ಗಿಚ್ಚ ಗಿಲಿ ಗಿಲಿ ವೇದಿಕೆ ಮೇಲೆ ಸ್ರಜನ್ ಡಾನ್ಸ್ ನೋಡಿ…ಚಿಂದಿ ವಿಡಿಯೋ

ಸಾಮಾನ್ಯವಾಗಿ ಕನ್ನಡ ಕಿರುತೆರೆಯಲ್ಲಿ ವಾಹಿನಿಗಳು ಟಿ ಆರ್ ಪಿ ಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಿರೋದು ಮಾಡೋದು ಹೊಸ ವಿಚಾರವೇನೂ ಅಲ್ಲ. ಹೌದು ಆದರೆ ನಿಮ್ಮ ಕಾರ್ಯಕ್ರಮಗಳು ನಿಜವಾಗಿಯೂ ಬೇಕಿತ್ತಾ ಎನ್ನಲು ಕಾರಣವಾಗಿವೆ.ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿಗಿಳಿದಿರುವ ಶೇಕಡ ತೊಂಭತ್ತ ಭಾಗ ಅಸಹ್ಯದ ವಿಚಾರಗಳು ನಗು ತರಿಸುವ ಪ್ರಯತ್ನವಾಗಿದೆ. ಇನ್ನು ಒಂದು ಹತ್ತರಷ್ಟು ಭಾಗ ವಂಶಿಕಾಳ ಸ್ಕಿಟ್ ಗಳು ಈ ಅಸಹ್ಯದ ಕಾಮಿಡಿಯಿಂದ ಕೊಂಚ ಅಂತರವಿರುವಂತೆ ಕಾಣುತ್ತಿದೆ. ಮುಂದೇನಾಗುವುದೋ ತಿಳಿಯದು. ಹೌದು ಮಕ್ಕಳ ಮುಂದೆ ಇಂತಹ ಕಾರ್ಯಕ್ರಮವನ್ನು ನೋಡಲು ಕುಳಿತರೆ ನಿಜವಾಗಿ ಅಂತಹ ಕೆಟ್ಟ ಆಯ್ಕೆಗಳನ್ನು ಹೊರತುಪಡಿಸಿರಲು ಸಾಧ್ಯವಿಲ್ಲ. ಸ್ಕಿಟ್ ನ ತುಂಬೆಲ್ಲಾ ಕಾಮಿಡಿ ಎಂಬ ಹೆಸರಿನಲ್ಲಿ ಗಲೀಜೆ ತುಂಬಿ ಹೋಗಿದೆ ಎನ್ನಲಾಗುತ್ತಿದೆ.

