ನಮ್ಮ ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಗೂ ಸಹ ನೀರಿನ ಅವಶ್ಯಕತೆ ಇದ್ದೇ ಇದೆ ಇನ್ನೂ ನಮ್ಮ ಭೂಮಿಯ ಸುತ್ತ ನೀರನ್ನು ನಾವು ಕಾಣಬಹುದಾಗಿದೆ ಆದರೆ ಈ ನೀರು ಮನುಷ್ಯನ ಬಳಕೆಗೆ ಅರ್ಹವಾಗಿರುವುದಿಲ್ಲ ಆದ್ದರಿಂದ ಮಳೆಯಿಂದ ಏನು ನೀರು ಪಡೆದುಕೊಳ್ಳುತ್ತೇವೆ ಆ ನೀರು ಮನುಷ್ಯನಿಗೆ ಬಳಕೆ ಮಾಡುವುದಕ್ಕೆ ಸೂಕ್ತವಾಗಿರುತ್ತದೆ. ಹಾಗೆ ಯಾರೇ ಆಗಲಿ ತಮ್ಮ ತಮ್ಮ ಊರುಗಳಲ್ಲಿ ನೀರಿನ ಸಮಸ್ಯೆ ಉಂಟಾದಾಗ ಈ ನೀರಿನ ಸಮಸ್ಯೆ ಕಂಡು ಬಂದಾಗ ಅದಕ್ಕೆ ಪರಿಹಾರವಾಗಿ ಏನನ್ನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಅದೇ ರೀತಿ ಹಳ್ಳಿಗಳಲ್ಲಿ ಕೆರೆ ನಿರ್ಮಾಣ ಮಾಡುವುದು ಸಹ ಸಹಜವೇ ಆಗಿರುತ್ತದೆ. ಆದರೆ ನಾವು ಈ ದಿನದ ಲೇಖನದಲ್ಲಿ ಹೇಳಲು ಹೊರಟಿರುವ ಈ ಕೆರೆ ನಿರ್ಮಾಣದ ಬಗ್ಗೆ ಕೇಳಿದರೆ .
ನೀವು ಸಹ ಅಚ್ಚರಿ ಪಡ್ತೀರಾ ಹೌದು ಕೇವಲ ಒಂದು ಹೆಣ್ಣುಮಗಳು ನಿರ್ಮಾಣ ಮಾಡಿದ ಈ ಕೆರೆಯ ಹಿಂದಿರುವ ಕತೆ ಏನು ಹೇಳ್ತೀವಿ ಕೇಳಿ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ನಾವು ಈ ದಿನ ಹೇಳಲು ಹೊರಟಿರುವ ಈ ಕೆರೆಯ ಹಿನ್ನಲೆ ಈ ಕೆರೆಯನ್ನು ಶಾಂತಲಾದೇವಿ ಮತ್ತು ಸಿದ್ಧೇಶ್ವರರು ನಿರ್ಮಾಣ ಮಾಡಿದರೂ ಹಾಗೂ ಈ ಕೆರೆಯ ನೀರನಿಂದ ಚಿತ್ರದುರ್ಗ ಜಿಲ್ಲೆಗೆ ನೀರಿನ ಸೌಲಭ್ಯವನ್ನು ನೀಡಲಾಗಿದೆ. ಆ ಕೆರೆ ಮತ್ಯಾವುದೂ ಅಲ್ಲ ಶಾಂತಿ ಸಾಗರ ಕೆರೆ ಹೌದು ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕೆರೆಯಾಗಿರುವ ಶಾಂತಿ ಸಾಗರ ಕೆರೆ ಯನ್ನು ಸೂಳೆಕೆರೆ ಎಂದೂ ಸಹ ಕರೆಯಲಾಗುತ್ತದೆ. ಒಂದು ಹೆಣ್ಣು ಮಗಳು ನಿರ್ಮಾಣ ಮಾಡಿರುವ ಈ ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು ಶಾಂತಮ್ಮ ಎಂಬ ಹೆಣ್ಣುಮಗಳು 5500ಎಕರೆಯ ವಿಸ್ತಾರ ಯಲ್ಲಿ ಈ ಕೆರೆಯನ್ನು ನಿರ್ಮಾಣ ಮಾಡಲಾಗಿದೆ ಮತ್ತು ಈ ಕೆರೆ ಸೂಳೆಕೆರೆ ಎಂದು ಜನಪ್ರಿಯಗೊಂಡಿದೆ.
