ಉ ಅಂಟವಾ ಹಾಡಿಗೆ ಮತ್ತೆ ಡಾನ್ಸ್ ಮಾಡಿದ ಸಮಂತಾ…ನೋಡಿ ಚಿಂದಿ ವಿಡಿಯೋ

ಬರೋಬ್ಬರಿ ಐದು ಭಾಷೆಗಳಲ್ಲಿ ತೆರೆಗೆ ಬಂದ ಪುಷ್ಪ ಸಿನಿಮಾ ಗೆದ್ದು ಬೀಗಿದ್ದು ಕೊರೊನಾ ಮೂರನೇ ಅಲೆ ಕಾಣಿಸಿಕೊಂಡ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಹೌದು, ನಿರ್ದೇಶಕ ಸುಕುಮಾರ್ ಹಾಗೂ ನಟ ಅರ್ಜುನ್ ಬತ್ತಳಿಕೆಗೆ ಮತ್ತೊಂದು ಗೆಲುವು ಸಿಕ್ಕಿದ್ದು ಇನ್ನು ಸಿನಿಮಾ ಗೆಲುವಿನಲ್ಲಿ ಚಿತ್ರದ ವಿಶೇಷ ಹಾಡು ಅಂತೀಯಾ ಮಾವ ಪಾತ್ರ ಕೂಡ ದೊಡ್ಡದಿದೆ. ಹೌದು ಈ ಹಾಡಿಗೆ ಡ್ಯಾನ್ಸ್ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸಮಂತಾ ಈ ವಿಡಿಯೋ ಮೂಲಕ ವಿವರಿಸಿದ್ದಾರೆ.

ಹೌದು ಸಮಂತಾ ಹೂ ಅಂತೀಯಾ ಮಾವ ಹಾಡಿಗೆ ಹೆಜ್ಜೆ ಹಾಕಿದ್ದು ಸಿನಿಮಾ ರಿಲೀಸ್ ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಪ್ರ್ಯಾಕ್ಟೀಸ್ ಮಾಡೋಕೂ ಹೆಚ್ಚು ಅವಕಾಶವಿಲ್ಲ.ಆದರೆ ಆದರೂ ಸಮಂತಾ ಹೆಚ್ಚು ಸಮಯ ವ್ಯಯಿಸಿ ಈ ಹಾಡಿನ ಹೆಜ್ಜೆ ಕಲಿತಿದ್ದು ಪ್ರ್ಯಾಕ್ಟೀಸ್ ಹೇಗಿತ್ತು ಹಾಗೂ ಸ್ಟೆಪ್ ಹೇಳಿಕೊಟ್ಟವರು ಯಾರು ಎಂದು ವಿವರಿಸಿದ್ದಾರೆ. ಸದ್ಯ ಸಮಂತಾ ಹೂ ಅಂತೀಯಾ ಮಾವ ಹಾಡಿಗೆ ರಿಯಲ್ ಸೆಲ್ ಮಾಡುತ್ತಿರುವಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಮಂತಾ ಅವರ ಹಾಟ್ ಅವತಾರದಲ್ಲಿ ನೋಡಿರುವ ಪಡ್ಡೆ ಹುಡುಗರ ನಿದ್ದೆ ಕೆಟ್ಟಿದೆ ಎನ್ನಬಹುದು.

ಹೌದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಮಂತಾ ಪ್ರಾಕ್ಟಿಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು ಡ್ಯಾನ್ಸ್ ಹೇಳಿಕೊಡುತ್ತಿರುವ ಯಾರೂ ಸಹ ಬೆವರಿದ್ದಾರೆ. ಆದರೆ ಸಮಂತಾ ಮುಖದಲ್ಲಿ ಬೆವರು ನೀರು ಹರಿದಂತೆ ಹರಿದು ಬರುತ್ತಿತ್ತು. ಹೌದು ಅಲ್ಲದೆ ತಾವು ತುಂಬಾ ಸುಸ್ತಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. 9 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ನೋಡಿದ್ದಾರೆ. ಊ ಅಂತಾವಾ ಮಾ ಹಾಡು ಬರೋಬ್ಬರಿ 121 ಮಿಲಿಯನ್ (12.1 ಕೋಟಿ) ವೀಕ್ಷಣೆ ಕಂಡಿದೆ. ವಿಡಿಯೋ ಸಾಂಗ್ ಕೂಡ ರಿಲೀಸ್ ಆಗಿದ್ದು ಅದು 1.8 ಕೋಟಿ ಬಾರಿ ವೀಕ್ಷಿಸಿದೆ.

ಇನ್ನು ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ರವರು ಸಿನಿಮಾಗಳ ಆಯ್ಕೆಯಲ್ಲಿ ತಮ್ಮ ನಿಲುವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದು ಹೆಚ್ಚು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಸಹ ಹೂ ಅಂತೀಯಾ ಮಾವ ಊಹೂ ಅಂತೀಯಾ ಮಾವ ಹಾಡಿನಲ್ಲಿ ನರ್ತಿಸಲು ಅವರು ಆರಂಭದಲ್ಲಿ ಒಪ್ಪಿರಲಿಲ್ಲ. ಹೌದು ಕೊನೆಗೆ ಪುಷ್ಪ ಸಿನಿಮಾ ನಾಯಕ ಅಲ್ಲು ಅರ್ಜುನ್ ಅವರೇ ವೀಕ್ಷಿಸಿದ ಬಳಿಕ ಸಮಂತಾ ಒಪ್ಪಿಕೊಂಡರು. ಜೊತೆಗೆ ಭಾರಿ ಮೊತ್ತದ ಸಂಭಾವನೆಗಾಗಿ ಬೇಡಿಕೆ ಇಟ್ಟರು.

ಸಮಂತಾ ಬರೋಬ್ಬರಿ 5 ಕೋಟಿ ರೂ. ಎಂಬ ಸುದ್ದಿ ಹರಿದಾಡಿದ್ದು ಈ ಬಗ್ಗೆ ಚಿತ್ರತಂಡದ ಯಾರೊಬ್ಬರೂ ಕೂಡ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಈ ಹಾಡಿನಿಂದ ಚಿತ್ರಕ್ಕೆ ತುಂಬಾ ಅನುಕೂಲ ಆಗಿದ್ದಂತೂ ನಿಜ. ಸಿನಿಮಾದ ರಿಲೀಸ್‌ಗೂ ಮುನ್ನವೇ ಜನಮನ ಗೆಲ್ಲುವಲ್ಲಿ ಈ ಸಾಂಗ್ ಯಶಸ್ವಿಯಾಗಿದೆ. ಕೆಲವು ವಿವಾದಗಳನ್ನು ಮಾಡಿಕೊಂಡರೂ ಕೂಡ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆಯಿತು. ಇಡೀ ವಿಶ್ವದಲ್ಲೇ 2021ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸಾಂಗ್ ಎಂಬ ಖ್ಯಾತಿಯನ್ನು ಈ ಹಾಡು ಹಾಡಿತು. ಪುಷ್ಪ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದರ ಎರಡನೇ ಪಾರ್ಟ್‌ಗೆ ಈಗ ಸಿದ್ಧತೆಗಳು ನಡೆಯುತ್ತಿವೆ. 2ನೇ ಪಾರ್ಟ್‌ನಲ್ಲೂ ಸಮಂತಾಗೆ ಐಟಂ ಸಾಂಗ್ ಅವಕಾಶ ಇದೆಯೋ ಇಲ್ಲವೋ ಎಂಬುದು ಖಚಿತವಾಗಿಲ್ಲ.

Leave a Comment

Your email address will not be published. Required fields are marked *