ಹೌದು ಕೆಟ್ಟ ಕೆಟ್ಟ ಅರ್ಥ ತರುವ ಜೋಕ್ ಗಳನ್ನು ಕಾಮಿಡಿ ಅನ್ನುವುದು. ಅದಕ್ಕೆ ನಮ್ಮ ಹಿರಿಯ ನಟಿ ಶೃತಿ ಅವರು ನಗೋದು ನಿಜಕ್ಕೂ ಈ ಕಾರ್ಯಕ್ರಮ ಶೃತಿ ಅವರಿಗೆ ಬೇಕಿತ್ತಾ? ಈ ಹಿಂದೆ ಪ್ರಸಾರವಾದ ರಾಜಾ ರಾಣಿ ಶೋ ಆಗಿರಬಹುದು ಅಥವಾ ನನ್ನಮ್ಮ ಸೂಪರ್ ಸ್ಟಾರ್ ಶೋ ಆಗಿರಬಹುದು ನಿಜವಾಗಿಯೂ ಅರ್ಥಪೂರ್ಣವಾದ ಶೋಗಳಾಗಿದ್ದವು. ಕುಟುಂಬ ಸಮೇತ ನೋಡಿದರೂ ಎಲ್ಲೂ ಇರಿಸು ಮುರಿಸಾಗ ನೋಡಬಹುದು. ಆದರೆ ಗಿಚ್ವಿ ಗಿಳಿಗಿಲಿ ಶೋವನ್ನು ಒಬ್ಬರೇ ಕೂತು ನೋಡಲು ಕೂಡ ಅಸಹ್ಯವೆನಿಸಿದೆ.ಈ ಹಿಂದೆ ಮಜಾಭಾರತವೂ ಕೂಡ ಇಂತಹ ಕಂಟೆಂಟ್ ಗಳು ತುಂಬಿ ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಇತ್ತ ಜೀ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿಯೂ ಕೂಡ ಕೆಲವೊಮ್ಮೆ ಈ ರೀತಿ ಅಸಹ್ಯದ ಕಾಮಿಡಿ ಕಾಂಟೆಂಟ್ ಅನ್ನು ಪ್ರಸಾರ ಮಾಡಿ ಅವರದ್ದೂ ಸಹ ಅದೇ ಕತೆಯಾಗಿತ್ತು. ಆದರೆ ವಾಹಿನಿ ಇನ್ನಾದರೂ ಆಗಿರಲಿ ಇತ್ತ ಡ್ರಾಮಾ ಜೂನಿಯರ್.. ಡಿಕೆಡಿ ಸರಿಗಮಪ ಅತ್ತ ನನ್ನಮ್ಮ ಸೂಪರ್ ಸ್ಟಾರ್ ರಾಜಾ ರಾಣಿ ಎದೆ ತುಂಬಿ ಹಾಡುವೆನು ಇಂತಹ ಒಳ್ಳೊಳ್ಳೆ ಶೋ ಕೊಟ್ಟ ವಾಹಿನಿಗಳು ಈ ರೀತಿ ಅಸಹ್ಯದ ಕಾಮಿಡಿ ಶೋಗಳನ್ನು ಕೊಟ್ಟು ರೇಟಿಂಗ್ ಮಾಡುವಂಥ ಗತಿ ಬಂದಿದೆಯಾ ಆ ದೇವರೇ ಬಲ್ಲ.ಆದರೆ ಅದರಲ್ಲಿ ವಾಹಿನಿಯವರದ್ದೇ ತಪ್ಪೆನ್ನಲಾಗದು. ಹೌದು ಕಾರಣ ನನ್ನಮ್ಮ ಸೂಪರ್ ಸ್ಟಾರ್ ನಂತಹ ಒಳ್ಳೆ ಶೋ ಮೂರದ ಆಸು ಪಾಸಿನಲ್ಲಿ ರೇಟಿಂಗ್ ಇದ್ದರೆ ಇತ್ತ ಗಿಚ್ಚಿ ಗಿಲಿಗಿಲಿಯಂತಹ ಶೋ ನಾಲ್ಕಕ್ಕೂ ಅಧಿಕ ರೇಟಿಂಗ್ ಪಡೆದುಕೊಳ್ಳುತ್ತಿದೆ. ಹೌದು ಕೂತು ಟಿವಿಯಲ್ಲಿ ಮನೆಯವರ ಮುಂದೆ ಇಂತಹ ಶೋ ನೋಡುತ್ತಿದ್ದಾರೆಂದರೆ ನಿಜವಾಗ್ಲೂ ಪ್ರಸ್ತುತ ಯಾವ ಮಟ್ಟಕ್ಕೆ ಬಿಟ್ಟಿದೆ ಎನಿಸುತ್ತದೆ.

ಇನ್ನೂ ಜಡ್ಜ್ ಗಳ ವಿಚಾರಕ್ಕೆ ಬರುವುದಾದರೆ ಪ್ರತಿಯೊಬ್ಬರಿಗೂ ವೃತ್ತಿ ಜೀವನ ಮುಖ್ಯ ನಿಜ ಸಂಭಾವನೆಯಂತು ಎಲ್ಲರಿಗೂ ಬೇಕು ಹೌದು. ಆದರೆ ಸಂಭಾವನೆಯೊಂದಕ್ಕೋಸ್ಕರ ಇಂತಹ ಶೋಗಳಲ್ಲಿ ದೊಡ್ಡ ದೊಡ್ಡ ಕಲಾವಿದರು ಎನಿಸಿಕೊಂಡಿರುವ ಶೃತಿ ಅವರಂತಹ ಹಿರಿಯ ನಟಿಯರು ಬಂದು ಕೂತು ಕೆಟ್ಟ ಕೆಟ್ಟ ಕಾಮಿಡಿಗಳಿಗೆ ನಗುವುದು ನಿಜವಾಗಲೂ ಇಂತಹ ಪರಿಸ್ಥಿತಿ ಬರುವುದಿಲ್ಲ ಎನಿಸುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೂವರು ಹೀಗೆ ಕುಣಿದಿದ್ದಾರೆ ನೀವೆ ನೋಡಿ.

Leave a Comment

Your email address will not be published. Required fields are marked *