ಸಾವಿರದಲ್ಲಿ ಒಬ್ಬರಿಗೊ ಗೊತ್ತಿಲ್ಲ ಬ್ಲೇಡ್ ಮದ್ಯದಲ್ಲಿ ಆ ರೀತಿ ಯಾಕೆ ಇರುತ್ತೆ ಗೊತ್ತಾ…

ನಾವು ದಿನನಿತ್ಯ ಬಳಸುವಂತಹ ವಸ್ತುಗಳ ಬಗ್ಗೆ ನಾವು ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡೇ ಇರುವುದಿಲ್ಲ ಮತ್ತು ನಮ್ಮ ಸುತ್ತಮುತ್ತಲ ತಿಳಿದುಕೊಳ್ಳ ಬೇಕಾಗಿರುವಂತಹ ವಿಷಯಗಳು ಕೂಡ ಸಾಕಷ್ಟು ಇರುತ್ತದೆ.ಚಿಕ್ಕ ಚಿಕ್ಕ ವಿಷಯದಲ್ಲಿಯೂ ಕೂಡ ಅಥವಾ ಚಿಕ್ಕ ಚಿಕ್ಕ ವಸ್ತುಗಳಲ್ಲಿಯೂ ಕೂಡ ನಾವು ತಿಳಿದುಕೊಳ್ಳಬೇಕಿರುವುದು ಸಾಕಷ್ಟು ಇರುತ್ತದೆ.

ಆದರೆ ನಾವು ಅದರ ಬಗ್ಗೆ ಗಮನ ಹರಿಸುವುದಿಲ್ಲ ಹಾಗಾದರೆ ಬನ್ನಿ ನಾವು ದಿನನಿತ್ಯ ಬಳಸುವಂತಹ ಒಂದು ವಸ್ತುವಿನ ಬಗ್ಗೆ ನಿಮಗೆ ಇಂಟ್ರೆಸ್ಟಿಂಗ್ ವಿಷಯವೊಂದನ್ನು ತಿಳಿಸುತ್ತೇನೆ ತಪ್ಪದೇ ಮಾಹಿತಿಯನ್ನು ಓದಿ ಮತ್ತು ಇಂತಹ ಅನೇಕ ಇಂಟರೆಸ್ಟಿಂಗ್ ವಿಷಯಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಮತ್ತು ಶೇರ್ ಮಾಡಿ .

ಹತ್ತಾರು ಸ್ನೇಹಿತರು ನಾವು ದಿನನಿತ್ಯ ಯಾವುದಾದರೂ ಒಂದು ವಿಷಯಕ್ಕೆ ಅಥವಾ ಯಾವುದಾದರೂ ಒಂದು ಕೆಲಸಕ್ಕೆ ಬ್ಲೇಡ್ಗಳನ್ನು ಬಳಸುತ್ತೇವೆ .ಆದರೆ ಬ್ಲೇಡಿನ ಬಗ್ಗೆಯೂ ಕೂಡ ನಾವು ತಿಳಿದುಕೊಳ್ಳಬೇಕಿರುವುದು ಸ್ವಲ್ಪ ಇದೆ ಅದೇನು ಅಂತೀರಾ ನೀವು ಬಳಕೆ ಮಾಡುತ್ತಿರುವಂತಹ ಬ್ಲೇಡ್ ಗಳಲ್ಲಿ ಯಾಕೆ ಮಧ್ಯೆ ಗ್ಯಾಪ್ ಇದೆ ಅನ್ನೋದು ಯಾವತ್ತಾದರೂ ನೀವು ಯೋಚಿಸಿದ್ದೀರಾ ಈ ರೀತಿ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದೆಯೇ .

ಆ ರೀತಿ ಸಂಶಯ ನಿಮ್ಮಲ್ಲಿ ಮೂಡಿದ್ದರೆ ನಾವು ಈ ದಿನ ನಿಮಗೆ ಆ ಒಂದು ಪ್ರಶ್ನೆಗೆ ಕಾರಣವನ್ನು ತಿಳಿಸಿಕೊಡುತ್ತೇವೆ ಮತ್ತು ಬ್ಲೇಡಿನಲ್ಲಿ ಯಾಕೆ ಈ ಗ್ಯಾಪ್ ಇದೆ ಅಂತ ಹೇಳೋದಾದರೆ ೧೯೦೪ ರಲ್ಲಿ ಕಿಂಗ್ ಕಾಂಗ್ ಜಿಲೆಟ್ ಎಂಬುವವರು ಬ್ಲೇಡನ್ನು ತಯಾರಿ ಮಾಡಲು ಮುಂದಾಗುತ್ತಾರೆ ಮತ್ತು ಬ್ಲೇಡಿನ ಡಿಸೈನ್ನೊಂದಿಗೆ ತಮ್ಮ ಗೆಳೆಯನಿಗೆ ಈ ಒಂದು ಬ್ಲೇಡ್ ನ ಬಗ್ಗೆ ಹೇಳುತ್ತಾರೆ ನಂತರ ಈ ಬ್ಲೇಡ್ ಗಾಗಿ ಒಂದು ಹೆಸರನ್ನು ಕೂಡ ತಯಾರಿ ಮಾಡುತ್ತಾರೆ ಬ್ಲೇಡ್ನ ಮೇಲೆ ಇಪ್ಪತ್ತೈದು ವರ್ಷಗಳ ಪೇಟೆಂಟ್ ಕೂಡ ಪಡೆದುಕೊಳ್ಳುತ್ತಾರೆ .

