ಇನ್ನು ಕೇವಲ ಎರಡೇ ದಿನದಲ್ಲಿ ತನ್ನ ಪುಟ್ಟ ಕಂದಮ್ಮನನ್ನ ನೋಡಾಡುತ್ತೇನೆ ಅನ್ನೋ ಕಾತುರ…ಆದರೆ ಅವನು ಅಂದುಕೊಂಡಿದ್ದೆ ಬೇರೆ ಆಗಿದ್ದೆ ಬೇರೆ… ಆ ಮನೆಯಲ್ಲಿ ಎಂತಾ ಕೆಲಸ ನಡೆದು ಹೋಗಿದೆ ನೋಡಿ…ನ್ ಅಪ್ಪ ಕಂದಮ್ಮನನ್ನ ದೂರ ಮಾಡಿದ ವಿಧಿ .. ಅಯ್ಯೋ ದೇವರೇ ಅಕಟಕಟಾ… ನಿಜಕ್ಕೂ ಇದು ಎಲ್ಲರ ಕಣ್ಣ ನೀರು ತುಂಬೋ ಹಾಗೆ ಮಾಡುತ್ತದೆ….

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಆ ವಿಧಿ ಏನಾದರೂ ಇಟ್ಟಿರುತ್ತಾನೆ, ಹೌದು ಹಲ್ಲಿದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲು ಇಲ್ಲ ಎಂಬ ಮಾತನ್ನು ಕೇಳಿರುತ್ತಿರಿ, ಈ ಮಾತಿನಂತೆ ಜೀವನದಲ್ಲಿ ಒಬ್ಬರಿಗೆ ನೆಮ್ಮದಿ ಇದ್ದರೆ ಅದನ್ನು ಅನುಭವಿಸುವಂತಹ ಶಕ್ತಿಯಾಗಲಿ ಸಾಮರ್ಥ್ಯವಾಗಲಿ ದೇವರು ಕೊಟ್ಟಿರುವುದೆಲ್ಲಾ. ಆದರೆ ಶಕ್ತಿ ಸಾಮರ್ಥ್ಯ ಎಲ್ಲವೂ ಇದೆ ಅನ್ನೊರಿಗೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಯಾವುದಾದರೂ ನೋವನ್ನು ಆ ದೇವರು ನೀಡಿರುತ್ತಾನೆ ಅದನ್ನು ನಾವು ಸಹಿಸಿಕೊಂಡು ದೇವರು ಕೊಟ್ಟಿದ್ದನ್ನು ಆತನ ಪ್ರಸಾದವೆಂದು ಎಲ್ಲವನ್ನೂ ಸ್ವೀಕರಿಸುತ್ತಾ ನೆಮ್ಮದಿಯಿಂದ ಜೀವನ ಸಾಗಿಸಬೇಕು ಆಗಲೇ ಜೀವನ ಸುಖಮಯವಾಗಿ ಇರುವುದು ಅಂತಹ ಜೀವನಕ್ಕೆ ಅರ್ಥ ಕೂಡ ಬರುವುದು ಆಗಲೇ ಆ ದೇವರು ಕೂಡ ಮೆಚ್ಚುವುದು…

ಆದರೆ ಇದೆಲ್ಲಾ ಬಿಡಿ ಈತನ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು ಈತ ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸವನ್ನು ಕೂಡ ಪಡೆದುಕೊಂಡಿದ್ದ ಹೌದು ಸರ್ಕಾರಿ ಕೆಲಸವನ್ನು ಪಡೆದುಕೊಂಡಿದ್ದ ಇವನ ಬಾಳಿನಲ್ಲಿ ಏನೂ ಕೂಡ ಕೊರತೆ ಇರಲಿಲ್ಲ ಇನ್ನೇನು ಓದು ಮುಗಿಯಿತು ಕೆಲಸ ಕೂಡಾ ಸಿಕ್ಕಾಯ್ತು ಒಳ್ಳೆಯ ಸಂಬಳ ಕೂಡ ಬರುತ್ತಾ ಇದೆ ಅನ್ನುವಾಗ ಸಂಬಂಧಿಕರು ಮಾತನಾಡುವುದು ಮನೆಯವರು ಮಾತನಾಡುವುದು ಹುಡುಗನಿಗೆ ಮದುವೆ ಮಾಡಿಬಿಡಿ ಅಂತ ಹಾಗೆ ಇವನಿಗು ಕೂಡ ಅವನ ಪೋಷಕರು ಮದುವೆ ಮಾಡುವುದಾಗಿ ಆಲೋಚನೆ ಮಾಡುತ್ತಾರೆ ಮತ್ತು ಅವನಿಗೆ ಒಳ್ಳೆಯ ಕಡೆ ಹುಡುಗಿಯನ್ನು ನೋಡಿ ಮದುವೆ ಮಾಡ್ತಾರೆ. ಇದಕ್ಕೆ ಒಪ್ಪಿದ ಆ ಹುಡುಗನ ಪೋಷಕರು ಹೇಳಿದಂತೆ ಪೂರ್ಣವಾಗಿ ಸಮ್ಮತಿ ನೀಡಿ ಮದುವೆ ಕೂಡ ಆಗ್ತಾನೆ ಎಲ್ಲವೂ ಕೂಡ ಚೆನ್ನಾಗಿತ್ತು.

