ನಮಸ್ಕಾರಗಳು ಅಂದಿನ ಕಾಲದಲ್ಲಿ ಹೆಣ್ಣು ಮಗು ಜನಿಸಿದರೆ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗುತ್ತಿತ್ತು ಆದರೆ ಇವತ್ತಿನ ದಿವಸ ನೀವು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನೋಡಬಹುದು ಹೆಣ್ಣು ಮಗು ಜನಿಸಿದರೆ ಆ ಮಗುವನ್ನು ಮನೆಗೆ ಬರಮಾಡಿಕೊಳ್ಳುವಾಗ ಬಹಳ ಸಂಭ್ರಮದಿಂದ ಕುಟುಂಬಸ್ಥರು ಹೆಣ್ಣು ಮಗುವನ್ನು ಮನೆಗೆ ಆನಂದರಿಂದ ಸಂತಸದಿಂದ ಬರಮಾಡಿಕೊಳ್ಳುತ್ತಿದ್ದರು ಹೌದು ಇದನ್ನೆಲ್ಲ ನೋಡಿದರೆ ಕಾಲ ಬದಲಾಗಿದೆ ವಿದ್ಯಾವಂತರು ಹೆಚ್ಚಾಗುತ್ತಿದ್ದಾರೆ ಖುಷಿಪಡುವ ಸಂಗತಿ ಅಂತ ನನ್ನ ಮನಸ್ಸು ನಿರಾಳವಾಗುತ್ತದೆ. ಆದರೆ ಇಂದಿನ ಲೇಖನದಲ್ಲಿ ನಡೆದಿರುವ ನೈಜ ಘಟನೆಯ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಇದನ್ನು ಓದಿದರೆ ಏನಪ್ಪಾ ಇದು ಮತ್ತೆ ಕಾಲ ಹೀಗಾಯ್ತು, ಅಂತ ನೀವು ಕೂಡ ಅಂದುಕೊಂಡಿರಾ ಹೌದು ಹಾಗಾದರೆ ನಡೆದದ್ದೇನು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.
ಹೌದು ಅದೇನೆಂದರೆ, ಹೆಣ್ಣು ಮಗು ಜನಿಸಿತು ಎಂದು ಆ ಮಗುವನ್ನು ತಂದು ದುರ್ಗಮ್ಮ ತಾಯಿಯ ದೇವಸ್ಥಾನದಲ್ಲಿ ಹೋದ ತಾಯಿ ನಿಜಕ್ಕೂ ಆಕೆಗೆ ಮನಸ್ಸೇ ಇಲ್ಲದ ಆ ಪುಟ್ಟ ಕಂದಮ್ಮನನ್ನು ಆ ತಾಯಿಯೇ ಮಗುವಿಗೆ ದಿಕ್ಕಿಲ್ಲದ ಹಾಗೆ ಮಾಡಿಬಿಟ್ಟಳು ಹೌದು ಆ ಕಂದಮ್ಮನಿಗೆ ದುರ್ಗಮ್ಮ ತಾಯಿಯೇ ದಿಕ್ಕು ತೋರಿದ ಬೆಳಕು ಮೂಡಿಸಿದ್ದಾಳೆ ನೋಡಿ. .. ಹೌದು ಈ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಕೆರೆಯ ಮೇಲಿನ ದುರ್ಗಮ್ಮ ಗುಡಿಯ ಬಳಿ ನಡೆದಿದೆ.. ಹೌದು ಆಗತಾನೆ ಹುಟ್ಟಿರುವ ಪುಟ್ಟ ಕಂದನನ್ನು ಎದೆ ಹಾಲು ಕುಡಿಯ ಬೇಕಿದ್ದ ಆ ಕಂದ ಹಸಿವಿನಿಂದ ಅಳುತ್ತಿದ್ದರೂ ಸಹ ಕಲ್ಲು ಮನಸ್ಸಿನ ಆ ತಾಯಿ ಮಗುವನ್ನು ತಂದು ದುರ್ಗಮ್ಮನ ಗುಡಿಯಲ್ಲಿ ಒಂದು ಬಟ್ಟೆಯಲ್ಲಿ ಸುತ್ತಿ ಬುಟ್ಟಿಯಲ್ಲಿ ಹಾಕಿ ದೇವರ ಮುಂದೆ ಇಟ್ಟು ಹೋಗಿದ್ದಾಳೆ.. ಆದರೆ ತನ್ನ ಮಡಿಲಿಗೆ ಬಂದ ಕಂದನಿಗೆ ದುರ್ಗಮ್ಮ ತಾಯಿಯೇ ಈಗ ದಾರಿ ತೋರಿದ್ದಾಳೆ..
