ತಾಯಿಯನ್ನು ನೋಡುವ ಹಂಬಲ ದಿಂದಾಗಿ ಈ ಹುಡುಗ ಸುಮಾರು 90ಕಿಲೋಮೀಟರ್ ಪ್ರಯಾಣ ಮಾಡಲು ಕೂಡ ತಯಾರಾಗಿದ್ದ ಹೌದು ತನ್ನ ಗೆಳೆಯನ ಸೈಕಲ್ ಪಡೆದು ರಾತ್ರೋರಾತ್ರಿ ತನ್ನ ತಾಯಿ ಊರಿಗೆ ಹೊರಟ ಈ ಪುಟ್ಟ ಪೌರ ಮುಂದೇನಾಯ್ತು ಗೊತ್ತಾ ಹೌದು ತನ್ನ ತಾಯಿಯನ್ನು ನೋಡುವ ಆಸೆಯಿಂದಾಗಿ ಇವನು 90ಕಿಲೋ ಮೀಟರ್ ದೂರದಲ್ಲಿರುವ ತನ್ನ ತಾಯಿಯ ಊರಿಗೆ ಪಯಣ ಮಾಡಲು ರಾತ್ರೋ ರಾತ್ರಿ ಹೊರಟು ನಿಂತಿದ್ದ. ಆದರೆ ಮುಂದೇನಾಯ್ತು ಗೊತ್ತಾ ಈತ ಸಿಕ್ಕಿದ್ದು ಯಾರ ಕೈಗೆ ಮುಂದೇನಾಯ್ತು ಅವನು ಅವನ ತಾಯಿಯನ್ನು ನೋಡಿ ಈ ಕೆಳಗಿನ ಲೇಖನಿಯಲ್ಲಿ.
ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ ಅಂತ ಹೇಳ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಗಂಡ ಸ್ವಲ್ಪವೂ ಕೂಡ ಹೆಂಡತಿಗೆ ಬಯ್ಯುವಂತಿಲ್ಲ ಸ್ವಲ್ಪವಾದರೂ ಗಂಡ ಏನಾದರೂ ಹೆಂಡತಿಯ ಮೇಲೆ ಕೋಪ ಮಾಡಿಕೊಂಡರೆ ಮುನಿಸಿಕೊಂಡು ಬೈದುಬಿಟ್ಟರೆ ಹೆಣ್ಣು ಮಕ್ಕಳು ಮಾಡುವ ಕೆಲಸ ಅಂದರೆ ಮನೆ ಬಿಟ್ಟು ತವರು ಮನೆ ಸೇರಿಕೊಳ್ಳುವುದು. ಇಂತಹ ಘಟನೆಗಳು ಸಮಾಜದಲ್ಲಿ ನಾವು ಈ ದಿನಗಳಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ ಕೇಳುತ್ತಲೇ ಇದ್ದೇವೆ. ಹೌದು ಅಪ್ಪ ಅಮ್ಮ ತಮ್ಮ ಮಗ ಮಗಳು ಗಂಡನ ಮನೆಯಲ್ಲಿ ಖುಷಿಯಾಗಿ ಇರಲಿ ಎಂದು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿರುತ್ತಾನೆ ಇತ್ತ ಗಂಡನ ಜೊತೆಗೆ ಮಗಳು ಎಲ್ಲವನ್ನು ಸಹಿಸಿಕೊಂಡು ಹೋಗುತ್ತಾ ಇರುತ್ತಾಳೆ .
