ಈ ತರಹದ ಅಭ್ಯಾಸಗಳಿಂದ ನಿಮ್ಮ ಮೆದುಳಿಗೆ ಹಾನಿ ಉಂಟಾಗಬಹುದು? ಅದೇನು ಅಂತೀರಾ ಈ ಕೆಳಗೆ ಓದಿ…

Health & Fitness ಎಲ್ಲ ನ್ಯೂಸ್

ನಾವು ಏನೇ ಒಂದು ಕೆಲಸ ಮಾಡಬೇಕಾದರೂ ಮೆದುಳಿನ ಉಪಯೋಗ ತುಂಬಾ ಇದೆ. ಇದು ಪ್ರಮುಖವಾಗಿ ನಮ್ಮ ದೇಹದಲ್ಲಿರುವ ಅಂಗ ಅಷ್ಟೇ ಅಲ್ಲದೆ ಮೆದಳು ಇಲ್ಲವಾದರೆ ಜೀವನವೇ ಇಲ್ಲ. ನಾವು ಮಾಡುವ ಕೆಲಸಗಳಿಗೆ ಮೇಲ್ವಿಚಾರಕರಾಗಿ ಕಾರ್ಯ ನಡೆಸುವುದು ನಿಮ್ಮ ಮೆದುಳು ನಾವು ಪ್ರಪಂಚವನ್ನು ನೋಡುವ ಬಯಕೆ ಯನ್ನು ಹೊಂದಿರುತ್ತೇವೆ ತಾಯಿಯ ಗರ್ಭಾವಸ್ಥೆಯಲ್ಲಿ ನಮ್ಮ ಜೀವನದ ಪ್ರಮುಖ ಅಂಗ ಬೆಳೆಯುತ್ತ ಹೋಗುತ್ತದೆ ಆ ಸಮಯದಲ್ಲಿ ತಾಯಿಯು ಏನು ವಿಚಾರ ಮಾಡುತ್ತಾಳೆ, ಏನೆಲ್ಲಾ ಅಂದುಕೊಳ್ಳುತ್ತಾಳೆ ಹಾಗೆ ಆಗುತ್ತೆ ಎನ್ನುವುದು ನಮ್ಮ ಪೂರ್ವಜರ ಕಾಲದಿಂದಲೂ ನಂಬಿಕೆಯು ಬೆಳೆಯುತ್ತಾ ಬಂದಿದೆ. ಸಾಧ್ಯವಾದಷ್ಟು ತಾಯಿಗೆ ಅಂತಹ ಸಮಯದಲ್ಲಿ ಒಳ್ಳೆಯ ವಿಚಾರಗಳು, ಒಳ್ಳೆಯ ಆಹಾರವನ್ನು ನೀಡುತ್ತಾ ಇರಬೇಕು ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ನೀವು ಜೀವಂತ ಇರುವಷ್ಟು ದಿನ ಮೆದುಳು ಹಗಲು-ರಾತ್ರಿಯೆನ್ನದೆ ಕಾರ್ಯ ಕಾರ್ಯನಿರ್ವಹಿಸುತ್ತದೆ ಇದು ನಿಮ್ಮ ಸಕಾರಾತ್ಮಕ ಮತ್ತು ಕ್ರಿಯಾತ್ಮಕ ವಿಚಾರಗಳಿಗೆ ಇದರ ಪ್ರಾಮುಖ್ಯತೆ ಅಥವಾ ಪ್ರಮುಖ ಪಾತ್ರವಹಿಸುತ್ತದೆ.