ಪೂರ್ವಜರು ನಿರ್ಮಿಸಿರುವ ಅನೇಕ ಕೆರೆಗಳು ಇಂದಿನ ದಿನಮಾನದಲ್ಲಿ ನೀರಿನ ಬರವನ್ನು ಹೋಗಲಾಡಿಸಿದೆ ಮತ್ತು ಜನರಿಗೆ ಬಹಳ ಸಹಾಯವನ್ನು ಮಾಡಿದೆ ನೀರಿನ ಬವಣೆ ತೀರಿಸಲು ಇಂತಹ ಕೆರೆಗಳು ಬಹಳ ಉಪಯುಕ್ತ ಕರವಾಗಿದ್ದು ಒಬ್ಬ ಹೆಣ್ಣುಮಗಳು ಕೆರೆಯನ್ನು ಕಟ್ಟಬಹುದು ಎಂಬುದಕ್ಕೆ ಇದು ಜೀವಂತ ಕುರುಹುಗಳಾಗಿವೆ. ಈ ಸೂಳೆಕೆರೆಯು ಅಥವಾ ಶಾಂತಸಾಗರ ಕೆರೆಯೂ ದಾವಣಗೆರೆಯ ಚನ್ನಗಿರಿ ಅಲೆ ಇದ್ದು ಈ ಕೆರೆಯ ನೀರು ಸಾವಿರಾರು ಕುಟುಂಬಗಳಿಗೆ ನೀರಿನ ಬವಣೆ ಅನ್ನೋ ತೀರಿಸುತ್ತಾ ಇದೆ ಹಾಗೂ 11 ನೇ ಶತಮಾನದಲ್ಲಿ ಶಾಂತಮ್ಮ ಎಂಬ ಹೆಣ್ಣುಮಗಳು ಕಟ್ಟಿಸಿರುವ ಈ ಕೆರೆಯ ಉತ್ತರದಲ್ಲಿ ಸಿದ್ದನಾಲೆ ಹಾಗೂ ದಕ್ಷಿಣ ದಿಕ್ಕಿನಲ್ಲಿ ಬಸವನಾಲೆ ಎಂಬ 2ನಾಲೆಗಳು ಸಹ ಇದ್ದು ಹರಿದ್ರಾವತಿ ನದಿಗೆ ಅಡ್ಡಲಾಗಿ ಈ ಕೆರೆಯನ್ನು ಕಟ್ಟಲಾಗಿದೆ ಎಂದು ಹೇಳಲಾಗಿದೆ ಹಾಗೂ 23 ಹಳ್ಳಿಗಳಿಗೆ ನೀರಿನ ಆಧಾರವಾಗಿರುವ ಈ ಕೆರೆ ಕುಡಿಯುವ ನೀರಿನ ಸೌಲಭ್ಯವನ್ನು ಸಹ ಒದಗಿಸುತ್ತಾ ಇದೆ ಹಾಗೂ ಈ ಕೆರೆಯ ಹಿಂದಿನ ರೋಚಕ ಕಥೆ ಇದಾಗಿದ್ದು, ಸಾವಿರಾರು ಕುಟುಂಬಗಳಿಗೆ ಆಧಾರವಾಗಿದೆ.
ಅಂದಿನ ಕಾಲದಲ್ಲಿ ಸ್ವರ್ಗಾವತಿ ಎಂಬ ಪಟ್ಟಣವಿತ್ತು, ಆ ಪಟ್ಟಣದ ರಾಜಾ ವಿಕ್ರಮ ರಾಜ ಅಲ್ಲಿ ಆಳ್ವಿಕೆ ಮಾಡುತ್ತಾ ಇದ್ದ ಹಾಗೂ ಆ ರಾಜ ಮತ್ತು ಪರಿವಾರ ಸಂತಾನ ಇಲ್ಲದೇ ಕೊರುಗುತ್ತಾ ಇದ್ದರೋ ಏನೋ ಸುಮಾರು ವರುಷದ ಬಳಿಕ ಒಂದು ಹೆಣ್ಣುಮಗು ಜನಿಸುತ್ತದೆ ಆ ರಾಜ ದಂಪತಿಗಳಿಗೆ. ಆ ಮಗುವಿಗೆ ಶಾಂತಲಾದೇವಿ ಎಂಬ ಹೆಸರು ಇಡುತ್ತಾರೆ, ಹಾಗೂ ಬಹಳ ವರುಷಗಳ ನಂತರ ಹುಟ್ಟಿದ ಮಗು ಎಂದು ಆ ಮಗುವನ್ನ ಬಹಳ ಮುದ್ದಿನಿಂದ ಸಾಕುತ್ತಾರೆ ಬಳಿಕ ವಯಸ್ಸಿಗೆ ಬಂದ ಶಾಂತಲಾದೇವಿ ರಾಜಮನೆತನ ಒಲ್ಲದವರ ಜೊತೆ ಪ್ರೀತಿಸಿ ಮದುವೆಯಾಗುತ್ತಾಳೆ.
