ಕೆಮ್ಮು ಅಂತ ಚಿಂತಿಸುವ ಅಗತ್ಯವಿಲ್ಲ ನಿಂಬೆ ಹಣ್ಣಿನಿಂದ ಹೀಗೆ ಮಾಡಿ ಸಾಕು ..!

ಕೆಮ್ಮಿನ ಸಮಸ್ಯೆ ಕಾಡುತ್ತಾ ಇದ್ದರೆ ಚಿಂತೆ ಬೇಡ ನಿಂಬೆಹಣ್ಣಿನ ರಸದಿಂದ ಕೆಮ್ಮಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಹೌದು ಕೆಮ್ಮಿನ ಸಮಸ್ಯೆ ಗೆ ಮಾತ್ರೆ ಬೇಡವೇ ಬೇಡ ಇದೀಗ ನಿಂಬೆಹಣ್ಣಿನ ರಸದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ ಸಾಕು ಇದರಿಂದ ನಿಮ್ಮ ಕೆಮ್ಮಿನ ಸಮಸ್ಯೆ ಬೇಗ ಕಡಿಮೆಯಾಗುತ್ತದೆ ಕೆಮ್ಮು ಬಂದರೆ ಗಂಟಲು ನೋವು ಗಂಟಲಿನಲ್ಲಿ ಕಫ ಕಟ್ಟುವುದು ಇಂತಹ ಸಮಸ್ಯೆ ಖಂಡಿತವಾಗಿಯೂ ಉಂಟಾಗುತ್ತದೆ ಆದ್ದರಿಂದ ಗಂಟಲು ನೋವಿನ ಸಮಸ್ಯೆಯಿಂದ ಹಿಡಿದು ಕೆಮ್ಮಿನ ಸಮಸ್ಯೆ ಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ನಿಂಬೆಹಣ್ಣಿನ ರಸವನ್ನು ಈ ರೀತಿ ಬಳಸಿ.

ಮೊದಲನೆಯದಾಗಿ ನಿಂಬೆಹಣ್ಣಿನ ರಸವನ್ನು 1ಚಮಚ ತೆಗೆದುಕೊಂಡು ಒಂದು ಟೀ ಲೋಟದ ಗಾತ್ರದ ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿಕೊಳ್ಳಬೇಕು. ತುಂಬಿ ಬಿಸಿ ಇರುವ ನೀರಿಗೆ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಬಾರದು. ಬೆಚ್ಚಗಿನ ನೀರಿಗೆ ನಿಂಬೆ ಹಣ್ಣಿನ ರಸವನ್ನು ಮಿಶ್ರಮಾಡಿ, ಪ್ರತಿ ದಿನ ಎರಡು ಬಾರಿ ಕುಡಿಯಬೇಕು ಇದರಿಂದ ಕೆಮ್ಮು ಬೇಗನೆ ನಿವಾರಣೆಯಾಗುತ್ತದೆ ಜೊತೆಗೆ ನಿಂಬೆ ಹಣ್ಣಿನ ರಸವನ್ನು ಸೇವನೆ ಮಾಡುವುದರಿಂದ ಇದರಲ್ಲಿರುವ ವಿಟಮಿನ್ ಸಿ ಜೀವಸತ್ವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ನಂತರ ಎರಡನೆಯದಾಗಿ ಜೇಷ್ಠಮಧು ಚೂರ್ಣವನ್ನು ತೆಗೆದುಕೊಂಡು ನಿಂಬೆಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಬೇಕು ನಂತರ ಈ ಚೂರ್ಣವನ್ನು ಸೇವನೆ ಮಾಡುವುದರಿಂದ ಕೂಡ ಗಂಟಲು ನೋವಿನ ಸಮಸ್ಯೆಯಿಂದ ಹಿಡಿದು ಕೆಮ್ಮು ಬೇಗ ನಿವಾರಣೆ ಆಗುತ್ತದೆ. ಇದೊಂದು ಉತ್ತಮ ಪರಿಹಾರ ಆಗಿರುತ್ತದೆ ಕೆಮ್ಮು ಬೇಗ ನಿವಾರಣೆ ಆಗಬೇಕೆಂದರೆ ಈ ಪರಿಹಾರವನ್ನು ತಪ್ಪದೆ ಪಾಲಿಸಿ.

