ಒಬ್ಬ ಪ್ರಖ್ಯಾತ ಸ್ವಾಮೀಜಿಗಳು ಐಕ್ಯವಾದ ಸುಂದರ ಸ್ಥಳವಿದು ..!ಇದು ಇರುವುದು ಬೇರೆ ಯಾವುದೇ ದೇಶದಲ್ಲಿ ಅಲ್ಲ ನಮ್ಮ ರಾಜ್ಯದ ಈ ಭಾಗದಲ್ಲಿ ..!

ಮಲೆನಾಡಿನ ಮತ್ತೊಂದು ಸುಂದರವಾದ ಪ್ರವಾಸಿಗರ ತಾಣದ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಇದು ಪ್ರವಾಸಿಗರ ಪ್ರಕೃತಿ ತಾಣ ಮಾತ್ರವಲ್ಲ ಇಲ್ಲಿ ಜೈನರ ಪುಣ್ಯ ಕ್ಷೇತ್ರವೂ ಕೂಡ ಇದೆ. ಹೌದು ಅದೇ ಕುಂದಾದ್ರಿ ಬೆಟ್ಟ, ಇಲ್ಲಿ ಜೈನ ಗುರುಗಳಾದ ಕುಂದೆಕುಂದಾ ಚಾರ್ಯರು ತಪಸ್ಸು ಮಾಡಿದ್ದರಂತೆ. ಸುಮಾರು ಇಪ್ಪತ್ತ್ ನಾಲ್ಕು ವರುಷಗಳ ಕಾಲ ತಪಸ್ಸು ಮಾಡಿ,

ತಮ್ಮ ತೊಂಬತ್ತೈದನೇ ವಯಸ್ಸಿನಲ್ಲಿ ಐಕ್ಯರಾದ ಜೈನ ಗುರುಗಳು ಇವರು ಐಕ್ಯರಾದ ಸ್ಥಳದಲ್ಲಿಯೇ ಪುಣ್ಯಕ್ಷೇತ್ರವೊಂದನ್ನು ನಿರ್ಮಿಸಲಾಗಿದೆ. ಈ ಪುಣ್ಯಕ್ಷೇತ್ರವನ್ನು ವೀಕ್ಷಣೆ ಮಾಡುವುದಕ್ಕಾಗಿಯೆ ದಕ್ಷಿಣ ಭಾರತ ಉತ್ತರ ಭಾರತ ಕಡೆಯಿಂದ ಅನೇಕ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.

ಪರಿಸರ ಪ್ರೇಮಿಗಳು ಚಾರಣಿಗರಿಗೆ ಈ ಸ್ಥಳ ಹೇಳಿ ಮಾಡಿಸಿದಂತೆ ಇದೆ ಇಲ್ಲಿ ಹುಣ್ಣಿಮೆಯ ದಿವಸ ದಂದು ಚಂದ್ರಾಸ್ತಮಾನವನ್ನು ಮತ್ತು ಸೂರ್ಯೋದಯವನ್ನು ಒಂದೇ ಸಮಯದಲ್ಲಿ ಕಾಣಬಹುದು ಈ ಸುಂದರವಾದ ಪರಿಸರದ ವೀಕ್ಷಣೆಯನ್ನು ಕಾಣುವುದಕ್ಕಾಗಿಯೇ ಅನೇಕ ಪರಿಸರ ಪ್ರೇಮಿಗಳು ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲ ಈ ಕುಂದಾದ್ರಿ ಬೆಟ್ಟವು ಏಕ ಶಿಲೆ ಬೆಟ್ಟವಾಗಿದೆ ದಟ್ಟವಾದ ಅರಣ್ಯದ ಮಧ್ಯೆ ಇರುವ ಈ ಕುಂದಾದ್ರಿ ಬೆಟ್ಟವು ಸಮುದ್ರದಿಂದ ಮೂರು ಸಾವಿರದ ಇನ್ನೂರು ಅಡಿ ಮೇಲಿದೆ.

ಈ ಸುಂದರವಾದ ಪರಿಸರ ತಾಣವನ್ನು ಮುಕುಟಪ್ರಾಯ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿರುವ ಜೈನ ಪುಣ್ಯ ಕ್ಷೇತ್ರಕ್ಕೆ ಸುಮಾರು ಮೂರು ಸಾವಿರ ವರುಷಗಳ ಇತಿಹಾಸವೂ ಇದೆ, ಹಾಗೆ ಇಲ್ಲಿ ಇರುವ ಪಾಶ್ವನಾಥ ವಿಗ್ರಹಕ್ಕೆ ಸುಮಾರು ಎರಡು ಸಾವಿರದ ಎಂಟು ನೂರು ವರುಷಗಳ ಇತಿಹಾಸವು ಇರುವುದನ್ನು ನಾವು ಇಲ್ಲಿ ಗಮನಿಸಬಹುದು. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವಾಗ ಗುಡಿಕೇರಿ ಎಂಬ ಊರಿನಿಂದ ಸುಮಾರು ಒಂಬತ್ತು ಕಿಲೋ ಮೀಟರ್ ದೂರದಲ್ಲಿ ಇದೆ ಈ ಕುಂದಾದ್ರಿ ಬೆಟ್ಟ.

