ಒಬ್ಬ ಮಂತ್ರೀನೂ ಮಾಡೋಕೆ ಆಗದೆ ಇರೋದನ್ನ ಈ ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ನೋಡಿ ಏನೆಲ್ಲಾ ಮಾಡಿದ್ದಾರೆ… ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಈ ಊರೇ ಸಾಕ್ಸಿ ..

ನಮಸ್ಕಾರ ಪ್ರಿಯ ಸ್ನೇಹಿತರೇ ಭಾರತ ದೇಶವು ಹಳ್ಳಿಗಳಿಂದ ಕೂಡಿದ ಹೌದು ಭಾರತ ದೇಶದ ಬೆನ್ನೆಲುಬು ನಮ್ಮ ರೈತ ಮತ್ತು ರೈತ ವಾಸ ಇರುವುದು ಹಳ್ಳಿಗಳಲ್ಲಿ ಹಾಗೆ ನಮ್ಮ ಭಾರತ ದೇಶದಲ್ಲಿ ಇವತ್ತಿಗೂ ಅದೆಷ್ಟೋ ಹಳ್ಳಿಗಳು ಅಭಿವೃದ್ಧಿಯನ್ನು ಕಂಡಿಲ್ಲಾ. ಈ ಕಾರಣಕ್ಕಾಗಿಯೇ ಎಷ್ಟೋ ಜನರು ಹಳ್ಳಿ ಅಂದರೆ ಮುಖ ಮುರಿಯುತ್ತಾರೆ. ಇನ್ನು ಹಳ್ಳಿ ವಿಚಾರಕ್ಕೆ ಬರುವುದಾದರೆ ಹಳ್ಳಿ ಅಭಿವೃದ್ಧಿಯೇ ಆಗದಿರಬಹುದು ಆದರೆ ಹಳ್ಳಿಯಲ್ಲಿ ಇರುವ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಆಸಕ್ತಿ ತೋರಿದರೆ ಹಳ್ಳಿ ಬೇಗ ಅಭಿವೃದ್ಧಿ ಆಗುತ್ತದೆ. ನೀಲಗಿರಿ ಬೆಟ್ಟಗಳ ಮಡಿಲಲ್ಲಿ ನೆಲೆಗೊಂಡಿರುವ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೆಟ್ಟು ಮಲ್ಯಮ್ ತಾಲೂಕಿನ ವದಂಟುರೈ ಗ್ರಾಮ ಇಂದು ಭಾರತದಲ್ಲಿರುವ ಗ್ರಾಮಗಳಲ್ಲಿ ಉತ್ತಮವಾದ ಗ್ರಾಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆ ಗ್ರಾಮಕ್ಕೆ ಹೋದರೆ ಯಾವುದೊ ನಗರಕ್ಕೆ ಹೋದಂತೆ ಭಾಸವಾಗುತ್ತದೆ. ಸುಮಾರು ಒಂದು ದಶಕದಿಂದ ಈ ಗ್ರಾಮವು ಮಾದರಿ ಗ್ರಾಮ ಎಂಬ ಹೆಸರನ್ನು ಉಳಿಸಿಕೊಂಡು ಬಂದಿದ್ದು

