ಮನಸ್ಸಿಗೆ ಬಂದ ಹಾಗೆ ಮನೆಯಲ್ಲಿ ದೀಪ ಹಚ್ಚಬೇಡಿ ..! ಮನೆಯಲ್ಲಿ ಇಷ್ಟು ದೀಪ ಹಚ್ಚಿದ್ರೆ ಮಾತ್ರ ನಿಮಗೆ ಒಳ್ಳೇದು ಆಗುತ್ತೆ ..!

ಮನೆಯಲ್ಲಿ ದೇವರ ಆರಾಧನೆ ಮಾಡುವಾಗ ತಪ್ಪದೆ ಮನೆಯಲ್ಲಿ ದೀಪವನ್ನು ಆರಾಧಿಸುತ್ತವೆ ದೀಪವನ್ನು ಬೆಳಗುತ್ತಾರೆ. ದೀಪಂ ಪರಂ ಜ್ಯೋತಿ ಎಂಬ ಮಾತನ್ನು ಕೂಡಾ ಕೇಳಿರುತ್ತೇವೆ ದೀಪಾರಾಧನೆಯನ್ನು ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯು ನಾಶವಾಗುತ್ತದೆ, ಆ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಮನೆಗೆ ಸಕಾರಾತ್ಮಕ ಶಕ್ತಿಯು ಪಸರಿಸುತ್ತದೆ ಹಾಗಾದರೆ ಮನೆಯಲ್ಲಿ ಎಷ್ಟು ಸಂಖ್ಯೆಯಲ್ಲಿ ದೀಪವನ್ನು ಹಚ್ಚಬೇಕು .

ಯಾವ ಸಮಯದಲ್ಲಿ ಹಚ್ಚಿದರೆ ಒಳ್ಳೆಯದು ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ನಮ್ಮ ಸಂಪ್ರದಾಯದಲ್ಲಿ ದೇವರ ಆರಾಧನೆಗೆ ಯಂತಹ ಪ್ರಾಮುಖ್ಯತೆಯಿದೆ ದೇವರ ಆರಾಧನೆಯಲ್ಲಿ ದೀಪ ಬೆಳಗುವುದಕ್ಕೂ ಕೂಡ ಅಂತಹದ್ದೆ ಒಂದು ಪ್ರಮುಖ ಸ್ಥಾನವಿದೆ ದೀಪಾರಾಧನೆಗೆ.

ಎಷ್ಟೋ ಜನರಿಗೆ ದೀಪ ಹಚ್ಚುವ ಸಮಯ ಯಾವುದಿರಬೇಕು ಎಂಬುದೇ ತಿಳಿದಿರುವುದಿಲ್ಲಾ. ಹೌದು ಮನೆಯಲ್ಲಿ ಯಾವತ್ತಿಗೂ ಎರಡು ದೀಪವನ್ನು ಹಚ್ಚಬೇಕು ಹೇಗೆ ವ್ಯಕ್ತಿಗೆ ತನ್ನ ಜೊತೆಗಾರನಾಗಿ ಒಬ್ಬರಿರಬೇಕು ಹಾಗೂ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಬ್ಬರಿರಬೇಕು ಅದೇ ರೀತಿ ಮನೆಯಲ್ಲಿ ಎರಡು ಸಂಖ್ಯೆಯಲ್ಲಿ ದೀಪವನ್ನು ಹಚ್ಚಬೇಕು ಎರಡೂ ದೀಪವನ್ನು ಮನೆಯಲ್ಲಿ ಬೆಳಗುವುದರಿಂದ ಅದರ ಸಮತೋಲನದಿಂದಾಗಿ ಮನೆಯಲ್ಲಿಯೂ ಸಹ ಎಲ್ಲವೂ ಸಮಾನವಾಗಿರುತ್ತದೆ ಆರೋಗ್ಯವಿರಲಿ ಸಿರಿಸಂಪತ್ತು ಇವೆಲ್ಲವೂ ವೃದ್ಧಿಸುತ್ತದೆ.

ಮನೆಯಲ್ಲಿ ಎರಡು ಸಂಖ್ಯೆಯ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಶ್ರೇಷ್ಠ ಎಂದು ಶಾಸ್ತ್ರಗಳು ತಿಳಿಸುತ್ತವೆ. ಕೆಲವರಂತೂ ಹೆಚ್ಚು ಜಾಗವಿದೆ ಎಂದು ದೊಡ್ಡದಾದ ದೇವರ ಕೋಣೆಯನ್ನು ಕಟ್ಟಿಸಿರುತ್ತಾರೆ. ಇನ್ನೂ ಅದೇ ರೀತಿಯಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಟ್ಟು ಪೂಜಿಸುತ್ತ ಇರುತ್ತಾರೆ, ಇರಲಿ ಎಂದು ದೊಡ್ಡ ದೀಪಾಲೆ ಕಂಬಗಳನ್ನು ಇರಿಸಿ ಪೂಜೆಯನ್ನು ಸಲ್ಲಿಸುತ್ತಾರೆ.

