ಲೂಸ್ ಮೋಶನ್ ನಿವಾರಣೆ ಮಾಡುವ ಹಳ್ಳಿಯಲ್ಲಿ ತುಂಬಾ ಜನ ಮಾಡುವಂತಹ ಮನೆ ಮದ್ದು ಇಲ್ಲಿದೆ ನೋಡಿ ..!

ಲೂಸ್ ಮೋಶನ್ ಗೆ ಒಂದು ಉಪಯುಕ್ತವಾದ ಪರಿಹಾರವನ್ನು ತಿಳಿಯೋಣ. ಹೌದು ಇತ್ತೀಚನ ದಿನಗಳಲ್ಲಿ ಮಂದಿ ಆಚೆ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ ಆದರೆ ಆಚೆ ತಯಾರಿ ಮಾಡಿದ ಆಹಾರ ಪದಾರ್ಥಗಳು ಎಷ್ಟು ದಿನದಿಂದ ಇಟ್ಟಿರುತ್ತಾರೊ ಅಥವಾ ಆಹಾರವನ್ನು ತಯಾರಿಸುವಾಗ ಅದಕ್ಕಾಗಿ ಬಳಕೆ ಮಾಡಿರುವ ಪದಾರ್ಥಗಳು ಯಾವುದು ಅಂತ ಕೂಡ ನಮಗೆ ತಿಳಿದಿರುವುದಿಲ್ಲಾ.

ಈ ರೀತಿ ಹೊಟ್ಟೆಕೆಟ್ಟು ಲೂಸ್ ಮೋಶನ್ ಆಗುವ ಸಾಧ್ಯತೆ ಕೂಡ ಇರುತ್ತದೆ ಆಗ ತಕ್ಷಣವೇ ಪರಿಹಾರಕ್ಕಾಗಿ ಈ ಮನೆಮದ್ದನ್ನು ಪಾಲಿಸಿ. ಹಾಗೆ ಲೂಸ್ ಮೋಶನ್ ಆದಾಗ ಕೆಲವರಿಗೆ ಹೊಟ್ಟೆ ನೋವಿನ ಸಮಸ್ಯೆ ಕೂಡ ಕಾಡುತ್ತಾ ಇರುತ್ತದೆ ಈ ಲೂಸ್ ಮೋಶನ್ ಆಗಾಗ ಕಾಡುವ ಹೊಟ್ಟೆ ನೋವಿನ ಸಮಸ್ಯೆ ಗೂ ಕೂಡ ಈ 1ಮನೆ ಮತ್ತು ಪರಿಹಾರವನ್ನು ನೀಡುತ್ತದೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು ಈ ಪರಿಹಾರವನ್ನು ಮಾಡುವ ವಿಧಾನವನ್ನು ತಿಳಿಯಿರಿ.

ಮೊದಲಿಗೆ ಈ ಪರಿಹಾರವನ್ನು ಮಾಡೋದಕ್ಕೆ ಬೇಕಾಗಿರುವ ಪದಾರ್ಥಗಳ ಬಗ್ಗೆ ತಿಳಿಯೋಣ ನೀವು ಸಾಮಾನ್ಯವಾಗಿ ಮನೆಯಲ್ಲಿ ಟೀ ಮಾಡ್ತೀರಾ ಆಕ್ಟೀವ್ ಮಾಡುವುದಕ್ಕಾಗಿ ಬಳಸುವ ಟೀ ಪುಡಿ ಪುದೀನಾ ಈರುಳ್ಳಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ಹಣ್ಣಿನ ರಸ. ಮೊದಲಿಗೆ ಎರಡು ಚಮಚ ಟೀ ಪುಡಿಯನ್ನು ತೆಗೆದುಕೊಳ್ಳಿ ಅದನ್ನು ಒಂದು ಪ್ಯಾನ್ ಗೆ ಹಾಕಿ ಸ್ವಲ್ಪ ಹುರಿದುಕೊಳ್ಳಿ. ಈ ಟೀ ಪುಡಿ ಅನ್ನು ಹುರಿದು ಕೊಂಡ ನಂತರ ಒಂದು ಲೋಟ ನೀರನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಬೇಕು. ನಂತರ ನೀರನ್ನು ಕಾಯಿಸಬೇಕು ನೀರು ಕುದಿಯುವಾಗ ಇದಕ್ಕೆ ಹುರಿದಿಟ್ಟುಕೊಂಡ ಟೀ ಪುಡಿ ಅನ್ನು ಹಾಕಬೇಕು.