ಮೆದಳು ಚೆನ್ನಾಗಿ ಕಾರ್ಯ ಮಾಡಬೇಕು ಎಂದರೆ ಅದರ ತಕ್ಕಂತೆ ಆಹಾರ ನಿದ್ದೆ ಆಲೋಚನೆಗಳು ಸರಿಯಾಗಿರಬೇಕು ನಮ್ಮ ದೇಹದಲ್ಲಿ ಯಾವುದೇ ಕಾರ್ಯಗಳು ಮಾಡಬೇಕೆಂದರೆ ಅದು ಮೆದುಳಿನ ಸಹಾಯದಿಂದ ಮಾತ್ರ ಅದು ತೋಚಿದಂತೆ ನಾವು ನಡೆದುಕೊಳ್ಳುತ್ತೇವೆ. ಕೆಲವೊಂದು ಬಾರಿ ಸರಿಯಾದ ನಿಯಮಗಳಿಗನುಸಾರವಾಗಿ ನಡೆಯಬೇಕಾಗಿದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಇದನ್ನೆಲ್ಲ ಮೀರಿದಾಗ ಆರೋಗ್ಯವು ಕೂಡ ಹಾನಿಯಾಗಿ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ನಿದ್ದೆ ಊಟ ರುಚಿಯಾದ ಆಹಾರ ಇವೆಲ್ಲವೂ ತುಂಬಾನೇ ಅಪರೂಪ ಆಗಿ ಬಿಟ್ಟಿದೆ  ಬಿಸಿ ಲೈಫ್,

ಫಾಸ್ಟ್ ಫುಡ್ ಇದಕ್ಕೆ ನಾವು ಮಾರಿ ಹೋಗಿದ್ದೇವೆ ಎನಿಸುತ್ತದೆ. ಮನೆಯಲ್ಲಿ ಮಾಡಿರುವ ಆಹಾರಕ್ಕಿಂತ ಹೊರಗಿನ ಆಹಾರ ತುಂಬಾ ರುಚಿಕರವಾಗಿರುತ್ತದೆ ಎಂಬುವುದು ತಪ್ಪು ಕಲ್ಪನೆ ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂಬ ಸಣ್ಣ ಅರಿವು ನಮಗೆ ಕಂಡುಬರುವುದಿಲ್ಲ, ಕ್ರಮೇಣ ಇದು ದೇಹದಲ್ಲಾಗುವ ಬದಲಾವಣೆಗೆ ಕಾರಣವಾಗುತ್ತದೆ. ಏನೇ ಮಾಡಿದರೂ ನಿಸರ್ಗಕ್ಕೆ ಅನುಗುಣವಾಗಿ ಕಾರ್ಯಗಳನ್ನು ಮಾಡಬೇಕು ಇದರ ವಿರುದ್ಧ ಹೋದರೆ ಆರೋಗ್ಯಕ್ಕೆ ನೀವೇ ಹಾನಿಉಂಟುಮಾಡಿದಂತೆ ಆಗುತ್ತದೆ.  ಇನ್ನೂ ಮೆದುಳಿಗೆ ಅಪಾಯ ಉಂಟು ಮಾಡುವ ಆಹಾರಗಳನ್ನು ಅಥವಾ ಅಭ್ಯಾಸಗಳನ್ನು ನಾವು ಏಕೆ ಮಾಡಬೇಕು. ಅವು ಯಾವ ಕೆಟ್ಟ ಅಭ್ಯಾಸಗಳು ಅಂತೀರಾ ಈ ಕೆಳಗಿನ ಲೇಖನ ಓದಿ

.ಮೆದುಳಿಗೆ ಅತಿ ಹೆಚ್ಚಾದ ಕೆಲಸವನ್ನು ನೀಡಿದರೆ ಅದು ಹಾನಿಗೆ  ಉಂಟಾಗಬಹುದು ಏನ್ ಮಾಡೋದು ದುಡಿಯೋದಕ್ಕೆ ಹೋಗಲೇಬೇಕು. ಆದರೆ ದುಡಿಯುವುದು ಸರಿ ಮೆದುಳಿಗೆ ಕಷ್ಟ ಕೊಡುವುದು ಎಷ್ಟರಮಟ್ಟಿಗೆ ಸರಿ ಎನಿಸುತ್ತದೆ, ಅತಿಯಾದ ವಿಚಾರ ಮೆದುಳಿಗೆ ಹೇರುತ್ತಾ ಹೋದರೆ ಅದರ ಕಾರ್ಯವೈಖರಿಯಲ್ಲಿ ಕ್ಷಮತೆ ಕುಂಠಿತಗೊಳ್ಳುವುದರಲ್ಲಿ  ಸಂಶಯವಿಲ್ಲ ಇಷ್ಟೇ ಅಲ್ಲದೆ ನಿಮ್ಮ ಜ್ಞಾಪಕ ಶಕ್ತಿ ಚಿಂತನೆ ಹೀಗೆ ಹಲವಾರು ಯೋಚನೆಯಲ್ಲಿ ತೊಡಗಿದರೆ ಮೆದುಳಿನ ಕಾರ್ಯವು ಕಡಿಮೆಗೊಳ್ಳುತ್ತದೆ. ಸಾಧ್ಯವಾದಷ್ಟು ಒಳ್ಳೆಯ ವಿಚಾರ ಒಳ್ಳೆಯ ನಿದ್ದೆ ರುಚಿ ಮತ್ತು ಶುಚಿಯಾದ ಆಹಾರ ಸೇವನೆ ಮಾಡಿದರೆ ಮೆದುಳಿನ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ.