ಎಂದು ಅಪ್ಪ ಅಮ್ಮ ಅಂದುಕೊಂಡಿರುತ್ತಾರೆ ಆದರೆ ಇವತ್ತಿನ ದಿವಸಗಳಲ್ಲಿ ತಂದೆ ತಾಯಿ ಮಕ್ಕಳನ್ನು ಮುದ್ದು ಮಾಡಿ ಸಾಕಿರ್ತಾರೋ ಆದರೆ ಇತ್ತ ಗಂಡನ ಮನೆಗೆ ಸೇರುತ್ತಿದ್ದ ಹಾಗೆ ಅಲ್ಲಿಯೂ ಕೂಡ ಅದೇ ರೀತಿ ಇರಬೇಕು ನಾವು ಹೇಳಿದ್ದೇ ಆಗಬೇಕು ಅನ್ನುವ ಮನಸ್ಥಿತಿ ಇದ್ದರೆ ಅದು ಕಷ್ಟಸಾಧ್ಯ ಯಾಕೆಂದರೆ ನಾವು ನಮ್ಮ ಮನೆಯಿಂದ ಮದುವೆಯಾದ ಬಳಿಕ ಮತ್ತೊಬ್ಬರ ಮನೆಗೆ ಹೋಗಲೇ ಬೇಕು ಆ ಮನೆಯನ್ನ ಬೆಳಗಲೇ ಬೇಕು ಅಲ್ಲಿ ತಂದೆ ಮನೆಯಲ್ಲಿ ಇದ್ದ ಹಾಗೆ ಇರಲು ಸಾಧ್ಯವಾಗುವುದಿಲ್ಲ ಅಲ್ಲಿ ವಾತಾವರಣವೇ ಬೇರೆ ಬೇರೆಯಾಗಿರುತ್ತದೆ ಜವಾಬ್ದಾರಿ ಪೂರ್ತಿಯಾಗಿ ಹೆಣ್ಣುಮಕ್ಕಳ ಮೇಲೆ ಇರುತ್ತದೆ.
ಕೆಲವೊಂದು ಬಾರಿ ಸಂಸಾರದಲ್ಲಿಯೂ ಕೂಡ ಕೆಲವೊಂದು ಮಾತು ಬರುತ್ತದೆ ಹೋಗುತ್ತದೆ ಇಲ್ಲಿಯೂ ಕೂಡ ಹಾಗೆ ತನಗೆ ಇಬ್ಬರು ಮಕ್ಕಳಿದ್ದರೂ ಕೂಡ ಗಂಡ ಏನೋ ಅಂದ ಎಂದು ಸುಖ ಸಂಸಾರದಲ್ಲಿ ಸಹಿಸಿಕೊಳ್ಳಲು ಸಾಧ್ಯವಾಗದೇ ಅಪ್ಪನ ಮನೆಗೆ ಹೋಗಿ ಆ ಹೆಣ್ಣುಮಗಳು ಕೂತುಬಿಡುತ್ತಾಳೆ ತನ್ನ ಸಂಸಾರದ ಯೋಚನೆಯೂ ಕೂಡ ಇರುವುದಿಲ್ಲ ತನ್ನ ಇಬ್ಬರು ಮಕ್ಕಳನ್ನು ಪತಿಯ ಬಳಿಯೇ ಬಿಟ್ಟು ಹೋಗಿರುತ್ತಾಳೆ ಆಕೆಗೆ ಯಾರ ಯೋಚನೆಯೂ ಇರಲಿಲ್ಲ. ಆದರೆ ಇಲ್ಲಿ 12ವರುಷದ ಮಗ ಮತ್ತು 8ವರುಷದ ಮಗ ತಾಯಿ ಈ ದಿನ ಬರ್ತಾಳೆ ನಾಳೆ ಬರ್ತಾಳೆ ಅಂತ ಕಾಯುತ್ತಲೇ ಇದ್ದರು ಆದರೆ ತಾಯಿ ಮಾತ್ರ ತಿಂಗಳಾದರೂ ಮನೆಗೆ ಬರೋದೇ ಇಲ್ಲ.
