ಪ್ರತಿ ದಿನ ಊಟದ ನಂತರ ಇದನ್ನ ಒಂದು ತಿಂದ್ರೆ ಅದರ ಮಜಾ ನಿಮಗೆ ಆಮೇಲೆ ಗೊತ್ತಾಗುತ್ತೆ…

ಪ್ರತಿ ದಿನ ಊಟದ ನಂತರ ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ಜೀರ್ಣ ಶಕ್ತಿ ಕೂಡ ಉತ್ತಮಗೊಳ್ಳುತ್ತದೆ, ಹಾಗಾದರೆ ತಿಳಿಯೋಣ ಬನ್ನಿ ಊಟದ ನಂತರ ತಿನ್ನ ಬೇಕಾದಂತಹ ಆ ಒಂದು ಪದಾರ್ಥ ಎನು ಮತ್ತು ಅದನ್ನು ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತದೆ .ಎಂಬುದನ್ನು, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಉಪಯುಕ್ತ ಆದಲ್ಲಿ ತಪ್ಪದೇ ನಿಮ್ಮ ಗೆಳೆಯರೊಂದಿಗೆ ಕೂಡ ಇದನ್ನ ಶೇರ್ ಮಾಡಿ ಮತ್ತು ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಊಟ ಎಂಬುದು ಮಾನವನ ದೇಹಕ್ಕೆ ಶಕ್ತಿಯನ್ನು ನೀಡುವಂತಹ ಒಂದು ಅಂಶವಾಗಿರಬೇಕು, ಆದರೆ ಜನರು ನಾಲಿಗೆಯ ರುಚಿಗೋಸ್ಕರ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಪ್ರಯೋಜನಗಳನ್ನು ಮರೆತು ಕೇವಲ ರುಚಿಕರವಾದ ಖಾದ್ಯಗಳನ್ನು ತಯಾರಿಸಿಕೊಂಡು ತಿನ್ನುತ್ತಾರೆ, ಇದರಿಂದ ಹೊಟ್ಟೆ ತುಂಬುತ್ತದೆಯೋ ಹೊರತು ನಾಲಿಗೆಗೆ ರುಚಿ ಸಿಗುತ್ತದೆಯೋ ಹೊರತು ಯಾವ ಉತ್ತಮ ಪೋಷಕಾಂಶಗಳು ಮಾತ್ರ ದೇಹಕ್ಕೆ ದೊರೆಯುವುದಿಲ್ಲ.

ಹೀಗೆ ನಾಲಿಗೆಗೆ ರುಚಿಕರವಾದ ಆಹಾರಗಳನ್ನು ಸೇವಿಸುತ್ತಾ ಜೀರ್ಣಾಂಗ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ ನಂತರ ತನ್ನ ತಪ್ಪಿನ ಅರಿವಾಗಿ ಉತ್ತಮವಾದ ಆಹಾರ ಪದ್ಧತಿಯನ್ನು ಪಾಲಿಸಲು ಮುಂದಾಗುತ್ತಾನೆ, ಆದರೆ ಒಮ್ಮೆ ಜೀರ್ಣಾಂಗ ಕ್ರಿಯೆಯಲ್ಲಿ ವ್ಯತ್ಯಾಸವಾದರೂ ಕೂಡ ಅದು ತಕ್ಷಣವೇ ಸರಿ ಹೋಗುವಂತಹ ಪ್ರಕ್ರಿಯೆ ಅಲ್ಲದೆ ಇರುವ ಕಾರಣದಿಂದಾಗಿ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ.

ಹಾಗಾಗಿ ಜಂಕ್ ಫುಡ್ಗಳನ್ನು ಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ತಿಂದು ಜೀರ್ಣಾಂಗ ಶಕ್ತಿಯನ್ನು ಕುಗ್ಗಿಸಿ ಕೊಳ್ಳುವುದರ ಬದಲು ಉತ್ತಮವಾದ ಆಹಾರ ಪದಾರ್ಥಗಳನ್ನು ಸೇವಿಸಿ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಿ ಹಾಗೂ ಜೀರ್ಣಕ್ರಿಯೆಗೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿಮಗೆ ಕಾಡುತ್ತಿದ್ದರೆ ಹೀಗೆ ಮಾಡಿ ಊಟದ ನಂತರ ಪ್ರತಿದಿನ ಒಂದು ಕ್ಯಾರೆಟ್ ಅನ್ನು ಸೇವಿಸುತ್ತಾ ಬನ್ನಿ ಹೀಗೆ ಮಾಡುವುದರಿಂದ ನಿಮ್ಮ ಜೀರ್ಣಾಂಗ ಶಕ್ತಿ ವೃದ್ಧಿಸುತ್ತದೆ ಹಾಗು ಜೀರ್ಣ ಕ್ರಿಯೆಯೂ ಕೂಡ ಉತ್ತಮಗೊಳ್ಳುತ್ತದೆ.