ಏನಾದರೂ ತಿನ್ನಬೇಕಾದರೆ ಅದು ರುಚಿ ಇದೆ ಅಂತ ಹೊಟ್ಟೆ ತುಂಬಿದರೂ ತಿನ್ನುವ ಅಭ್ಯಾಸ ಕೆಲವೊಬ್ಬರಿಗೆ ಇರುತ್ತದೆ. ಇದು ಮೆದುಳಿಗೆ ತೊಂದರೆ ಉಂಟು ಮಾಡುತ್ತದೆ ಎಂಬ ಅರಿವು ಇರುವುದಿಲ್ಲ. ಮಿತಿ ಮೀರಿದ ಆಹಾರ ದೇಹಕ್ಕೆ ಮಾತ್ರವಲ್ಲದೆ ಮೆದುಳಿಗೂ ಕೂಡ ತೊಂದರೆಯನ್ನು ಉಂಟು ಮಾಡುತ್ತದೆ ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ ಇದರಿಂದ ಆಹಾರದಲ್ಲಿರುವ ಕೊಬ್ಬಿನ ಅಂಶ ಇನ್ಸುಲಿನ್ ಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಮೆದುಳಿನ ನರಗಳು ಕೂಡ ಕಾರ್ಯವೈಖರಿಯನ್ನು ನಿಲ್ಲಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಯಾಕೆಂದರೆ ಪೂರ್ಣಪ್ರಮಾಣದ ರಕ್ತ ಮೆದುಳಿಗೆ ಹೋಗಲು ಸಾಧ್ಯವಾಗುವುದಿಲ್ಲ, ಸಾಧ್ಯವಾದಷ್ಟು ಹಿತಕರವಾದ ಆಹಾರ ಸೇವನೆ ನಿಮ್ಮದಾಗಿರಲಿ ಮೆದುಳಿಲ್ಲದೆ ಸ್ಥೂಲಕಾಯ ಹೃದಯ ಸಂಬಂಧಿ ರೋಗಗಳು ಕಿಡ್ನಿ ಸಂಬಂಧಿ ರೋಗಗಳು ಇನ್ನೂ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸಿದರೆ ಮೆದುಳಿಗೆ ಹಾನಿ ಉಂಟಾಗಬಹುದು ಹೆಚ್ಚಾಗಿ ಜ್ಞಾಪಕ ಶಕ್ತಿ ಮತ್ತು ಯೋಚನಾ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ದಿನದಲ್ಲಿ ಮಹಿಳೆಯರು 25 ಗ್ರಾಂ ಸಕ್ಕರೆ ಮತ್ತು ಪುರುಷರು 37.5 ಸೇವಿಸುವುದು ಉತ್ತಮ.  ಇದಕ್ಕಿಂತ ಹೆಚ್ಚಾಗಿ ಸೇವಿಸಿದರೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಮಧುಮೇಹ ಹೊಂದಿರುವರು ಕನಿಷ್ಠ ಮತ್ತು ಗರಿಷ್ಠ ಸಿಹಿ ಪದಾರ್ಥಗಳನ್ನು ಉಪಯೋಗಿಸಬಾರದು. ಇದರಿಂದ ಅವರಲ್ಲಿ ಹಲವಾರು ತೊಂದರೆಗಳನ್ನು ಕಾಣಬಹುದು ಸಾಧ್ಯವಾದಷ್ಟು ಸಿಹಿ ಪದಾರ್ಥಗಳ ಸೇವನೆ ಮಿತವಾಗಿರಲಿ.

