ಹೊಸದಾಗಿ ವಿಗ್ರಹ ತಂದಿದ್ದೀರಾ ಹಾಗಾದರೆ ಪೂಜೆ ಮಾಡುವ ಮೊದಲು ಈ ನಿಯಮಗಳನ್ನು ಪಾಲಿಸಿ..! ಇಲ್ಲ ಅಂದ್ರೆ ದಟ್ಟ ದರಿದ್ರ ನಿಮ್ಮನ್ನ ಸುತ್ತಿಕೊಳ್ಳುತ್ತೆ ..!

ಸಾಮಾನ್ಯವಾಗಿ ಮನೆಯಲ್ಲಿ ದೇವರ ಮನೆಯನ್ನು ವಿಶೇಷವಾಗಿ ಕಟ್ಟಿಸಲಾಗಿರುತ್ತದೆ, ಅದೇ ರೀತಿ ದೇವರ ಮನೆಯನ್ನು ಪ್ರತಿ ದಿವಸ ಶುಭ್ರ ಮಾಡಬೇಕಾಗುತ್ತದೆ, ಹಾಗೂ ಪವಿತ್ರವಾದ ಈ ಸ್ಥಳವನ್ನು ಪವಿತ್ರವಾಗಿಯೆ ಇಟ್ಟುಕೊಳ್ಳಬೇಕು. ಮಡಿ ಮೈಲಿಗೆಯನ್ನು ಕಾಪಾಡಬೇಕು ಸ್ನಾನ ಮಾಡದೆ ದೇವರ ಕೋಣೆಗೆ ಹೋಗುವುದು ಅಥವಾ ಮಾಂಸಾಹಾರ ಪದಾರ್ಥಗಳನ್ನು ಸೇವಿಸಿ, ಇನ್ನೂ ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ದೇವರ ಕೋಣೆಗೆ,

ಹೋಗುವುದು ಇಂತಹ ಎಲ್ಲ ಕೆಲಸವನ್ನು ಮಾಡಬಾರದು. ಅದೇ ರೀತಿ ಹೊಸ ವಿಗ್ರಹಗಳನ್ನ ಮನೆಗೆ ತೆಗೆದುಕೊಂಡು ಬಂದಾಗ ಅಥವಾ ಹೊಸ ವಿಗ್ರಹವನ್ನು ಕೊಂಡುಕೊಳ್ಳುವಾಗ ಪಾಲಿಸಬೇಕಾಗಿರುವ ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಮೊದಲನೆಯದಾಗಿ ವಿಗ್ರಹಗಳನ್ನ ಕೊಂಡುಕೊಳ್ಳುವಾಗ ಆ ಮನೆಯ ಯಜಮಾನನ ಮುಷ್ಟಿಯೊಳಗೆ ಮುಚ್ಚಬೇಕು ಅಷ್ಟು ಗಾತ್ರದ ವಿಗ್ರಹವನ್ನು ಮನೆಗೆ ತರಬೇಕು. ಇದಕ್ಕಿಂತ ದೊಡ್ಡ ವಿಗ್ರಹವನ್ನು ನೀವು ಬಹಳ ಸುಂದರವಾಗಿದೆ ಎಂದು ಮನೆಗೆ ತಂದಿಟ್ಟು ಅದನ್ನು ಪೂಜಿಸುವುದಾದರೆ, ಅದಕ್ಕೆ ವಿಶೇಷವಾಗಿ ಪ್ರತಿದಿವಸ ಪೂಜೆಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಪ್ರತಿ ದಿವಸ ಆ ವಿಗ್ರಹಕ್ಕೆ ನೈವೇದ್ಯ ಅನ್ನೂ ಸಮರ್ಪಿಸಿ ಪೂಜೆಯನ್ನೂ ಮಾಡಬೇಕಾಗುತ್ತದೆ.