ಆ ಹೆಣ್ಣು ಮಗುವನ್ನು ತಂದು ಎಲ್ಲೆಲ್ಲಿಯೋ ಇಟ್ಟು ಹೋದ ಹಲವು ಘಟನೆಗಳು ನಾವು ನೀವೆಲ್ಲ ನೋಡಿದ್ದೇವೆ ಹಾಗು ಸಾಮಾಜಿಕ ಜಾಲತಾಣಗಳಲ್ಲಿಯೂ ಓದಿರುತ್ತೇವೆ ಹಾಗೆ ಆಸ್ಪತ್ರೆ ಮುಂದೆ ಚರಂಡಿಯಲ್ಲಿ ಅಥವಾ ರಸ್ತೆ ಬದಿಯಲ್ಲಿ ಆಗತಾನೆ ಜನಿಸಿದ ಕಂದಮ್ಮಗಳನ್ನು ಬಿಟ್ಟು ಹೋಗಿರುವುದು ಮತ್ತು ಕೆಲವು ಕಡೆ ಕಂದಮ್ಮಗಳು ಸಿಕ್ಕಿರುವುದು, ಅಂತಹ ಮಕ್ಕಳಲ್ಲಿ ಎಷ್ಟೋ ಮಕ್ಕಳು ಉಳಿದಿವೆ ಇನ್ನು ಎಷ್ಟೋ ಮಕ್ಕಳು ಹುಟ್ಟಿದ ಕೂಡಲೇ ಇಹಲೋಕ ತ್ಯಜಿಸಿದ ಇನ್ನೂ ಈ ಸುಖಕ್ಕೆ ಯಾಕೆ ಮಕ್ಕಳನ್ನು ಹೇರಬೇಕಾಗಿತ್ತು ಅಲ್ವಾ ಸ್ನೇಹಿತರೆ.
ಸಧ್ಯ ಈಗ ನಡೆದುರುವ ಘಟನೆಯಲ್ಲಿ ಸಮಾಧಾನ ಪಡುವ ವಿಚಾರ ಎಂದರೆ ಆ ಮಗುವನ್ನು ಪಕ್ಕದಲ್ಲಿದ್ದ ಕೆರೆಗೆ ಹಾಕದೇ ದೇವರ ಮುಂದೆ ಇಟ್ಟು ಹೋಗಿದ್ದಾರೆ ಆ ಪಾಪಿಗಳು. ಬಹುಶಃ ಆ ದುರ್ಗಮ್ಮ ತಾಯಿಯೇ ಮಗುವನ್ನು ಇಟ್ಟವಳಿಗೆ ಆ ರೀತಿ ಜ್ಞಾನ ಕೊಟ್ಟಿರಬಹುದೇನೊ, ಇನ್ನು ಎಳೆ ಕಂದಮ್ಮನನ್ನು ಇಟ್ಟು ಹೋದ ನಂತರ ಆ ಕಂದ ಹಸಿವಿನಿಂದ ಚೀರುತ್ತಿದ್ದು ಇನ್ನಷ್ಟು ಸಮಯ ಕಳೆದಿದ್ದರೆ ಬಹುಶಃ ಆ ಮಗು ಉಳಿಯುತ್ತಿರಲಿಲ್ಲಾ ಅನಿಸುತ್ತೆ ಆದರೆ ಆ ತಾಯಿ ತನ್ನ ಮಡಿಲಿಗೆ ಬಂದ ಮಗು ಕೈಬಿಡಲಿಲ್ಲ ಎಲ್ಲೂ ಹೋಗಬೇಕಿದ್ದ ವ್ಯಕ್ತಿಯೊಬ್ಬರು ತನ್ನ ಗುಡಿ ಗೆ ಬರುವ ಹಾಗೆ ಮಾಡಿದ್ದಳು.
ಹೌದು ಅದೇ ಸಮಯಕ್ಕೆ ಕೃಷ್ಣಮೂರ್ತಿ ಎಂಬಾತ ದೇವಸ್ಥಾನದ ಬಳಿ ಹೋಗುವಾಗ ಆತ ದೇವಸ್ಥಾನದ ಒಳಗೆ ಬರುತ್ತಾನೆ ಹಾಗೂ ಆ ಮಗುವಿನ ರಕ್ಷಣೆ ಯನ್ನು ಮಾಡುತ್ತಾರೆ ಆ ದೇವರೇ ಈ ರೀತಿ ಮಾಡಿದ್ದರೇನೋ. ಬೇರೆ ಎಲ್ಲೋ ಹೋಗಬೇಕಾದ ನಾನು ಈ ದಾರಿಯಲ್ಲಿ ಬರುತ್ತಿದ್ದೆ, ಮಗುವಿನ ಸದ್ದು ಕೇಳಿ ಹತ್ತಿರ ಬಂದೆ ಎಂದಿದ್ದಾರೆ ಕೃಷ್ಣಮೂರ್ತಿ ಬಂದವರೇ ಸೀದಾ ಮಗುವನ್ನು ಎತ್ತಿಕೊಂಡು, ಆ ಮಗುವಿನಗೆ, ಆಗ ತಾನೆ ಹುಟ್ಟಿದ ಮಗುವಾದ್ದರಿಂದ ತಕ್ಷಣ ಅದನ್ನು ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆ ಮಗುವಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ ಆರೈಕೆ ಮಾಡುತ್ತಾರೆ ಹಾಗೂ ಆ ಪುಟ್ಟ ಕಂದನನ್ನು ಈ ರೀತಿ ಹೆತ್ತ ತಾಯಿ ದೇವರ ಗುಡಿಯಲ್ಲಿ ಬಿಟ್ಟು ಹೋದ ವಿಚಾರ ತಿಳಿದು ಕೆಲವರು ಆ ಮಗುವನ್ನ ದತ್ತು ಪಡೆಯಲು ಮುಂದೆ ಬರುತ್ತಾರೆ. ಸಧ್ಯ ಕಾನೂನಿನ ಮೂಲಕ ಮಗುವನ್ನು ದತ್ತು ನೀಡಲಾಗುವುದು ಎಂದಿದ್ದಾರೆ.
