ಚಪ್ಪಾಳೆ ತಟ್ಟುವುದರಿಂದ ನಮ್ಮ ದೇಹದಲ್ಲಿ ಎಷ್ಟೊಂದು ಹಾಗು ಏನೆಲ್ಲಾ ಚೇಂಜ್ ಆಗುತ್ತೆ ಗೊತ್ತ ….!!!!!

ಸಾಮಾನ್ಯವಾಗಿ ಶಾಲೆಗಳಲ್ಲಿ ಓದುವಾಗ ಚಪ್ಪಾಳೆ ತಟ್ಟುತ್ತಿದ್ದೆವು. ಯಾವುದಾದರೂ ಶುಭ ಸಮಾರಂಭಗಳಲ್ಲಿ ಮತ್ತು ಗೆಳೆಯರ ಹುಟ್ಟುಹಬ್ಬಗಳಲ್ಲಿ ಈ ರೀತಿ ಇಂತಹ ಶುಭ ಸಮಾರಂಭಗಳಲ್ಲಿ ಚಪ್ಪಾಳೆ ತಟ್ಟುವುದು ವಾಡಿಕೆ ಆಗಿರುತ್ತಿತ್ತು. ಇನ್ನೂ ಕೆಲವರಿಗೆ ತಿಳಿದಿದೆ ವ್ಯಾಯಾಮ ಮಾಡುವಾಗ ಈ ಚಪ್ಪಾಳೆ ಅನ್ನು ಕೂಡ ಪಾಲಿಸುತ್ತಾರೆ. ಆದರೆ ಈ ರೀತಿ ವ್ಯಾಯಾಮದಲ್ಲಿ ಚಪ್ಪಾಳೆ ಏಕೆ ಒಂದು ಭಾಗವಾಗಿದೆ ಎಂದು ಎಂದಾದರೂ ಯೋಚನೆ ಮಾಡಿದ್ದೀರಾ.

ಹೌದು ವ್ಯಾಯಾಮದಲ್ಲಿ ಒಂದು ಭಾಗ ಈ ಚಪ್ಪಾಳೆ ಆಗಿದೆ ಅಂದರೆ ಅದರ ಹಿಂದೆ ಒಂದು ಅರ್ಥ ಇರಬೇಕು. ಹಾಗೆ ಚಪ್ಪಾಳೆ ಕೂಡ ಒಂದು ವ್ಯಾಯಾಮವಾಗಿದ್ದರೆ ಅದರಿಂದ ಆರೋಗ್ಯ ವೃದ್ಧಿ ಆಗಬೇಕು ಅಂತ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಚಪ್ಪಾಳೆ ತಟ್ಟುವುದರಿಂದ ಅರೋಗ್ಯಕ್ಕೆ ದೊರೆಯುವಂತಹ ಲಾಭಗಳು ಏನು ಎಂಬುದನ್ನು.

ಹೌದು ಫ್ರೆಂಡ್ಸ್ ಚಪ್ಪಾಳೆಯನ್ನು ತಟ್ಟುವುದರಿಂದ ಸಾಕಷ್ಟು ಲಾಭ ಇದೆ. ಅದರಲ್ಲೂ ಹೃದಯದ ಆರೋಗ್ಯ ಹೆಚ್ಚಾಗುತ್ತದೆ ಹೇಗೆ ಅಂದರೆ ನಮಗೆಲ್ಲರಿಗೂ ತಿಳಿದೇ ಇದೆ ನಮ್ಮ ದೇಹದಲ್ಲಿ ಎಷ್ಟೆಲ್ಲಾ ನರಗಳಿವೆ. ಆ ನರಗಳು ಒಂದಕ್ಕೊಂದು ಸರಪಳಿಯಂತೆ ಜೋಡಣೆಗೊಂಡಿದೆ ಈ ರೀತಿ ನಮ್ಮ ಹೃದಯದಿಂದ ನಮ್ಮ ಕೈ ಭಾಗಗಳಿಗೂ ಕೂಡ ನರಗಳು ಸರಪಳಿ ಗೊಂಡಿವೆ.

ಆಗ ನಾವು ಚಪ್ಪಾಳೆ ತಟ್ಟಿದಾಗ ನಮ್ಮ ಹೃದಯಕ್ಕೆ ಚೆನ್ನಾಗಿ ಆಮ್ಲಜನಕದ ಪೂರೈಕೆಯಾಗುತ್ತದೆ ಮತ್ತು ಹೃದಯದ ಆರೋಗ್ಯ ಹೆಚ್ಚುತ್ತದೆ. ಹೃದಯ ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತದೆ ಹಾಗಾಗಿ ತುಂಬ ಸುಲಭ ವಿಧಾನ ಅಂತ ಹೇಳಬಹುದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು.

