ತುಂಬಾ ಅನ್ನ್ಯೋನ್ಯತೆಯಿಂದ ಇದ್ದ ಸಂಸಾರ ಆದ್ರೆ ಬೆಳಗ್ಗೆ ಎದ್ದು ನೋಡೋವಷ್ಟರಲ್ಲಿ ಸಂಪೂರ್ಣವಾಗಿ ಇಡೀ ಕುಟುಂಬವೇ ಇಲ್ಲವಾಗಿ ಹೋಗಿದೆ… ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ… ಅಷ್ಟಕ್ಕೂ ಕಾರಣ ಏನು…

ಹಣ ಎಂಬುದು ಇವತ್ತು ಇರುತ್ತೆ ನಾಳೆ ಹೋಗತ್ತೆ ಹಾಗಂತ ನಾವು ಮಾಡುವ ವ್ಯವಹಾರ ವ್ಯಾಪಾರದಲ್ಲಿ ನಷ್ಟ ಆಯಿತು ಅಂತ ಮನನೊಂದುಕೊಂಡು ಅದನ್ನು ಮನೆಗೆ ಬಂದು ಮನೆಯ ಮೇಲಿನ ಸದಸ್ಯರ ಮೇಲೆ ಆ ಕೋಪವನ್ನ ತೋರಿಸಿಕೊಳ್ಳುವುದು ಎಷ್ಟು ಸರಿ ಹೇಳಿ. ಹೌದು ಕೆಲವೊಂದು ಬಾರಿ ಹಾಗೆ ಆಗಿಬಿಡುತ್ತದೆ ವ್ಯವಹಾರದ ವಿಚಾರವಾಗಿ ಕೆಲವೊಂದು ಬಾರಿ ಗಂಡಸರೂ ಬಹಳ ಬೇಸರದಲ್ಲಿರುತ್ತಾರೆ ಯೋಚನೆಯಲ್ಲಿದ್ದರೆ ಹಾಗಂತ ಅವರು ಆ ಸ್ಥಿತಿಯಲ್ಲಿ ಮಾತನಾಡಿದ ಕೆಲವೊಂದು ಮಾತುಗಳನ್ನು ತಲೆಗೆ ಹಾಕಿಕೊಳ್ಳದೆ ಹೆಣ್ಣುಮಕ್ಕಳು ಕೂಡ ಕೆಲವೊಂದು ಸಮಯದಲ್ಲಿ ಅನುಸರಿಸಿಕೊಂಡು ಹೋಗಬೇಕು ಅದೇ ಅಲ್ವಾ ಜೀವನ. ಜೀವನ ಅಂದರೆ ಹಾಗೆ ಕಷ್ಟ ಸುಖ ದುಃಖ ಎಲ್ಲವೂ ಇರುತ್ತದೆ ಹಾಗೆ ಇರಬೇಕು ಕೂಡ ಆಗಲೇ ಜೀವನ ಸ್ಥಿರವಾಗುವುದು ಹಾಗಂತ ಗಂಡ ಏನೋ ಮಾತನಾಡಿದ ಅಥವಾ ಹೆಂಡತಿಯನ್ನು ಮಾತನಾಡಿದಳು ಅಂತ ಮನನೊಂದು ನಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ ಹೇಳಿ ಹೌದು ಇನ್ನೊಬ್ಬ ಹೆಣ್ಣುಮಗಳು ತೆಗೆದುಕೊಂಡ ನಿರ್ಧಾರದಿಂದ ನೋಡಿ ಒಂದೇ ದಿನ ಈ ಸಂಸಾರ ಏನಾಗಿದೆ ಅಂತ.