ಹೊನಗಾನೆ ಸೊಪ್ಪಿನ ರಸದೊಂದಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿಕೊಳ್ಳಬೇಕು ನಂತರ ಈ 2ಮಿಶ್ರಣವನ್ನು ಆಡುಸೋಗೆ ರಸದೊಂದಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು ಇದರಿಂದ ಕೆಮ್ಮು ಬೇಗ ಪರಿಹಾರ ಆಗುತ್ತದೆ. ಸಾಮಾನ್ಯವಾಗಿ ಧೂಮಪಾನ ಚಟಕ್ಕೆ ವ್ಯಸನರಾಗಿ ಇರುವವರಿಗೆ ಕೆಮ್ಮಿನ ಸಮಸ್ಯೆ ಇರುತ್ತದೆ.

ಅಂತಹವರಲ್ಲಿ ನರದೌರ್ಬಲ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಕೂಡ ಕಾಡುತ್ತಾ ಇರುತ್ತದೆ ಇನ್ನೂ ಪೂರ್ಣ ಸಸ್ಯಹಾರಿಗಳಿಗೂ ಕೂಡ ಈ ಒಂದು ಸಮಸ್ಯೆ ಕಾಡುತ್ತಾ ಇರುತ್ತದೆ. ಅಂಥವರು ಅಶ್ವಗಂಧದ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಮಿಶ್ರಣ ಮಾಡಿ ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳುತ್ತಾ ಎರಡೂ ತಿಂಗಳಿನ ವರೆಗೂ ಸತತವಾಗಿ. ಈ ಪರಿಹಾರವನ್ನು ಪಾಲಿಸಬೇಕು ಇದರಿಂದ ಕೂಡ ನರ ದೌರ್ಬಲ್ಯ ಸಮಸ್ಯೆ ಮತ್ತು ಧೂಮಪಾನದಿಂದ ಉಂಟಾಗುವಂತಹ ಕೆಮ್ಮಿನ ಸಮಸ್ಯೆ ಪರಿಹಾರವಾಗುತ್ತದೆ.

ಈ ರೀತಿಯಾಗಿ ಕೆಲವೊಂದು ಮನೆಮದ್ದಿನಿಂದಲೇ ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿ ಮಾಡಿಕೊಳ್ಳಬಹುದು. ಫಲಿತಾಂಶ ದೊರೆಯುವುದು ಸ್ವಲ್ಪ ತಡವೇ ಆದರೂ ಪರಿಣಾಮಕಾರಿಯಾಗಿ ಫಲಿತಾಂಶವನ್ನು ನೀಡುತ್ತದೆ ನೀವು ತೆಗೆದುಕೊಳ್ಳುವ ಮಾತ್ರೆಗಳು ಒಂದೆರಡು ದಿನಗಳು ಬಿಟ್ಟು ಮತ್ತೆ ಸಮಸ್ಯೆಗಳು ಉಂಟಾಗಬಹುದು ಆದರೆ ಆಯುರ್ವೇದ ಅಥವಾ ಮನೆಮದ್ದನ್ನು ತಪ್ಪದೆ ಪಾಲಿಸಿಕೊಂಡು ಬಂದರೆ ಸಮಸ್ಯೆಯನ್ನು ಬೇಗ ಪರಿಹಾರ ಮಾಡುತ್ತದೆ ಉತ್ತಮ ಆರೋಗ್ಯವನ್ನು ಕೂಡ ಜತೆಗೆ ನೀಡುತ್ತದೆ.

Leave a Comment

Your email address will not be published.