ಕೊನೆಗೆ ಆ ಎರಡನೆಯ ಮಗನಿಗೆ ತಾಯಿಯನ್ನು ನೋಡದೆ ಇರಲಾಗಲಿಲ್ಲ ರಾತ್ರೋರಾತ್ರಿ ಅವನ ಸ್ನೇಹಿತನ ಬಳಿ ಸೈಕಲ್ ಪಡೆದು ತನ್ನ ತಾಯಿಯ ಊರಿನ ಕಡೆಗೆ ಹೊರಟೆ ಬಿಟ್ಟ. ಸುಮಾರು 14ಕಿಲೋ ಮೀಟರ್ ದೂರ ಸೈಕಲ್ ತುಳಿದ ಈ ಬಾಲಕ ಹೈವೆಯಲ್ಲಿ ಸೈಕಲ್ ತುಳಿಯುತ್ತಾ ಹೋಗ್ತಾ ಇರ್ತಾನೆ ಅಲ್ಲಿ ಪೊಲೀಸರ ಕೈಗೆ ಸಿಗುತ್ತಾನೆ ಕೊನೆಗೆ ನಡೆದ ವಿಚಾರವನ್ನೆಲ್ಲಾ ಆ ಬಾಲಕ ಪೊಲೀಸರಿಗೆ ಹೇಳಿದ್ದಾನೆ ಈ ಬಾಲಕನಿಗೆ ಹೀಗೆ ಬಿಟ್ಟರೆ ಸರಿಹೋಗುವುದಿಲ್ಲ ಎಂದು ಠಾಣೆಗೆ ಕರೆದೊಯ್ದರು ಕೊನೆಗೆ ಎಲ್ಲಾ ವಿಚಾರವನ್ನು ಬಾಲಕನೆಂದು ತಿಳಿದ ಬಳಿಕ ಪೊಲೀಸರು ಆ ಬಾಲಕನ ಅಪ್ಪ ಅಮ್ಮನನ್ನು ಕರೆಸುತ್ತಾರೆ ಕೊನೆಗೆ ಪೊಲೀಸರೇ ಅವರಿಗೆ ಬುದ್ಧಿ ಹೇಳಿ ಇಬ್ಬರನ್ನೂ ಒಂದು ಮಾಡಿದ್ದಾರೆ.
ಹೌದು ಇಂದಿನ ದಿವಸ ಅಪ್ಪ ಅಮ್ಮನನ್ನು ಮಕ್ಕಳು ದೊಡ್ಡವರಾದ ಮೇಲೆ ಮನೆ ಬಿಟ್ಟು ಆಚೆ ಹೋಗ್ತಾರೆ ಆದರೆ ಚಿಕ್ಕವನಾಗಿದ್ದಾಗ ಅಪ್ಪ ಅಮ್ಮನೇ ಮಕ್ಕಳಿಗೆ ಪ್ರಪಂಚ ಆಗಿರ್ತಾರೆ ಅಪ್ಪ ಅಮ್ಮನ ಎಲ್ಲಾ ಹಾಕಿರ್ತಾರೆ ಅದರಲ್ಲಿಯೂ ಗಂಡು ಮಕ್ಕಳಿಗೆ ತಾಯಿ ಎಂದರೆ ಬಹಳ ಪ್ರೀತಿ ಇರುತ್ತದೆ. ನಿಮ್ಮ ನಿಮ್ಮ ಮನಸ್ತಾಪಗಳು ಏನೇ ಇರಲಿ ಅದನ್ನು ಮಕ್ಕಳ ಮುಂದೆ ತೋರಿಸಿಕೊಳ್ಳಬೇಡಿ, ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾಗೆ ಮಾಡಿಕೊಳ್ಳಬೇಡಿ ಮಕ್ಕಳ ಮನಸ್ಥಿತಿ ಹೇಗಿರುತ್ತೆ ಗೊತ್ತಿಲ್ಲ ನಿಮ್ಮ ಜಗಳ ಅವರ ಮನಸ್ಥಿತಿ ಮೇಲೆ ಹೇಗೆ ಬೇಕಾದರೂ ಪ್ರಭಾವವಿರಬಹುದು ಎಚ್ಚರ…