ಕೆಲವೊಂದು ಸಮಯದಲ್ಲಿ ಕೇವಲ ಅತಿ ಚಿಕ್ಕ ಮಾತು ಸಾಕು ಅತಿ ಚಿಕ್ಕ ವಿಚಾರ ಸಾಕು ಸಂಸಾರ ಒಡೆಯುವುದಕ್ಕೆ ಮನಸ್ಸು ಹೊಡೆಯುವುದಕ್ಕೆ ಹಾಗೆ ಇಲ್ಲೊಂದು ಕುಟುಂಬವು ಕೂಡ ಸುಖವಾಗಿ ಸಂಸಾರ ಮಾಡುತ್ತಾ ಇತ್ತು. ಕೆಲವರಿಗೆ ಗಂಡ ಸರಿಯಿದ್ದರೆ ಹೆಂಡತಿ ಸರಿ ಇರುವುದಿಲ್ಲ ಹೆಂಡತಿ ಸರಿಯಿದ್ದರೆ ಗಂಡ ಸರಿ ಇರುವುದಿಲ್ಲ ಹೀಗೆ ಹಲವು ಕಾರಣಗಳಿಂದ ಸಂಸಾರದಲ್ಲಿ ನೆಮ್ಮದಿಯ ಹೋಗಿಬಿಟ್ಟಿರುತ್ತದೆ. ಆದರೆ ಈ ಸಂಸಾರದಲ್ಲಿ ಅಂತಹ ತೊಂದರೆಗಳೆ ಇರಲಿಲ್ಲ ನೋಡಿ ಸುಖಸಂಸಾರ ಇಬ್ಬರು ಮಕ್ಕಳು ಗಂಡ ಚೆನ್ನಾಗಿ ದುಡಿಯುತ್ತಿದ್ದ ಆದರೆ ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಾಪಾರದಲ್ಲಿ ಇದ್ದಕ್ಕಿದ್ದ ಹಾಗೆ ನಷ್ಟ ಎದುರಾಗಿತ್ತು.

ಹೌದು ಇದ್ದಕಿದ್ದ ಹಾಗೆ ಇಷ್ಟು ದೊಡ್ಡ ನಷ್ಟ ಸಂಭವಿಸಿದ ಕಾರಣ ಗಂಡ ಬಹಳ ಬೇಸರದಿಂದಲೇ ಮನೆಗೆ ಬರ್ತಾನೆ ಇತ್ತ ಹೆಂಡತಿಗೆ ಯಾವ ವಿಚಾರವೂ ತಿಳಿದಿರಲಿಲ್ಲ ಗಂಡನಿಗೆ ಪ್ರತಿದಿನ ಹೇಗೆ ಬಂದ ಕೂಡಲೆ ಮಾತನಾಡಿಸುತ್ತಾ ಕೂತಳು ಹಾಗೆ ಆ ದಿನ ಕೂಡ ಪತ್ನಿ ನಡೆದುಕೊಂಡಳು. ಆದರೆ ಗಂಡ ಮಾತ್ರ ಹೆಂಡತಿ ಮಾಡಿದ್ದಕ್ಕೆ ಥಟ್ಟನೆ ರೇಗಿ ಬಿಟ್ಟಿದ್ದಾನೆ ಇದಕ್ಕೆ ಬೇಸರಗೊಂಡ ಪತ್ನಿ ತನ್ನ ಗಂಡ ಬೈದ ಎಂದು ಬೇಸರ ಮಾಡಿಕೊಂಡು ಕೂತಳು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಕಾರಣ ಪ್ರತಿದಿನ ಇದೆ ಆಗುತಿತ್ತು ಇದೇ ಕಾರಣಕ್ಕೆ ಜಗಳ ಕೂಡ ಆಗುತ್ತಿತ್ತು. ಒಮ್ಮೆ ಆ ಹೆಂಡತಿಗೆ ಏನಾಯ್ತೋ ನನ್ನ ಗಂಡ ಇತ್ತೀಚೆಗೆ ಬದಲಾಗಿದ್ದಾನೆ, ಬರೀ ಜಗಳ ಮಾಡುತ್ತಾರೆ ಎಂದು ರಾತ್ರೋರಾತ್ರಿ ತನ್ನ ಮಕ್ಕಳನ್ನು ಕರೆದುಕೊಂಡು
ಮನೆ ಬಿಟ್ಟು ಹೋಗುವ ನಿರ್ಧಾರ ಮಾಡ್ತಾಳೆ.