ಇನ್ನು ಕ್ಯಾರೆಟ್ನಲ್ಲಿ ನಾನಾ ರೀತಿಯ ಪ್ರಯೋಜನಗಳಿವೆ ಹಲವಾರು ಉತ್ತಮ ಪೋಷಕಾಂಶಗಳು ಕೂಡ ಇವೆ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯಕ್ಕೂ ಕೂಡ ಉತ್ತಮ ಹೌದು ಹಾಗಾದರೆ ತಿಳಿಯೋಣ ಕ್ಯಾರೆಟನ್ನು ತಿನ್ನುವುದರಿಂದ ಇನ್ನು ಯಾವೆಲ್ಲ ಬೇರೆ ನಾಮಗಳು ದೊರೆಯುತ್ತದೆ ಎಂದು.

ಕ್ಯಾರೆಟ್ ಅನ್ನು ತಿನ್ನುವುದರಿಂದ ಮೊದಲನೆಯದಾಗಿ ಜೀರ್ಣಕ್ರಿಯೆ ವೃದ್ಧಿಸುತ್ತದೆ ಹೌದು ಊಟದ ನಂತರ ಒಂದು ಕ್ಯಾರೆಟ್ ತಿನ್ನುತ್ತಿದ್ದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಅಂತ ಈ ಮೊದಲೇ ತಿಳಿಸಿದೆವು, ಹಾಗೆ ಕ್ಯಾರೆಟ್ ಅನ್ನು ತಿಂದರೆ ಕಣ್ಣು ದೃಷ್ಟಿ ಸಮಸ್ಯೆ ಇದ್ದರೆ ನಿವಾರಣೆಗೊಂಡು ಕಣ್ಣು ದೃಷ್ಟಿ ಚುರುಕುಗೊಳ್ಳುತ್ತದೆ. ಮಕ್ಕಳಿಗೆ ಕ್ಯಾರೆಟ್ ಅನ್ನು ಪ್ರತಿದಿನ ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.

ಕ್ಯಾರೆಟ್ ಅನ್ನು ಕೊಬ್ಬರಿ ಯಂತೆ ತುರಿದು ಅದರೊಂದಿಗೆ ಸಕ್ಕರೆಯನ್ನು ಬೆರೆಸಿ ಒಂದು ಬಾಕ್ಸ್ ನಲ್ಲಿ ಸ್ವಲ್ಪ ಸಮಯ ಶೇಖರಿಸಿ ಇಡಿ ನಂತರ ಅದಕ್ಕೆ ನೀರನ್ನು ಹಾಕಿ ಪಾನಕದ ರೀತಿ ಮಾಡಿ ಕುಡಿಯುವುದರಿಂದ ದೇಹಕ್ಕೆ ತಂಪು ಜೊತೆಗೆ ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ವೃದ್ಧಿಸುತ್ತದೆ ಹಾಗೆಯೇ ಸಾಕಷ್ಟು ವಿಟಮಿನ್ಸ್ ಮತ್ತು ಪ್ರೋಟೀನ್ಗಳು ಕೂಡ ದೇಹಕ್ಕೆ ದೊರೆಯುತ್ತದೆ.

ಕ್ಯಾರೆಟ್ ಬಗ್ಗೆ ಮತ್ತೊಂದು ಪ್ರಯೋಜನಕಾರಿ ಮಾಹಿತಿಯೇನು ಅಂದರೆ ಕ್ಯಾರೆಟ್ಗಿಂತ ಕ್ಯಾರೆಟಿನ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತದೆ, ಆದ್ದರಿಂದ ಮನೆಗೆ ಕ್ಯಾರೆಟನ್ನು ತಂದಾಗ ಅದರ ಸೊಪ್ಪನ್ನು ಬಿಸಾಡದೆ ಯಾವುದಾದರೂ ಖಾದ್ಯದ ರೂಪದಲ್ಲಿ ಸೇವಿಸಿದರೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ.

Leave a Comment

Your email address will not be published.