ಸ್ವಾದಿಷ್ಟವಾದ ಅವಲಕ್ಕಿ ಲಡ್ಡು ಕೃಷ್ಣ ಜನ್ಮಾಷ್ಟಮಿಗೆ ಮಾಡೋದು ಹೇಗೆ ಗೊತ್ತ ..!

ಈ ಒಂದು ಸಿಹಿಯಾದ ತಿಂಡಿಯನ್ನು ನೀವು ಮನೆಯಲ್ಲಿ ಮಾಡಿ ನೋಡಿ ರುಚಿಕರವಾದ ಈ ಅವಲಕ್ಕಿ ಲಡ್ಡುವನ್ನು ಮಕ್ಕಳು ಕೂಡ ಖುಷಿಯಿಂದ ಸೇವಿಸ್ತಾರೆ ಹಾಗೆ ಕಡಿಮೆ ಸಮಯದಲ್ಲಿ ರುಚಿಕರವಾದ ಈ ಸಿಹಿ ತಿನಿಸನ್ನು ಮಾಡುವ ವಿಧಾನವನ್ನು ಇಂದಿನ ಈ ಮಾಹಿತಿಯಲ್ಲಿ ತಿಳಿಯೋಣ ಈ ಒಂದು ರೆಸಿಪಿಯನ್ನು ನೀವು ಕೂಡ ತಿಳಿದು ಈ ದಿನವೆ ಮನೆಯಲ್ಲಿ ಮಾಡಿ ನೋಡಿ ಹಾಗೆ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಹೌದು ಸಿಹಿಯಾದ ಅವಲಕ್ಕಿ ಲಡ್ಡುವನ್ನು ಮಾಡುವ ವಿಧಾನವೂ ಹೇಗೆ ಇದನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ. ಮೊದಲಿಗೆ ಬೆಲ್ಲ ಅವಲಕ್ಕಿ ತುಪ್ಪ ದ್ರಾಕ್ಷಿ ಗೋಡಂಬಿ ಅಷ್ಟೇ. ಇದೀಗ ಅವಲಕ್ಕಿಯನ್ನು ಒಂದು ಬಟ್ಟೆಯ ಮೇಲೆ ಹಾಕಿಕೊಂಡು, ಇದನ್ನು ಬಟ್ಟೆಯಿಂದ ಸ್ವಚ್ಛ ಪಡಿಸಿಕೊಳ್ಳಿ ಅಂದರೆ ಈ ಅವಲಕ್ಕಿಯಲ್ಲಿ ಇರುವ ಧೂಳನ್ನು ಈ ವಿಧಾನದಲ್ಲಿ ತೆಗೆಯಿರಿ.

ನಮಗೆ ಒಂದೂವರೆ ಕಪ್ ಅವಲಕ್ಕಿ ಈ ಲಡ್ಡು ಮಾಡುವುದಕ್ಕಾಗಿ ಬೇಕಾಗಿರುತ್ತದೆ ಈ ಒಂದೂವರೆ ಕಪ್ ಅವಲಕ್ಕಿ ಒಂದು ಕಪ್ ಬೆಲ್ಲವನ್ನು ತೆಗೆದುಕೊಳ್ಳಿ ಇದೀಗ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿಕೊಂಡು ಇದನ್ನು ಕರಗಿಸಿಕೊಳ್ಳಿ ನಂತರ ಇದನ್ನು ಶೋಧಿಸಿ ಇಟ್ಟುಕೊಳ್ಳಿ.ಇತ್ತ ಒಂದೂವರೆ ಕಪ್ ಅವಲಕ್ಕಿಯನ್ನು ನೀವು ಸ್ವಲ್ಪ ಸಮಯ ಹುರಿದು ಇದನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು.

ಒಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಎರಡು ಚಮಚ ಅಥವಾ ಮೂರು ಚಮಚ ತುಪ್ಪವನ್ನು ಹಾಕಿ ಇದರಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ ಆ ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಒಂದೆಡೆ ತೆಗೆದಿಟ್ಟುಕೊಳ್ಳಿ. ಇದೀಗ ಅದೇ ತುಪ್ಪಕ್ಕೆ ಅರ್ಧ ಕಪ್ ಕೊಬ್ಬರಿಯನ್ನು ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ ಎಷ್ಟು ಸಮಯ ಅಂದರೆ ಈ ಕೊಬ್ಬರಿಯ ಹಸಿ ವಾಸನೆ ಹೋಗುವವರೆಗೆ ಮಾತ್ರ ಹುರಿದಿಟ್ಟುಕೊಳ್ಳಿ ನಿಮಗೆ ಕೊಬ್ಬರಿ ಅವಶ್ಯಕತೆ ಇಲ್ಲ ಅಂದರೆ ತೆಗೆದುಕೊಳ್ಳಬೇಡಿ, ಬೇಕು ಅಂದರೆ ಅರ್ಧ ಕಪ್ ಕೊಬ್ಬರಿ ತುರಿ ತೆಗೆದುಕೊಳ್ಳಿ.

ಇದೀಗ ತುಪ್ಪದೊಂದಿಗೆ ಕೊಬ್ಬರಿಯನ್ನು ಹುರಿದುಕೊಂಡ ಪಾತ್ರೆಗೆ ಪುಡಿ ಮಾಡಿ ಇಟ್ಟುಕೊಂಡಂತಹ ಅವಲಕ್ಕಿಯನ್ನು ಹಾಕಿ ಮತ್ತು ಹುರಿದಿಟ್ಟುಕೊಂಡ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಇದಕ್ಕೆ ಬೆಲ್ಲದ ಪಾಕವನ್ನು ಹಾಕಿ ಚೆನ್ನಾಗಿ ಮಿಶ್ರಿತ ಮಾಡಬೇಕು ಹೇಗೆ ಅಂದರೆ ಗಂಟುಗಳು ಇರಬಾರದು ಆ ರೀತಿಯಲ್ಲಿ ಈ ಉಂಡೆಯನ್ನು ಕಟ್ಟಬೇಕು.

ಇದಿಷ್ಟು ಆದನಂತರ ಹೇಗೆ ಲಡ್ಡು ಅನ್ನು ಉಂಡೆ ಮಾಡಿ ಕಟ್ಟುತ್ತಾರೊ, ಅದೆ ಕ್ರಮದಲ್ಲಿ ಈ ಒಂದು ಅವಲಕ್ಕಿಯ ಪಾಕವನ್ನು ಕಟ್ಟಿ. ಉಂಡೆ ಮಾಡಬೇಕು ಉಂಡೆ ಕೈಗೆ ಅಂಟಿದೆ ಅನ್ನುವವರು ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ಈ ಪಾಕಕ್ಕೆ ಹಾಕುತ್ತಾ ಉಂಡೆ ಕಟ್ಟಬೇಕು.

ಇದೀಗ ಮನೆಯಲ್ಲಿಯೇ ತಯಾರಾಗಿದೆ ರುಚಿಕರವಾದ ಸಿಹಿಯಾದ ಅವಲಕ್ಕಿಯ ಲಡ್ಡು ನಿಮಗೂ ಕೂಡ ಈ ಸ್ವಾದಿಷ್ಟಕರವಾದ ಅವಲಕ್ಕಿ ಲಡ್ಡು ಇಷ್ಟ ಆಗಿದ್ದರೆ ತಪ್ಪದ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಹಾಗೆ ಈ ಮಾತ್ರೆ ಸಿಟಿಯಂತಹ ಇನ್ನು ಅನೇಕ ರೆಸಿಪಿಯನ್ನು ತಿಳಿಯಬೇಕಾದರೆ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಕ್ಕಾಗಿ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ತಪ್ಪದ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಹಾಗೂ ಶೇರ್ ಮಾಡಿ. ಮನೆಯಲ್ಲಿಯೆ ರುಚಿಯಾದ ಅಡುಗೆಯನ್ನು ತಯಾರಿಸಿ ಆಹಾರವನ್ನು ಸೇವಿಸಿ ಆರೋಗ್ಯದಿಂದಿರಿ ಧನ್ಯವಾದ.

Leave a Comment

Your email address will not be published.