ಮನೆಗೆ ವಿಗ್ರಹವನ್ನು ತರುವಾಗ ಪಂಚಲೋಹದ ವಿಗ್ರಹವನ್ನು ತಂದು ಮನೆಯಲ್ಲಿ ಇಟ್ಟು ಪೂಜಿಸುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ಇದರ ಜೊತೆಗೆ ನಿಮ್ಮ ಶಕ್ತಿಯನುಸಾರವಾಗಿ ಬೆಳ್ಳಿಯ ವಿಗ್ರಹವನ್ನು ಕೂಡ ಮನೆಗೆ ತಂದಿಟ್ಟು ಪೂಜಿಸಬಹುದು, ಇದೂ ಕೂಡ ಬಹಳ ಶ್ರೇಷ್ಠವಾಗಿ ಇರುತ್ತದೆ. ಪಂಚಲೋಹದ ವಿಗ್ರಹವನ್ನು ಮನೆಯಲ್ಲಿ ಇಟ್ಟು ಕುದಿಸುವುದರಿಂದ ಕೂಡ ಒಳ್ಳೆಯದು.

ಮನೆಗೆ ವಿಗ್ರಹವನ್ನು ತಂದಾಗ ಇನ್ನೂ ಕೆಲವರು ಮನೆಗೆ ದೇವರ ಫೋಟೋವನ್ನು ತರುತ್ತಾರೆ ಆಗ ಇಂತಹ ಪರಿಹಾರಗಳನ್ನ ಪಾಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ವಿಗ್ರಹಗಳನ್ನು ಮನೆಗೆ ತಂದಾಗ, ತಪ್ಪದೆ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಮೊದಲು ವಿಗ್ರಹವನ್ನು ತಂದಾಗ ಅದನ್ನು ಬೆಳಗಿನ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ನೀರಿನಿಂದ ಅರ್ಚನೆ ಮಾಡಬೇಕು ಮೊದಲು ಗೋಮೂತ್ರದಿಂದ ನಂತರ ಗಂಗಾಜಲದಿಂದ ನಂತರ ಪುಣ್ಯ ನೀರಿನಿಂದ ವಿಗ್ರಹಕ್ಕೆ ಅರ್ಚನೆ ಅನ್ನು ಮಾಡಬೇಕು.

ಆ ಇದೀಗ ಅರ್ಚನೆ ಮಾಡಿದ ನಂತರ ನಿಮ್ಮ ಮನೆಯ ಬಳಿ ದೇವಾಲಯಗಳಿದ್ದರೆ ಅಲ್ಲಿಗೆ ಹೋಗಿ ಈ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿಕೊಡಿ ಎಂದರೆ ಮಾಡಿಕೊಡುತ್ತಾರೆ ನಂತರ ಆ ನೀವು ಆ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಿಸಬಹುದು ಇದರಿಂದ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ನಂತರ ಪ್ರಾಣಪ್ರತಿಷ್ಠಾಪನೆ ಆದ ಮೇಲೆ ಮನೆಗೆ ತಂದು ಅದನ್ನು ದೇವರ ಕೋಣೆಯಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಇರಿಸಿ ಪ್ರತಿ ದಿವಸ ಪೂಜೆ ಸಲ್ಲಿಸುತ್ತ ಬರಬೇಕು.

ಈ ರೀತಿ ಹೊಸದಾಗಿ ವಿಗ್ರಹಗಳನ್ನು ಮನೆಗೆ ತಂದಾಗ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಇದರಿಂದ ಮರೆಗೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಹಾಗೂ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ ನಂತರ ದೇವರ ಆರಾಧನೆ ಮಾಡುತ್ತಾ ಬರುವುದರಿಂದ ಇದರಿಂದ ಮನೆ ಯಲ್ಲಿ ಇರುವ ಕೆಟ್ಟ ಶಕ್ತಿಯ ನಾಶವಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ಭಾವನೆ ಹೆಚ್ಚುತ್ತದೆ ಮನೆಯಲ್ಲಿ ಆರೋಗ್ಯ ಸಿರಿ ಸಂಪತ್ತು ವೃದ್ಧಿಸುತ್ತದೆ. ಈ ಕಾರಣಕ್ಕಾಗಿಯೇ ದೇವರಿಗೆ ಮೊದಲು ಪ್ರಾಣ ಪ್ರತಿಷ್ಠಾಪನೆ ಮಾಡಿ ನಂತರ ದೇವರ ಆರಾಧನೆ ಮಾಡುತ್ತ ಬರುವುದು ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

Leave a Comment

Your email address will not be published.