ಇನ್ನೂ ಈ ಗ್ರಾಮದಲ್ಲಿ ಇರುವ ಜನರು ತಮ್ಮ ಮನೆಗೆ ಬೇಕಾದ ವಿದ್ಯುತ್ತನ್ನು, ಸ್ವತಹ ಉತ್ಪಾದಿಸಿ ಕೊಳ್ಳುತ್ತಾರೆ ಮನೆ ಬಳಕೆಗೆ ಮಾತ್ರ ಉತ್ಪಾದಿಸುವುದಲ್ಲದೇ ವಿದ್ಯುತ್ತನ್ನು ಉತ್ಪಾದಿಸಿ ಅದನ್ನು ತಮಿಳುನಾಡು ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ. ಇಲ್ಲಿ ವಾಸ ಇರುವಂತಹ ಎಲ್ಲಾ ಜನರ ಮನೆಯು ನೋಡುವುದಕ್ಕೆ ಒಂದೇ ತರಹ ಇದೆ. ಗ್ರಾಮದ ಜನರಿಗೆ ಎಲ್ಲಾರಿಗೂ ಕುಡಿಯುವುದಕ್ಕೆ ಶುದ್ಧ ನೀರಿನ ಘಟಕವಿದೆ. ಒಂದುಕಾಲದಲ್ಲಿ ನೀರಿಗಾಗಿ ಬಹಳ ದೂರದ ವರೆಗೂ ನಡೆದೇ ಹೋಗಬೇಕಾಗಿತ್ತು, ಹಾಗೆ ಈ ಗ್ರಾಮ ಇಂದು ಸ್ಮಾರ್ಟ್ ಗ್ರಾಮವಾಗಿರುವ ಹಿಂದೆ ಆರ್ ಷಣ್ಮುಗಂ ಅವರ ಪರಿಶ್ರಮ ಇದೆ. ಹೌದು ಇವರ ಪರಿಶ್ರಮಕ್ಕೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕು. ದಶಕಗಳ ಹಿಂದೆ ಈ ಗ್ರಾಮವು ಕೂಡ ಬೇರೆ ಹಳ್ಳಿಗಳಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು.

ಇನ್ನೂ ಇದನ್ನೆಲ್ಲ ಗಮನಿಸಿದ ಆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಆರ್ ಷಣ್ಮುಗಂ ಅವರು ಆಲೋಚನೆ ಮಾಡಿ ಹೆಚ್ಚು ಆಸಕ್ತಿ ತೋರಿ ತಮ್ಮ ಗ್ರಾಮವನ್ನು ಸುಂದರ ಹಾಗೂ ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂದು ಆಲೋಚನೆ ಮಾಡಿ ಕೊನೆಗೆ ನಿರ್ಧಾರ ಮಾಡ್ತಾರೆ ಹಾಗು ಹಲವಾರು ಯೋಜನೆಗಳನ್ನು ಕೈಗೊಂಡರು. 1996ರಲ್ಲಿ ಪಂಚಾಯಿತಿ ಅಧ್ಯಕ್ಷರಾದ ಷಣ್ಮುಗಂ ಅವರು ಪಂಚಾಯಿತಿಗೆ ಸರ್ಕಾರದಿಂದ ಬರುವ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿ .

ಮೊದಲು ಹಳ್ಳಿಯಲ್ಲಿ ವಾಸಿಸುವ ಜನರಿಗೆ ಸರ್ಕಾರದ ವಿವಿಧ ಯೋಜನೆಯನ್ನು ಬಳಸಿಕೊಂಡು, ಪಕ್ಕಾ ಮನೆಯನ್ನು ನಿರ್ಮಾಣ ಮಾಡಿಕೊಡಲು ಪ್ರಾರಂಭ ಮಾಡಿದರು. 1996 ಷಣ್ಮುಗಂ ಅವರು ಕೇಂದ್ರ ಸರ್ಕಾರದ ಯೋಜನೆಯಾದ ರಾಜೀವ್ ಗಾಂಧಿ ನ್ಯಾಷನಲ್ ಡ್ರಿಂಕಿಂಗ್ ವಾಟರ್ ಸ್ಯಾನಿಟೇಶನ್ ಮಿಷನ್ ಯೋಜನೆಯಡಿಯಲ್ಲಿ ಇಡೀ ಗ್ರಾಮಕ್ಕೆ ನೀರನ್ನು ಒದಗಿಸುವ ಯೋಜನೆಯನ್ನು ಮಾಡಿದರು. ಬಳಿಕ ಈ ಗ್ರಾಮಕ್ಕೆ ಇದೀಗ ದಿನದ 24 ಗಂಟೆಗಳು ನೀರು ಸರಬರಾಜಾಗುವಂತೆ ಆಯಿತು.

