ಗುರುವಾರದ ಸಂದರ್ಭದಲ್ಲಿ ನಿಂಬೆ ಹಣ್ಣನ್ನ ನಾಲಕ್ಕು ಭಾಗ ಮಾಡಿ ಮನೆಯ ಈ ಭಾಗದಲ್ಲಿ ಇಡೀ ಸಾಕು … ನಿಮ್ಮ ಮನೆಯಲ್ಲಿ ದುಡ್ಡು ತುಂಬಿಕೊಳ್ಳುತ್ತೆ

ಈ ದಿನ ತಿಳಿಸುವ ಈ ಪರಿಹಾರವನ್ನು ನೀವು ತಪ್ಪದೆ ಪ್ರತಿ ದಿವಸ ಮಾಡಿಕೊಳ್ಳಬಹುದು ಆಗೋದಿಲ್ಲ ಅನ್ನುವವರು ಶುಕ್ರವಾರ ಮತ್ತು ಸೋಮವಾರ ದಿವಸಗಳಂದು ಈ ಪರಿಹಾರವನ್ನು ಪಾಲಿಸಬಹುದು ಈ ಪರಿಹಾರ ಏನು ಮತ್ತು ಈ ಪರಿಹಾರದಿಂದ ಆಗುವ ಲಾಭಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ. ಇವತ್ತಿನ ಈ ಪರಿಹಾರವನ್ನು ನೀವು ಕೂಡ ತಿಳಿದುಕೊಂಡು ನಿಮ್ಮ ಮನೆಯಲ್ಲಿ ಯಾವುದೇ ಕೆಟ್ಟ ಶಕ್ತಿಯ ನೆಲೆ ಇದ್ದರೂ ಅಥವಾ ಕೆಟ್ಟ ಕಣ್ಣಿನ ದೃಷ್ಟಿ ಸಮಸ್ಯೆ ಇದ್ದರೂ ಇವನ್ನೆಲ್ಲ ಪರಿಹಾರ ಮಾಡಿಕೊಳ್ಳಿ ಕೇವಲ ಈ ಸುಲಭವಾದ ಮತ್ತು ಸರಳವಾದ ಪರಿಹಾರದಿಂದ.

ಒಂದು ಮನೆ ಅಂದರೆ ಆ ಮನೆಗೆ ಹಲವು ಜನರು ನೆಂಟರಿಷ್ಟರು ಬಂಧುಮಿತ್ರರು ಸ್ನೇಹಿತರು ಅಕ್ಕಪಕ್ಕದ ಮನೆಯವರು ಬಂದು ಹೋಗುತ್ತಲೇ ಇರುತ್ತದೆ ಯಾರ ಕಣ್ಣು ಹೇಗಿರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ಕೆಲವರು ಮನೆಗೆ ಬಂದು ಹೋದ ನಂತರ ಆ ಮನೆಯ ವಾತಾವರಣವು ಬದಲಾಗಿ ಬಿಡುತ್ತದೆ, ಸಮಸ್ಯೆಗಳು ಹೆಚ್ಚುತ್ತ ಹೋಗುತ್ತದೆ .

ಹಾಗೂ ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಾರದು ಅಥವಾ ನಿಮ್ಮನ್ನು ಈಗಾಗಲೇ ಇಂತಹ ಸಮಸ್ಯೆಗಳು ಕಾಡುತ್ತಾ ಇದೆ ಅನ್ನುವವರು, ತಪ್ಪದೆ ನೀವು ಈ ಪರಿಹಾರವನ್ನು ಪಾಲಿಸಿ ಇದು ತುಂಬ ಸರಳವಾಗಿರುತ್ತದೆ. ಇದಕ್ಕಾಗಿ ನಿಮಗೆ ನಿಂಬೆಹಣ್ಣು ಬೇಕಾಗುತ್ತದೆ, ಒಂದು ನಿಂಬೆಹಣ್ಣನ್ನು ತೆಗೆದುಕೊಂಡು, ಅದನ್ನು ಎರಡೂ ಹೋಳಾಗಿಸಿ ಒಂದು ತಟ್ಟೆಯ ಮೇಲೆ ಇಡಬೇಕು.

