ಇನ್ನೇನು ಮದುವೆಗೆ ಒಂದು ಗಂಟೆ ಮಾತ್ರ .. ತನ್ನ ಗಂಡನ ದಾರಿಯನ್ನ ಎದುರು ನೋಡುತಿದ್ದ ಹೆಂಡತಿ … ಗಂಡ ಮಂಟಪಕ್ಕೆ ಓಡಿ ಬರೋದನ್ನ ಗಮನಿಸಿ ಕುಣಿದು ಕುಪ್ಪಳಿಸಿದ ವಧು… ಅಷ್ಟಕ್ಕೂ ಯಾಕೆ ಹೀಗೆ ಮಾಡಿದ್ದಳು ಗೊತ್ತ …

ಮದುವೆ ಎಂಬುದು ಪ್ರತಿಯೊಬ್ಬರ ಕನಸು ಆಗಿರುತ್ತದೆ ಅದರಲ್ಲಿ ವಯಸ್ಸಿಗೆ ಬಂದ ಹುಡುಗ ಹುಡುಗಿಯರು ತಮಗೆ ಮದುವೆ ಸೆಟಲ್ ಆಯಿತು ಅಂದರೆ ಅವರು ತಮ್ಮ ಮದುವೆ ಕುರಿತು ತಮ್ಮ ಮುಂದಿನ ಜೀವನ ಕುರಿತು ಇಷ್ಟೆಲ್ಲ ಕನಸುಗಳನ್ನ ಕಂಡಿರ್ತಾರೆ ಹೌದು ಸೆಟ್ ಆಯಿತು ಅಂದಿನಿಂದ ತಮ್ಮ ಮದುವೆ ಬಗ್ಗೆ ಹಗಲು ರಾತ್ರಿ ಯೋಚನೆ ಮಾಡ್ತಾನೇ ಇರ್ತಾರೆ ಅಂದು ಮೊಬೈಲ್ ಇರಲಿಲ್ಲ ಆದರೆ ಮದುವೆ ಫಿಕ್ಸ್ ಆಗುತ್ತಿದ್ದ ಹಾಗೆ ಮದುವೆ ಮಾಡಿಕೊಟ್ಟು ಬಿಡುತ್ತಿದ್ದರು ಆದರೆ ಇವತ್ತಿನ ದಿವಸಗಳಲ್ಲಿ ಮೊದಲು ನಿಶ್ಚಿತಾರ್ಥವನ್ನ ಮಾಡ್ತಾರೆ ಬಳಿಕ ಹೆಣ್ಣು ಗಂಡು ಅರ್ಥಮಾಡಿಕೊಳ್ಳಲಿ ಎಂದು ಕೆಲವು ತಿಂಗಳುಗಳ ಕಾಲ ಮದುವೆಗೆ ಗ್ಯಾಪ್ ಕೊಟ್ಟು ಬಳಿಕ ವಿವಾಹ ಮಾಡುವುದು ಇವತ್ತಿನ ಟ್ರೆಂಡ್ ಆಗಿಬಿಟ್ಟಿದೆ.

ಹೌದು ಇವತ್ತಿನ ದಿವಸಗಳಲ್ಲಿ ಮೊದಲು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಮದುವೆ ಮಾಡುವುದು ಟ್ರೆಂಡ್ ಆಗಿದ್ದು, ಇಂದಿನ ಯುವಜನತೆಯ ಕನಸಾಗಿರುತ್ತದೆ ನಾವು ನಮ್ಮ ಆ ಫಿಯಾನ್ಸಿಯ ಜೊತೆಗೆ ಅಥವಾ ಮದುವೆ ಆಗುವ ಹುಡುಗ ಅಥವಾ ಹುಡುಗಿಯ ಜೊತೆಗೆ ಸುತ್ತಾಡಬೇಕು ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಸಮಯ ಕೂಡ ಕೇಳ್ತಾರ ಹಾಗಾಗಿ ಹಿರಿಯರು ಕೂಡ ಮಕ್ಕಳ ಈ ಆಸೆ ಕನಸಿಗೆ ಉಪ್ಪಿ ಸಮಯ ಕೊಡುತ್ತಾರೆ ಈ ಸಮಯದಲ್ಲಿ ಆ ಹುಡುಗ ಹುಡುಗಿ ಬೆಳಿಗ್ಗೆಯಿಂದ ಸಂಜೆವರೆಗೂ ತಮ್ಮ ಜೀವನದ ಬಗ್ಗೆ ಮಾತನಾಡುತ್ತಾ ತಮ್ಮ ಮದುವೆ ಹಾಗಿರಬೇಕು ಹೀಗಿರಬೇಕು ಎಂದು ಮಾತನಾಡಿಕೊಂಡು ತಮ್ಮ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ ಬಿಡಿ ಹೌದು ಮದುವೆ ಆದಮೇಲೆ ಅವರು ಹೇಗೆ ಮಾಡ್ತಾರೋ ಗೊತ್ತಿಲ್ಲ ಆದರೆ ಮದುವೆಗಿಂತ ಮುಂಚೆ ಮಾತ್ರ ಪ್ರೀತಿಯಲ್ಲಿ ಮುಳುಗಿರುತ್ತಾರೆ.