ಮನೆ ಬಿಟ್ಟು ಹೋಗಿ ಎಲ್ಲಿಯೂ ಇದ್ದಿದ್ದರೆ ಸರಿ ಹೋಗುತ್ತಿತ್ತೊ ಏನೋ. ಆದರೆ ದುಃಖದಲ್ಲಿಯೇ ಮನೆಬಿಟ್ಟು ಹೋದ ಆಕೆ ತಾನೂ ಕೂಡ ಅಪಘಾತ ಮಾಡಿಕೊಂಡು ತನ್ನ ಮಕ್ಕಳಿಗೂ ಕೂಡ ಉಸಿರು ನಿಲ್ಲಿಸಿ ಬಿಟ್ಟಿದ್ದಾಳೆ. ಈ ವಿಚಾರ ತಿಳಿದ ಪತಿರಾಯನೂ ಕೂಡ ಬಹಳ ಮನನೊಂದು ಆ ದಿನ ರಾತ್ರಿ ಅವನು ಕೂಡ ಕೊನೆಯುಸಿರೆಳೆದಿದ್ದಾನೆ ಒಂದೇ ದಿನದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಜವರಾಯನ ವಶವಾಗಿದ್ದರು ಯಾರಿಗೂ ಬೇಡಪ್ಪ ಇಂತಹ ಸ್ಥಿತಿ ಹೌದು ನನ್ನ ಪತ್ನಿ ನನ್ನ ಮುಂದಿನ ಭವಿಷ್ಯವಾಗಿದ್ದು ಮಕ್ಕಳೇ ಇಲ್ಲದಿರುವಾಗ ನಾನು ಏನು ಮಾಡಲಿ ಇದ್ದು ಎಂದು ಆಲೋಚಿಸಿದ ಈ ವ್ಯಕ್ತಿಯೂ ಕೂಡ ತನ್ನ ಕೊನೆಯುಸಿರೆಳೆದಿದ್ದ.

ಸಣ್ಣ ಮಾತು ಮನಸ್ಸನ್ನ ಹೊಡೆಯುತ್ತ ಹಾಗಂತ ಸಣ್ಣ ಸಣ್ಣ ವಿಚಾರಗಳಿಗೆ ಮನನೊಂದು ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬಹಳ ತಪ್ಪು. ಇಷ್ಟು ಚಿಕ್ಕ ಚಿಕ್ಕ ಕಷ್ಟಗಳಿಗೆ ಮನನೋಯಿಸಿಕೊಂಡರೆ ಪಾಪ ಏನೂ ಅರಿಯದ ಆ ಚಿಕ್ಕ ಮಕ್ಕಳು ಯಾವ ತಪ್ಪು ಮಾಡದಿದ್ದರೂ, ದೊಡ್ಡವರ ಜಗಳದಲ್ಲಿ ಪಾಪ ಆ ಮಕ್ಕಳು ಕೂಡ ಮುಂದೆ ಬಹಳ ಬದುಕಬೇಕಾದ ಜೀವಿಗಳು ಕೂಡ ಬಾರದ ಲೋಕಕ್ಕೆ ಪ್ರಯಾಣ ಮಾಡಬೇಕಾಯಿತು. ಯಾರು ಕೂಡ ಇಂತಹ ತಪ್ಪು ನಿರ್ಧಾರಗಳನ್ನು ಮಾಡಬೇಡಿ ನಿಮ್ಮ ಮಕ್ಕಳಿಗಾಗಿ ಜೀವಿಸಿ ಚಿಕ್ಕಪುಟ್ಟ ಸಮಸ್ಯೆಗಳು ಜೀವನದಲ್ಲಿ ಸಾಮಾನ್ಯ ಅದನೆಲ್ಲಾ ಜಯಿಸಿದರೆ ಜೀವನದಲ್ಲಿ ದೊಡ್ಡ ಸುಖ ಫಲಿಸುವುದು.

Leave a Comment

Your email address will not be published.