ಆ ತಟ್ಟೆಯ ಮೇಲೆ ಮೊದಲು ಕಲ್ಲುಪ್ಪನ್ನು ಸಮವಾಗಿ ಇರಿಸಿ ನಂತರ ಅದರ ಮೇಲೆ ನಿಂಬೆ ಹಣ್ಣಿನ ಹೋಳನ್ನು ಇಟ್ಟು, ಅದರ ಮೇಲೆ ಒಂದಕ್ಕೆ ಅರಿಶಿಣ ಮತ್ತು ಮತ್ತೊಂದಕ್ಕೆ ಕುಂಕುಮವನ್ನ ಲೇಪ ಮಾಡಿ, ಈ ನಿಂಬೆ ಹಣ್ಣಿನ ಮೇಲೆ ಕರ್ಪೂರವನ್ನು ಇರಿಸಬೇಕು ನಂತರ ಕರ್ಪೂರವನ್ನು ಹಚ್ಚಿ ನೀವು ಪೂಜೆಯ ನಂತರ ಕೊನೆಯಲ್ಲಿ ಈ ದೀಪದಿಂದ ದೇವರಿಗೆ ಆರತಿಯನ್ನು ಬೆಳಗ ಬೇಕು. ಈ ರೀತಿ ಆರತಿಯನ್ನು ಬೆಳಗುವಾಗ ಇದರಿಂದ ಹೊರಹೊಮ್ಮುವ ಹೊಗೆ ಮನೆಯನ್ನು ಪಸರಿಸಿ ಮನೆಯಲ್ಲಿರುವ ಕೆಟ್ಟ ಶಕ್ತಿ ಆಗಿರಲಿ ಕೆಟ್ಟಗಾಳಿ ಕೆಟ್ಟ ದೃಷ್ಟಿ ದೋಷ ಇವೆಲ್ಲವನ್ನು ಕೂಡ ನಿವಾರಣೆ ಮಾಡುತ್ತದೆ.

ಈ ರೀತಿ ಮನೆಯಲ್ಲಿ ಕೆಟ್ಟ ಶಕ್ತಿಯ ವಾತಾವರಣವನ್ನೇ ನಾಶ ಮಾಡುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಬಹುದು ಸಮಸ್ಯೆಗಳೂ ಇಲ್ಲ ನಾವು ಖುಷಿಯಾಗಿ ಇದ್ದೇವೆ ನಮಗೆ ಯಾಕೆ ಪರಿಹಾರ ಅನ್ನುವವರು ಕೂಡ ಇದನ್ನು ಪಾಲಿಸಬಹುದು. ಇದರಿಂದ ಮುಂದಿನ ದಿವಸಗಳಲ್ಲಿ ಮನೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಉಂಟಾಗುವುದಿಲ್ಲ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಸಕಾರಾತ್ಮಕ ಭಾವನೆ ವಾತಾವರಣ ಮನೆಯಲ್ಲಿ ಸೃಷ್ಟಿಯಾಗುತ್ತದೆ.

ಇದನ್ನು ಇಂತಹದ್ದೇ ಪ್ರತ್ಯೇಕವಾದ ದಿವಸಗಳಂದು ಮಾಡಬೇಕು ಅಂತ ಏನೂ ಇಲ್ಲ ನೀವು ಯಾವ ದಿವಸಗಳಂದು ಮಾಡಿದರೂ ನಿಮಗೆ ಶುಭ ಫಲ ದೊರೆಯುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಮನೆಯಲ್ಲಿ ಯಾವುದೇ ನಕಾರಾತ್ಮಕ ಭಾವನೆಗಳಿದ್ದರು ಅದನ್ನು ದೂರ ಮಾಡಿ ಮನೆಯವರ ಆರೋಗ್ಯವನ್ನು ಮನೆಯವರ ನೆಮ್ಮದಿಯನ್ನು ಶಾಂತಿಯನ್ನು ಕಾಪಾಡಲು ಈ ಪರಿಹಾರ ಸಹಕಾರಿಯಾಗಿರುತ್ತದೆ ಶುಭವಾಗಲಿ ಧನ್ಯವಾದ.

Leave a Comment

Your email address will not be published.