ಈ ಮದುವೆ ಅನ್ನೋ ಒಪ್ಪದ ಅಲ್ಲಿಯ ಜನರು ಆಕೆಯನ್ನು ಸೂಳೆಯೆಂದು ಹಂಗಿಸಲು ಶುರುಮಾಡುತ್ತಾರೆ ಮತ್ತು ಆಕೆಯ ತಂದೆ ಸಹ ನೀನು ನಡತೆ ಕೆಟ್ಟವಳು ನಮ್ಮ ಮನೆತನದ ಮರ್ಯಾದೆ ಹಾಳು ಮಾಡಿದೆ, ಈ ಕಳಂಕದಿಂದ ಹೊರಬರಲು ಶಾಂತಲಾದೇವಿ ಯೋಚಿಸುತ್ತಾರೆ, ಹಾಗೂ ಕೆರೆಯೊಂದನ್ನು ನಿರ್ಮಿಸಬೇಕೆಂದು ಅಲೋಚನೆ ಮಾಡಿ ದೃಢ ನಿರ್ಧಾರ ಮಾಡುತ್ತಾರೆ ಹಾಗೂ ಕೆರೆ ಕಟ್ಟಲು ವೇಶ್ಯೆಯರ ಬಳಿ ನೀವು ವಾಸ ಮಾಡುತ್ತಿರುವಂತಹ ಸ್ಥಳವನ್ನು ನನಗೆ ಕೊಡಿ ಎಂದು ಕೇಳಿ ಅವರಿದ್ದ ಜಾಗದಲ್ಲಿ ಕೆರೆ ನಿರ್ಮಾಣ ಮಾಡುವುದಾಗಿ ಹೇಳುತ್ತಾರೆ ಹಾಗೂ ವೇಶ್ಯೆಯರು ಸಹ ಈ ಕೆರೆಗೆ ಸೂಳೆಕೆರೆ ಎಂದು ಹೆಸರಿಡುವುದು ಆದರೆ ಮಾತ್ರ ಜಾಗ ಕೊಡುವುದಾಗಿ ಷರತ್ತು ಹಾಕುತ್ತಾರೆ.
ಶಾಂತಲಾದೇವಿ ತನ್ನ ಪತಿಯ ಜೊತೆ ಸೇರಿ ಕೆರೆ ನಿರ್ಮಾಣ ಮಾಡುತ್ತಾಳೋ ಏನೋ 5ವರುಷದ ಸುಧೀರ್ಘ ಪ್ರಯತ್ನದಿಂದಾಗಿ ಕೆರೆ ನಿರ್ಮಾಣ ಕಾರ್ಯ ಮುಗಿಯುತ್ತದೆ ಹಾಗೂ ಶಾಂತಲಾದೇವಿ ನಂತರ ಇದೇ ಕೆರೆಗೆ ಬಿದ್ದು ಪ್ರಾಣ ಬಿಡುತ್ತಾಳೆ. ಪತ್ನಿಯ ಜೊತೆ ಪತಿಯೂ ಸಹ ಅದೇ ಕೆರೆಗೆ ಬಿದ್ದು ಪ್ರಾಣ ಬಿಡುತ್ತಾನೆ. ಇನ್ನೂ ಸಿದ್ದೇಶ್ವರನನ್ನು ನೆನೆಸಿಕೊಳ್ಳಲು, ಬೆಟ್ಟದ ಮೇಲೆ ದೇವಸ್ಥಾನ ಕಟ್ಟಲಾಗಿದೆ ಶಾಂತಲಾ ದೇವಿ ನೆನಪಿಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ಮಡಿಲಕ್ಕಿ ನೀಡಲಾಗುತ್ತದೆ. ಜನೋಪಕಾರಿ ಮಾಡಿದ ಶಾಂತಲಾ ದೇವಿಯನ್ನ ಅಮ್ಮ ಶಾಂತಮ್ಮ ಎಂದು ಕರೆಯುತ್ತಿದ್ದರು, ಸರ್ಕಾರ ಈ ಕೆರೆಯನ್ನು ಶಾಂತಿ ಸಾಗರ ಎಂಬ ಹೆಸರಿನಿಂದ ಕರೆದರೆ ಜನರು ಇದನ್ನು ಸೂಳೆ ಕೆರೆಯೆಂದು ಕರೆಯುತ್ತಾರೆ ಇನ್ನು ಶಾಂತಲದೇವಿ ಮತ್ತು ಸಿದ್ಧೇಶ್ವರರ ಪ್ರೇಮದ ಫಲವಾಗಿ ಈ ಕೆರೆ ನಿರ್ಮಾಣ ಆಗಿದೆ ಎಂದು ಹೇಳಲಾಗುತ್ತದೆ ಅಂದು ಶಾಂತಲಾ ದೇವಿಯವರು ಈ ಕೆರೆ ನಿರ್ಮಾಣ ಮಾಡದೆ ಇದ್ದಿದ್ದರೆ ಇಂದಿನ ದಿನ ಹಲವು ಕುಟುಂಬಗಳು ನೀರಿಗಾಗಿ ಬಹಳ ಬವಣೆ ಕೊಡಬೇಕಾಗಿರುತ್ತಿತ್ತು.