ಇಲ್ಲಿಯೂ ಕೂಡ ಅಂಥದ್ದೇ ಜೋಡಿಗಳು ನಿಶ್ಚಿತಾರ್ಥವಾದ ಬಳಿಕ ಹೆಚ್ಚು ಸಮಯ ಅರ್ಥ ಮಾಡಿಕೊಳ್ಳುವುದಕ್ಕೆ ಬೇಕೆಂದು ಮದುವೆಯನ್ನ ಸ್ವಲ್ಪ ತಡವಾಗಿಯೇ ಫಿಕ್ಸ್ ಮಾಡಿಕೊಂಡಿರುತ್ತಾರೆ ಹಾಗೆ ಮದುವೆ ಕೂಡ ಫಿಕ್ಸ್ ಆಗುತ್ತದೆ ಮದುವೆಯ ದಿನ ಕೂಡ ಬಂದಿತ್ತು ಆತ ವರ ಕುದುರೆ ಮೇಲೆ ಮದುಮಗನಾಗಿ ಬರುವುದನ್ನ ಕಂಡು ಇತ್ತ ವಧುವಿನ ಕೋಣೆಯಲ್ಲಿ ಕಿಟಕಿ ಮೂಲಕ ತನ್ನ ಭಾವಿ ಪತಿರಾಯ ಬರುವುದನ್ನು ಕಂಡು ಮದುಮಗಳು ಸ್ಟೆಪ್ ಹಾಕಿದ್ದಾಳೆ ಆತ ಕುದುರೆ ಮೇಲೆ ರಾಜನ ಹಾಗೆ ಬರುತ್ತಿದ್ದ ವರ ಕೂಡ ತನ್ನ ಭಾವಿ ಪತ್ನಿಯನ್ನು ಕಂಡು ಆಕೆ ಸ್ಟೆಪ್ ಹಾಕೋದನ್ನ ನೋಡಿ ಅವನು ಕೂಡ ಖುಷಿಯಿಂದ ಕುದುರೆ ಮೇಲೆ ಕುಳಿತು ಸಂಭ್ರಮಿಸಿದ್ದಾನೆ.

ಇಂಥದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ವಧು ವರರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡ್ ಆಗಿದೆ ಇತ್ತ ಮದುಮಗಳು ಕೆಂಪು ಬಣ್ಣದ ಲೆಹೆಂಗಾ ಧರಿಸಿ ಸುಂದರವಾಗಿ ಕಾಣುತ್ತಿದ್ದು ಆತ ವರ ಕೂಡ ಶೇರ್ವಾನಿಯಲ್ಲಿ ಮಸ್ತ್ ಮದುಮಗನಾಗಿ ಕಾಣಿಸುತ್ತಿದ್ದಾನೆ ಈ ವಿಡಿಯೋ ನೋಡಿದರೆ ಹಲವರಿಗೆ ಆಸೆ ಹುಟ್ಟುವುದಂತೂ ಸತ್ಯ ಹೌದು ಖಂಡಿತವಾಗಿಯೂ ಹೆಣ್ಣುಮಕ್ಕಳಿಗೆ ಇದೊಂದು ಬಹಳ ದೊಡ್ಡ ಕನಸಾಗಿರುತ್ತದೆ. ನಮ್ಮ ಮದುವೆ ಬಹಳ ವಿಜ್ರುಂಬಣೆಯಿಂದ ಆಗಬೇಕು ನಮ್ಮ ಮದುವೆಯಲ್ಲಿ ನಾವು ಕೂಡ ಸಂಭ್ರಮದಿಂದ ಆ ಕುಣಿಯಬೇಕು ಅನ್ನುವ ಕನಸು ಬಹಳಷ್ಟು ಹುಡುಗಿಯರು ಕಂಡಿರುತ್ತಾರೆ.

ದಿನದಿಂದ ದಿನಕ್ಕೆ ಹೊಸ ಹೊಸದಾದ ಟ್ರೆಂಡ್ ಗಳು ಮೂಡಿಬರುತ್ತ ಇದು ಮದುವೆ ವಿಚಾರದಲ್ಲಿಯೂ ಕೂಡ ದಿನದಿಂದ ದಿನಕ್ಕೆ ಹೊಸ ಹೊಸ ಟ್ರೆಂಡ್ ಆಗುತ್ತಿದೆ. ಸ್ವಲ್ಪ ವರ್ಷಗಳ ಹಿಂದೆ ವಧುವರರನ್ನು ವೆಲ್ಕಮ್ ಮಾಡೋದಕ್ಕೆ ಸ್ವಾಗತ ಕೋರುವುದಕ್ಕೆ ಹುಡುಗ ಹುಡುಗಿಯರ ಕಸಿನ್ ಗಳು ನೆಂಟರಿಷ್ಟರು ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಇದೀಗ ಮದುವೆಗೆ ಬಂದ ಅತಿಥಿಗಳನ್ನ ಸಂಭ್ರಮಿಸುವುದಕ್ಕೆ ವೇದಿಕೆ ಮೇಲೆ ವಧು ವರರು ಸ್ಟೆಪ್ ಹಾಕ್ತಾರೆ. ಇದೆಲ್ಲ ನೋಡಲು ಬಹಳ ಖುಷಿಯಾಗಿರುತ್ತದೆ. ಇನ್ನೂ ನೀವು ಕೂಡ ಇನ್ನೂ ಮದುವೆ ಆಗಿಲ್ಲ ಅಂದಲ್ಲಿ ನೀವು ಕೂಡ ಮದುವೆಯನ್ನು ಹೀಗೇ ಆಗಬೇಕು ಅಂತ ಕನಸು ಕಂಡಿದ್ದ ನಿಮ್ಮ ಆಸೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

Leave a Comment

Your email address will not be published. Required fields are marked *