ಹೌದು ಸುಂದರವಾದ ಕುಟುಂಬ ಒಳ್ಳೆಯ ಕೆಲಸ ಕಷ್ಟಪಟ್ಟು ದುಡಿಯುವ ಗಂಡ ಒಂದೆಡೆಯಾದರೆ ಗಂಡನಿಗಾಗಿ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ ಪತ್ನಿ ಇವರ ಕುಟುಂಬದಲ್ಲಿ ಮತ್ತೆ ಖುಷಿಯ ಸಂಧರ್ಭ ಎಂಬಂತೆ ತನ್ನ ಪತ್ನಿ ತಾಯಿಯಾಗುತ್ತಿದ್ದಾಳೆ ಎಂಬ ವಿಚಾರ ಕೂಡ ಆತನಿಗೆ ತಿಳಿಯುತ್ತದೆ ಅವನ ಜೀವನದಲ್ಲಿ ಇನ್ನಷ್ಟು ಖುಷಿ ಸಂಭ್ರಮ ಹೌದು ಹೆಂಡತಿಯನ್ನ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ ಆಕೆಯನ್ನು ಬಹಳ ಕಾಳಜಿ ಮಾಡಿ ಸಾಕುತ್ತ ಇರುತ್ತಾನೆ ಪತಿ. ಪತಿ ಪತ್ನಿಯರು ತಮ್ಮ ಮಗುವಿನ ಕುರಿತು ಹೆಚ್ಚು ಕನಸುಗಳನ್ನು ಆಸೆಗಳನ್ನು ಕೂಡ ಕಟ್ಟಿಕೊಂಡಿರುತ್ತಾರೆ ಹಾಗೆ ಮುಂದೆ ಭವಿಷ್ಯದಲ್ಲಿ ತಮ್ಮ ಮಕ್ಕಳನ್ನು ಏನು ಓದಿಸೋದು ಎಂಬುದರ ಪೂರ್ಣ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾ ದಿನ ಕಳೆಯುತ್ತಾ ಇರುತ್ತಾರೆ ಈ ದಂಪತಿಗಳು.

ಇನ್ನೇನು ಕಾಲ ಕಳೆಯಿತು ಅವನ ಹೆಂಡತಿಗೆ 9ತಿಂಗಳು ಸಹ ತುಂಬಿತ್ತು. 9 ತಿಂಗಳು ಮುಗಿಯುತ್ತ ಇದ್ದ ಹಾಗೆ ಮತ್ತೊಂದು ತೊಂದರೆ ಇಡೀ ವಿಶ್ವಕ್ಕೆ ಹರಡಿತ್ತು, ಹೌದು ಅದೇನೆಂದರೆ ಕೊ…ರೊನಾ ಈ ಕಣ್ಣಿಗೆ ಕಾಣದೊಂದು ವೈರಾಣು ಎಷ್ಟು ಜನರ ಜೀವನದಲ್ಲಿ ಆಟವಾಡಿತ್ತು ಹಾಗೆ ಈತನಿಗೂ ಕೂಡ ಸೋಂಕು ತಗಲಿತ್ತು ತನ್ನ ಪತ್ನಿಗೆ ಇನ್ನೇನು ಸ್ವಲ್ಪ ದಿವಸಗಳಲ್ಲೇ ಡೆಲಿವರಿ ಆಗುತ್ತದೆ ಅಷ್ಟರಲ್ಲಿ ತಾನು ಕೂಡ ಹುಷಾರಾಗಿ ಬರಬೇಕೆಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಇತ್ತ ಮಗು ಭೂಮಿಗೆ ಬರಲು ಮೂರ್ನಾಲ್ಕು ದಿನಗಳು ಇತ್ತು.

ಅಷ್ಟರಲ್ಲಿ ಆ ಕುಟುಂಬಕ್ಕೆ ಒಂದೇ ಸಮನೆ ದೊಡ್ಡ ಅಲೆ ಬಂದು ಬಡೆದಂತೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದ ಆ ವ್ಯಕ್ತಿ ಮತ್ತೆ ಬರಲೇ ಇಲ್ಲ ಹೌದು ಬಂದದ್ದು ಮಾತ್ರ ಶವವಾಗಿ. ತುಂಬು ಗರ್ಭಿಣಿಯ ಆ ಸಮಯದಲ್ಲಿ ಹೆರಿಗೆ ನೋವಿನ ಜೊತೆ ತನ್ನ ಪತಿ ಇಲ್ಲ ಎಂಬ ನೋವು ಸುಖ ವಾಗಿ ನೋಡಿಕೊಂಡಿದ್ದ ಗಂಡ ಮಗು ಮುಖ ನೋಡದಂತೆ ಮಗುವು ಜೊತೆ ಇರದೆ ತನ್ನ ಜೀವನದ ಪಯಣವನ್ನು ಅರ್ಧದಲ್ಲಿಯೇ ಕೊನೆ ಮಾಡಿಕೊಂಡು ಬೆಟ್ಟ ಈ ದುಃಖ ಆ ಕುಟುಂಬದವರಿಗೆ ತಡೆಯಲು ಸಾಧ್ಯಾನಾ ನಿಜಕ್ಕೂ ಸಾಧ್ಯವಿಲ್ಲ ಅದರಲ್ಲಿಯೂ ತನ್ನ ಪತ್ನಿಯನ್ನು ಬಹಳ ಕಾಳಜಿ ಮಾಡಿ ನೋಡಿಕೊಳ್ಳುತ್ತಿದ್ದ ಆ ಪತ್ನಿ ಮತ್ತು ಆ ವಯಸ್ಸಿನಲ್ಲೇ ಅಪ್ಪ ಅಮ್ಮ ಮಗನನ್ನ ಕಳೆದುಕೊಂಡು ಅವರ ಕಷ್ಟ ಹೇಗಿರಬೇಕು ನೆನಪಿಸಿಕೊಂಡರೆ ಸಾಕಪ್ಪ ಸಾಕು ಅನಿಸುತ್ತದೆ.

Leave a Comment

Your email address will not be published. Required fields are marked *