ಸೆಲೆಬ್ರಿಟಿಗಳ ಡಾನ್ಸ್ ವಿಶೇಷ ಅಲ್ಲ; ಹಳ್ಳಿಯ ಈ ಜವಾರಿ ಜೋಡಿಯ ಡಾನ್ಸ್ ವಿಶೇಷ! ಗಾಳಿ, ಗಾಳಿ… ಸುಂಟರಗಾಳಿ…!

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಡಿಯೋಗಳು ಜನರಿಗೆ ಇಷ್ಟವಾಗುತ್ತವೆ. ಅದರಲ್ಲೂ ಹೆಚ್ಚುವರಿ ನೆಟ್ಟಿಗರು ಡ್ಯಾನ್ಸ್ ಗಳ ವಿಡಿಯೋವನ್ನು ತುಂಬಾ ಇಷ್ಟ ಪಡುತ್ತಾರೆ. ಹೀಗಾಗಿ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಸೆಲೆಬ್ರಿಟಿಗಳು ಮಾಡುವ ಡ್ಯಾನ್ಸ್ ನೋಡಿ-ನೋಡಿ ಸಾಕಾಗಿದ್ದರೆ ಒಂದು ವಿಶೇಷವಾದ ಹಳ್ಳಿಯ ಜವಾರಿ ಜೋಡಿ ಮಾಡಿದ ಸಖತ್ ಡಾನ್ಸ್ ನಿಮಗಾಗಿ ತಂದಿದ್ದೇವೆ. ಈ ಡಾನ್ಸ್ ನೋಡಿದ ನಂತರ ನೂರಕ್ಕೆ ನೂರು ಪ್ರತಿಶತ ಮೆಚ್ಚುಗೆಯನ್ನು ನೀಡಿಯೇ ನೀಡುತ್ತೀರಿ ಎಂಬ ವಿಶ್ವಾಸವಿದೆ.

ಹಳ್ಳಿಯ ಜೋಡಿಯು ತಮ್ಮ ಡಾನ್ಸ್ ಗಾಗಿ ಬಾಲಿವುಡ್ ಸೂಪರ್ ಹಿಟ್ ‘ತಾಲ್’ ಚಿತ್ರದ ಸಾಂಗ್ ಅನ್ನು ಆಯ್ಕೆ ಮಾಡಲಾಗಿದೆ. ಈ ಹಾಡಿಗೆ ಇಬ್ಬರು ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಹಾಡಿನ ದೃಶ್ಯದ ಬ್ಯಾಕ್ ಗ್ರೌಂಡ್ ನಲ್ಲಿ ಸುಂದರವಾದ ಹಳ್ಳಿಯ ಮನೆಯ ಹಂಚಿನ ಮನೆ ಇದೆ. ಹಿಂದೆ ಗೋಡೆಗೆ ಒಂದು ಹಳೆಯ ಸೈಕಲ್ ನಿಲ್ಲಿಸಿರುವುದು ಕಂಡುಬಂದಿದೆ. ಅದರ ಜೊತೆಗೆ ಅಲ್ಲಿಯೇ ರೈತನ ಅಸ್ತ್ರವಾದ ನೇಗಿಲೊಂದು ಕೇಳುತ್ತಿದೆ.

ಒಟ್ಟಿನಲ್ಲಿ ಅಲ್ಲಿನ ವಾತಾವರಣ ಸಂಪೂರ್ಣವಾಗಿ ಹಳ್ಳಿಮಯವಾಗಿಬಿಟ್ಟಿದೆ. ಡಾನ್ಸ್ ಮಾಡುತ್ತಿರುವ ಜೋಡಿ ತುಂಬಾ ಸಿಂಪಲ್ಲಾಗಿ ಡ್ರೆಸ್ ಧಾರಣೆ ಮಾಡಿದ್ದಾರೆ. ಯುವತಿಯು ಸೀರೆಯುಟ್ಟು ಡಾನ್ಸ್ ಮಾಡುತ್ತಿರುವ ಯುವಕ ಸಿಂಪಲ್ಲಾಗಿ ಪ್ಯಾಂಟ್ ಶರ್ಟುಗಳನ್ನು ತೊಟ್ಟು ಸಾತ್ ನೀಡುತ್ತಿದ್ದಾನೆ. ಡಾನ್ಸ್ ಮಾಡುವಾಗ ಅವರ ಮುಖದ ಮೇಲಿನ ಎಕ್ಸ್‌ಪ್ರೆಶನ್ ಗಳು ತುಂಬಾ ವಿಶೇಷವಾಗಿ ಕಂಡು ಬರುತ್ತಿವೆ. ಒಟ್ಟಿನಲ್ಲಿ ಹೇಳಬೇಕಾದರೆ ಯಾವುದೇ ಆಡಂಬರವಿಲ್ಲದೆ ನೈಜ ನೃತ್ಯ ಇಬ್ಬರು ಕೂಡಿ ಸಾದರಪಡಿಸಿದ್ದಾರೆ. ಹಾಡಿಗೆ ತಕ್ಕಂತೆ ಮತ್ತು ತಾಳಕ್ಕೆ ತಕ್ಕಂತೆ ಇಬ್ಬರು ತುಂಬಾ ವೇಗದಲ್ಲಿ ನೃತ್ಯ ಮಾಡುತ್ತಿದ್ದಾರೆ.

 

View this post on Instagram

 

A post shared by Dancer Sanatan (@dancer_sanatan)

Leave a Comment

Your email address will not be published. Required fields are marked *