ಪ್ರತಿದಿನ ಕೇವಲ ಹತ್ತೇ ಹತ್ತು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಇದರಿಂದ ಹೃದಯದ ಆರೋಗ್ಯ ಸಾಕಷ್ಟು ವೃದ್ಧಿಯಾಗುತ್ತದೆ ಇದಕ್ಕಾಗಿ ಮಾತ್ರೆಗಳ ಅವಶ್ಯಕತೆಯಿಲ್ಲ ಚಿಕಿತ್ಸೆ ಬೇಡವೇ ಬೇಡ. ಇನ್ನೂ ಹಲವಾರು ಆರೋಗ್ಯಕರ ಲಾಭಗಳನ್ನು ನಾವು ಚಪ್ಪಾಳೆ ತಟ್ಟುವುದರಿಂದ ಪಡೆದುಕೊಳ್ಳಬಹುದು ಆದರೆ ಚಪ್ಪಾಳೆ ತಟ್ಟುವುದರಿಂದ ನಮಗೆ ದೊರೆಯುವಂತಹ ಲಾಭಗಳು ಅರ್ಥ ಆಗುತ್ತಿಲ್ಲ ಅಷ್ಟೆ. ಚಪ್ಪಾಳೆಯ ಮಹತ್ವ ತಿಳಿದಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ಉದ್ಯಾನವನಗಳಲ್ಲಿ ವಯಸ್ಸಾದವರು ಯುವಕರು ಎಲ್ಲರೂ ಕೂಡ ಚಪ್ಪಾಳೆ ತಟ್ಟಿ ತಮ್ಮ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳುತ್ತಾ ಇದ್ದಾರೆ.

ಹಾಗಾಗಿ ವೈಜ್ಞಾನಿಕವಾಗಿಯೂ ಕೂಡ ದೃಢೀಕರಿಸಿರುವ ಈ ಚಪ್ಪಾಳೆ ಎಂಬ ವ್ಯಾಯಾಮವನ್ನು ನೀವು ಕೂಡ ಪ್ರತಿದಿನ ಪಾಲಿಸಿ ಎದ್ದು ಕೂತಾಗ ಕೇವಲ ಹತ್ತು ನಿಮಿಷಗಳ ಕಾಲ ನಿಮ್ಮ ಹೃದಯಕ್ಕಾಗಿ ನೀವು ಸಮಯ ಕೊಡಿ. ನಿಮ್ಮ ದೇಹದಲ್ಲಿ ದಿನವಿಡೀ ಕೆಲಸ ಮಾಡುವ ಈ ಹೃದಯ ಕೋಸ್ಕರ ನಾವು ದಿನಕ್ಕೆ ಹತ್ತು ನಿಮಿಷಗಳ ಕಾಲ ವ್ಯಯ ಮಾಡಿದರೆ ಹೃದಯ ಇನ್ನೂ ಚೆನ್ನಾಗಿ ಆರೋಗ್ಯದಿಂದ ಇರುತ್ತದೆ

ಆದಕಾರಣ ತಪ್ಪದೆ ಪ್ರತಿದಿನ ಹತ್ತು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಇದರಿಂದ ಆರೋಗ್ಯ ಹೆಚ್ಚುತ್ತದೆ. ಜೊತೆಗೆ ಹೃದಯವೂ ಕೂಡ ಹೆಚ್ಚಿನ ಕಾಲದವರೆಗೂ ಆರೋಗ್ಯದಿಂದ ಇರುತ್ತದೆ. ಚಪ್ಪಾಳೆ ತಟ್ಟುವುದರಿಂದ ಮತ್ತೊಂದು ಲಾಭ ಏನು ಅಂದರೆ ದೇಹದಲ್ಲಿ ಚೆನ್ನಾಗಿ ರಕ್ತಪರಿಚಲನೆ ಆಗುತ್ತದೆ. ಇದರಿಂದ ಒತ್ತಡತೆ ಕೂಡ ಉಂಟಾಗುವುದಿಲ್ಲ ರಕ್ತದ ಒತ್ತಡದ ಸಮಸ್ಯೆ ಇರುವವರು ಕೂಡ ಚಪ್ಪಾಳೆ ತಟ್ಟಿ ದೇಹದಲ್ಲಿ ರಕ್ತ ಪರಿಚಲನೆ ಕೂಡ ಸರಾಗವಾಗಿ ಆಗುತ್ತದೆ.

Leave a Comment

Your email address will not be published.