ಬ್ಲೇಡ್ ತಯಾರಿಯಾಗಿ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರನ್ನು ಕೂಡ ತೆಗೆದುಕೊಳ್ಳುತ್ತದೆ ಮತ್ತು ಇದಾದ ನಂತರ ಸಾಕಷ್ಟು ಕಂಪನಿಗಳು ಶುರುವಾಗಿ ಇದೇ ರೀತಿಯ ಬ್ಲೇಡ್ಗಳನ್ನು ತಯಾರಿ ಮಾಡಲು ಶುರುವಾಗುತ್ತೆ ಯಾಕೆ ಅಂದರೆ ಮಾರುಕಟ್ಟೆಯಲ್ಲಿ ಕಿಂಗ್ ಕಾಂಗ್ ಜಿಲೆಟ್ ಅವರು ತಯಾರಿ ಮಾಡಿದಂತಹ ಬ್ಲೇಡ್ ಗಳ ಬೇಡಿಕೆ ಹೆಚ್ಚಾಗಿರುತ್ತಿತ್ತು ಆ ಕಾರಣದಿಂದಾಗಿ .

೨೫ ವರುಷಗಳ ಪೇಟೆಂಟ್ ಮುಗಿದ ನಂತರ ಹಲವಾರು ಕಂಪನಿಗಳು ಇದೇ ರೀತಿಯ ಬ್ಲೇಡ್ ಗಳನ್ನು ತಯಾರಿ ಮಾಡಲು ಮುಂದಾಗುತ್ತಾರೆ ಆಗ ಜಿಲೆಟ್ ಅವರು ಹೊಸದೊಂದು ಡಿಸೈನ್ನೊಂದಿಗೆ ಮತ್ತೆ ಬ್ಲೇಡನ್ನು ತಯಾರಿ ಮಾಡುತ್ತಾರೆ ಆಗ ಆ ಕಂಪೆನಿಯ ಒಂದು ಚಿಹ್ನೆ ಅಂತಾನೆ ಆ ಬ್ಲೇಡಿನ ನಡುವೆ ಇರುವಂತಹ ಗ್ಯಾಪ್ ತಿಳಿಸುತ್ತಿರುತ್ತದೆ ಮತ್ತು ಈ ಒಂದು ಕ್ಯಾಬ್ ಯಾಕೆ ಬೇಕು ಅಂತ ವೈಜ್ಞಾನಿಕವಾಗಿ ಚಿಂತಿಸುವುದೇ ರೇಸರ್ ಗೆ ಫಿಟ್ ಆಗಲು ಆ ಗ್ಯಾಪ್ ಬೇಕೇ ಬೇಕು .

ಬ್ಲೇಡುಗಳು ಸಾಕಷ್ಟು ತೆಳುವಾಗಿ ಇರುವ ಕಾರಣದಿಂದಾಗಿ ಅದನ್ನು ಗ್ಯಾಪ್ ಇಲ್ಲದೆ ತಯಾರಿ ಮಾಡಿದರೆ ಶೇವ್ ಮಾಡಿದರೆ , ಮುರಿದು ಹೋಗುವ ಚಾನ್ಸಸ್ ಹೆಚ್ಚಾಗಿರುತ್ತದೆ ಆ ಕಾರಣದಿಂದಾಗಿ ಬ್ಲೇಡ್ ಅನ್ನು ರೇಸರ್ ಗೆ ಫಿಟ್ ಮಾಡುವುದಕ್ಕೆ ಸುಲಭವಾಗಲಿ ಎಂದು ಬ್ಲೇಡಿನಲ್ಲಿ ಆ ಗ್ಯಾಪ್ ಅನ್ನು ನೀಡಲಾಗಿರುತ್ತದೆ .

ನೋಡಿದ್ರಲ್ಲಾ ಸ್ನೇಹಿತರೇ ಚಿಕ್ಕ ವಸ್ತುಗಳಲ್ಲಿಯೂ ಕೂಡ ಅದರ ಹಿಂದೆ ಎಷ್ಟು ದೊಡ್ಡ ಕಥೆ ಇರುತ್ತದೆ ಅಂತ ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭದಿನ ಧನ್ಯವಾದಗಳು .

Leave a Comment

Your email address will not be published.