3 ದಿನ ಖಾಲಿ ಹೊಟ್ಟೆಯಲ್ಲಿ, 3 ಈ ಎಲೆಗಳನ್ನು ತಿನ್ನಿ,7 ಕಾಯಿಲೆಗಳು ಮಂಗಮಾಯ ಆಗುತ್ತವೆ…!

ನಮಸ್ಕಾರ ಆಯುರ್ವೇದ ಚಿಕಿತ್ಸೆಯಲ್ಲಿ ಮತ್ತು ಸಾಕಷ್ಟು ನಾಟಿ ಔಷಧಿ ಗಳಲ್ಲಿ ಬಳಕೆಯಾಗುವ ಸಾಕಷ್ಟು ಸೊಪ್ಪು ಎಲೆಗಳು ಮತ್ತು ಹಣ್ಣು ಕಾಯಿಗಳು ಇವೆಲ್ಲವೂ ಕೂಡ ತುಂಬಾನೆ ಔಷಧೀಯ ಗುಣವನ್ನು ಹೊಂದಿದೆ. ಇಂದಿನ ಕಾಲದವರು ಹೇಗೆ ಮಾತ್ರೆಗಳನ್ನು ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಬಳಕೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಪ್ರಕೃತಿ ಮಾತೆಯ ಮಡಿಲಲ್ಲಿ ದೊರೆಯುವ ಸಾಕಷ್ಟು ಗಿಡ ಮರ ಬಳ್ಳಿ ಅಲ್ಲಿ ದೊರೆಯುವ ಹಣ್ಣು ಕಾಯಿ ಎಲೆ ಸೊಪ್ಪು ಇವುಗಳಿಂದ ಕಷಾಯ ಅಥವಾ ಔಷಧಿಯನ್ನು ತಯಾರಿಸಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನಾಗಿ ನೀಡುತ್ತಿದ್ದರು ನಮ್ಮ ಪೂರ್ವಜರ ಕಾಲದ ಚಿಕಿತ್ಸಾ ಪದ್ಧತಿಯಲ್ಲಿ.

ಹೌದು ನಾನು ಮಾತನಾಡುತ್ತಿರುವುದು ಕೆಲವೊಂದು ಗಿಡ ಮರಗಳ ಮಹತ್ವದ ಬಗ್ಗೆ. ಅಜ್ಜಿ ಮನೆಗೆ ಹೋದಾಗ ಮಕ್ಕಳಿಗೆ ಕೆಮ್ಮು ಶೀತ ಬಂದರೆ ಅಜ್ಜಿ ಮಾಡಿಕೊಡುವ ಮೊದಲನೆಯ ಮನೆಮದ್ದು ಅಂದರೆ ದೊಡ್ಡಪತ್ರೆ ಅಥವಾ ತುಳಸಿ ಗಿಡದ ರಸವನ್ನು ನೀಡುವುದು ದೊಡ್ಡಪತ್ರೆಯ ಎಲೆಯನ್ನು ಜಗಿದು ಅದರ ರಸವನ್ನು ನುಂಗಿದರೆ ಕೆಮ್ಮು ಎಷ್ಟೋ ವಾಸಿ ಆಗುತ್ತದೆ ಈ ರೀತಿ ಒಂದೆರಡು ದಿನಗಳ ಕಾಲ ಪಾಲಿಸಿದರೆ ಕೆಮ್ಮು ಪೂರ್ತಿಯಾಗಿ ಪರಿಹರವಾಗುತ್ತದೆ ಅದೇ ರೀತಿಯಲ್ಲಿ ಚರ್ಮಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಬೇವಿನ ಸೊಪ್ಪಿನ ಎಲೆಗಳನ್ನು ಬಳಕೆ ಮಾಡುತ್ತಿದ್ದರು.

