ಅಶ್ವತ ಮರ ಬರೀ ಪೂಜೆಗೆ ಮಾತ್ರವಲ್ಲ ಇದರಲ್ಲಿದೆ ಸಾವಿರ ಸಾವಿರ ಔಷಧಿ ಗುಣಗಳು ..

ಅಶ್ವತ್ಥ ಮರ ಕೇವಲ ಪೂಜೆ ಮಾಡುವುದಕ್ಕೆ ಮಾತ್ರವಲ್ಲದೆ ಸ್ನೇಹಿತರ ಹಿಂದಿನ ದಿನಗಳಿಂದಲೂ ಒಂದು ಪದ್ಧತಿ ಇದೆ ಅದೇನೆಂದರೆ ಅಶ್ವತ್ಥ ಮರ ದೇವರ ಸಮಾನ ಇದರ ಪೂಜೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ.ಹಾಗೂ ನಾವು ಕೇಳಿದಂತಹ ವರ ಸಿದ್ಧಿಸುತ್ತದೆ ಎಂದು ನಮ್ಮ ಪೂರ್ವಜರು ನಂಬುತ್ತಿದ್ದರು ಆದರೆ ಬರೀ ಪೂಜೆ ಮಾಡುವುದಕ್ಕಲ್ಲ ಆರೋಗ್ಯ ವೃದ್ಧಿಗಾಗಿ ಕೂಡ ಅಶ್ವತ್ಥ ಮರ ತುಂಬಾನೇ ಸಹಾಯಕವಾಗಿದೆ.

ಹಾಗಾದರೆ ಅಶ್ವತ ಮರದಿಂದ ಆಗುವಂತಹ ಆ ಪ್ರಯೋಜನಗಳಾವುದು, ಈಗ ತಿಳಿಯೋಣ ಅಶ್ವತ್ಥ ಮರವನ್ನು ಪೂಜಿಸುವುದರಿಂದ ಹಾಗೂ ಅಶ್ವತ್ಥ ಮರದ ಪ್ರತಿಯೊಂದು ಭಾಗದಿಂದಲೂ ಕೂಡ ಆಗುವಂತಹ ಪ್ರಯೋಜನಗಳನ್ನ. ಸ್ನೇಹಿತರ ಇಷ್ಟು ದಿನ ನೀವು ದೇವಸ್ಥಾನಗಳಿಗೆ ಹೋದಾಗ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಹಾಕಿ ಮಾತ್ರ ಬರುತ್ತಿದ್ದಿರಿ.

ಅದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಅಶ್ವತ್ಥ ಮರದ ಪ್ರತಿಯೊಂದು ಭಾಗದಿಂದಲೂ ಕೂಡ ಏನೆಲ್ಲ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಎಂದು, ಹೌದು ಅಶ್ವತ್ಥ ಮರದ ಎಲೆ ತೊಗಟೆ ಹಾಗೂ ಇದರ ಒಣಗಿದ ಕಲೆಯಿಂದಲೂ ಕೂಡ ಆರೋಗ್ಯಕರ ಪ್ರಯೋಜನಗಳು ಇವೆ ಅದೇನು ಅಂತ ತಿಳಿಸ್ತೀವಿ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ.

* ಅಸ್ತಮಾ ನಿವಾರಣೆ ..ಹೌದು ಅಶ್ವತ್ಥ ಮರದಲ್ಲಿ ಔಷಧೀಯ ಗುಣ ಇರುವ ಕಾರಣದಿಂದಾಗಿ ಈ ಎಲೆಯ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ, ಇನ್ನು ಚಿಕ್ಕ ಮಕ್ಕಳಲ್ಲಿಯೂ ಕೂಡ ಅಸ್ತಮಾ ಕಂಡು ಬಂದಲ್ಲಿ ಅವರಿಗೆ ಕೂಡ ಈ ಅಶ್ವತ್ಥ ಮರದ ಎಳೆಯ ಎಲೆಗಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ ಸ್ವಲ್ಪ ಬೆಲ್ಲ ಅಥವಾ ಜೇನು ತುಪ್ಪವನ್ನು ಸೇರಿಸಿ ಕೊಡಿ ಆಗ ನೋಡಿ ಅಸ್ತಮಾ ಬೇಗನೆ ನಿವಾರಣೆಯಾಗುತ್ತದೆ.

