ಯಾವ ವಿದ್ಯಾರ್ಹತೆ ಪಡೆದರೇನು ಯಾವ ಕೀರ್ತಿ ಪಡೆದರೇನು ಎಷ್ಟು ದೊಡ್ಡವರಾದರೂ ಹೆತ್ತವರಿಗೆ ತಮ್ಮ ಮಕ್ಕಳು ಮಕ್ಕಳೆ ಆಗಿರುತ್ತಾರೆ ಏನಂತಿರ ಫ್ರೆಂಡ್ಸ್. ಹೆತ್ತ ತಾಯಿಯ ಋಣ ಎಂದೆಂದಿಗೂ ಎಷ್ಟೋ ಜನ್ಮ ಎತ್ತಿ ಬಂದರೂ ಸಹ ತೀರಿಸಲು ಸಾಲದು ಅಂತಾರೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಗೆ ಮಾಡಿರುವ ಕೆಲಸವೇನು ಗೊತ್ತಾ ಯಾವ ಮಕ್ಕಳು ಕೂಡ ತಾಯಂದಿರಿಗೆ ಇಂತಹ ಪರಿಸ್ಥಿತಿಗೆ ತಳ್ಳಬೇಡಿ ತಾಯಿ ಮಕ್ಕಳಿಗೆ ಜೀವ ಕೊಡ್ತಾಳ ಜೀವನ ಕೊಡ್ತಾಳ ಆದರೆ ಮಕ್ಕಳು ಅವರ ಕೊನೆ ಸಮಯದಲ್ಲಿ ಎರಡು ಹೊತ್ತು ಊಟ ಹಾಕಲು ಸಹ ಯೋಚನೆ ಮಾಡ್ತಾರೆ ಹಿಂದೆ ಮುಂದೆ ನೋಡ್ತಾರೆ ಕೊನೆಗೆ ತಮ್ಮ ತಾಯಿ ನಮ್ಮ ಜೊತೆ ಇರುವುದೇ ಬೇಡ ಅಂತ ನಿರ್ಧಾರ ಕೂಡ ಮಾಡಿಬಿಡ್ತಾರ ಅದಕ್ಕೆ ಅಲ್ವಾ ಇವತ್ತಿನ ದಿವಸಗಳಲ್ಲಿ ಸಮಾಜದಲ್ಲಿ ವೃದ್ಧಾಶ್ರಮಗಳು ಅನಾಥಾಶ್ರಮಗಳು ಇಷ್ಟೊಂದು ಬೆಳೆದು ನಿಂತಿರುವುದು.
ಹೌದು ಯಾವ ಊರು ಯಾವ ಹೆಸರು ಅಂತ ಹೇಳೋದು ಬೇಡ ಇವರ ಬಗ್ಗೆ ನೀವು ಕೂಡ ತಿಳಿದು ತಪ್ಪದೆ ನಿಮ್ಮ ಮಕ್ಕಳಿಗೆ ಇಂತಹ ಬುದ್ಧಿ ಮಾತ್ರ ಕಲಿಯಬೇಡಿ ಎಂದು ತಿಳಿಸಿಕೊಡಿ ಯಾಕೆ ಅಂತಿರಾ ಫ್ರೆಂಡ್ಸ್ ಮಕ್ಕಳು ಚಿಕ್ಕವರಾಗಿದ್ದಾಗ ಹೇಗೆ ತಂದೆ ತಾಯಿ ಮಕ್ಕಳ ಕಾಳಜಿ ಮಾಡ್ತಾರೆ ಅದೇ ರೀತಿ ಮಕ್ಕಳು ಬೆಳೆದು ನಿಂತಾಗ ಪೋಷಕರ ಕೊನೆಯ ಸಮಯದಲ್ಲಿ ಮಕ್ಕಳು ಎಂದಿಗೂ ತಂದೆತಾಯಿಯನ್ನು ಆ ರೀತಿ ಕಳಚಿ ಮಾಡೊಲ್ಲ ಯಾಕೆಂದರೆ ಅವರು ಬೆಳೆದು ನಿಂತಿರುತ್ತವೆ ಪೋಷಕರ ಬೆಲೆ ತಿಳಿದಿರುವುದಿಲ್ಲ ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಪೋಷಕರ ಬೆಲೆಯೇನು ಪೋಷಕರ ಮೌಲ್ಯವೇನು ಎಂಬುದನ್ನು ತಿಳಿಸಿಕೊಡಿ ವಿದ್ಯೆ ವಿನಯ ತಂದುಕೊಡುತ್ತದೆ ಅಂತ ಹೇಳ್ತಾರ ಆದರೆ ಹೆಚ್ಚು ಓದಿಕೊಂಡಿರುವ ಮಹಾನ್ ಪುರುಷನ ತನ್ನ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಬರುವ ನಿರ್ಧಾರ ಮಾಡಿದ್ದಾನೆ ನೋಡಿ ಅದು ಎಂತಹ ಸ್ಥಿತಿಯಲ್ಲಿ ತಾಯಿ ಮಾನಸಿಕವಾಗಿ ಕುಗ್ಗಿರುವಂತಹ ಸ್ಥಿತಿಯಲ್ಲಿ.