ಹಾಗೆ ಆರೋಗ್ಯವೃದ್ಧಿಗಾಗಿ ಈ ಸೀಬೆ ಹಣ್ಣಿನ ಮರದ ಎಲೆಗಳು ಪ್ರಯೋಜನಕಾರಿಯಾಗಿದೆ ಮಧುಮೇಹದಿಂದ ರಕ್ತದ ಒತ್ತಡ ತೆಯಿಂದ ದೂರ ಮಾಡಬಲ್ಲ ಈ ಸೀಬೆಹಣ್ಣಿನ ಎಲೆಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ಸೇವನೆ ಮಾಡಿಕೊಂಡು ಬಂದದ್ದೆ ಆದಲ್ಲಿ ಜೀರ್ಣಾಂಗ ಶಕ್ತಿ ಹೆಚ್ಚುತ್ತದೆ ಮತ್ತು ಮೇದೋಜೀರಕಾಂಗ ಅಂದರೆ ಪ್ಯಾಂಕ್ರಿಯಾಸ್ನ ಕೆಲಸ ಸರಿಯಾಗಿ ಸಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಸೀಬೆ ಹಣ್ಣಿನ ಮರವನ್ನು ಬೆಳೆಸಬಹುದು ಈ ಹಣ್ಣುಗಳು ಎಷ್ಟು ರುಚಿಯೋ ಅದರ ಎಲೆಯಲ್ಲಿರುವ ಔಷಧೀಯ ಗುಣ ಕೂಡ ಅಷ್ಟೇ ಅಪಾರವಾದದ್ದು.

ಸೀಬೆ ಹಣ್ಣಿನ ಮರದ ಎಲೆಯಲ್ಲಿ ಸಕಷ್ಟು ಜೀವಸತ್ವಗಳಿವೆ ಇದರಲ್ಲಿರುವ ವಿಟಮಿನ್ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಇದರ ಜೊತೆಗೆ ಕೆಮ್ಮು ಶೀತ ನೆಗಡಿ ಆದಾಗ ತಕ್ಷಣವೇ ಇದರ ಒಂದು ಕಷಾಯವನ್ನು ಮಾಡಿ ಸೇವನೆ ಮಾಡಿದ್ದಲ್ಲಿ ಶೀತ ಕೆಮ್ಮು ಜ್ವರ ಸಮಸ್ಯೆ ಬೇಗ ಪರಿಹಾರವಾಗಿತ್ತು ತಕ್ಷಣವೇ ವಿಶ್ರಾಂತಿ ದೊರೆಯುತ್ತದೆ. ಸೀಬೆಹಣ್ಣಿನ ಎಲೆಗಳನ್ನ ಖಾಲಿ ಹೊಟ್ಟೆಗೆ ಸೇವಿಸಬೇಕು ಇದರಿಂದ ಹೊಟ್ಟೆ ಸ್ವಚ್ಛವಾಗುತ್ತದೆ ಮಲಬದ್ಧತೆ ಮೂಲವ್ಯಾಧಿ ಅಂತಹ ಸಮಸ್ಯೆಗಳು ಸುಳಿಯುವುದೇ ಇಲ್ಲ ಲಿವರ್ ಸ್ವಚ್ಛವಾಗುತ್ತದೆ ಮತ್ತು ಕ್ಯಾನ್ಸರ್ ಕಣಗಳನ್ನು ನಾಶ ಮಾಡಬಲ್ಲದು ಈ ಎಲೆಗಳು.

ಕುಡಿತ ಚಟಕ್ಕೆ ಒಳಗಾಗಿ ದೇಹದ ಆರೋಗ್ಯ ಕ್ಷೀಣಿಸುತ್ತಿದೆ ಅಂದರೆ ಅಂಥವರು ಪ್ರತಿದಿನ ಸೀಬೆಹಣ್ಣಿನ ಎಲೆಯ ಕಷಾಯವನ್ನು ಮಾಡಿ ಸಲ್ಲಿಸಬಹುದು ಇದರಿಂದ ಆರೋಗ್ಯ ಉತ್ತಮವಾಗುತ್ತದೆ. ಈ ರೀತಿಯಾಗಿ ಸೀಬೆಹಣ್ಣಿನ ಎಲೆಯು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಬಾರದಿರುವ ಹಾಗೆ ಕೂಡ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.

Leave a Comment

Your email address will not be published.