ಈ ಎಲೆಯನ್ನ ಬಳಸಿದ್ರೆ ಸಾಕು ಯಾವ ಡಾಕ್ಟರ್ ಹತ್ರಾನೂ ಹೋಗೋ ಅವಶ್ಯಕತೆ ಇಲ್ಲ … ನಮ್ಮ ದೇಹವನ್ನ ರಕ್ಷಣೆ ಮಾಡುವ ಸಂಜೀವಿನಿ ಇದು

ಈ ಎಲೆಯನ್ನು ಬಳಸಿದರೆ ಸಾಕು ನೀವು ಆಸ್ಪತ್ರೆಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ, ಹೌದು ಈ ಎಲೆಯನ್ನು ಬಳಸಿ ಕಷಾಯದ ರೂಪದಲ್ಲಿ ಕುಡಿಯುವುದರಿಂದ, ನಮ್ಮ ಆರೋಗ್ಯ ವೃದ್ಧಿಸುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಆ ಎಲೆ ಯಾವುದು ಅದರ ಮಹತ್ವವೇನು ಅದನ್ನು ಹೇಗೆ ಯಾವ ರೂಪದಲ್ಲಿ ಸೇವಿಸಬೇಕು ಅನ್ನುವುದನ್ನು ತಿಳಿಯೋಣ,ಸ್ನೇಹಿತರೇ ನಮ್ಮ ಭಾರತ ದೇಶದ ನೆಲದಲ್ಲಿ ಇರುವಂತಹ ಔಷಧೀಯ ಗುಣವುಳ್ಳ ಮರಗಿಡಗಳ ಬಗ್ಗೆ ತಿಳಿಯುವುದೇ ಒಂದು ಖುಷಿಯಾದ ವಿಚಾರ ಅಲ್ವಾ, ಅಂತಹದ್ದೊಂದು ಪ್ರಯತ್ನ ನಾವು ಈ ಮಾಹಿತಿಯಲ್ಲಿ ಮಾಡುತ್ತಿದ್ದೇವೆ, ನಿಮಗೆ ಮಾಹಿತಿ ಉಪಯುಕ್ತವಾದಲ್ಲಿ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಲ್ಲಿಯೂ ಕೂಡ ಈ ಲೇಖನವನ್ನು ಶೇರ್ ಮಾಡಿ.

ಈ ಕಲೆಯ ಬಗ್ಗೆ ತಿಳಿಯುವುದಕ್ಕಿಂತ ಮೊದಲು ರಾಮಾಯಣದ ಒಂದು ತುಣುಕಿನ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳೋಣ ಅದೇನೆಂದರೆ ಒಮ್ಮೆ ವಿಶ್ವಾಮಿತ್ರರು ಸಹೋದರರಾದ ರಾಮ ಮತ್ತು ಲಕ್ಷ್ಮಣರಿಗೆ ಒಂದು ಮಹತ್ವವಾದ ಮಂತ್ರವನ್ನು ಹೇಳಿ ಕೊಡುವುದಕ್ಕಾಗಿ ಒಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಾರೆ, ಆಗ ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಆ ಮಂತ್ರವನ್ನು ಹೇಳಿಕೊಡುವಾಗ ಅಲ್ಲೇ ಇದ್ದ ಎರಡು ಗಿಡಗಳು ವಿಶ್ವಾಮಿತ್ರರ ಈ ಮಂತ್ರವನ್ನು ಕೇಳಿಸಿಕೊಳ್ಳುತ್ತವೆಯಂತೆ.

ವಿಶ್ವಾಮಿತ್ರರು ತಿಳಿಸಿದಂತಹ ಆ ಮಂತ್ರವನ್ನು ಕೇಳಿಸಿಕೊಂಡ ವಲ್ಲ ಎಂದು ಆ ಎರಡು ಗಿಡಗಳು ವಿಶ್ವಾಮಿತ್ರರ ಬಳಿ ವಿಚಾರವನ್ನು ತಿಳಿಸಿ ಕ್ಷಮೆಯನ್ನುಕೋರುತ್ತವೆಯಂತೆ, ಆಗ ವಿಶ್ವಾಮಿತ್ರರು ಆ ಎರಡು ಗಿಡಗಳಿಗೆ ನೀವು ಈ ಪ್ರಪಂಚದಲ್ಲಿ ಎಲ್ಲಾ ಕಡೆಯಲ್ಲಿಯೂ ಬೆಳೆದು ಮಾನವರಿಗೆ ಬಲಗೊಳ್ಳುವ ಔಷಧೀಯ ರೂಪವಲ್ಲ ಗಿಡಗಳಾಗಿ ಎಂದು ವರವನ್ನು ನೀಡುತ್ತಾನಂತೆ ವಿಶ್ವಾಮಿತ್ರರು.

ಆ ಗಿಡಗಳೇ ಬಲ ಮತ್ತು ಅತೀ ಬಲ ಎಂಬ ಗಿಡಗಳು, ಈ ಗಿಡಗಳು ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಎಲ್ಲೆಲ್ಲಿಯೂ ಕಂಡು ಬರುತ್ತವೆ ಆದರೆ ಮಲೆನಾಡಿನಲ್ಲಿ ಅಲ್ಲಲ್ಲಿ ಕಂಡುಬರುವಂತಹ, ಈ ಗಿಡಗಳನ್ನು ಜನರು ಕಳೆ ಎಂದು ಕಿತ್ತು ಹಾಕುತ್ತಾರೆ ಆದರೆ ಇದರ ಔಷಧೀಯ ಗುಣ ತಿಳಿದರೆ ಯಾರಿಗಾದರೂ ಅಚ್ಚರಿಯಾಗುವುದು ನಿಜ.

