗಳನ್ನು ಸೇವನೆ ಮಾಡಿ ಶಿವನ ಆರಾಧನೆ ಅನ್ನೂ ಮಾಡಿದರೆ ಶಿವ ಮೆಚ್ಚುತ್ತಾನೆ.

ಸೋಮವಾರದ ದಿವಸದಂದು ಶಿವನ ಗುಡಿಗೆ ಹೋಗಿ ಶಿವನ ದರ್ಶನ ಪಡೆದು ಬಂದರೆ ಹಾಗೂ ಸೂರ್ಯಾಸ್ತದ ಬಳಿಕ ಮೂಡುವ ಚಂದ್ರನ ದರ್ಶನ ಪಡೆದು ಚಂದ್ರನಿಗೆ ನಮಸ್ಕರಿಸಿದರೆ ಇವರ ಅನುಗ್ರಹವನ್ನು ಪಡೆದುಕೊಳ್ಳಬಹುದು. ಶಿವನಿಗೆ ಈ ದಿವಸದಂದು ಪುಣ್ಯಜಲವನ್ನು ಅಂದರೆ ಗಂಗಾ ಜಲವನ್ನು ಅರ್ಪಣೆ ಮಾಡಿದರೆ ಒಳ್ಳೆಯದು ಆದರೆ ಯಾವುದೇ ಕಾರಣಕ್ಕೂ ಯಾವತ್ತಿಗೂ ಶಿವನಿಗೆ ಕೇದಿಗೆ ಹೂವು ಕುಂಕುಮ ಮುರಿದ ಅಕ್ಕಿ ಕಾಳು ಹಾಗೂ ಶಂಕದ ನೀರು ಇದರ ಜೊತೆಗೆ ಮುರಿದ ಬಿಲ್ವದ ಎಲೆಗಳನ್ನು ಸಮರ್ಪಣೆ ಮಾಡಬಾರದು.

ಶಿವನಿಗೆ ಶ್ರೀಗಂಧವನ್ನು ಹಾಗು ವಿಭೂತಿಯನ್ನು ಅರ್ಪಣೆ ಮಾಡಿದರೆ ಶಿವ ಸಂತಸಗೊಳ್ಳುತ್ತಾನೆ. ಈ ಸೋಮವಾರದ ದಿವಸದಂದು ಗಂಡುಮಕ್ಕಳು ಆಚೆ ಕೆಲಸಕ್ಕೆಂದು ಹೊರಡುವಾಗ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡು ಹೋದರೆ ಹೋಗುವ ಕೆಲಸಗಳು ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಇನ್ನೂ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಈ ದಿವಸದಂದು ತಲೆಯನ್ನು ತೊಳೆದುಕೊಳ್ಳಬಾರದು.

ಸೋಮವಾರದ ದಿವಸದಂದು ಯಾವ ಕೆಟ್ಟ ಕಾರ್ಯಗಳನ್ನು ಮಾಡಬಾರದು ಹಾಗೂ ಮನೆಯಲ್ಲಿ ಜಗಳ ಮಾಡುವುದಾಗಲೀ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಿಂದ ಮಾತನಾಡುವುದಾಗಲಿ ಇಂತಹ ಕೆಲಸಗಳನ್ನು ಕೂಡ ಮಾಡಬಾರದು. ಸೋಮವಾರದಂದು ಮತ್ತೊಂದು ವಿಶೇಷವಿದೆ ಶಿವನ ಆರಾಧನೆಯ ಜೊತೆಗೆ ಯಾರು ನಂದಿ ಅನ್ನೂ ಕೂಡ ಆರಾಧಿಸಿಕೊಳ್ಳುತ್ತಾರೆ ಅಂಥವರಿಗೂ ಕೂಡ ಶಿವನ ಸಂಪೂರ್ಣ ಅನುಗ್ರಹ ಆಗುತ್ತದೆ. ಹೀಗೆ ಈ ದಿವಸದಂದು ತಪ್ಪದೆ ಶಿವನ ಆರಾಧನೆ ಹಾಗೂ ಚಂದ್ರನ ಆರಾಧನೆ ಅನ್ನೋ ತಪ್ಪದೆ ಮಾಡಿಕೊಳ್ಳಿ ದೇವರ ಅನುಗ್ರಹಕ್ಕೆ ಪಾತ್ರರಾಗಿ.

Leave a Comment

Your email address will not be published.