ನಂತರ ಗ್ರಾಮದಲ್ಲಿ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಎಲ್ಲರ ಮನೆಗಳ ಮೇಲೆ ಸೌರ ಘಟಕವನ್ನು ಸ್ಥಾಪಿಸಿ ಎಲ್ಲರ ಮನೆಗೂ ವಿದ್ಯುತ್ ಸಿಗುವ ಹಾಗೆ ಮಾಡಲಾಯಿತು. ವಿದ್ಯುತ್ತನ್ನು ಉತ್ಪಾದನೆ ಮಾಡಿ ಅದನ್ನು ಸರ್ಕಾರಕ್ಕೆ ಮಾರಾಟ ಮಾಡಿದರೆ ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಬಹುದು ಎಂದು ಯೋಚಿಸಿದ ಷಣ್ಮುಗಂ ಅವರು ವಿಂಡ್ ಮಿಲ್ ಸ್ಥಾಪಿಸುವ ನಿರ್ಧಾರಕ್ಕೆ ಬಂದರು. ಹೀಗಾಗಿ ಪಂಚಾಯತ್ ನಲ್ಲಿರುವ ನಲವತ್ತು ಲಕ್ಷವನ್ನು ಬಳಸಿಕೊಂಡು ಹಾಗೂ ಬೇರೆ ಬ್ಯಾಂಕುಗಳಲ್ಲಿ ಪಂಚಾಯ್ತಿಯ ಪರವಾಗಿ ಸಾಲವನ್ನು ಪಡೆದುಕೊಂಡು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿಂಡ್ ಮಿಲ್ ಅನ್ನು ಗ್ರಾಮದಲ್ಲಿ ಅಳವಡಿಸಲಾಯಿತು. ಅಲ್ಲಿ ತಯಾರಾಗುವ ವಿದ್ಯುತ್ತನ್ನ ತಮಿಳುನಾಡು ವಿದ್ಯುತ್ ಮಂಡಳಿಗೆ ಮಾರಾಟ ಮಾಡಲಾಯಿತು ಈ ಗ್ರಾಮದಲ್ಲಿ ಇದುವರೆಗೂ ಸುಮಾರು ಎರಡು ಲಕ್ಷ ಯೂನಿಟ್ ವಿದ್ಯುತ್ ಮಾರಾಟವಾಗಿದೆ.

ಒಂದೇ ವರ್ಷದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡುವ ಮೂಲಕವೇ ಈ ಗ್ರಾಮವು ಪ್ರತಿವರ್ಷ ಇಪ್ಪತ್ತು ಲಕ್ಷ ರೂಪಾಯಿಗಳಷ್ಟು ಲಾಭವನ್ನು ಗಳಿಸುತ್ತದೆ. ವಿಂಡ್ ಮಿಲ್ ಸ್ಥಾಪನೆ ಮಾಡಲು ತೆಗೆದ ಸಾಲವನ್ನು ವಿದ್ಯುತ್ ಮಾರಾಟ ಮಾಡುವ ಮೂಲಕ ತಿರಿಸಲಾಗಿದೆ. ರಾಜ್ಯದ ಹಸಿರುಮನೆ ಯೋಜನೆಯಡಿಯಲ್ಲಿ ಇದುವರೆಗೂ ಎಂಟು ನೂರಾ ಐವತ್ತು ಮನೆಗಳನ್ನು ನಿರ್ಮಿಸಲಾಗಿದೆ, ಹಾಗೆ ಇಡೀ ಗ್ರಾಮಕ್ಕೆ ಡಾಂಬರ್ ರೋಡ್ ಸಹ ಇದೆ. ಇನ್ನೂ ಗ್ರಾಮದಲ್ಲಿ ಶಾಲೆಗಳನ್ನ ಸಹ ತೆರೆಯಲಾಗಿದೆ ಮತ್ತು ಪ್ರತಿಬೀದಿಗಳಿಗೆ ಬೀದಿ ದೀಪವನ್ನು ಸಹ ಹಿಡಿದು ಮನೆಯ ಒಳಗಡೆ ಸೌರವಿದ್ಯುತ್ ದೀಪ ವು ಸಹ ಉರಿಯುತ್ತಾ ಇದೆ. ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಷಣ್ಮುಗಂ ಅವರು ಕಲಿತಿರುವುದು ಕೇವಲ ಹತ್ತನೇ ತರಗತಿ ಆದರೆ ಅವರು ಮಾಡಿರುವಂತಹ ಸಾಧನೆ ಮಾತ್ರ ಅಪರೂಪವಾದದ್ದು.