ಮೊದಲನೆಯದಾಗಿ ಈ ಅತಿ ಬರದ ಎಲೆಗಳು ನೋಡುವುದಕ್ಕೆ ಹೃದಯಾಕಾರದಲ್ಲಿ ಇರುತ್ತವೆ ಕೇವಲ ಈ ಗಿಡದ ಎಲೆಗಳಲ್ಲಿ ಮಾತ್ರವಲ್ಲದೇ ಪ್ರತಿಯೊಂದು ಅಂಗುಲಾಂಗುಲದಲ್ಲಿಯೂ ಔಷಧೀಯ ಗುಣ ಇರುವುದನ್ನು ಕಾಣಬಹುದು, ಹಾಗಾದರೆ ತಿಳಿಯೋಣ ಬನ್ನಿ ಈ ಎಲೆಯನ್ನು ಹೇಗೆ ಬಳಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದನ್ನು.

ಮೂತ್ರಪಿಂಡದಲ್ಲಿ ಕಲ್ಲಿದ್ದರೆ ಈ ಎಲೆಯನ್ನು ನೀರಿನಲ್ಲಿ ನೆನೆಸಿ ನಂತರ ಆ ನೀರನ್ನು ಕುದಿಸಿ ಕುಡಿಯುವುದರಿಂದ ಮೂತ್ರ ಪಿಂಡದಕಲ್ಲು ಕರಗಿ ಮೂತ್ರಪಿಂಡದನಾಳಗಳಿಂದ ಆಚೆ ಹೋಗುತ್ತವೆ, ಇನ್ನು ಈ ಎಲೆಯಲ್ಲಿ ಕಷಾಯವನ್ನು ಮಾಡಿ ಪ್ರತಿ ದಿನ ಎರಡು ಚಮಚದಂತೆ ಎರಡು ಬಾರಿ ಮಕ್ಕಳಿಗೆ ಕುಡಿಸುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುವಿನ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಎಲೆಯ ಕಷಾಯವನ್ನು ಸೇವಿಸುವುದರಿಂದ ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿವಾರಣೆಗೊಂಡು ಬ್ಲಾಕೇಜ್ ನಂತಹ ಸಮಸ್ಯೆಗಳು ಕೂಡ ನಿವಾರಿಸಲು ಈ ಅತಿಬಲದ ಎಲೆ ತುಂಬಾನೇ ಸಹಾಯಕಾರಿಯಾಗಿದೆ, ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಕೈಯೆಣ್ಣೆ ಅಥವಾ ಹರಳೆಣ್ಣೆಯನ್ನು ಬಳಸಿ ಮಸಾಜ್ ಮಾಡಿಕೊಂಡು ನಂತರ ಈ ಎಲೆಯ ಸಹಾಯದಿಂದ ಪಟ್ಟು ಹಾಕಿಕೊಳ್ಳುವುದರಿಂದ ನೋವು ಬೇಗನೆ ನಿವಾರಣೆಯಾಗುತ್ತದೆ.

ಇನ್ನು ನಾಯಿ ಕಚ್ಚಿದಂತಹ ನಂಜು ಏರಬಾರದು ಅಂದರೆ, ಈ ಎಲೆಯ ರಸವನ್ನು ತೆಗೆದು ನಾಯಿ ಹಚ್ಚಿದಂತಹ ಜಾಗಕ್ಕೆ ಹಚ್ಚಿ ಒಂದು ಬಟ್ಟೆಯಿಂದ ಆ ಭಾಗವನ್ನು ಕಟ್ಟಿದರೆ ನಂಜು ಏರುವುದಿಲ್ಲ, ರಕ್ತಸ್ರಾವ ಕೂಡ ಕಡಿಮೆಯಾಗುತ್ತದೆ. ಈ ಎಲೆಯ ಮತ್ತೊಂದು ಮಹತ್ವಕರ ಉಪಯೋಗವೇನು ಅಂದರೆ ೫೦ಗ್ರಾಂ ಅತಿಬಲದ ಬೀಜವನ್ನು ಪುಡಿ ಮಾಡಿಕೊಂಡು ನಂತರ ಅದಕ್ಕೆ ಶತಾವರಿ ಬೀಜಗಳನ್ನು ಬೆರೆಸಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಬೆರೆಸಿ ಉಂಡೆ ಕಟ್ಟಿ ಇಟ್ಟುಕೊಳ್ಳಬೇಕು ನಂತರ ಪ್ರತಿದಿನ ಒಂದು ಗ್ಲಾಸ್ ಹಾಲಿನೊಂದಿಗೆ ಒಂದು ಉಂಡೆಯನ್ನು ಹಾಕಿ ಹಾಲನ್ನು ಸೇವಿಸುವುದರಿಂದ ಪುರುಷತ್ವಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ.

Leave a Comment

Your email address will not be published.