ಹೌದು ಒಮ್ಮೆ ತಾಯಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ ಇತ್ತ ಮಗನಿಗೆ ತಾಯಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಾಯಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವೇ ಇರುವುದಿಲ್ಲ ಆದಕಾರಣ ಈ ಮಹಾನ್ ಪುರುಷ ನಿರ್ಧಾರ ಮಾಡ್ತಾನೆ ನನ್ನ ತಾಯಿಯನ್ನು ಮಾನಸಿಕ ಆಸ್ಪತ್ರೆಯ ಬಳಿ ಕರೆದುಕೊಂಡು ಹೋಗಿ ಬಿಟ್ಟು ಬಂದರೆ ಆಸ್ಪತ್ರೆಯವರು ಅವರಿಗೆ ಹೇಗೋ ಯಾರೂ ಇಲ್ಲ ಎಂದು ಚಿಕಿತ್ಸೆ ನೀಡು ಬಿಡ್ತಾರ ಎಂದು ಆಲೋಚನೆ ಮಾಡುವ ಮೂಲಕ ತಾಯಿಗೆ ಬಟ್ಟೆ ಬರೆ ನೀರಿನ ಕ್ಯಾನ್ ಎಲ್ಲಾ ವಸ್ತುಗಳನ್ನು ತಾಯಿ ಕೈಗೆ ನೀಡಿ ಆಸ್ಪತ್ರೆ ಬಳಿ ಕರೆದುಕೊಂಡು ಹೋಗಿ ಇನ್ನೇನು ಬಿಟ್ಟುಬರಬೇಕು ಆಕೆಯನ್ನು ಒಂಟಿ ಮಾಡಿ ಅಲ್ಲಿಯೇ ಬಿಟ್ಟು ಬರಬೇಕು ಅಂತ ಹೋಗ್ತಾನೆ ಆದರೆ ಇಂತಹ ಒಬ್ಬ ಮಗ ಈ ರೀತಿ ಮಾಡಲೇ ಬಂದಿದ್ದನೇನೋ ಎಂದು ಅಲ್ಲಿ ಆಸ್ಪತ್ರೆಯಲ್ಲಿ ನೆರೆದಿದ್ದ ಕೆಲ ಜನರಿಗೆ ತಿಳಿದಿದೆ.
ಇನ್ನೇನು ಆ ತಾಯಿಯನ್ನು ಮಗ ಬಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ತಿಳಿದ ಅಲ್ಲಿರುವ ಜನರು ಬಂದು ಮಗನಿಗೆ ಬುದ್ಧಿವಾದ ಹೇಳಿದರೆ ಇನ್ನೂ ಕೆಲವರು ಆತನಿಗೆ ಕೋಪದಿಂದ ಥಳಿಸಿದ್ದಾರೆ ಇನ್ನು ಯಾರೋ ಒಬ್ಬ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ ಈ ಪುರುಷನ ವಿಚಾರವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಿಚಾರಿಸಿದಾಗ ಆತ ಇರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.
ಬಳಿಕ ತಾಯಿಗೆ ಹೀಗೆ ಮಾಡಬಾರದು ತಾಯಿಗೆ ನೀನು ಈ ಸಮಯದಲ್ಲಿ ಆಸರೆಯಾಗಬೇಕೆಂದು ಪೊಲೀಸರು ಅವನಿಗೆ ಬುದ್ಧಿವಾದ ಹೇಳಿ ತಾಯಿಯ ಜೊತೆ ಮಾಡಿ ಆಟೋದಲ್ಲಿ ಕಳಿಸಿದ್ದಾರೆ ಮತ್ತು ತಾಯಿಯನ್ನು ಈ ರೀತಿ ಮತ್ತೆ ಬೀದಿಯಲ್ಲಿ ಬಿಡುವ ನಿರ್ಧಾರ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರವನ್ನು ಸಹ ಬರೆಸಿಕೊಂಡಿದ್ದಾರೆ. ತೊಡಿ ಫ್ರೆಂಡ್ಸ್ ಮಗನಿಗೆ ಎಷ್ಟು ಧೈರ್ಯ ಬಂದಿದೆ ತಾಯಿ ಇಲ್ಲದೆ ತಾನು ಬದುಕುತ್ತೇನೆ ಎಂಬ ಧೈರ್ಯ ಆತನಿಗೆ ಬಂದುಬಿಟ್ಟಿದೆ ತಾಯಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂಬುದನ್ನು ನೋಡದೆ ಈ ಮಹಾನ್ ಪುರುಷ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಯಾವ ಮಕ್ಕಳು ಕೂಡ ತಾಯಿಗೆ ಇಂತಹ ಸ್ಥಿತಿಯನ್ನು ತರಬೇಡಿ ಆಕೆಯ ವೃದ್ಧಾಪ್ಯದ ಸಮಯದಲ್ಲಿ ಆಕೆಯನ್ನು ಖುಷಿಯಾಗಿ ನೋಡಿಕೊಳ್ಳಿ ಅದೇ ನಿಮಗೆ ಶ್ರೀರಕ್ಷೆಯಾಗಿರುತ್ತದೆ ಧನ್ಯವಾದ…