* ಹಲ್ಲು ನೋವು ನಿವಾರಿಸುತ್ತದೆ ..ಅಶ್ವತ್ಥ ಮರದ ತೊಗಟೆಯಲ್ಲಿ ಕೂಡ ಔಷಧೀಯ ಗುಣವಿದೆ, ಇದನ್ನು ತೆಗೆದುಕೊಂಡು ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದರಿಂದ ಹಲ್ಲುಗಳು ಬಲಗೊಳ್ಳುತ್ತವೆ ಹಾಗೂ ಹಲ್ಲಿನ ಮೇಲೆ ಇರುವಂತಹ ಹಳದಿ ಪದರ ಹೋಗಲಾಡಿಸುತ್ತದೆ ಜೊತೆಗೆ ಹಲ್ಲು ನೋವನ್ನು ನಿವಾರಿಸಲು ಇದು ಸಹಾಯಕಾರಿಯಾಗಿದೆ.

* ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ ..ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಮೂಗಿನಿಂದ ರಕ್ತಸ್ರಾವ ವಾಗುವುದನ್ನು ನೀವು ಕೇಳಿರುತ್ತೀರ ಆಗ ಈ ಅಶ್ವಥ ಮರದ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ಮೂಗಿಗೆ ಬಿಡುವುದರಿಂದ ರಕ್ತಸ್ರಾವ ಆಗುವುದು ನಿಲ್ಲುತ್ತದೆ.* ಕಾಮಾಲೆ ರೋಗ ನಿವಾರಿಸುತ್ತದೆ ..ಹೌದು ಈ ಎಲೆಯ ರಸವನ್ನು ಜಜ್ಜಿ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಕಾಮಾಲೆ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಪ್ರತಿದಿನ ನಿಯಮಿತವಾಗಿ ಕೊಡುವುದರಿಂದ ಕಾಮಾಲೆ ರೋಗ ದೂರವಾಗುತ್ತದೆ.

* ಜ್ವರ ಶೀತ ನಿವಾರಿಸುತ್ತದೆ ..ಈ ಮರದ ಎಳೆಯ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಬೇಯಿಸಿ ನಂತರ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಶೀತ ಕೆಮ್ಮು ಜ್ವರ ಕಡಿಮೆಯಾಗುತ್ತದೆ.* ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ …ಸ್ನೇಹಿತರ ಈ ಅಶ್ವತ್ಥ ಮರದ ಎಲೆಗಳನ್ನು ಯಾವುದಾದರೂ ಒಂದು ರೂಪದಲ್ಲಿ ಸೇವಿಸುವುದರಿಂದ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಗಳಿಸಬಹುದಾಗಿದ್ದು ಸಕ್ಕರೆ ಕಾಯಿಲೆ ಬರದೇ ಇರುವ ಹಾಗೆ ಇದು ಕಾಪಾಡುತ್ತದೆ.

* ಮಲಬದ್ಧತೆಗೆ ರಾಮಬಾಣ ..ಹೌದು ಮಲಬದ್ಧತೆ ನಿವಾರಣೆಗೆ ಈ ಅಶ್ವತ್ಥ ಮರದ ಎಲೆಗಳು ಸಾಕಷ್ಟು ಪ್ರಯೋಜನವಾಗಿತ್ತು ಒಣ ಎಲೆಗಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಅದಕ್ಕೆ ಜೀರಿಗೆಯನ್ನು ಬೆರೆಸಿ ಸ್ವಲ್ಪ ಬೆಲ್ಲ ಹಾಕಿ ಸೇವಿಸುತ್ತಾ ಬಂದಲ್ಲಿ ಮಲಬದ್ಧತೆ ನಿವಾರಣೆಯಾಗುತ್ತದೆ.* ಅತಿಸಾರ ಕಮ್ಮಿ ಮಾಡುತ್ತದೆ ..ಅಶ್ವತ ಮರದ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪಿನ ರಸವನ್ನು ಬೆರೆಸಿ ಜೊತೆಗೆ ಸಕ್ಕರೆ ಬೆರೆಸಿ ಜಗಿದು ರಸವನ್ನು ನುಂಗುವುದರಿಂದ ಅತಿಸಾರ ಕಡಿಮೆಯಾಗುತ್ತದೆ.

Leave a Comment

Your email address will not be published.