ಆ ಪುಟ್ಟ ಕಂದಮ್ಮ ಹೆಣ್ಣುಮಗು ಎಂಬ ಕಾರಣಕ್ಕಾಗಿ ಈ ರೀತಿ ಹೆತ್ತತಾಯಿ ಕಂದಮ್ಮನನ್ನ ಬಿಟ್ಟು ಹೋಗಿರಬಹುದು ಅಥವಾ ಬೇರೆ ರೀತಿಯ ಸಂವಾದದ ಫಲವಾಗಿ ಈ ಮಗು ಜನಿಸಿರಬಹುದು ಈ ಕಾರಣಕ್ಕಾಗಿ ಆ ಕಂದ ಮನನ ಬಿಟ್ಟು ಹೋಗಿರಬಹುದು ಎಂದು ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಹೆತ್ತಮ್ಮನ ಎದೆಗಪ್ಪಿ ಹಾಲು ಕುಡಿದು ಬೆಚ್ಚಗೆ ಮಲಗಬೇಕಾದ ಕಂದನೀಗ ಮಗುವಿಗಾಗಿ ಆತೊರೆಯುತ್ತಿರುವ ಮತ್ತೊಂದು ತಾಯಿಯ ಮಡಿಲು ಸೇರಿತು. ಮಗುವಿನ ಭವಿಷ್ಯಕ್ಕೇನೊ ಆ ದುರ್ಗಮ್ಮ ತಾಯಿ ದಾರಿ ತೋರಿದಳು, ಆದರೆ ಮಗುವನ್ನು ಈ ರೀತಿ ಬಿಟ್ಟ ಮಹಾತಾಯಿ ಆಕೆಯ ಕಷ್ಟ ಏನಾದರೂ ಇರಬಹುದು ಆಕೆಯ ಸಂದರ್ಭ ಏನಿರಬಹುದು.
ಆಗ ತಾನೆ ಜನಿಸಿದ ಆ ಮಗುವನ್ನು ತನ್ನ ಕರುಳು ಬಳ್ಳಿಯನ್ನು ಹೀಗೆ ಎಲ್ಲೆಲ್ಲಿಯೂ ಬಿಟ್ಟು ಹೋದ ಆತ ಈ ಜೀವನಪೂರ್ತಿ ನೆಮ್ಮದಿಯಿಂದ ಇರಲು ಸಾಧ್ಯನ, ಇನ್ನೂ ಮದುವೆಗೂ ಮುನ್ನ ಹುಟ್ಟಿದ ಮಗುವಾದರೆ ಒಂದಂತೂ ಹೇಳ್ತೇವೆ ಕೇಳಿ ಸ್ನೇಹಿತರೇ ದಯವಿಟ್ಟು ನಿಮ್ಮ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಪ್ರೀತಿ ಎಂಬ ಪವಿತ್ರವಾದ ಸಂಬಂಧವನ್ನು ಬಳಸಿಕೊಂಡು ಈ ರೀತಿ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ನಿಮ್ಮ ಆಸೆಗಳಿಂದ ಆ ಪುಟ್ಟ ಜೀವಿಗಳು ಅ ಪುಟ್ಟ ಕಂದಮ್ಮಗಳು ಯಾಕೆ ಹೀಗೆ ಬೀದಿಯಲ್ಲಿ ಬೆಳೆಯಬೇಕು. ಒಮ್ಮೆ ನೆನಪಿಸಿಕೊಳ್ಳಿ ಬೀದಿಯಲ್ಲಿ ಬೆಳೆಯುವ ಆ ಕಂದಮ್ಮಗಳ ಮುಖವನ್ನು ದಯವಿಟ್ಟು ಯಾರೂ ಇಂತಹ ತಪ್ಪುಗಳನ್ನು ಮಾಡಲು ಮುಂದಾಗಬೇಡಿ.