ಕೆಲವೊಬ್ಬರಿಗೆ ಧೂಮಪಾನ ಮಾಡದೇ ಇದ್ದರೆ ನಿದ್ದೇನೆ ಬರೋದಿಲ್ಲ ಅನ್ನೋವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ ಅವರಿಗೆ ತಿಳಿಯದ ಹಾಗೆ ಅವರ ಮೆದುಳು ಹಾನಿ ಉಂಟಾಗಿರುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಏರಿಸುತ್ತದೆ ರಕ್ತ ಮೆದುಳಿಗೆ ತಲುಪಿದಾಗ ಅನಾರೋಗ್ಯಕರ ಕೊಬ್ಬು ಮೆದುಳಿನಲ್ಲಿ ಶೇಖರಗೊಳ್ಳುತ್ತದೆ, ಹೀಗೆ ಶೇಖರಣೆಗೊಂಡ ಕೊಬ್ಬು ದೇಹದ ಎಲ್ಲಾ ರಕ್ತನಾಳಗಳ ಮೂಲಕ ನಿಮ್ಮ ದೇಹಕ್ಕೆ ಬೇಕಾಗಿರುವಸ್ಟು ರಕ್ತವನ್ನು ನೀಡಲು ಕಷ್ಟವಾಗಬಹುದು. ದೇಹಕ್ಕೆ ಬೇಕಾದ ರಕ್ತ ಸಂಚಲನ ಇಲ್ಲವಾದಲ್ಲಿ ಮೆದುಳಿಗೆ ಇದು ಹಾನಿ ಉಂಟಾಗಬಹುದು  ಇದರಿಂದ ವ್ಯಕ್ತಿಯ ಸಾವು ಆಗಬಹುದು ಸಾಧ್ಯವಾದಷ್ಟು ಧೂಮಪಾನದಿಂದ ದೂರವಿರಿ ಕುಟುಂಬದವರ ನಂಬಿಕೆ ಉಳಿಸಿ. ಸುಖಿ ಜೀವನ ನಡೆಸಿ.

ಬೆಳಗಿನ ವ್ಯಾಯಾಮಗಳನ್ನು ಮಾಡುವುದು ತುಂಬಾ ಒಳ್ಳೆಯ ಅಭ್ಯಾಸ. ಇದರಿಂದ ನೀವು ಆಚೆ ಕಡೆ ಹೋದಾಗ ಅಲ್ಲಿ ಬೀಸುವ ತಂಪಾದ ಗಾಳಿ ಅಥವಾ ತಾಜಾ ಗಾಳಿಯಿಂದ ನೀವು ಉಸಿರಾಡಬಹುದು ಆಮ್ಲಜನಕದ ಕೊರತೆಯೂ ಕಡಿಮೆಯಾಗುತ್ತದೆ. ಮೆದುಳಿಗೆ ಆಮ್ಲಜನಕದ ಅವಶ್ಯಕತೆ ತುಂಬಾ ಇರುತ್ತದೆ ಕೆಲವರು ಮಲಗುವಾಗ ಮುಸುಕು ಹಾಕಿಕೊಂಡು ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಚಳಿ ದಿನ ಬಂದರೆ ಸಾಕು ದಪ್ಪಗಿರುವ ಹೊದಿಕೆಯನ್ನು ಹೊಂದಿಸಿಕೊಂಡು ಮಲಗುತ್ತಾರೆ ಆದರೆ ಇದು ಒಳ್ಳೆಯ ಅಭ್ಯಾಸವಲ್ಲ, ಈ ರೀತಿ ಮಲಗುವುದರಿಂದ ಮೆದುಳಿಗೆ ಹಾನಿ ಉಂಟಾಗುತ್ತದೆ ಮೆದುಳಿಗೆ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಗಾಳಿಯಲ್ಲಿರುವ ಅಧಿಕ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಬಲವಂತವಾಗಿ ಎಳೆದುಕೊಂಡಾಗ ದೇಹದಲ್ಲಿರುವ ನರಗಳಿಗೂ ಹಾನಿಯುಂಟಾಗಬಹುದು. ಆದಷ್ಟು ಮುಸುಕು ಹಾಕಿಕೊಳ್ಳದೇ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ ಇದರಿಂದ ನಿಮ್ಮ ದೇಹಕ್ಕೆ ಬೇಕಾಗಿರುವ ಮೆದುಳಿನ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ.

Leave a Reply

Your email address will not be published. Required fields are marked *