ಈ ಪುಣ್ಯ ಕ್ಷೇತ್ರವು ಇರುವ ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಎರಡು ಪುಷ್ಕರಣಿ ಇರುವುದನ್ನು ಗಮನಿಸ ಬಹುದಾಗಿದೆ. ಈ ಪುಷ್ಕರಣಿಗಳಿಗೆ ಹೆಸರೇನೆಂದರೆ ಪಾಪವಿಮೋಚನ ಕೆರೆ ಮತ್ತು ತಾವರೆಕೆರೆ ಎಂದು. ಉತ್ತರಾಯಣದ ಸಮಯದಲ್ಲಿ ಈ ಪಾಪವಿಮೋಚನ ಕೆರೆಯಲ್ಲಿ ದೊರೆಯುವ ಜಲವನ್ನು ಪ್ರೋಕ್ಷಣೆ ಮಾಡುವ ಮುಖಾಂತರ ಭಕ್ತಾದಿಗಳು ತಮ್ಮ ಪಾಪ ವಿಮೋಚನೆಯನ್ನು ಮಾಡಿಕೊಳ್ಳುತ್ತಾರೆ ಹೀಗೆ ಈ ಒಂದು ನಂಬಿಕೆ ಇದೆ.

ಹೀಗೆ ಮಲೆನಾಡಿನ ತಪ್ಪಲಿನಲ್ಲಿ ಈ ರೀತಿ ನಿಸರ್ಗ ತಾಣ ಹೊಂದಿದೆ ಇನ್ನೂ ಈ ಬೆಟ್ಟದ ತುದಿಯಿಂದ ನೋಡಿದರೆ ಸುತ್ತಲೂ ಅಡಿಕೆ ಮರ ವರಾಹಿ ನದಿ ಹಸಿರು ಇವೆಲ್ಲವೂ ಕೂಡ ಪರಿಸರಕ್ಕೆ ಹಸಿರು ಚಾಪೆ ಹಾಸಿದಂತೆ ಕಾಣಸಿಗುತ್ತದೆ. ಇತ್ತೀಚಿನ ದಿವಸಗಳಲ್ಲಿ ಬೆಟ್ಟದ ತುದಿಗೆ ವಾಹನಗಳು ಹೋಗುವ ಹಾಗೆ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಇನ್ನೂ ಈ ಪರಿಸರ ತಾಣದಲ್ಲಿ ಉಳಿದುಕೊಳ್ಳುವುದಕ್ಕೆ ಯಾವ ವ್ಯವಸ್ಥೆಯೂ ಇರುವುದಿಲ್ಲ ಮತ್ತು ಈ ಬೆಟ್ಟದ ತುದಿಯಲ್ಲಿ ತಿನ್ನುವುದಕ್ಕೆ ಆಹಾರ ಮತ್ತು ನೀರು ದೊರೆಯದಿರುವ ಕಾರಣ ಭಕ್ತಾದಿಗಳು ಈ ಸ್ಥಳಕ್ಕೆ ಬರುವಾಗ ಆಹಾರವನ್ನು ನೀರನ್ನು ಕೂಡ ತೆಗೆದುಕೊಂಡು ಬರಲಾಗುತ್ತದೆ. ಈ ರೀತಿ ಶಿವಮೊಗ್ಗಕ್ಕೆ ಸೇರಿದ ಸುಂದರವಾದ ಪ್ರವಾಸಿಗರ ತಾಣವಾದ ಕುಂದಾದ್ರಿ ಬೆಟ್ಟದ ವಿಶೇಷತೆಗಳು ಹಾಗೂ ಸಣ್ಣ ಪರಿಚಯ ಇದಾಗಿದೆ ನೀವೂ ಸಹ ಒಮ್ಮೆ ಮಲೆನಾಡಿಗೆ ಭೇಟಿ ನೀಡಿದರೆ ತಪ್ಪದೆ ಕುಂದಾದ್ರಿ ಬೆಟ್ಟ ವನ್ನು ವೀಕ್ಷಣೆ ಮಾಡಿ ಬನ್ನಿ ಪರಿಸರದ ಸವಿಯನ್ನ ಸವಿಯಿರಿ ಧನ್ಯವಾದ.

Leave a Comment

Your email address will not be published.