ನೀರು ಕುದಿಯುವಾಗಲೆ ಇದಕ್ಕೆ ನಾಲ್ಕೈದು ಪುದೀನಾ ಎಲೆಗಳನ್ನು ಹಾಕಿ ಒಂದು ಮೀಡಿಯಮ್ ಗಾತ್ರದ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಈ ನೀರಿಗೆ ಹಾಕಬೇಕು. ನಂತರ ನೀರನ್ನು ಚೆನ್ನಾಗಿ ಕುದಿಸಬೇಕು ಎಷ್ಟು ಅಂದರೆ ಒಂದು ಲೋಟ ನೀರು ಅರ್ಧ ಲೋಟ ಆಗಬೇಕು ಅಷ್ಟು ಪ್ರಮಾಣದಲ್ಲಿ ಈ ನೀರನ್ನು ಕುದಿಸಬೇಕು. ನಂತರ ನೀರು ಕುದ್ದ ಮೇಲೆ ಇದನ್ನು ಶೋಧಿಸಿ ಇಟ್ಟುಕೊಳ್ಳಿ. ಇದು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು. ನೀವು ಸೈಂಧವ ಲವಣವನ್ನು ಬಳಸಿದರೆ ಇನ್ನು ಉಪಯುಕ್ತಕಾರಿ. ಆನಂತರ ಅರ್ಧ ಚಮಚ ನಿಂಬೆ ಹಣ್ಣಿನ ರಸವನ್ನು ನೀರು ಬೆಚ್ಚಗೆ ಆದ ಮೇಲೆ ಹಾಕಿ ಈ ನೀರನ್ನು ಇದೀಗ ಕುಡಿಯಬೇಕು.

ತುಂಬಾ ಪ್ರಯೋಜನಕಾರಿ ಆಗಿ ಇರುತ್ತದೆ ಈ ಮನೆ ಮದ್ದು ಮತ್ತು ಲೂಸ್ ಮೋಶನ್ ಹಾಗೆ ಹೊಟ್ಟೆ ನೋವಿನ ಸಮಸ್ಯೆಗೆ ಕೂಡ ಪರಿಹಾರ ನೀಡುತ್ತದೆ. ಲೂಸ್ ಮೋಶನ್ ಆದಾಗ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಮತ್ತು ಹೊಟ್ಟೆ ನೋವಿನ ಸಮಸ್ಯೆಗೆ ಕೂಡ ಪರಿಹಾರ ತುಂಬಾ ಪ್ರಯೋಜನಕಾರಿ ಆಗಿ ಇರುತ್ತದೆ. ನೀವು ಕೂಡ ಇಂತಹ ಯಾವುದಾದರೂ ಸಮಸ್ಯೆ ಯಿಂದ ಬಳಲುವ ಕೂಡಲೆ ಈ ಮನೆ ಮದ್ದನ್ನು ಮಾಡಿಕೊಳ್ಳಿ ಬೇಗ ಹೊಟ್ಟೆ ನೋವಿನ ಸಮಸ್ಯೆ ಯಿಂದ ಶಮನವನ್ನು ಪಡೆದುಕೊಳ್ಳಿ ಧನ್ಯವಾದಗಳು.

Leave a Comment

Your email address will not be published.