ಆದರೆ ಮನೆಯಲ್ಲಿ ಇರುವ ದೇವರ ಕೋಣೆಯಲ್ಲಿ ಮೂರು ಇಂಚಿಗಿಂತ ದೊಡ್ಡದಾದ ದೀಪವನ್ನು ಹಚ್ಚುವಂತಿಲ್ಲ ಎರಡು ಇಂಚು ಅಥವಾ ಮೂರು ಇಂಚಿನ ದೀಪವನ್ನು ಮನೆಯಲ್ಲಿ ಬೆಳಗುವುದರಿಂದ, ಅದು ಶ್ರೇಷ್ಠ ಎಂದು ಹೇಳಲಾಗಿದೆ. ಅದಕ್ಕಿಂತ ದೊಡ್ಡದಾದ ದೀಪಾಲೆಕಂಬಗಳನ್ನು ಇರಿಸಿ ದೀಪವನ್ನು ಉರಿಸುವುದರಿಂದ, ಅದು ಮನೆಗೆ ಶ್ರೇಷ್ಠವಲ್ಲ ಅಂತ ಕೂಡ ಹೇಳಲಾಗುತ್ತದೆ.

ಯಾವ ಸಮಯದಲ್ಲಿ ಮನೆಯಲ್ಲಿ ದೀಪಾರಾಧನೆ ಮಾಡಬೇಕು ಬೆಳಗಿನ ಬ್ರಹ್ಮಮಹೂರ್ತ ಪ್ರಶಸ್ತವಾದ ಸಮಯವಾಗಿರುತ್ತದೆ ದೇವರ ಆರಾಧನೆ ಮಾಡುವುದಕ್ಕೆ ದೇವರಿಗೆ ದೀಪ ಹಚ್ಚುವುದಕ್ಕಾಗಿ. ಇನ್ನು ಸಂಜೆಯ ಗೋಧೂಳಿ ಸಮಯ ಉತ್ತಮವಾಗಿ ಇರುತ್ತದೆ ದೀಪಾರಾಧನೆ ಮಾಡುವುದಕ್ಕಾಗಿ. ಆದ್ದರಿಂದ ಮನೆಯಲ್ಲಿ ಈ ಸಮಯದಲ್ಲಿ ದೀಪಾರಾಧನೆ ಮಾಡುವುದರಿಂದ, ಮನೆಗೆ ಶ್ರೇಷ್ಠ ಮನೆಯ ಶ್ರೇಯಾಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ.

ದೀಪಾರಾಧನೆಗೆ ಶ್ರೇಷ್ಠವಾದ ಎಣ್ಣೆ ಅಂದರೆ ಅದು ಎಳ್ಳೆಣ್ಣೆ ಆಗಿರುತ್ತದೆ ಯಾಕೆ ಅಂದರೆ ಈ ಎಳ್ಳಿನಿಂದ ಮಾಡಿದಂತಹ ಎಣ್ಣೆ ಎಳ್ಳು ಅಂದರೆ ಇದು ದೇವತಾ ಪ್ರಿಯವಾಗಿರುತ್ತದೆ. ಆದ್ದರಿಂದ ದೀಪಾರಾಧನೆಯಲ್ಲಿ ಎಳ್ಳೆಣ್ಣೆಯನ್ನು ಬಳಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಯಾವ ದೀಪವನ್ನು ಆರಿಸಬೇಕು ಅಂದರೆ ಯಾವ ಲೋಹದಿಂದ ಮಾಡಿದ ದೀಪವನ್ನು ಇರಿಸಿ ಪೂಜಿಸಿದರೆ ಒಳ್ಳೆಯದು ಎಂಬ ಸಂಶಯವು ಕೂಡ ಕೆಲವರಿಗಿರುತ್ತದೆ ಶ್ರೇಷ್ಠ ಎಂದರೆ ಬೆಳ್ಳಿದೀಪ ಅದಕ್ಕೂ ಶ್ರೇಷ್ಠ ಎಂದರೆ ,

ಪಂಚಲೋಹದಿಂದ ಮಾಡಿದಂತಹ ದೀಪದಿಂದ ಮನೇಲಿ ದೀಪಾರಾಧನೆ ಮಾಡುವುದರಿಂದ ಅದು ಕೂಡ ಶ್ರೇಷ್ಠ ಎಂದು ಹೇಳಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ದೇವರ ಪೂಜೆಯಲ್ಲಿ ದೀಪಾರಾಧನೆಗೆ ವಿಶೇಷವಾದ ಸ್ಥಾನವಿದೆ ದೀಪವನ್ನು ಹಚ್ಚುವಾಗ ಕಡ್ಡಿಯಿಂದ ಹಚ್ಚಬಾರದು ಊದಿನಕಡ್ಡಿ ಗೆ ಅಥವಾ ಮತ್ತೊಂದು ದೀಪದ ಸಹಾಯದಿಂದ ದೀಪವನ್ನು ಬೆಳೆಸಬೇಕಾಗುತ್ತದೆ. ದೀಪಾರಾಧನೆ ಮಾಡುವಾಗ ದೀಪವನ್ನ ಜೋರಾಗಿ ಉರಿಯುವುದಕ್ಕೆ ಬಿಡಬಾರದು ದೀಪವನ್ನು ಮಧ್ಯಂತರ ಉರಿಯಲ್ಲಿ ಮನೆಯಲ್ಲಿ ಉರಿಸಬೇಕು ಇದಿಷ್ಟು ದೀಪಕ್ಕೆ ದೀಪಾರಧನೆಗೆ ಸಂಬಂಧಿಸಿದಂತಹ ಕೆಲವು ವಿಚಾರಗಳು ಶುಭದಿನ ಧನ್ಯವಾದ.

Leave a Comment

Your email address will not be published.