ಸದ್ಯ ಈ ಗ್ರಾಮವನ್ನು ನೋಡುವುದಕ್ಕೆ ಭಾರತದ ಬೇರೆ ಬೇರೆ ಭಾಗಗಳಿಂದ ಜನರು ಬರುವುದು ಮಾತ್ರವಲ್ಲದೆ ವಿಶ್ವ ಬ್ಯಾಂಕಿನ ಸದಸ್ಯರು ಜನರು ಕೂಡ ಭೇಟಿ ನೀಡುತ್ತಿದ್ದಾರೆ ಇದುವರೆಗೂ ನಲವತ್ಮುರು ದೇಶದ ಜನರು ಭೇಟಿ ನೀಡಿದ್ದಾರೆ. ವ್ಯವಸಾಯವನ್ನು ಮುಖ್ಯ ಕಸುಬನ್ನಾಗಿ ಮಾಕೊಂಡಿರುವ ಈ ಗ್ರಾಮದ ಜನರು ಬಾಳೆಹಣ್ಣು ತೆಂಗಿನಕಾಯಿ ಮತ್ತು ಸಾಸಿವೆ ಕಾಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಗ್ರಾಮವು ದಿನೇದಿನೇ ಅಭಿವೃದ್ಧಿಯಾಗುತ್ತಾ ನೂರಾರು ಗ್ರಾಮಗಳಿಗೆ ಮಾದರಿಯಾಗಿದೆ ಪಂಚಾಯಿತಿಯ ಅಧ್ಯಕ್ಷರೊಬ್ಬರು ಸರ್ಕಾರ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಬಹುದು.

ಎನ್ನುವುದಕ್ಕೆ ವದಂಟುರೈ ಗ್ರಾಮ ಜೀವಂತ ಸಾಕ್ಷಿಯಾಗಿದೆ.ಪ್ರತಿ ಹಳ್ಳಿಯ ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಸರಕಾರದಿಂದ ಹಲವು ಸೌಲಭ್ಯಗಳು ಬರುತ್ತದೆ ಹಾಗೂ ಜನರು ಇದನ್ನು ತಿಳಿದಿರಬೇಕು ಮತ್ತು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು ಎಂಬ ಮನಸ್ಥಿತಿ ಉಳ್ಳವರು ಮಾತ್ರ ಷಣ್ಮುಗಂ ಅವರ ರೀತಿ ಕೆಲಸ ಮಾಡುವುದಕ್ಕೆ ಸಾಧ್ಯ. ಇನ್ನು ಈ ಮಾಹಿತಿ ಓದುತ್ತಾ ಇರುವ ಎಷ್ಟೋ ಮಂದಿ ಹಳ್ಳಿಯವರೇ ಆಗಿದ್ದು, ಪ್ರತಿಯೊಬ್ಬರು ಸಹ ಜವಾಬ್ದಾರಿಯಿಂದ ತಮ್ಮ ಹಳ್ಳಿಯ ಅಭಿವೃದ್ಧಿ ಕಡೆ ಗಮನ ನೀಡಿ ಗ್ರಾಮ ಪಂಚಾಯಿತಿ ಮೆಂಬರ್ ಗಳಿಗೆ ಅಥವಾ ಅಧ್ಯಕ್ಷರಿಗೆ ಈ ಕುರಿತು ವಿಚಾರ ಮಾಡಿದರೆ ನಮ್ಮ ಹಳ್ಳಿಗಳು ಸಹ ಅಭಿವೃದ್ದಿ ಹೊಂದುತ್ತದೆ ಏನಂತಿರ ಫ್ರೆಂಚ್ ಧನ್ಯವಾದ.

Leave a Comment

Your email address will not be published. Required fields are marked *