ಮಾಸ್ಕ್ ಹಾಕಿಕೊಂಡು ಬೆಂಗಳೂರಿನಲ್ಲಿ ಕಾಣಿಸಿಕೊಂಡ ರಶ್ಮಿಕಾ…ಹೊಸ ಲುಕ್ ವಿಡಿಯೋ ನೋಡಿ

ಸದ್ಯ ಇದೀಗ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಂಬ ಕ್ರಶ್ ಎಂಬ ಪಟ್ಟ ಅಲಂಕರಿಸಿದ್ದು ಸದ್ಯಕ್ಕೆ ಅವರ ಸಿನಿಪಯಣ ಬಾಲಿವುಡ್ ನತ್ತ ಸಾಗಿರುವುದು ಒಂದು ರೀತಿಯಲ್ಲಿ ಸಾಧನೆಯೇ ಸರಿ. ತಮ್ಮ ವೃತ್ತಿಜೀವನದಲ್ಲಿ ಎದುರಾದ ಹಲವಾರು ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ ಮುಂದೆ ಸಾಗುತ್ತಿರುವ ಈ ಕೊಡಗಿನ ಬೆಡಗಿ ತಮ್ಮ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಕೆಲಸಗಳಲ್ಲಿ ಇದೀಗ ಫುಲ್ ಬ್ಯೂಸಿ ಆಗಿದ್ದಾರೆ. ವಿಶೇಷವೆಂದರೆ ಇದೀಗ ಅವರ ಬಾಲಿವುಡ್‌ನಲ್ಲಿ ಒಂದು ಮುಖ್ಯ ಹಂತವನ್ನು ಪೂರ್ಣಗೊಳಿಸಿದ್ದು ಅಂದರೆ ಅವರ ಮೊದಲ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿದಿದೆ.

ಯಾವುದೇ ವಿಘ್ನಗಳಿಲ್ಲದೇ ಚಿತ್ರಗಳು ಮುಗಿದಿರುವುದಕ್ಕೆ ಇಡೀ ತಂಡವು ಬಹಳ ಖುಷಿಯಾಗಿದೆ ಈ ಸಿನಿಮಾದಲ್ಲಿ ಶೇರ್‌ಷಾ ಖ್ಯಾತಿಯ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ನಮ್ಮ ಕನ್ನಡದ ನಟಿ ರಶ್ಮಿಕಾ ಜೋಡಿಯಾಗಿದ್ದಾರೆ. ಹೌದು ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಅವರು ಉತ್ತುಂಗಕ್ಕೆ ಏರುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದರು ಬೇಗ ಅವರ ಮೊದಲ ಹಿಂದಿ ಸಿನಿಮಾದ ಮಿಷನ್ ಮಜ್ನು ತೆರೆಕಾಣಲಿ ಎಂದು ರಶ್ಮಿಕಾರ ಪಟ್ಟ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂಥವರಿಗೆಲ್ಲ ಈ ಸುದ್ದಿ ಖುಷಿ ನೀಡಿದ್ದು ಚಿತ್ರಕ್ಕೆ ಸಿದ್ಧವಾಗಿರುವ ಸಂತಸಕ್ಕೆ ಮಲ್ಹೋರಾ ಅವರು ರಶ್ಮಿಕಾ ಜೊತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬಾ ಖುಷಿಯಾಗಿದೆ. ಆದಷ್ಟು ಬೇಗ ಮತ್ತೆ ಭೇಟಿಯಾಗೋಣ ಎಂದು ಕ್ಯಾಪ್ಷನ್ ನೀಡಿದ್ದು ಅದನ್ನು ಕಂಡು ರಶ್ಮಿಕಾ ಮಂದಣ್ಣ ಕೂಡ ಖುಷಿಯಿಂದ ಒಂದು ಹೇಳಿಕೆ ನೀಡಿದ್ದಾರೆ. ಸಿದ್ ನೀವು ತುಂಬಾ ಚೆನ್ನಾಗಿ ನಡೆದುಕೊಂಡಿದ್ದೀರಿ ನಿಮ್ಮೊಂದಿಗೆ ಕೆಲಸ ಮಾಡಿದ್ದು ಚೆನ್ನಾಗಿತ್ತು. ನೀವು ಅತ್ಯುತ್ತಮ ವ್ಯಕ್ತಿ. ನಾನು ಹೆಚ್ಚು ಖುಷಿಯಾಗಿದ್ದೇನೆ ಎಂದು ರಶ್ಮಿಕಾ ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ನಾಗಾಲೋಟ ಇದೀಗ ನಡೆಯುತ್ತಿರುವ ಗುಡ್‌ಬೈ ಎಂಬ ಸಿನಿಮಾದಲ್ಲಿ ಅವರು ಭಾರತೀಯ ಚಿತ್ರರಂಗದ ದಿಗ್ಗಜ ಹಾಗೂ ಬಾಲಿವುಡ್ ನ ಬಿಗ್ ಬಿಗ್ ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ.

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಜೊತೆ ನಟಿಸಿರುವ ಪುಷ್ಪ 2 ಸಿನಿಮಾ ಈ ವರ್ಷ ಕ್ರಿಸ್‌ಮಸ್ ಹಬ್ಬಕ್ಕೆ ತೆರೆಕಾಣಲಿದೆ ಅವರ ಕಾಲ್‌ಶೀಟ್‌ಗಾಗಿ ಅನೇಕ ನಿರ್ಮಾಪಕರು ಹಾಗೂ ನಿರ್ದೇಶಕರು ರಶ್ಮಿಕಾ ಮನೆಮುಂದೆ ಕಾಯುತ್ತಿದ್ದಾರೆ. ಈ ನಡುವೆ ಅವರು ಬಿಡುವು ಮಾಡಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಸಂಪರ್ಕದಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ಮುಂಬೈನಲ್ಲಿ ವಿಮಾನ ಚಿತ್ರೀಕರಣ ಮುಗಿಸಿದ ರಶ್ಮಿಕಾ ನಿಲ್ದಾಣದಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕಣ್ಣು ಕುಕ್ಕುತ್ತಿದೆ. ಹೌದು ಈ ಕೊಡಗಿನ ಬೆಡಗಿ ಎಷ್ಟು ಹಾಟ್ ಆಗಿ ಕಾಣಿಸಿದ್ದಾರೆ ನೀವೆ ನೋಡಿ.

Leave a Comment

Your email address will not be published. Required fields are marked *